ಹೊಸ ಉದ್ಯಮ ಆರಂಭಿಸುವುದು ಬಹುತೇಕರ ಕನಸಾಗಿರುತ್ತದೆ.ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಮ್ಮೆಯಾದರೂ ಸ್ವಂತ ವ್ಯವಹಾರವನ್ನು ಶುರುಮಾಡಲು ಬಯಸುತ್ತಾನೆ.ಅದರಲ್ಲೂ ಪ್ರತಿಯೊಬ್ಬ ವ್ಯಕ್ತಿಗೂ ಕೆಲಸ ಮಾಡಬೇಕೆಂಬ ಆಸೆ ಇರುತ್ತದೆ. ಆದ್ರೆ ಹೊಸ ಬ್ಯುಸಿನೆಸ್ ಆರಂಭಿಸಲು ಮನೆಯಿಂದ ದೂರ ಹೋಗಲು ಇಷ್ಟವಿರುವುದಿಲ್ಲ? ಹಾಗೂ ಅವರ ಬಳಿ ಹೆಚ್ಚಿನ ಹಣವಿರುವುದಿಲ್ಲ ರೀತಿಯ ಗೊಂದಲಗಳು ಇದ್ಯಾ? ಹಾಗಿದ್ರೆ ಇಲ್ಲಿದೆ ನಿಮಗೆ ಸಂಪೂರ್ಣ ಮಾಹಿತಿ.
ಹೌದು ನೀವು ಮನೆಯಿಂದಲೇ ಚಿಕ್ಕ ಜಾಗದಲ್ಲಿ ಬ್ಯುಸಿನೆಸ್ ಆರಂಭಿಸಬಹುದು.ನೀವು ಈ ಬ್ಯುಸಿನೆಸ್‌ನ್ನು ಮನೆ ಆವರಣ ಅಥವಾ ಕೋಣೆಯೊಂದರಲ್ಲಿ ಆರಂಭ ಮಾಡಬಹುದು. ಈ ವಸ್ತು ಪ್ರತಿ ಮನೆಗಳಲ್ಲಿ ಅತಿ ಹೆಚ್ಚಾಗಿ ಬಳಕೆಯಾಗೋವುದರಿಂದ ವರ್ಷದ 12 ತಿಂಗಳು ಬೇಡಿಕೆ ಇದ್ದೇ ಇರುತ್ತದೆ.

ನೀವು ಕುರುಕಲು ತಿಂಡಿಯ ಬ್ಯುಸಿನೆಸ್ ಶುರು ಮಾಡಿ
ಟೀ ಅಂದ್ರೆ ಎಲ್ಲರಿಗೂ ಅಚ್ಚು-ಮುಚ್ಚು. ಎಲ್ಲರಿಗೂ ಇಷ್ಟವಾಗುವ ಮತ್ತೊಂದು ವಸ್ತು ಅಂದ್ರೆ ಕುರುಕಲು ತಿಂಡಿಗಳು. ಅದರಲ್ಲಿಯೂ ಉಪ್ಪು-ಖಾರ-ಮಸಾಲೆ ಮಿಶ್ರಿತ ತಿಂಡಿಗೆ ಹೆಚ್ಚು ಬೇಡಿಕೆ ಇದ್ದೇ ಇರುತ್ತದೆ. ಅದರಲ್ಲೂ ಟೀ ಜೊತೆಗೆ ಎನಾದರೂ ತಿನ್ನಲು ಬೇಕೆನಿಸಿದಾಗ ನೆನಪಾಗೋದು ಅತಿ ಹೆಚ್ಚಾಗಿ ಕುರುಕಲು ತಿಂಡಿಗಳು. ಮದುವೆ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿಯೂ ತಿಂಡಿಗಳಿಗೆ ಮಹತ್ವ ಇದ್ದೇ ಇರುತ್ತದೆ. ಈ ಕುರುಕಲು ತಿಂಡಿಯ ಬ್ಯುಸಿನೆಸ್‌ನ್ನು ಮನೆಯ ಸದಸ್ಯರೊಂದಿಗೆ ಸೇರಿ ನೀವು ಇದನ್ನು ಪ್ರಾರಂಭಿಸಬಹುದು.
ನಿಮ್ಮ ಭಾಗದ ತಿಂಡಿಯನ್ನು ಎಲ್ಲರೂ ಬೆಳಗ್ಗೆ, ಸಂಜೆಯ ತಿಂಡಿಯಾಗಿ ಅತಿ ಹೆಚ್ಚಾಗಿ ಬಳಸಲಾಗುವ ತಿಂಡಿಯನ್ನು ತಯಾರಿಸುವ ಕೆಲಸ ಮಾಡಿ. ನಿಮಗೆ ಬ್ಯುಸಿನೆಸ್ ಆರಂಭಿಸಲು ನಿಮಗೆ 300 ರಿಂದ 500 ಚದರ ಮೀಟರ್ ಸ್ಥಳದ ಜಾಗದ ಅವಶ್ಯಕತೆ ಇದೆ. ನೀವು ನಿಮ್ಮ ವ್ಯಾಪಾರದಲ್ಲಿ ಆಹಾರ ಉತ್ಪದನಾ ಘಟಕವನ್ನು FSSAI ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಹಾಗೂ ನಿಮ್ಮ ಆಹಾರದ ತಿಂಡಿಗಳಿಗೆ FSSAI ಚಿಹ್ನೆ ಹೊಂದಿರುವ ಉತ್ಪನ್ನಗಳು ಗುಣಮಟ್ಟದ ವಿಶ್ವಾಸರ್ಹತೆಯನ್ನು ಹೊಂದಿರುತ್ತದೆ.
ಸ್ಥಳ ನಿಗದಿ ಮುಖ್ಯ
ನೀವು ತಯಾರಿಸುವ ತಿಂಡಿಗಳಿಗೆ ಸ್ಥಳ ನಿಗದಿ ಮಾಡಿಕೊಂಡ ಬಳಿಕ ನೀವು ತಯಾರಿಸಬೇಕೆಂದುಕೊಂಡಿರುವ ತಿಂಡಿಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿ ಮಾಡಿ. ನಿಮಗೆ ಅಗತ್ಯವಿರುವ ಆಹಾರ ತಯಾರಿಕೆ ಯಂತ್ರೋಪಕರಣಗಳು ಸಹ ಮಾರುಕಟ್ಟೆಯಲ್ಲಿ ಸಿಗುತ್ತವೆ. ನಿಮಗೆ ಇದರಿಂದ ಕೆಲಸ ಸುಲಭವಾಗಿ ಮತ್ತು ಕಡಿಮೆ ಅವಧಿಯಲ್ಲಿ ಸಿಗುತ್ತದೆ.
ಸ್ಥಳೀಯವಾಗಿ ಜಾಹೀರಾತುಗಳ ಮೂಲಕ ಪ್ರಚಾರಗಳ ಮೂಲಕ ನಿಮ್ಮ ಕುರುಕಲು ತಿಂಡಿಗಳನ್ನು ಪ್ರಚಾರ ಮಾಡಿ ಬ್ರಾಂಡ್ ಸೃಷ್ಟಿ ಮಾಡಿಕೊಳ್ಳಿ. ಈ ರೀತಿಯ ಪ್ರಚಾರದಿಂದ ನಿಮ್ಮ ಉತ್ಪನ್ನಗಳ ಪರಿಚಯ ಜನರಿಗೆ ಆಗುತ್ತಿದ್ದಾರೆ ನಿಮ್ಮ ಉತ್ಪನ್ನ ಹೆಚ್ಚು ಹೆಚ್ಚು ಮಾರಾಟವಾಗುತ್ತದೆ. ಮುಂದಿನ ದಿನಮಾನಗಳಲ್ಲಿ ಈ ವ್ಯವಹಾರವನ್ನು ನೀವು ಹಂತ ಹಂತವಾಗಿಯೂ ವಿಸ್ತರಣೆ ಮಾಡಿಕೊಳ್ಳುವ ಎಲ್ಲಾ ಅವಕಾಶಗಳು ನಿಮಗೆ ಸಿಗುತ್ತದೆ.
ನಿಮ್ಮ ಉತ್ಪನ್ನಗೆ ಮಾರುಕಟ್ಟೆಯಲ್ಲಿ ಬೇಡಿಕೆ ಆರಂಭವಾದ ನಂತರ ನಿಮಗೆ ಪ್ರತಿ ತಿಂಗಳು 1 ರಿಂದ 2 ಲಕ್ಷ ರೂಪಾಯಿ ಆದಾಯ ಬರುತ್ತದೆ. ಪ್ರತಿಯೊಂದು ಉತ್ಪನ್ನದ ಮಾರಾಟದ ಮೇಲೆ ಶೇ.20 ರಿಂದ ಶೇ.30ರಷ್ಟು ಹೆಚ್ಚಿನ ಲಾಭ ಸಿಗುತ್ತದೆ. ನಿಮಗೆ ಹಬ್ಬದ ಸೀಸನ್ ಹಾಗೂ ಮದುವೆ ಸೀಸನ್‌ಗಳಲ್ಲಿ ಈ ವ್ಯಾಪಾರ ದುಪ್ಪಟ್ಟು ಆಗಿ ನಿಮ್ಮ ಹಣ ಸಹ ಡಬಲ್ ಆಗುತ್ತದೆ.
ಹೀಗೆ ನೀವು ವ್ಯಾಪಾರವನ್ನು ಮೊದಲು ಚಿಕ್ಕದಾಗಿ ಪ್ರಾರಂಭ ಮಾಡಿ ಹೆಚ್ಚಿನ ಆದಾಯವನ್ನು ಪಡೆಯಬಹುದು.ಇದರಿಂದ ನೀವು ದುಡ್ಡಿಗಾಗಿ ಬೇರೆಯವರ ಮುಂದೆ ಕೈಚಾಚುವ ಅವಶ್ಯಕತೆ ನಿಮ್ಮಗೆ ಬರುವುದಿಲ್ಲ.


Click it and Unblock the Notifications