ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಆಧಾರಿತ ಸಾಲದ ದರವನ್ನು (ಎಂಸಿಎಲ್‌ಆರ್) ಕೆನರಾ ಬ್ಯಾಂಕ್ ಏಪ್ರಿಲ್ 12ರಂದು ಏರಿಕೆ ಮಾಡಿದೆ. ಸಾಲದ ಬಡ್ಡಿದರವನ್ನು ನಿರ್ಧಾರ ಮಾಡುವ ಈ ದರವನ್ನು ಬುಧವಾರ ಕೆನರಾ ಬ್ಯಾಂಕ್ 5 ಮೂಲಾಂಕದಷ್ಟು ಹೆಚ್ಚಳ ಮಾಡಿದೆ. ಇಲ್ಲಿ ಒಂದು ಬೇಸಿಕ್ ಪಾಯಿಂಟ್ ಅಥವಾ ಮೂಲಾಂಕ ಎಂದರೆ 100 ನೇ ಭಾಗಕ್ಕೆ ಸಮಾನವಾಗಿರುತ್ತದೆ. ಆರ್‌ಬಿಐ ಒಟ್ಟು ಆರು ಬಾರಿ ರೆಪೋ ದರ ಏರಿಸಿದೆ. ಏಪ್ರಿಲ್‌ನಲ್ಲಿ ಸ್ಥಿರವಾಗಿಸಿದೆ.
ಕೆನರಾ ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, ಬ್ಯಾಂಕ್ ಆರು ತಿಂಗಳು ಮತ್ತು ಒಂದು ವರ್ಷದ ಅವಧಿಗೆ ಎಂಸಿಎಲ್‌ಆರ್ ದರವನ್ನು ಕ್ರಮವಾಗಿ ಶೇಕಡ 8.45 ಮತ್ತು ಶೇಕಡ 8.65 ಕ್ಕೆ ಹೆಚ್ಚಿಸಿದೆ. ಇನ್ನು ಉಳಿದ ಅವಧಿಯ ಎಂಸಿಎಲ್‌ಆರ್ ಅನ್ನು ಸ್ಥಿರವಾಗಿರಿಸಿದೆ. ಓವರ್‌ನೈಟ್ ಎಂಸಿಎಲ್‌ಆರ್ ಶೇಕಡ 7.90 ಆಗಿದೆ. ಒಂದು ತಿಂಗಳ ಎಂಸಿಎಲ್‌ಆರ್ ಶೇಕಡ 8ರಷ್ಟು ಆಗಿದೆ. ಮೂರು ತಿಂಗಳ ಅವಧಿಯ ಎಂಸಿಎಲ್‌ಆರ್ ಶೇಕಡ 8.15ರಷ್ಟಾಗಿದೆ. ಆರು ತಿಂಗಳ ಎಂಸಿಎಲ್‌ಆರ್ ಶೇಕಡ 8.45ರಷ್ಟಿದೆ, ಒಂದು ವರ್ಷದ ಎಂಸಿಎಲ್‌ಆರ್ ಶೇಕಡ 8.65 ಆಗಿದೆ.

ಕೆನರಾ ಬ್ಯಾಂಕ್‌ನ ಎಂಸಿಎಲ್‌ಆರ್ ಎಷ್ಟಿದೆ ನೋಡಿ
1. ಓವರ್‌ನೈಟ್ ಎಂಸಿಎಲ್‌ಆರ್: ಶೇಕಡ 7.90
2. ಒಂದು ತಿಂಗಳ ಎಂಸಿಎಲ್‌ಆರ್: ಶೇಕಡ 8.00
3. ಮೂರು ತಿಂಗಳ ಎಂಸಿಎಲ್‌ಆರ್: ಶೇಕಡ 8.15
4. ಆರು ತಿಂಗಳ ಸಿಎಲ್‌ಆರ್: ಶೇಕಡ 8.45
5. ಒಂದು ವರ್ಷದ ಎಂಸಿಎಲ್‌ಆರ್: ಶೇಕಡ 8.65
"ಈ ಮೇಲಿನ ಎಂಸಿಎಲ್‌ಆರ್‌ಗಳು 12.04.2023 ರಂದು ಅಥವಾ ನಂತರ ಮಂಜೂರಾದ ಹೊಸ ಸಾಲಗಳು/ಮುಂಗಡಗಳು/ಮೊದಲ ವಿತರಣೆಗೆ ಮಾತ್ರ ಅನ್ವಯಿಸುತ್ತವೆ. ಆ ಕ್ರೆಡಿಟ್ ಸೌಲಭ್ಯಗಳನ್ನು ನವೀಕರಿಸಲಾಗಿದ್ದರೆ / ಪರಿಶೀಲಿಸಲಾಗಿದ್ದರೆ/ ಮರುಹೊಂದಿಸಲಾಗಿದ್ದರೆ ಸಾಲಗಾರನ ಆಯ್ಕೆಯ ಪ್ರಕಾರವಾಗಿ ಎಂಸಿಎಲ್‌ಆರ್ ಅನ್ನು ಲಿಂಕ್ ಮಾಡಿದ ಬಡ್ಡಿದರಕ್ಕೆ ಬದಲಾವಣೆ ಮಾಡಲು ಅವಕಾಶ ನೀಡಲಾಗುತ್ತದೆ."
"12.04.2023 ರಂದು ಅಥವಾ ನಂತರ ಈ ದರ ಜಾರಿಗೆ ಬರುತ್ತದೆ. ಮೇಲಿನ ಎಂಸಿಎಲ್‌ಆರ್‌ಗಳು ಮುಂದಿನ ಪರಿಶೀಲನೆಯವರೆಗೂ ಜಾರಿಯಲ್ಲಿರುತ್ತವೆ," ಎಂದು ಕೆನರಾ ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ.
ಬ್ಯಾಂಕ್‌ನ ಅಸ್ತಿತ್ವದಲ್ಲಿರುವ ಸಾಲಗಾರರು ಎಂಸಿಎಲ್‌ಆರ್ ಲಿಂಕ್ ಆದ ಬಡ್ಡಿದರಕ್ಕೆ ತಮ್ಮ ಸಾಲದ ಬಡ್ಡಿದರ ಬದಲಾವಣೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಅದಕ್ಕಾಗಿ ಸಾಲ ಪಡೆದಿರುವವರು ಬ್ಯಾಂಕ್‌ನ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.
ಈ ಹಿಂದೆ ಸಾಲದ ಬಡ್ಡಿದರ ಏರಿಸಿದ ಕೆನರಾ ಬ್ಯಾಂಕ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಸಿದ ಬಳಿಕ ಹಲವಾರು ಬ್ಯಾಂಕ್‌ಗಳು ಸಾಲದ ಬಡ್ಡಿದರ ಹೆಚ್ಚಿಸುತ್ತಿದೆ. ಈಗ ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಮತ್ತು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಕೆನರಾ ಬ್ಯಾಂಕ್ ಏರಿಸಿದೆ. ಬ್ಯಾಂಕ್‌ನ ಬಿಎಸ್‌ಇ ಫೈಲಿಂಗ್ ಪ್ರಕಾರ ನೂತನ ಬಡ್ಡಿದರವು ಮಾರ್ಚ್ 12, 2023ರಿಂದ ಜಾರಿಗೆ ಬಂದಿದೆ.
ಕೆನರಾ ಬ್ಯಾಂಕ್‌ನ ಈ ಹಿಂದಿನ ಬಡ್ಡಿದರ
ಓವರ್‌ನೈಟ್ ಎಂಸಿಎಲ್‌ಆರ್: ಶೇಕಡ 7.90
ಒಂದು ತಿಂಗಳ ಎಂಸಿಎಲ್‌ಆರ್: ಶೇಕಡ 8.00
ಮೂರು ತಿಂಗಳ ಎಂಸಿಎಲ್‌ಆರ್: ಶೇಕಡ 8.15
ಆರು ತಿಂಗಳ ಎಂಸಿಎಲ್‌ಆರ್:ಶೇಕಡ 8.40
ಒಂದು ವರ್ಷದ ಎಂಸಿಎಲ್‌ಆರ್: ಶೇಕಡ 8.60


Click it and Unblock the Notifications