ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಅಂದರೆ ಫೆಬ್ರವರಿ 8ರಂದು ರೆಪೋ ದರವನ್ನು ಏರಿಸಿದೆ. ಸಾಮಾನ್ಯವಾಗಿ ರೆಪೋ ದರ ಏರಿಕೆಯು ಜನರ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುತ್ತದೆ. ರೆಪೋ ದರ ಹೆಚ್ಚಾದಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲದ ಬಡ್ಡಿದರ ಮತ್ತು ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡುತ್ತದೆ.
ಆರ್‌ಬಿಐ ರೆಪೋ ದರವನ್ನು ಆರ್‌ಬಿಐ 25 ಮೂಲಾಂಕ ಅಂದರೆ ಶೇಕಡ 6.50ರಷ್ಟು ಏರಿಕೆ ಮಾಡಿದೆ. ಇದಾದ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರವನ್ನು ಏರಿಸಲು ಆರಂಭಿಸಿದೆ. ಇದರ ನೇರ ಪ್ರಭಾವ ಜನರ ಮೇಲೆ ಉಂಟಾಗಲಿದೆ. ಆರ್‌ಬಿಐ ರೆಪೋ ದರ ಏರಿಕೆಯು ವ್ಯಕ್ತಿಯ ಮಾಸಿಕ ಇಎಂಐ ಮೇಲೆ ಪ್ರಭಾವ ಉಂಟು ಮಾಡಲಿದೆ.
ಈಗಾಗಲೇ ಸಾಲವನ್ನು ಪಡೆದಿರುವವರ ಸಾಲದ ಬಡ್ಡಿದರ ಏರಿಕೆಯಾಗಿ, ಇಎಂಐ ಏರಿಕೆಯಾಗಲಿದೆ. ಈಗಾಗಲೇ ಸಾಲವನ್ನು ಪಡೆದಿರುವವರ ಮತ್ತು ಹೊಸದಾಗಿ ಸಾಲವನ್ನು ಪಡೆದವರು ಇನ್ನು ಮುಂದೆ ಅಧಿಕ ಇಎಂಐ ಅನ್ನು ಪಾವತಿಸಬೇಕಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಏನಿದು ರೆಪೋ ದರ?
ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಫೆಬ್ರವರಿ 6ರಿಂದ 8ರವರೆಗೆ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆ ನಡೆದಿದ್ದು ಈ ಸಭೆಯ ಅಂತ್ಯದಲ್ಲಿ ಅಂದರೆ ಫೆಬ್ರವರಿ 8ರಂದು ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡಿದೆ.
ಎಷ್ಟು ಇಎಂಐ ಅಧಿಕವಾಗಲಿದೆ?
ಬ್ಯಾಂಕ್ ಬಡ್ಡಿದರ ಏರಿಕೆಯು ನೇರವಾಗಿ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುವವರ ಮತ್ತು ಸಾಲವನ್ನು ಪಡೆಯುವವರ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಕಳೆದ ವರ್ಷದಿಂದ ಬಡ್ಡಿದರ ಸುಮಾರು ಶೇಕಡ 2ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಇಎಂಐ ನಿರಂತರವಾಗಿ ಏರುತ್ತಲಿದೆ. ಗೃಹ ಸಾಲ ಮತ್ತು ವಾಹನ ಸಾಲವನ್ನು ಪಡೆದವರು ಅಧಿಕ ಇಎಂಐ ಪಾವತಿಸಬೇಕಾಗುತ್ತದೆ.
ಆದರೆ ಸಾಲದ ಹೊರೆಯನ್ನು ಕಡಿಮೆ ಮಾಡಲು ನೀವು ಸಾಲದ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳಬಹುದು. 5 ಲಕ್ಷ ರೂಪಾಯಿ ಸಾಲವನ್ನು ಪಡೆದರೆ ವೈಯಕ್ತಿಕ ಸಾಲದ ಬಡ್ಡಿದರವು ಶೇಕಡ 13ರಿಂದ ಶೇಕಡ 15ಕ್ಕೆ ಏರಿಕೆಯಾಗಲಿದೆ. ಇದರ ಅವಧಿ 5 ವರ್ಷವಾದರೆ ಪ್ರತಿ ಇಎಂಐನಲ್ಲಿ 518 ರೂಪಾಯಿ ಏರಿಕೆಯಾಗಲಿದೆ. ಅಂದರೆ ಇಎಂಐ 11,377 ರೂಪಾಯಿಯಿಂದ 11,895 ರೂಪಾಯಿಗೆ ತಲುಪಲಿದೆ.


Click it and Unblock the Notifications