ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್ ಕಾರ್ಡ್) ಪ್ರಸ್ತುತ ದೇಶದಲ್ಲಿ ಅತೀ ಅಗತ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಎಲ್ಲ ಹಣಕಾಸು ವಹಿವಾಟಿಗೂ ಪ್ಯಾನ್ ಕಾರ್ಡ್ ಮುಖ್ಯವಾಗಿದೆ. ಮುಂದಿನ ಬಜೆಟ್‌ನಲ್ಲಿ ಪ್ಯಾನ್ ಕಾರ್ಡ್ ಸಂಬಂಧಿಸಿದ ಕೆಲವೊಂದು ನಿರ್ಧಾರಗಳು ಹೊರಬರುವ ಸಾಧ್ಯತೆಯಿದೆ. ಪ್ಯಾನ್ ಕಾರ್ಡ್ ವ್ಯಾಪಾರದ ಏಕೈಕ ಐಡಿಯಾಗುವ ಸಾಧ್ಯತೆಯು ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳನ್ನು ಬೇರೆ ಬೇರೆ ವಲಯಗಳು ಹೊಂದಿದೆ. ಈ ನಡುವೆ ಈ ಬಜೆಟ್‌ನಲ್ಲೇ ಪ್ಯಾನ್ ಕಾರ್ಡ್ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ನಿರೀಕ್ಷೆಯಿದೆ.
ಎಲ್ಲ ಜನರು ಮತ್ತು ಸಂಸ್ಥೆಗಳು ಪ್ಯಾನ್ ಕಾರ್ಡ್ ಅನ್ನು ಪ್ರಮುಖ ಗುರುತಿನ ಚೀಟಿಯಾಗಿ ಬೇರೆ ದಾಖಲೆಯೊಂದಿಗೆ ಲಿಂಕ್ ಮಾಡುವ ಸಾಧ್ಯತೆಯಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಪ್ರಸ್ತುತ 20 ಗುರುತಿನ ಚೀಟಿಗಳನ್ನು ಹೊಂದಿದೆ. ಈ ಪೈಕಿ ಪ್ಯಾನ್ ಕಾರ್ಡ್ ಏಕೈಕ ಗುರುತಿನ ಚೀಟಿಯಾಗುವ ನಿರೀಕ್ಷೆಯಿದೆ.

ಸರಕು ಮತ್ತು ಸೇವೆ ತೆರಿಗೆ ಗುರುತಿನ ಸಂಖ್ಯೆ (ಜಿಎಸ್‌ಟಿಐಎನ್), ತೆರಿಗೆದಾರರ ಗುರುತಿನ ಸಂಖ್ಯೆ (ಟಿಐಎನ್), ತೆರಿಗೆ ಕಡಿತ ಖಾತೆ ಸಂಖ್ಯೆ (ಟಿಡಿಎ), ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ), ಕಾರ್ಪೋರೇಟ್ ಐಡೆಂಟಿಫಿಕೇಷನ್ ಸಂಖ್ಯೆ (ಸಿಐಎನ್) ಹಾಗೂ ಇತರೆ ದಾಖಲೆಗಳು ಪ್ರಸ್ತುತ ಪ್ರಮುಖ ವ್ಯಾಪಾರ ಸಂಬಂಧಿತ ದಾಖಲೆಯಾಗಿದೆ.
ಹಣಕಾಸು ಸಚಿವಾಲಯದ ಹಿರಿಯ ಸಿಬ್ಬಂದಿಗಳ ಪ್ರಕಾರ ಹಣಕಾಸು ಕಾಯ್ದೆ 2023 ಜಾರಿಯಾಗಲಿದೆ. ಇದರಲ್ಲಿ ಪ್ಯಾನ್ ಕಾರ್ಡ್ ಅನ್ನು ಪ್ರಮುಖ ಮತ್ತು ಕಾನೂನಾತ್ಮಕ ಗುರುತಿನ ಚೀಟಿ ಎಂದು ಪರಿಗಣಿಸುವ ನಿರೀಕ್ಷೆಯಿದೆ. ವ್ಯಾಪಾರವನ್ನು ಸರಳಗೊಳಿಸಲು, ಸುಲಭಗೊಳಿಸಲು ಇದು ಸಹಾಯ ಮಾಡಲಿ.
ಹಣಕಾಸು ಕಾಯ್ದೆ 2023ರ ಪ್ರಕಾರ ಏಜೆನ್ಸಿಗಳು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಂಡಿರಬೇಕು. ತಮ್ಮ ಉದ್ಯಮದ ರಿಜಿಸ್ಟ್ರೇಷನ್‌ಗೆ, ಪರವಾನಗಿ, ಮೊದಲಾದವುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.


Click it and Unblock the Notifications