ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವೇತನ ಪಡೆಯುವ ವರ್ಗವು 2023-24ರ ಬಜೆಟ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಪ್ರಮುಖವಾಗಿ ತೆರಿಗೆ ಸಂಬಂಧಿಸಿದಂತೆ ತಮಗೆ ರಿಲೀಫ್ ನೀಡುವ ವಿಚಾರವನ್ನು ಸರ್ಕಾರ ಪ್ರಸ್ತುತ ಪಡಿಸುತ್ತದೆಯೇ ಎಂಬ ನಿರೀಕ್ಷೆಯನ್ನು ವೇತನ ಪಡೆಯುವ ವರ್ಗವು ಹೊಂದಿದೆ. ಕಳೆದ ಬಜೆಟ್‌ನಲ್ಲಿಯೂ ಇದೇ ನಿರೀಕ್ಷೆಯನ್ನು ಹೊಂದಿದ್ದರೂ ಆದರೆ, ನಿರೀಕ್ಷೆ ಹುಸಿಯಾಗಿತ್ತು.
ಫೆಬ್ರವರಿ 1, 2023ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಾಗಿದೆ. ಈ ಬಜೆಟ್‌ನಲ್ಲಿ ಸರ್ಕಾರಕ್ಕೆ ಪ್ರಮುಖ ತೆರಿಗೆ ಪಾವತಿದಾರರಾದ ವೇತನ ಪಡೆಯುವ ವರ್ಗದ ಬಗ್ಗೆ ಹೆಚ್ಚು ಗಮನ ಹರಿಸುವ ಸಾಧ್ಯತೆಯಿದೆ. ಅದರಲ್ಲೂ ಮುಖ್ಯವಾಗಿ ಈ ವರ್ಗವು ತೆರಿಗೆ ವಿನಾಯಿತಿಯ ನಿರೀಕ್ಷೆಯನ್ನು ಹೊಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಜ್ಞರೊಬ್ಬರು, "ವೇತನ ಪಡೆಯುವ ವರ್ಗವು ಈ ವರ್ಷವೂ ಕೂಡಾ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ. ತೆರಿಗೆಯಲ್ಲಿ ವಿನಾಯಿತಿಯ ನಿರೀಕ್ಷೆಯನ್ನು ಹೊಂದಿದೆ. ತೆರಿಗೆಯ ಸ್ಲ್ಯಾಬ್ ಕಡಿತ ಮಾಡುವ ನಿರೀಕ್ಷೆಯನ್ನು ಕೂಡಾ ಹೊಂದಿದೆ. ವೈಯಕ್ತಿಕ ಸಾಲದಲ್ಲಿಯೂ ವಿನಾಯಿತಿ ನಿರೀಕ್ಷೆಯನ್ನು ಹೊಂದಿದೆ," ಎಂದು ತಿಳಿಸಿದ್ದಾರೆ. ಹಾಗಾದರೆ ವೇತನ ಪಡೆಯುವ ವರ್ಗವು ಹೊಂದಿರುವ ನಿರೀಕ್ಷೆಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ತೆರಿಗೆ ಸ್ಲ್ಯಾಬ್‌ನಲ್ಲಿನ ಬದಲಾವಣೆ
ಪ್ರಸ್ತುತ ತೆರಿಗೆದಾರರು ಅತೀ ಗೊಂದಲಕಾರಿ ತೆರಿಗೆ ಪಾವತಿ ವಿಧಾನವನ್ನು ಹೊಂದಿದ್ದಾರೆ. ಹಳೆಯ ತೆರಿಗೆ ವಿಧಾನದ ಪ್ರಕಾರ 2.5 ಲಕ್ಷ ರೂಪಾಯಿವರೆಗಿನ ಆದಾಯವಿದ್ದರೆ ನೀವು ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಹಾಗೆಯೇ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87ಎ ಪ್ರಕಾರ ನೀವು 5 ಲಕ್ಷ ರೂಪಾಯಿವರೆಗೆ ಆದಾಯವನ್ನು ಹೊಂದಿದ್ದರೆ, 12,500 ರೂಪಾಯಿ ವಿನಾಯಿತಿ ಮೂಲಕ ಯಾವುದೇ ತೆರಿಗೆಯನ್ನು ಪಾವತಿ ಮಾಡಬೇಕಾಗಿರಲಿಲ್ಲ. ಆದರೆ ರಿಟರ್ನ್ ವೇಳೆ ಸರಿಯಾದ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. ಆದರೆ ಈ ಬಜೆಟ್‌ನಲ್ಲಿ ಸರ್ಕಾರವು ಈ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ.
ಗೃಹ ಖರೀದಿದಾರರಿಗೆ ಕನಿಷ್ಠ ತೆರಿಗೆ ವಿನಾಯಿತಿ ಏರಿಕೆ
ಗೃಹ ಖರೀದಿ ಮಾಡುವ ವೇತನ ಪಡೆಯುವ ವರ್ಗಕ್ಕೆ ಸರ್ಕಾರವು ಅಧಿಕ ಸಬ್ಸಿಡಿಯನ್ನು ನೀಡಬೇಕು ಎಂಬ ನಿರೀಕ್ಷೆಯೂ ಕೂಡಾ ಇದೆ. ಪ್ರಸ್ತುತ ಗೃಹ ಸಾಲದ ಇಎಂಐ ಮೇಲೆ ಸೆಕ್ಷನ್ 24ಬಿ ಅಡಿಯಲ್ಲಿ ವಾರ್ಷಿಕವಾಗಿ ಪಾವತಿ ಮಾಡುವ ಬಡ್ಡಿದರದ ಮೇಲೆ ಸುಮಾರು 2 ಲಕ್ಷ ರೂಪಾಯಿವರೆಗೆ ಕ್ಲೈಮ್ ಮಾಡಬಹುದು. ಇದನ್ನು ಹೊರತುಪಡಿಸಿ ಸೆಕ್ಷನ್ 80ಸಿ ಅಡಿಯಲ್ಲಿ ಗೃಹ ಸಾಲದ ಮೂಲ ಮೊತ್ತದಲ್ಲಿ 1.5 ಲಕ್ಷ ರೂಪಾಯಿವರೆಗೆ ಕ್ಲೈಮ್ ಮಾಡಬಹುದು. ಆದರೆ ಮುಂದಿನ ಬಜೆಟ್‌ನಲ್ಲಿ ಈ ಸೆಕ್ಷನ್ 24ಬಿ ಅಡಿಯ ಕ್ಲೈಮ್ ಅನ್ನು 5 ಲಕ್ಷ ರೂಪಾಯಿಗೆ, ಸೆಕ್ಷನ್ 80ಸಿ ಅಡಿಯ ಕ್ಲೈಮ್ ಅನ್ನು 3 ಲಕ್ಷ ರೂಪಾಯಿಗೆ ಏರಿಸುವ ನಿರೀಕ್ಷೆಯನ್ನು ಈ ವರ್ಗವು ಹೊಂದಿದೆ.
ವೈಯಕ್ತಿಕ ಸಾಲದ ಮೇಲೆ ವಿನಾಯಿತಿ
ಪ್ರಸ್ತುತ ಮಾರುಕಟ್ಟೆಯಲ್ಲಿ ಶೇಕಡ 35ರಷ್ಟು ವೈಯಕ್ತಿಕ ಸಾಲ ಹಾಗೂ ಶಿಕ್ಷಣ ಸಾಲವನ್ನು ಪಡೆಯಲಾಗುತ್ತದೆ. ಆದರೆ ಆದಾಯ ತೆರಿಗೆಯ ಸೆಕ್ಷನ್ 80ಇ ಅಡಿಯಲ್ಲಿ ಶಿಕ್ಷಣ ಸಾಲದ ಬಡ್ಡಿದರದಲ್ಲಿ ವಿನಾಯಿತಿಯನ್ನು ಪಡೆಯಲು ಸಾಧ್ಯವಿದೆ. ಆದರೆ ಈವರೆಗೆ ವೈಯಕ್ತಿಕ ಸಾಲಕ್ಕೆ ಯಾವುದೇ ವಿನಾಯಿತಿಗಳು ಇಲ್ಲ. ಆದ್ದರಿಂದಾಗಿ ಮುಂದಿನ ಬಜೆಟ್‌ನಲ್ಲಿ ವೈಯಕ್ತಿಕ ಸಾಲ ಪಡೆಯುವವರಿಗೆ ವಿನಾಯಿತಿ, ಕ್ಲೈಮ್ ಲಭ್ಯವಾಗುವ ಬಗ್ಗೆ ಘೋಷಣೆ ಮಾಡಬೇಕು ಎಂದು ವೇತನ ಪಡೆಯುವ ವರ್ಗದ ಬೇಡಿಕೆಯಾಗಿದೆ.
ಭತ್ಯೆಗಳನ್ನು ಹೆಚ್ಚಿಸುವ ನಿರೀಕ್ಷೆ
ವೇತನ ಪಡೆಯುವ ವರ್ಗವು ಕೆಲವೊಂದು ಭತ್ಯೆಗಳನ್ನು ಪಡೆಯಲು ಅವಕಾಶವಿದೆ. ಉದ್ಯೋಗಿಗಳಿಗೆ ಮಕ್ಕಳಿದ್ದರೆ, ಮಾಸಿಕವಾಗಿ ಮಕ್ಕಳ ಶಿಕ್ಷಣ ಭತ್ಯೆಯಾಗಿ ನೂರು ರೂಪಾಯಿ, ಮಕ್ಕಳ ಹಾಸ್ಟೆಲ್ ಭತ್ಯೆಯಾಗಿ 300 ರೂಪಾಯಿ ಪಡೆಯಬಹುದು. ಆದರೆ ಈ ಹಣದುಬ್ಬರದ ನಡುವೆ ಈ ಮೊತ್ತವು ಯಾವುದೇ ಸಹಾಯಕ್ಕೆ ಬಾರದು, ಇದನ್ನು ಏರಿಸಬೇಕು ಎಂಬ ಬೇಡಿಕೆಯನ್ನು ವೇತನ ಪಡೆಯುವ ವರ್ಗ ಹೊಂದಿದೆ.


Click it and Unblock the Notifications