ಈ ವರ್ಷದ ಮೇ ತಿಂಗಳಿನಲ್ಲಿ ಲೋಕ ಸಭೆ ಚುನಾವಣೆಯು ನಡೆಯಲಿದ್ದು ಅದಕ್ಕೂ ಮುಂಚಿತವಾಗಿ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದಾರೆ. ಇದು ಹಣಕಾಸು ಸಚಿವರ ಆರನೇ ಬಜೆಟ್ ಆಗಿದ್ದು, ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಆಗಿದೆ.
ಈ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯನ್ನು ಸರ್ಕಾರವು ಘೋಷಣೆ ಮಾಡಿಲ್ಲ. ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗುವುದಿಲ್ಲ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಆದ್ದರಿಂದಾಗಿ ಈ ವರ್ಷದಲ್ಲಿ ಯಾವುದೇ ವಸ್ತುಗಳ ದರದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ.

ಪ್ರಮುಖವಾಗಿ ಇದು ಮಧ್ಯಂತರ ಬಜೆಟ್ ಆದ ಕಾರಣದಿಂದಾಗಿ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಲಾಗಿಲ್ಲ. ಲೋಕ ಸಭೆ ಚುನಾವಣೆ ನಡೆದು ಮುಂದಿನ ಸರ್ಕಾರವು ಅಧಿಕಾರ ವಹಿಸಿಕೊಳ್ಳುವವರೆಗೂ ಹಣಕಾಸು ನಿರ್ವಹಣೆಗಾಗಿ ಈ ಬಜೆಟ್ ಅನ್ನು ಘೋಷಿಸಲಾಗುತ್ತದೆ. ಹೊಸ ಸರ್ಕಾರವು ಸಂಪೂರ್ಣ ಬಜೆಟ್ ಅನ್ನು ಮಂಡಿಸುತ್ತದೆ.
ಬುಧವಾರ ರಾಷ್ಟ್ರಪತಿ ದ್ರೌಪತಿ ಮುರ್ಮು ಲೋಕ ಸಭೆ ಮತ್ತು ರಾಜ್ಯ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಈ ಮೂಲಕ ಬಜೆಟ್ ಅಧಿವೇಶನವು ಆರಂಭವಾಗಿದೆ. ಲೋಕಸಭೆ ಚುನಾವಣೆಯು ಏಪ್ರಿಲ್ ಮೇ ತಿಂಗಳಲ್ಲಿ ನಡೆಯಲಿದೆ.
2023ರಲ್ಲಿ ಏನಾಗಿತ್ತು?
ದುಬಾರಿಯಾದ ವಸ್ತುಗಳು: ಆಭರಣಗಳು, ಛತ್ರಿಗಳು, ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ, ಸಿಗರೇಟ್, ವಿದೇಶಿ ವಾಹನ, ಬ್ರಾಂಡೆಡ್ ಬಟ್ಟೆ, ಹೆಡ್‌ಫೋನ್, ಇಯರ್‌ಫೋನ್, ಸ್ಮಾಟ್ ಮೀಟರ್‌ಗಳು, ಸೋಲಾರ್ ಸೆಲ್ಸ್, ಎಕ್ಸ್‌ರೇ ಮಿಷಿನ್, ವೈದ್ಯಕೀಯ ವಸ್ತುಗಳು, ಎಲೆಕ್ಟ್ರಾನಿಕ್ ಆಟದ ಸಾಮಾನು
ಅಗ್ಗವಾದ ವಸ್ತುಗಳು: ಸಿಮೆಂಟ್ ಮತ್ತು ಉಕ್ಕು, ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಟಿವಿ, ಎಲೆಕ್ಟಿಕ್ ವಾಹನ, ಎಲೆಕ್ಟ್ರಿಕ್ ಚಿಮಣಿ, ಕ್ಯಾಮರಾ ಲೆನ್ಸ್, ಚಾರ್ಜರ್, ಇಂಗು, ಕೋಕೋ ಬೀನ್ಸ್ಮ ಮೀಥೈಲ್ ಆಲ್ಕೋಹಾಲ್, ಕತ್ತರಿಸಿ ನಯಗೊಳಿಸಿದ ವಜ್ರಗಳು


Click it and Unblock the Notifications