ಬ್ಯಾಂಕ್ ಖಾತೆಗೆ (Bank Account) ಸಂಬಂಧಿಸಿದ ಹಲವು ನಿಯಮಗಳನ್ನು ಆರ್‌ಬಿಐ ಗ್ರಾಹಕರಿಗಾಗಿ ಜಾರಿಗೆ ತಂದಿದೆ. ಹಣ ಜಮಾ ಮಾಡುವುದಾಗಲಿ, ಕೆವೈಸಿ ಅಪ್ಡೇಟ್, ಬ್ಯಾಂಕ್ ಅಕೌಂಟ್, ಚೆಕ್ ಬುಕ್, ಎಟಿಯಂ ಹೀಗೆ ಹಲವಾರು ನಿಯಮಗಳನ್ನು ಗ್ರಾಹಕರ ಅನುಕೂಲಕ್ಕಾಗಿ, ಭದ್ರತೆಯ ದೃಷ್ಟಿಯಿಂದ ರೂಪಿಸಲಾಗಿದೆ. ಇತ್ತೀಚೆಗೆ ಯುಪಿಐ (UPI) ಮೂಲಕ ಬೇಕಾದಾಗೆಲ್ಲ ಹಣ ವಿಥ್‌ಡ್ರಾ ಮಾಡಿಕೊಳ್ಳಬಹುದು. ಆದ್ರೆ ದಿನಕ್ಕೆ ಇಂತಿಷ್ಟು ಹಣ ವಿಥ್‌ಡ್ರಾ (Money Withdraw) ಮಾಡಬೇಕೆಂಬುದು ಯುಪಿಐನಲ್ಲೂ ನಿಯಮ ಹೊರಡಿಸಲಾಗಿದೆ.

ಹಾಗಿದ್ರೆ ಬ್ಯಾಂಕ್ ಖಾತೆಯಿಂದ ಒಂದೇ ಬಾರಿಗೆ 1 ಕೋಟಿ ರೂಪಾಯಿ ನಗದು ಹಿಂಪಡೆಯಬಹುದಾ ಎಂಬ ಪ್ರಶ್ನೆ ಹಲವರಿಗಿದೆ. ಹೌದು, ಇದು ಸಾಧ್ಯ. ಮುಂಬೈ ಮೂಲದ ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಅವರ ಪ್ರಕಾರ, "ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಅಷ್ಟು ನಗದು ನಿರ್ವಹಿಸುವ ಸಾಮರ್ಥ್ಯವಿದ್ದರೆ, ನಿಮ್ಮ ಖಾತೆಯಿಂದ 1 ಕೋಟಿ ರೂಪಾಯಿ ನಗದು ಹಿಂಪಡೆಯಲು ಸಾಧ್ಯವಿದೆ." ಎಂದು ಹೇಳಿದ್ದಾರೆ
ಒಂದು ಕೋಟಿ ಹಣ ಪಡೆಯಬಹುದಾ?
ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯಲು ಆರ್‌ಬಿಐ ಯಾವುದೇ ಮಿತಿ ವಿಧಿಸುವುದಿಲ್ಲ. 2017ರ ಮಾರ್ಚ್ 13ರಂದು ಆರ್‌ಬಿಐ, ತನ್ನ ಗ್ರಾಹಕರಿಗೆ ಸೇವಿಂಗ್ಸ್ ಅಕೌಂಟ್‌ನಿಂದ ಹಣ ಹಿಂಪಡೆಯುವ ಮಿತಿಗಳನ್ನು ತೆಗೆದುಹಾಕಿದೆ. ಅಂದರೆ, 1 ಕೋಟಿ ರೂಪಾಯಿಯಂತಹ ದೊಡ್ಡ ಮೊತ್ತವನ್ನು ತೆಗೆಯಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಹೇಳಲಾಗಿದೆ.
2017ರ ಫೆಬ್ರವರಿ 8ರಂದು ಆರ್‌ಬಿಐ ಹೊರಡಿಸಿದ "ಉಳಿತಾಯ ಬ್ಯಾಂಕ್ ಖಾತೆಗಳಿಂದ ನಗದು ಹಿಂಪಡೆಯುವ ಮಿತಿಗಳ ತೆಗೆದುಹಾಕುವಿಕೆ" ಸುತ್ತೋಲೆಯ ಪ್ರಕಾರ ಹಲವು ನಿಯಮಗಳನ್ನು ಹೊರಡಿಸಲಾಯಿತು.
ಫೆಬ್ರವರಿ 20, 2017ರಿಂದ ನಗದು ಹಿಂಪಡೆಯುವ ಮಿತಿಗಳನ್ನು ವಾರಕ್ಕೆ 50,000 ರೂ.ಗೆ ಹೆಚ್ಚಿಸಲಾಯಿತು (ಹಿಂದೆ 24,000 ರೂ.). ಆದರೆ ಮಾರ್ಚ್ 13, 2017ರಿಂದ ಉಳಿತಾಯ ಖಾತೆಗಳಿಂದ ನಗದು ಹಿಂಪಡೆಯುವ ಎಲ್ಲಾ ಮಿತಿಗಳನ್ನು ತೆಗೆದುಹಾಕಲಾಯಿತು. ಆರ್‌ಬಿಐ ನಿರ್ಬಂಧಗಳನ್ನು ತೆಗೆದುಹಾಕಿದ್ದರೂ, ಕೆಲವು ಬ್ಯಾಂಕುಗಳು ತನ್ನ ಭದ್ರತೆ ಮತ್ತು ಆರ್ಥಿಕತೆಯ ಹಿನ್ನೆಲೆ ಕೆಲವು ಹಿಂಪಡೆಯುವ ಮಿತಿಗಳನ್ನು ವಿಧಿಸಬಹುದು.
ಬ್ಯಾಂಕುಗಳಿಂದ ಕೆಲವು ನಿಯಮ:
ಗ್ರಾಹಕರು 1 ಕೋಟಿ ರೂಪಾಯಿ ನಗದು ಅಗತ್ಯವಿದ್ದರೆ, ಬ್ಯಾಂಕುಗಳು ಕೆಲವು ನಿಯಮಗಳನ್ನು ಪಾಲಿಸಬೇಕೆಂದು ಹೇಳುತ್ತದೆ. ದೊಡ್ಡ ಮಟ್ಟದಲ್ಲಿ ಹಣ ವಿಥ್ ಡ್ರಾ ಮಾಡುವ ಸಂದರ್ಭದಲ್ಲಿ, ಬ್ಯಾಂಕಿನ ನಿಯಮ ಮತ್ತು ನಿರ್ದಿಷ್ಟ ಭದ್ರತಾ ಕಾರ್ಯವಿಧಾನಗಳನ್ನು ಪಾಲಿಸುವುದು ಕಡ್ಡಾಯ ಎನ್ನಲಾಗಿದೆ.
ಇನ್ನು ಯಾವುದೇ ಗ್ರಾಹಕರು, ದೊಡ್ಡ ಮಟ್ಟದಲ್ಲಿ ಹಣ ಹಿಂಪಡೆಯುವ ಮುನ್ನವೇ ಬ್ಯಾಂಕಿಗೆ ತಿಳಿಸಬೇಕು. ಏಕೆಂದರೆ ಹೆಚ್ಚಿನ ಬ್ಯಾಂಕ್‌ಗಳಲ್ಲಿ 1 ಕೋಟಿ ರೂಪಾಯಿ ಇರುವ ಸಾಧ್ಯತೆ ಇರುವುದಿಲ್ಲ, ಅದರಿಂದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
ಎಸ್‌ಬಿಐ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಕೆಲವೊಮ್ಮೆ ಬ್ಯಾಂಕ್‌ಗಳಲ್ಲಿ 50 ಲಕ್ಷ ರೂಪಾಯಿ ಹಣ ಕೂಡಾ ಇಟ್ಟುಕೊಂಡಿರುವುದಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ 1 ಕೋಟಿ ರೂಪಾಯಿ ಹಿಂಪಡೆಯಲು, ಶಾಖೆಯು ತನ್ನ ಕರೆನ್ಸಿ ಚೆಸ್ಟ್‌ನಿಂದ ಹೆಚ್ಚುವರಿ ನಗದಿಗೆ ಮನವಿ ಮಾಡಬೇಕಾಗುತ್ತದೆ. ಅದೇ ಕಾರಣದಿಂದ ಇಂತಹ ದೊಡ್ಡ ಮಟ್ಟದಲ್ಲಿ ಹಣ ಬೇಕಾದಾಗ ಮುಂಚಿತವಾಗಿ ಮಾಹಿತಿ ನೀಡಬೇಕು.
ಇನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಹಣ ವಿಥ್ ಡ್ರಾ ಮಾಡುವಾಗ ಆದಾಯ ತೆರಿಗೆ ನಿಯಮಗಳು ಅನ್ವಯವಾಗುತ್ತಚದೆ. 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಯಾವುದೇ ಹಣ ಹಿಂಪಡೆಯುವುದಾದ್ರೆ, ಆದಾಯ ತೆರಿಗೆ ಇಲಾಖೆಗೆ (ವಿಭಾಗಗಳು 269SS, 269ST ಸೇರಿದಂತೆ) ವರದಿ ಮಾಡಬೇಕು. ಅಲ್ಲದೇ ಬ್ಯಾಂಕುಗಳು ಸಹ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಲ್ಲದೇ ಮೂಲ ಕಾರಣಗಳನ್ನು ಸಹ ನೀಡಬೇಕಾಗುತ್ತದೆ. ಆದ್ದರಿಂದ, ನೀವು 1 ಕೋಟಿ ರೂಪಾಯಿ ಬ್ಯಾಂಕ್‌ನಿಂದ ಹಿಂಪಡೆಯಲು ಸಾಧ್ಯವಿದೆ. ಆದರೆ ತಕ್ಷಣ ಸಾಧ್ಯವಿಲ್ಲ, ಅದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯ.


Click it and Unblock the Notifications