ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಸಿದ ಬಳಿಕ ಹಲವಾರು ಬ್ಯಾಂಕ್‌ಗಳು ಸಾಲದ ಬಡ್ಡಿದರ ಹೆಚ್ಚಿಸುತ್ತಿದೆ. ಈಗ ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಮತ್ತು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಕೆನರಾ ಬ್ಯಾಂಕ್ ಏರಿಸಿದೆ. ಬ್ಯಾಂಕ್‌ನ ಬಿಎಸ್‌ಇ ಫೈಲಿಂಗ್ ಪ್ರಕಾರ ನೂತನ ಬಡ್ಡಿದರವು ಮಾರ್ಚ್ 12, 2023ರಿಂದ ಜಾರಿಗೆ ಬರಲಿದೆ.
ಕೆನರಾ ಬ್ಯಾಂಕ್‌ನ ಓವರ್‌ನೈಟ್ ಎಂಸಿಎಲ್‌ಆರ್ 35 ಮೂಲಾಂಕ ಅಂದರೆ ಶೇಕಡ 7.90ಕ್ಕೆ ಏರಿಸಿದೆ. ಹಾಗೆಯೇ ಒಂದು ತಿಂಗಳ ಎಂಸಿಎಲ್‌ಆರ್ 45 ಮೂಲಾಂಕ ಏರಿಸಿದ್ದು, ಶೇಕಡ 8ಕ್ಕೆ ತಲುಪಿದೆ. 6 ತಿಂಗಳ ಎಂಸಿಎಲ್‌ಆರ್ ಅನ್ನು ಶೇಕಡ 8.30ರಿಂದ ಶೇಕಡ 8.40ಕ್ಕೆ ಏರಿಸಿದೆ. 3 ತಿಂಗಳ ಎಂಸಿಎಲ್‌ಆರ್ 25 ಮೂಲಾಂಕ ಹೆಚ್ಚಳವಾಗಿ ಶೇಕಡ 8.15ಕ್ಕೆ ತಲುಪಿದೆ. 1 ವರ್ಷದ ಎಂಸಿಎಲ್‌ಆರ್ ಅನ್ನು ಶೇಕಡ 8.50ರಿಂದ ಶೇಕಡ 8.60ಕ್ಕೆ ಏರಿಸಿದೆ.

ಕೆನರಾ ಬ್ಯಾಂಕ್ ಎಂಸಿಎಲ್‌ಆರ್ ಎಷ್ಟಿದೆ?
ಓವರ್‌ನೈಟ್ ಎಂಸಿಎಲ್‌ಆರ್: ಶೇಕಡ 7.55, ಪರಿಷ್ಕೃತ ಬಡ್ಡಿದರ ಶೇಕಡ 7.90
ಒಂದು ತಿಂಗಳ ಎಂಸಿಎಲ್‌ಆರ್: ಶೇಕಡ 7.55, ಪರಿಷ್ಕೃತ ಬಡ್ಡಿದರ ಶೇಕಡ 8.00
ಮೂರು ತಿಂಗಳ ಎಂಸಿಎಲ್‌ಆರ್: ಶೇಕಡ 7.90, ಪರಿಷ್ಕೃತ ಬಡ್ಡಿದರ ಶೇಕಡ 8.15
ಆರು ತಿಂಗಳ ಎಂಸಿಎಲ್‌ಆರ್: ಶೇಕಡ 8.30, ಪರಿಷ್ಕೃತ ಬಡ್ಡಿದರ ಶೇಕಡ 8.40
ಒಂದು ವರ್ಷದ ಎಂಸಿಎಲ್‌ಆರ್: ಶೇಕಡ 8.50, ಪರಿಷ್ಕೃತ ಬಡ್ಡಿದರ ಶೇಕಡ 8.60
ಇತರೆ ಬ್ಯಾಂಕ್‌ಗಳಲ್ಲೂ ಎಂಸಿಎಲ್‌ಆರ್ ಏರಿಕೆ
ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡಾ ಎಂಸಿಎಲ್‌ಆರ್ ಅನ್ನು ಏರಿಸಿದೆ. 5 ಮೂಲಾಂಕ ಏರಿಕೆ ಮಾಡಿದೆ. ಇನ್ನು ಐಸಿಐಸಿಐ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು 10 ಬಿಪಿಎಸ್ ಹೆಚ್ಚಳ ಮಾಡಿದೆ. ಇನ್ನು ಪಿಎನ್‌ಬಿ, ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್ ಕೂಡಾ ಸಾಲದ ಬಡ್ಡಿದರವನ್ನು ಏರಿಸಿದೆ.
ಆರ್‌ಬಿಐ ರೆಪೋ ದರವನ್ನು ಕಳೆದ ಮೇ ತಿಂಗಳಿನಿಂದ ಏರಿಕೆ ಮಾಡುತ್ತಿದೆ. ಒಟ್ಟು ಆರು ಬಾರಿ ದರ ಹೆಚ್ಚಳ ಮಾಡಿದೆ. ರೆಪೋ ದರವು ಶೇಕಡ 2.5 ಅಥವಾ 250 ಮೂಲಾಂಕ ಏರಿಕೆ ಮಾಡಿದೆ. ಅಂದರೆ ರೆಪೋ ದರ ಶೇಕಡ 4ರಿಂದ ಶೇಕಡ 6.5ಕ್ಕೆ ಹೆಚ್ಚಳವಾಗಿದೆ. ಮೇ ತಿಂಗಳಲ್ಲಿ 40 ಬಿಪಿಎಸ್, ಅದಾದ ಬಳಿಕ ಸತತ 3 ಬಾರಿ 50 ಮೂಲಾಂಕ ಹೆಚ್ಚಿಸಿದೆ. ಇನ್ನು ಬಳಿಕ 35 ಮೂಲಾಂಕ, 25 ಮೂಲಾಂಕ ಏರಿಸಿದೆ.


Click it and Unblock the Notifications