ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಈ ಹಿಂದೆ ಡಿಸೆಂಬರ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ಹೊಸ ಬಸ್ ಮಾರ್ಗಗಳನ್ನು ಪರಿಚಯಿಸಿತ್ತು. ಈಗ ಮತ್ತೆ ಸೋಮವಾರದಿಂದ (ಜನವರಿ 8) ಹೊಸ ಮೂರು ಮಾರ್ಗಗಳನ್ನು ಬಿಎಂಟಿಸಿ ಪರಿಚಯಿಸಿದೆ.
ಈ ಹಿಂದೆ ಬಿಎಂಟಿಸಿ ಟಾಟಾ ಮೋಟಾರ್ಸ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಸಹಯೋಗದಲ್ಲಿ ವಿಧಾನಸೌಧದಿಂದ 100 ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಮತ್ತು ವಾಹನ ಮಾಲಿನ್ಯವನ್ನು ತಡೆಗಟ್ಟಲು ಇ-ಬಸ್ ಅನ್ನು ಆರಂಭಿಸಲಾಗಿದೆ. ಈಗ ಹೊಸ ಮಾರ್ಗಗಳನ್ನು ಆರಂಭಿಸಲಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಮೂರು ಹೊಸ ಮಾರ್ಗಗಳ ವಿವರ
410-ಎಬಿ/10: ಬಂಡೆ ಮಾರಮ್ಮ ಬಸ್ ನಿಲ್ದಾಣದಿಂದ ನಾಗರಭಾವಿ ಸರ್ಕಲ್, ಕತ್ರಿಗುಪ್ಪೆ, ಬನಶಂಕರಿ ಮತ್ತು ರಾಗಿಗುಡ್ಡ ಮೂಲಕ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಬಸ್ ಬರಲಿದೆ. ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ಇರುತ್ತದೆ. ಬೆಳಿಗ್ಗೆ 8.30 ಕ್ಕೆ ಬಂಡೆ ಮಾರಮ್ಮ ಬಸ್ ನಿಲ್ದಾಣದಿಂದ ಮತ್ತು ಸಂಜೆ 4.15 ಕ್ಕೆ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬಸ್ ಇರಲಿದೆ.
215-ಎಂ: ಮೆಜೆಸ್ಟಿಕ್‌ನಿಂದ ಕಾರ್ಪೊರೇಷನ್ ಸರ್ಕಲ್, ವಿಜಯಾ ಕಾಲೇಜು, ಜಯನಗರ 5ನೇ ಬ್ಲಾಕ್ ಮತ್ತು ಡೆಲ್ಮಿಯಾ ವೃತ್ತದ ಮೂಲಕ ವಿನಾಯಕ ನಗರಕ್ಕೆ ಬಸ್ ಸಂಚರಿಸಲಿದೆ. ದಿನಕ್ಕೆ ಒಟ್ಟು 12 ಟ್ರಿಪ್‌ಗಳಿರುತ್ತವೆ.
ಬಸ್ ಮೆಜೆಸ್ಟಿಕ್‌ನಿಂದ ಬೆಳಗ್ಗೆ 6.30, 8.35, 11.10, ಸಂಜೆ 4.35, ಸಂಜೆ 6.45 ಮತ್ತು ರಾತ್ರಿ 9.20ಕ್ಕೆ ಹೊರಡಲಿದೆ. ಹಿಂದಿರುಗುವ ಮಾರ್ಗದಲ್ಲಿ ಸಮಯ ಬೆಳಿಗ್ಗೆ 5.30, 7.30, ಬೆಳಿಗ್ಗೆ 9.40, ಮಧ್ಯಾಹ್ನ 3.10, ಸಂಜೆ 5.40 ಮತ್ತು ಸಂಜೆ 7.50 ಆಗಿರುತ್ತದೆ.
ಮೆಟ್ರೋ ಫೀಡರ್ ಬಸ್
ಎಂಎಫ್-20/1: ಕೋಣನಕುಂಟೆ ಕ್ರಾಸ್‌ನಿಂದ ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ಮೂಲಕ ಬ್ರಿಗೇಡ್ ಮೆಡೋಸ್‌ಗೆ ತಲುಪಲಿದೆ. ದಿನಕ್ಕೆ 15 ಟ್ರಿಪ್‌ಗಳಿರುತ್ತವೆ.
ಬಸ್ ಕೋಣನಕುಂಟೆ ಕ್ರಾಸ್‌ನಿಂದ ಬೆಳಗ್ಗೆ 8.30, 10.25, ಮಧ್ಯಾಹ್ನ 12.30, ಮಧ್ಯಾಹ್ನ 2, 3.30, ಸಂಜೆ 5.50 ಮತ್ತು ರಾತ್ರಿ 7.45 ಕ್ಕೆ ಹೊರಡಲಿದೆ. ಹಾಗೆಯೇ ಬಸ್ ಬೆಳಿಗ್ಗೆ 7.30, 9.25, 11.45, ಮಧ್ಯಾಹ್ನ 1.15, ಮಧ್ಯಾಹ್ನ 2.45, ಸಂಜೆ 4.50, ಸಂಜೆ 6.45 ಮತ್ತು ರಾತ್ರಿ 8.40 ಕ್ಕೆ ಹಿಂದಿರುಗುವ ಮಾರ್ಗದಲ್ಲಿ ಅಂದರೆ ಬ್ರಿಗೇಡ್ ಮೆಡೋಸ್‌ನಿಂದ ಸಂಚರಿಸಲಿದೆ.


Click it and Unblock the Notifications