ತೆರಿಗೆ ಉಳಿತಾಯ ತುಂಬಾ ಸುಲಭ! ಅದರಲ್ಲೂ ಹಿರಿಯ ನಾಗರಿಕರಿಗೆ ಉತ್ತಮ ಆಯ್ಕೆಗಳಿವೆ. ಹೌದು, ಹಿರಿಯ ನಾಗರಿಕರು ತಮ್ಮ ತೆರಿಗೆ ಮಿತಿಯನ್ನು ಸರಿಯಾದ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು ಸುಲಭವಾಗಿ ಕಡಿಮೆ ಮಾಡಬಹುದು. 2025ರಲ್ಲಿ ಅವರಿಗೆ ಕೆಲವು ವಿಶೇಷ ತೆರಿಗೆ ಉಳಿತಾಯ ಆಯ್ಕೆಗಳು ಲಭ್ಯವಿದೆ. ಇದರಿಂದ ಅವರು ತಮ್ಮ ಹೂಡಿಕೆಗೆ ಮತ್ತು ಉಳಿತಾಯಕ್ಕೆ ಹೆಚ್ಚುವರಿ ಲಾಭ ಪಡೆಯಬಹುದು. ಬನ್ನಿ, ಆ ಕೆಲವೊಂದು ಪ್ರಮುಖ ಆಯ್ಕೆಗಳನ್ನು ಈ ಲೇಖನದಲ್ಲಿ ತಿಳಿಯೋಣ.
ಹೌದು, ಮಧ್ಯಮ ವರ್ಗದ ತೆರಿಗೆದಾರರು ಮತ್ತು ಹಿರಿಯ ನಾಗರಿಕರು ತಮ್ಮ ಉಳಿತಾಯ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ತೆರಿಗೆ ಉಳಿತಾಯದ ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ನೀವು ಸರಿಯಾದ ತೆರಿಗೆ ಆಯ್ಕೆಯನ್ನು ಮಾಡಿಕೊಂಡಿದ್ದರೆ ನಿಮ್ಮ ಮುಂದಿನ ಆರ್ಥಿಕ ಜೀವನ ಸುಗಮವಾಗಿರುತ್ತದೆ.

ಹಿರಿಯ ನಾಗರಿಕರಿಗೆ ತಮ್ಮ ಹಣವನ್ನು ಮಾರುಕಟ್ಟೆಯನ್ನು ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ಮೂಲಕ ಆರ್ಥಿಕ ಭದ್ರತೆ ಸಾಧಿಸುವುದು ಬಹು ಮುಖ್ಯವಾಗಿದೆ. ಈ ರೀತಿಯ ಹೂಡಿಕೆಗಳು, ವಿಶೇಷವಾಗಿ ದೀರ್ಘಕಾಲಿಕ ಹೂಡಿಕೆಗಳು, ದೊಡ್ಡ ಲಾಭವನ್ನು ನೀಡಬಹುದು. ಆದ್ದರಿಂದ ಹಿರಿಯ ನಾಗರಿಕರಿಗೆ ಸರಿಯಾದ ಹೂಡಿಕೆ ಆಯ್ಕೆಗಳು ಬಹು ಮುಖ್ಯವಾಗುತ್ತದೆ.
ಹಿರಿಯ ನಾಗರೀಕರು ಉದ್ಯೋಗದಿಂದ ನಿವೃತ್ತಿಯದಾಗ ಅವರ ಮೂಲ ಆದಾಯವು ಇರುವುದಿಲ್ಲ.ಆದ್ದರಿಂದ ಅವರ ಆಯ್ಕೆ ಮಾಡುವ ಉಳಿತಾಯದ ಯೋಜನೆಗಳು ಉತ್ತಮವಾಗಿ ಇರಬೇಕು.ಉತ್ತಮ ತೆರಿಗೆ ಯೋಜನೆಯು ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ ಆದರೆ ಹಣಕಾಸಿನ ಉದ್ದೇಶಗಳನ್ನು ಸಾಧಿಸಲು ಕೂಡ ಇದು ಸಹಾಯ ಮಾಡುತ್ತದೆ.
ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ,ಹಿರಿಯ ನಾಗರಿಕರು ಸೇರಿದಂತೆ ತೆರಿಗೆದಾರರಿಗೆ ಸರ್ಕಾರವು ಇನ್ನೂ ಅನೇಕ ವಿನಾಯಿತಿಗಳನ್ನು ನೀಡುತ್ತದೆ.
ಹಿರಿಯ ನಾಗರಿಕರಿಗೆ ಉತ್ತಮ ತೆರಿಗೆ ಉಳಿಸುವ ಅಯ್ಕೆಗಳು ಈ ಕೆಳಗಿನಂತೆ ಇವೆ
ELSS ಮ್ಯೂಚುಯಲ್ ಫಂಡ್‌ಗಳು
ELSS ನಿಧಿಗಳು ಉಳಿತಾಯ ಯೋಜನೆಗಳ ತೆರಿಗೆ ಉಳಿಸುವ ಹೂಡಿಕೆಯನ್ನು ಹುಡುಕುವ ಹೂಡಿಕೆದಾರರಿಗೆ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ ಎಂದೇ ಹೇಳಬಹುದು.
ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವುದರಿಂದ ಬರುವ ಆದಾಯ ಮತ್ತು ತೆರಿಗೆ ಉಳಿತಾಯ ಎರಡರ ಲಾಭದ ಹಣ ನಿಮ್ಮಗೆ ಸಿಗುತ್ತದೆ. ELSS ಹಿರಿಯ ನಾಗರಿಕರಿಗೆ ಉತ್ತಮ ಆಯ್ಕೆಯಾಗಿದೆ, ಸರಿಯಾದ ಫಂಡ್‌ಗಳಲ್ಲಿ ಹೂಡಿಕೆಯನ್ನು ಕಾರ್ಯತಂತ್ರವಾಗಿ ಮಾಡಲಾಗುತ್ತದೆ.
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ-ಉಳಿತಾಯ ಮ್ಯೂಚುವಲ್ ಫಂಡ್‌ಗಳಾಗಿರುವ ELSS ಯೋಜನೆಗಳು ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ. ELSS ಫಂಡ್‌ಗಳಲ್ಲಿ 1.5 ಲಕ್ಷದವರೆಗಿನ ಹೂಡಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಒಬ್ಬರು ಅದರಲ್ಲಿ SIP ಅಥವಾ ಒಟ್ಟು ಮೊತ್ತದ ಮೂಲಕ ಹೂಡಿಕೆ ಮಾಡಬಹುದು.
ELSS ನಿಧಿಗಳು ಪ್ರಾಥಮಿಕವಾಗಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುತ್ತವೆ.ಆದ್ದರಿಂದ ಅವುಗಳು ಸ್ವಲ್ಪ ಅಪಾಯವನ್ನು ಹೊಂದಿರುತ್ತವೆ. ಆದರೆ ಒಟ್ಟಾರೆಯಾಗಿ, ELSS ನಿಧಿಗಳು ಕೇವಲ ತೆರಿಗೆಯನ್ನು ಉಳಿಸುವುದಿಲ್ಲ ಆದರೆ ಹಿರಿಯ ನಾಗರಿಕರಿಗೆ ತಮ್ಮ ಬಂಡವಾಳವನ್ನು ಬೆಳೆಸಲು ಸಹಾಯ ಮಾಡುತ್ತದೆ.
ಸ್ಥಿರ ಠೇವಣಿ ಯೋಜನೆಗಳು
ಹಿರಿಯ ನಾಗರಿಕರ ಹೂಡಿಕೆದಾರರಿಗೆ ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿ) ಸುರಕ್ಷಿತ ಆಯ್ಕೆಗಳಲ್ಲಿ ಒಂದಾಗಿದೆ.ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಎಫ್‌ಡಿಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ಎಫ್‌ಡಿಗಳು ಗ್ಯಾರಂಟಿ ರಿಟರ್ನ್ ವೈಶಿಷ್ಟ್ಯವನ್ನು ಹೊಂದಿರುವುದು ಮಾತ್ರವಲ್ಲದೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಯಿಂದ ರೂ 5 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಪಡೆಯಹುದು.
ಸ್ಥಿರ ಠೇವಣಿಗಳನ್ನು ಇಕ್ವಿಟಿ ಹೂಡಿಕೆಗಳಿಗಿಂತ ಕಡಿಮೆ ಅಪಾಯಕಾರಿ ಮತ್ತು ಹೆಚ್ಚು ಸ್ಥಿರವಾದ ರಿಟರ್ನ್ ಆಯ್ಕೆಯನ್ನಾಗಿ ಮಾಡುತ್ತದೆ.
ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ತೆರಿಗೆ ಉಳಿಸುವ FD ಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಿರಿಯ ನಾಗರಿಕರು ತಮ್ಮ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಬಹುದು. ಇಂತಹ FD ಗಳು 5 ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತವೆ. FD ಗಳಲ್ಲಿ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. ಸಾಮಾನ್ಯವಾಗಿ, ಬಡ್ಡಿ ದರವು ಶೇ.5.5ರಷ್ಟು ಮತ್ತು ಶೇ.7.75ರಷ್ಟು ನಡುವೆ ಇರುತ್ತದೆ.
ತೆರಿಗೆ ಮುಕ್ತ ಸರ್ಕಾರಿ ಬಾಂಡ್‌ಗಳು
ಹಿರಿಯ ನಾಗರಿಕರಿಗೆ ಸರ್ಕಾರಿ ಬಾಂಡ್‌ಗಳು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ.10 ರಿಂದ 15 ವರ್ಷಗಳ ಅವಧಿಗೆ ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.ಇವುಗಳು ಉತ್ತಮ ಕ್ರೆಡಿಟ್ ರೇಟಿಂಗ್‌ಗಳು, ಉತ್ತಮ ದ್ರವ್ಯತೆ ಮತ್ತು ಮೆಚ್ಯೂರಿಟಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತವೆ. ಈ ಬಾಂಡ್‌ಗಳನ್ನು ಎಕ್ಸ್‌ಚೇಂಜ್‌ಗಳಲ್ಲಿ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು, ಇದಕ್ಕಾಗಿ ಒಬ್ಬರು ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕಾಗುತ್ತದೆ. ಶೇ.5.5 ರಿಂದ ಶೇ.7.5ವರೆಗೆ ಬಡ್ಡಿದರಗಳನ್ನು ನೀಡುತ್ತವೆ.
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ ಮತ್ತು ಅವರಿಗೆ ನಿಯಮಿತ ಆದಾಯದ ಮೂಲವನ್ನು ನೀಡುವ ಉದ್ದೇಶದಿಂದ ಪ್ರಾರಂಭವಾಗುತ್ತದೆ.
ಎಲ್ಐಸಿಗೆ ಸರ್ಕಾರದ ಖಾತರಿಯ ಆಧಾರದ ಮೇಲೆ ಚಂದಾದಾರಿಕೆ ಮೊತ್ತಕ್ಕೆ ಲಿಂಕ್ ಮಾಡಲಾದ ಖಚಿತವಾದ ಪಿಂಚಣಿಯನ್ನು ಒದಗಿಸುವ ಮೂಲಕ ಹಿರಿಯ ನಾಗರಿಕರಿಗೆ ವೃದ್ಧಾಪ್ಯದ ಆದಾಯ ಭದ್ರತೆಯನ್ನು ನೀಡುತ್ತದೆ. ತಿಂಗಳಿಗೆ ಕನಿಷ್ಠ 1,000 ಪಿಂಚಣಿಗಾಗಿ ಯೋಜನೆಯಡಿ ಕನಿಷ್ಠ ಖರೀದಿ ಬೆಲೆ 1.5 ಲಕ್ಷ ರೂ.ಗಳ ಯೋಜನೆಯಡಿಯಲ್ಲಿ ಗರಿಷ್ಠ ಹೂಡಿಕೆ ಮಿತಿ 15 ಲಕ್ಷ ರೂ.ಗಳ
ಪಿಂಚಣಿದಾರರು ಪಿಂಚಣಿ ಮೊತ್ತ ಅಥವಾ ಹೂಡಿಕೆಯ ಮೊತ್ತವನ್ನು ಆಯ್ಕೆ ಮಾಡಬಹುದು. ಈ ಯೋಜನೆಯಡಿ ಪಿಂಚಣಿ ಮೊತ್ತವು ಹೂಡಿಕೆ ಮಾಡಿದ ಮೊತ್ತವನ್ನು ಅವಲಂಬಿಸಿ ತಿಂಗಳಿಗೆ 1,000 ರೂ.ನಿಂದ 10,000 ರೂ.ಗಳವರೆಗೆ ಇರುತ್ತದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ( NPS ) ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಡೆಸುತ್ತಿರುವ ಸರ್ಕಾರಿ ಬೆಂಬಲಿತ ಸ್ವಯಂ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಸರ್ಕಾರೇತರ ಉದ್ಯೋಗಿಗಳಿಗೆ 2009 ರಲ್ಲಿ ಪ್ರಾರಂಭವಾದ ಪಿಂಚಣಿ ಯೋಜನೆಯು ಈಗ 18 ರಿಂದ 70 ವರ್ಷ ವಯಸ್ಸಿನ ಎಲ್ಲಾ ನಾಗರಿಕರಿಗೂ ಸಹ ಲಭ್ಯವಿದೆ.
ಇನ್ನೂ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಿರಿಯ ನಾಗರಿಕರು ಯೋಜನೆಯಲ್ಲಿ ಹೂಡಿಕೆಯನ್ನು ಮುಂದುವರಿಸಬಹುದು, ಇದು ಸೆಕ್ಷನ್ 80CCE ಮತ್ತು 80CCD(1) ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡುತ್ತದೆ. ಇದರ ಮೇಲೆ, ಹೆಚ್ಚುವರಿ ರೂ 50,000 ವರೆಗಿನ ಕೊಡುಗೆಗಳನ್ನು ಸಹ ವಿಭಾಗ 80CCD(1B) ಅಡಿಯಲ್ಲಿ ವಿನಾಯಿತಿ ನೀಡಲಾಗುತ್ತದೆ.
NPS ಅಡಿಯಲ್ಲಿ, ಹೂಡಿಕೆದಾರರು ತಮ್ಮ ಕೊಡುಗೆ ಮೊತ್ತ ಶೇ.25 ವರೆಗೆ ತೆರಿಗೆ ಮುಕ್ತವಾಗಿ ಹಿಂಪಡೆಯಬಹುದು. ಅಲ್ಲದೆ, ಎನ್‌ಪಿಎಸ್ ಖಾತೆಯ ಮುಕ್ತಾಯದ ಮೇಲೆ ಒಬ್ಬರು ತಮ್ಮ ಕಾರ್ಪಸ್‌ನ ಶೇ.40 ರಷ್ಟು ಇದೆ. ಒಟ್ಟು ಮೊತ್ತದ ಗರಿಷ್ಠ ಶೇ60 ರಷ್ಟು ನೀವು ಹಿಂಪಡೆಯಬಹುದು.
ವಿಮೆ
ತೆರಿಗೆ ಉಳಿತಾಯಕ್ಕೆ ಬಂದಾಗ ಆರೋಗ್ಯ ವಿಮೆಯು ಮತ್ತೊಂದು ಪ್ರಮುಖ ಸಾಧನವಾಗಿದೆ. ಆರೋಗ್ಯ ವಿಮಾ ಕಂತುಗಳು ಸೆಕ್ಷನ್ 80D ಅಡಿಯಲ್ಲಿ ತೆರಿಗೆ-ವಿನಾಯತಿಯನ್ನು ಹೊಂದಿವೆ. ಹಿರಿಯ ನಾಗರಿಕರಿಗೆ, ಈ ವಿನಾಯಿತಿ ಮಿತಿಯು ರೂ 30,000 ವರೆಗೆ ಇರುತ್ತದೆ, ಆದರೆ ಹಿರಿಯ ನಾಗರಿಕರಲ್ಲದವರಿಗೆ ಇದು ರೂ 20,000 ವರೆಗೆ ಇರುತ್ತದೆ.
ವಿಮಾ ಯೋಜನೆಗಳು ನಿಮಗೆ ವಿಮಾ ರಕ್ಷಣೆಯನ್ನು ಒದಗಿಸುವುದು ಮಾತ್ರವಲ್ಲದೆ ತೆರಿಗೆ ಉಳಿತಾಯದ ಲಾಭವನ್ನು ನೀಡುತ್ತದೆ ಮತ್ತು ಸರಿಯಾದ ಯೋಜನೆಯನ್ನು ಆಯ್ಕೆ ಮಾಡಿದರೆ ಹೂಡಿಕೆಯ ಮೇಲಿನ ಲಾಭವನ್ನು ನೀಡುತ್ತದೆ.
ಸಾರ್ವಜನಿಕ ಭವಿಷ್ಯ ನಿಧಿ (PPF)
ಸಾರ್ವಜನಿಕ ಭವಿಷ್ಯ ನಿಧಿ ( PPF ) ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಇದನ್ನು ಅಂಚೆ ಕಚೇರಿ ಮತ್ತು ಬ್ಯಾಂಕ್ಗಳು ಕಾರ್ಯ ನಿರ್ವಹಿಸುತ್ತೇವೆ. ಈ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ 500 ರೂ ಮತ್ತು ಗರಿಷ್ಠ 1.5 ಲಕ್ಷ ಹೂಡಿಕೆ ಮಾಡಬಹುದು. ಇದರ ಒಟ್ಟು ಅವಧಿಯು 15 ವರ್ಷಗಳು, ಮತ್ತು ಆರನೇ ವರ್ಷದಿಂದ ಭಾಗಶಃ ಹಿಂತೆಗೆದುಕೊಳ್ಳುವಿಕೆಯನ್ನು ಅನುಮತಿಸಲಾಗಿದೆ.
PPF ನಿಯಮಿತ ಆದಾಯವನ್ನು ಒದಗಿಸುವುದಿಲ್ಲ, ಆದರೆ ಅದರ ಮುಕ್ತಾಯ ಪ್ರಯೋಜನವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.
ಈ ಮೇಲಿನ ಎಲ್ಲಾ ಅಂಶಗಳು ನಾಗರಿಕರಿಗಾಗಿ ಇರುವ ಸುರಕ್ಷಿತ ಹೂಡಿಕೆ ಯೋಜನೆಗಳಾಗಿವೆ.


Click it and Unblock the Notifications