ಆಧಾರ್ ಕಾರ್ಡ್ ಪ್ರಸ್ತುತ ಭಾರತದಲ್ಲಿ ಅತೀ ಪ್ರಮುಖವಾದ ದಾಖಲೆಯಾಗಿದೆ. ದೇಶದಲ್ಲಿ ಎಲ್ಲ ಕಾರ್ಯಗಳಿಗೂ ಕೂಡಾ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಲಾಗುತ್ತದೆ. ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನವನ್ನು ನಾವು ಪಡೆಯಬೇಕಾದರೆ ಪ್ರಸ್ತುತ ಆಧಾರ್ ಕಾರ್ಡ್ ಅನ್ನು ಹೊಂದಿರುವುದು ಅತೀ ಮುಖ್ಯವಾಗಿದೆ. ಆದರೆ ಈ ಕಾರ್ಡ್ ಸಂಖ್ಯೆ ಇದ್ದರೆ ಖದೀಮರು ನಿಮ್ಮ ಬ್ಯಾಂಕ್ ಖಾಯೆ ಹ್ಯಾಕ್ ಮಾಡಬಹುದೇ?
ಆಧಾರ್ ಕಾರ್ಡ್ ದೇಶದ ನಾಗರಿಕರಿಗೆ ನೀಡಲಾಗುವ 12 ಡಿಜಿಟ್‌ನ ಸಂಖ್ಯೆಯನ್ನು ಹೊಂದಿರುವ ಕಾರ್ಡ್ ಆಗಿದೆ. ಇದು ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಿರ್ವಹಣೆ ಮಾಡುತ್ತದೆ. ಆಧಾರ್ ಕಾರ್ಡ್ ಡೆಮಾಗ್ರಾಫಿಕ್ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿರುತ್ತದೆ.

ಬಯೋಮೆಟ್ರಿಕ್ ಮಾಹಿತಿಗಳಾದ ಫಿಂಗರ್‌ಪ್ರಿಟ್ಸ್, ಐರಿಸ್ ಸ್ಕ್ಯಾನ್, ಫೋಟೋಗ್ರಾಫ್ಸ್ ಮೊದಲಾದವುಗಳು ಆಧಾರ್ ಕಾರ್ಡ್‌ನಲ್ಲಿ ಇರುತ್ತದೆ. ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆ ಹಾಗೂ ವಿಳಾಸ ಪುರಾವೆಯಾಗಿ ಬಳಕೆ ಮಾಡಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು ಕೂಡಾ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಲಾಗುತ್ತದೆ. ಆದರೆ ಈ ಆಧಾರ್ ನಂಬರ್ ಬಳಸಿ ಖದೀಮರು ಬ್ಯಾಂಕ್ ಖಾತೆ ಹ್ಯಾಕ್ ಮಾಡಬಹುದೇ?..
ಆಧಾರ್ ಸಂಖ್ಯೆ ಇದ್ದರೆ ಬ್ಯಾಂಕ್ ಖಾತೆ ಹ್ಯಾಕ್ ಮಾಡಬಹುದೇ?
ಯುಐಡಿಎಐನ ಅಧಿಕೃತ ಪೋರ್ಟಲ್‌ನಲ್ಲಿನ ಆಧಾರ್ ಬಗ್ಗೆಗಿನ ಮಿಥ್ಯೆಗಳು (Aadhaar Myth Busters) ಎಂಬುವುದರಲ್ಲಿರುವ ಮಾಹಿತಿ ಪ್ರಕಾರ ಆಧಾರ್ ಸಂಖ್ಯೆ ಇದ್ದರೆ ಬ್ಯಾಂಕ್ ಖಾತೆ ಹ್ಯಾಕ್ ಮಾಡಬಹುದು ಎಂಬ ಮಾಹಿತಿ ಸುಳ್ಳು ಆಗಿದೆ. ಕೇವಲ ನಿಮ್ಮ ಎಟಿಎಂ ಕಾರ್ಡ್ ಸಂಖ್ಯೆಯನ್ನು ತಿಳಿದುಕೊಳ್ಳುವುದರಿಂದ ಎಟಿಎಂನಿಂದ ಯಾರೂ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
ಅದರಂತೆಯೇ ನಿಮ್ಮ ಆಧಾರ್ ಸಂಖ್ಯೆಯನ್ನು ಮಾತ್ರ ತಿಳಿದುಕೊಳ್ಳುವುದರಿಂದ, ಯಾರೂ ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ. ಬ್ಯಾಂಕ್‌ಗಳು ನೀಡಿದ ನಿಮ್ಮ ಪಿನ್/ಒಟಿಪಿಯನ್ನು ನೀವು ಸುರಕ್ಷಿತವಾಗಿರಿಸಿಕೊಂಡರೆ, ಯಾರೊಂದಿಗೂ ಹಂಚದಿದ್ದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಮೊತ್ತ ಸುರಕ್ಷಿತವಾಗಿರುತ್ತದೆ.
ಯುಐಡಿಎಐ ಆಧಾರ್ ಕಾರ್ಡ್ ಹೊಂದಿರುವವರಿಗೆ ಭರವಸೆ ನೀಡುವಂತೆ ಒತ್ತಾಯಿಸಿದೆ. ಆಧಾರ್‌ನಿಂದಾಗಿ ಒಂದೇ ಒಂದು ಆರ್ಥಿಕ ನಷ್ಟ ಸಂಭವಿಸಿಲ್ಲ ಎಂದು ಹೇಳಿದೆ. ಕೇವಲ ಆಧಾರ್ ಸಂಖ್ಯೆಯನ್ನು ಬ್ಯಾಂಕಿಂಗ್ ಅಥವಾ ಇತರ ಯಾವುದೇ ಸೇವೆಗೆ ಬಳಸಲಾಗುವುದಿಲ್ಲ.
ಯುಐಡಿಎಐ ಬಯೋಮೆಟ್ರಿಕ್ಸ್, ಬ್ಯಾಂಕ್ ಖಾತೆ, ಪ್ಯಾನ್, ಇತ್ಯಾದಿ ಸೇರಿದಂತೆ ಡೇಟಾವನ್ನು ಹೊಂದಿದೆ. ಇದು ನಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆಯೇ?: ಇದು ಸುಳ್ಳು.
* ಯುಐಡಿಎಐ ಡೇಟಾಬೇಸ್‌ನಲ್ಲಿ ಕೆಲವೇ ಕೆಲವು ಮಾಹಿತಿಗಳು ಇರುತ್ತದೆ. ಈ ಮಾಹಿತಿಯಲ್ಲಿ ನಿಮ್ಮ ಹೆಸರು, ವಿಳಾಸ, ಲಿಂಗ, ಜನನ ದಿನಾಂಕ, ಹತ್ತು ಬೆರಳಿನ ಫಿಂಗರ್ ಪ್ರಿಂಟ್, ಐರೀಸ್ ಸ್ಕ್ಯಾನ್, ಫೋಟೋಗ್ರಾಫ್, ಮೊಬೈಲ್ ನಂಬರ್, ಇಮೇಲ್ ಐಡಿ ಇರಲಿದೆ.
* ಯುಐಡಿಎಐ ಬ್ಯಾಂಕ್ ಖಾತೆಗಳು, ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಹಣಕಾಸು ಮತ್ತು ಆಸ್ತಿ ವಿವರಗಳು, ಆರೋಗ್ಯ ದಾಖಲೆಗಳು, ಕುಟುಂಬ, ಜಾತಿ, ಧರ್ಮ, ಶಿಕ್ಷಣ ಇತ್ಯಾದಿಗಳ ಬಗ್ಗೆ ನಿಮ್ಮ ಮಾಹಿತಿಯನ್ನು ಹೊಂದಿರುವುದಿಲ್ಲ. ಯುಐಡಿಎಐ ಡೇಟಾಬೇಸ್‌ನಲ್ಲಿ ಈ ಮಾಹಿತಿಗಳು ಎಂದಿಗೂ ಇರುವುದಿಲ್ಲ.


Click it and Unblock the Notifications