ಗೋಧಿ ಹಿಟ್ಟಿನ (ಆಟ್ಟಾ) ಬೆಲೆ ಅಧಿಕವಾಗುವ ಕಾರಣದಿಂದಾಗಿ ಮುಂದಿನ ತಿಂಗಳಿನಿಂದ ಬ್ರೆಡ್, ಬಿಸ್ಕೆಟ್ ಮತ್ತು ರೊಟ್ಟಿಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಈ ನಡುವೆ ಪ್ರಸಕ್ತ ವರ್ಷದ ಗೋಧಿಯ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ಇನ್ನೂ ಘೋಷಿಸಲಾಗಿಲ್ಲ.
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಒಎಮ್‌ಎಸ್‌ಎಸ್ ಅಡಿಯಲ್ಲಿ ಗೋಧಿಯನ್ನು ಕಾಲಕಾಲಕ್ಕೆ ಆಹಾರಧಾನ್ಯಗಳ ಪೂರೈಕೆಯನ್ನು ಹೆಚ್ಚಿಸಲು, ವಿಶೇಷವಾಗಿ ಗೋಧಿಯನ್ನು ನೇರ ಅದೇ ಋತುವಿನಲ್ಲಿ ಮಾರಾಟ ಮಾಡುತ್ತದೆ. ಗೋಧಿ ಹಿಟ್ಟಿನ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ ಶನಿವಾರ ಪ್ರತಿ ಕೆಜಿಗೆ ರೂ 32.78 ರಷ್ಟಿದೆ. ಕಳೆದ ವರ್ಷ ಗೋಧಿ ಹಿಟ್ಟಿಗೆ ಇದ್ದ ಬೆಲೆಗಿಂತ ಇದು ಅಧಿಕವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಗೋಧಿ ಹಿಟ್ಟಿಗೆ ಕೆಜಿಗೆ ರೂಪಾಯಿ 30.03 ಆಗಿತ್ತು. ಆದರೆ ಈ ವರ್ಷ ಶೇಕಡಾ 9.15 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಕ್ಕೆ ರಾಜ್ಯ ನಾಗರಿಕ ಸರಬರಾಜು ಇಲಾಖೆಗಳು ವರದಿ ಮಾಡಿದೆ.
ನಾಲ್ಕು ಮೆಟ್ರೋ ನಗರಗಳ ಪೈಕಿ, ಸರಾಸರಿ ಗೋಧಿ ಹಿಟ್ಟಿನ ಚಿಲ್ಲರೆ ದರವು ಮುಂಬೈನಲ್ಲಿ ಅಧಿಕವಾಗಿದೆ. ಮುಂಬೈನಲ್ಲಿ ಪ್ರತಿ ಕೆಜಿಗೆ 49 ರೂಪಾಯಿ ಆಗಿದೆ. ನಂತರ ಚೆನ್ನೈ ಕೆಜಿಗೆ ರೂ. 34, ಕೋಲ್ಕತ್ತಾ ಕೆಜಿಗೆ ರೂ. 29 ಮತ್ತು ದೆಹಲಿ ಕೆಜಿಗೆ ರೂ. 27 ಆಗಿದೆ. ಅಲ್ಲದೆ, ಎಫ್‌ಸಿಐನಿಂದ ಗಿರಣಿ ಉದ್ಯಮದಿಂದ ಗೋಧಿಯನ್ನು ಖರೀದಿಸುವುದು ಮಾರುಕಟ್ಟೆಯಲ್ಲಿ ಗೋಧಿಯ ಸ್ಥಾನವನ್ನು ಅವಲಂಬಿಸಿ ವರ್ಷದಲ್ಲಿ ಅತ್ಯಲ್ಪ ಮೊತ್ತದಿಂದ ಸುಮಾರು 7-8 ಮಿಲಿಯನ್ ಟನ್‌ಗಳವರೆಗೆ ಬದಲಾಗಬಹುದು.
ಸಾಬೂನು, ಶಾಂಪೂ, ನೂಡಲ್ಸ್ ಬೆಲೆ ಹೆಚ್ಚಳವಾಗುತ್ತಾ?
2021-22ರಲ್ಲಿ ಗೋಧಿ ಗೋಧಿ ಸಂಸ್ಕರಣಾ ಉದ್ಯಮವು ಸರ್ಕಾರದಿಂದ ಏಳು ಮಿಲಿಯನ್ ಟನ್ ಆಹಾರಧಾನ್ಯವನ್ನು ಸಂಗ್ರಹಿಸಿದೆ. ಈ ವರ್ಷ, ಒಎಂಎಸ್ಎಸ್ ನೀತಿಯ ಮುಂದುವರಿಕೆಯನ್ನು ಸರ್ಕಾರ ಘೋಷಿಸದಿದ್ದರೆ ಉದ್ಯಮವು ಮುಕ್ತ ಮಾರುಕಟ್ಟೆಯಿಂದ ಶೇಕಡಾ 100 ರಷ್ಟು ಗೋಧಿಯನ್ನು ಖರೀದಿಸಬೇಕಾಗುತ್ತದೆ. ಈ ನಡುವೆ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧದಿಂದಾಗಿ ಸಾಬೂನುಗಳು, ಶಾಂಪೂಗಳು, ಬಿಸ್ಕತ್ತುಗಳು ಮತ್ತು ನೂಡಲ್ಸ್ ಬೆಲೆ ಏರಿಕೆಯ ಒತ್ತಡವನ್ನು ಎದುರಿಸುತ್ತಿವೆ. ಸಾಬೂನುಗಳು, ಶಾಂಪೂಗಳು, ನೂಡಲ್ಸ್ ಮತ್ತು ಬಿಸ್ಕತ್ತುಗಳಿಂದ ಹಿಡಿದು ಚಾಕೊಲೇಟ್‌ಗಳವರೆಗೆ ಉತ್ಪನ್ನಗಳನ್ನು ತಯಾರಿಸಲು ತಾಳೆ ಎಣ್ಣೆಯನ್ನು ವಿವಿಧ ಕೈಗಾರಿಕೆಗಳಿಗೆ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ. ತಾಳೆ ಎಣ್ಣೆಯ ಪೂರೈಕೆಯಲ್ಲಿನ ಕೊರತೆಯ ಕಾರಣದಿಂದಾಗಿ ಈ ಬೆಲೆಗಳು ಏರಿಕೆ ಆಗಲಿದೆ.
ಪ್ರತಿ ವರ್ಷ 13.5 ಮಿಲಿಯನ್ ಟನ್ ಖಾದ್ಯ ತೈಲ ಆಮದು
ಭಾರತವು ವಿಶ್ವದ ಅತಿದೊಡ್ಡ ಖಾದ್ಯ ತೈಲಗಳ ಆಮದುದಾರ. ತಾಳೆ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿದೆ. ಭಾರತವು ಪ್ರತಿ ವರ್ಷ 13.5 ಮಿಲಿಯನ್ ಟನ್‌ಗಳಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ, 8-8.5 ಮಿಲಿಯನ್ ಟನ್‌ಗಳು (ಸುಮಾರು 63 ಪ್ರತಿಶತ) ತಾಳೆ ಎಣ್ಣೆಯಾಗಿದೆ. ಈಗ, ಸುಮಾರು 45 ಪ್ರತಿಶತ ಇಂಡೋನೇಷ್ಯಾದಿಂದ ಮತ್ತು ಉಳಿದವು ನೆರೆಯ ಮಲೇಷ್ಯಾದಿಂದ ಬಂದಿದೆ. ಭಾರತವು ಪ್ರತಿ ವರ್ಷ ಇಂಡೋನೇಷ್ಯಾದಿಂದ ಸುಮಾರು 4 ಮಿಲಿಯನ್ ಟನ್ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.
ಡೊಮಿನೋಸ್, ಬಾರ್, ರೆಸ್ಟೋರೆಂಟ್ ಬೆಲೆ ಹೆಚ್ಚಳ
ಹೆಚ್ಚಿನ ಆಹಾರ ಹಣದುಬ್ಬರ ಮತ್ತು ಇಂಧನ ಬೆಲೆಗಳಿಂದ ಹೆಚ್ಚುತ್ತಿರುವ ತಯಾರಿ ವೆಚ್ಚದಿಂದಾಗಿ ಡೊಮಿನೋಸ್, ಬಾರ್‌ಗಳು ಮತ್ತು ಕೆಫೆಗಳಂತಹ ರೆಸ್ಟೋರೆಂಟ್‌ಗಳ ಮೇಲೆ ಪ್ರಭಾವವನ್ನು ಬೀರುತ್ತಿದೆ. ಈ ರೆಸ್ಟೋರೆಂಟ್‌ಗಳು ಶೇಕಡ 15 ರಷ್ಟು ಬೆಲೆಗಳನ್ನು ಹೆಚ್ಚಿಸುವಂತಾಗಿದೆ. ಕಳೆದ ಮೂರು ತಿಂಗಳಲ್ಲಿ ತಮ್ಮ ಕಚ್ಚಾ ವಸ್ತುಗಳ ವೆಚ್ಚವು ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ಉದ್ಯಮದ ಅಧಿಕಾರಿಗಳು ಈ ಹಿಂದೆ ಹೇಳಿದ್ದಾರೆ.
ಆಹಾರ ಹಣದುಬ್ಬರ ಹೆಚ್ಚಳ
ಆಹಾರ ಪದಾರ್ಥಗಳ ಏರಿಕೆಯಿಂದಾಗಿ ಮಾರ್ಚ್‌ನಲ್ಲಿ ಹಣದುಬ್ಬರ ಏರಿಕೆಯಾಗಿದೆ. ಆಹಾರ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 5.85 ಕ್ಕೆ ಹೋಲಿಸಿದರೆ ಶೇಕಡಾ 7.68 ರಷ್ಟಿದೆ. ಆಹಾರ ಮತ್ತು ಇಂಧನ ಘಟಕಗಳನ್ನು ಹೊರತುಪಡಿಸಿದ ಪ್ರಮುಖ ಹಣದುಬ್ಬರವು ಮಾರ್ಚ್‌ನಲ್ಲಿ 10 ತಿಂಗಳ ಗರಿಷ್ಠ ಶೇಕಡಾ 6.29ಕ್ಕೆ ಏರಿತು. ಆಹಾರ ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡಾ 7.68 ಕ್ಕೆ ಏರಿತು. ಹಿಂದಿನ ತಿಂಗಳಲ್ಲಿ ಶೇಕಡಾ 5.85 ರಷ್ಟಿತ್ತು. ಮಾರ್ಚ್‌ನಲ್ಲಿ ಕಳೆದ ವರ್ಷಕ್ಕಿಂತ ತೈಲದ ಬೆಲೆ ಶೇಕಡಾ 18.79 ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಆಹಾರ ಹಣದುಬ್ಬರ ಹೆಚ್ಚಳವಾಗಿದೆ.


Click it and Unblock the Notifications