For Quick Alerts
ALLOW NOTIFICATIONS  
For Daily Alerts

ಕಾರು ಸಾಲದ ಮೇಲಿನ ಬಡ್ಡಿ ದರ ಯಾವ ಬ್ಯಾಂಕ್ ನಲ್ಲಿ ಎಷ್ಟು?

|

ಹೊಸ ಕಾರು ಖರೀದಿ ಅಥವಾ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಎಂದಿದ್ದಲ್ಲಿ ಈಗ ಬ್ಯಾಂಕ್ ಗಳಲ್ಲಿ ಬಹಳ ಕಡಿಮೆ ಬಡ್ಡಿ ದರಕ್ಕೆ ಸಾಲ ದೊರೆಯುತ್ತಿದೆ. ಕಾರು ಸಾಲಗಳು ಸಾಮಾನ್ಯವಾಗಿ ಮೂರರಿಂದ ಐದು ವರ್ಷದ ಅವಧಿಗೆ ದೊರೆಯುತ್ತದೆ. ಕೆಲವು ಹಣಕಾಸು ಸಂಸ್ಥೆಗಳು ಏಳು ವರ್ಷದ ತನಕದ ಅವಧಿಗೆ ಅವಕಾಶ ನೀಡುತ್ತಿವೆ.

 

ಕಾರಿನ ಸಾಲ ಮರುಪಾವತಿ ಅವಧಿ ದೀರ್ಘಾವಧಿಗೆ ಆದಷ್ಟು ಇಎಂಐ ಕಡಿಮೆ ಇರುತ್ತದೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸದೆ ಹೋದಲ್ಲಿ ಕ್ರೆಡಿಟ್ ರಿಪೋರ್ಟ್ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸಂಸ್ಥೆಗಳು ಎಕ್ಸ್ ಶೋ ರೂಮ್ ದರದ ಪೂರ್ಣ ಮೊತ್ತವನ್ನು, ಅಂದರೆ ಶೇಕಡಾ ನೂರರಷ್ಟು ಸಾಲ ನೀಡುತ್ತವೆ. ಕೆಲವು ಸಂಸ್ಥೆಗಳು ಎಕ್ಸ್ ಶೋ ರೂಮ್ ನ ಶೇಕಡಾ 80ರಷ್ಟು ಸಾಲ ನೀಡುತ್ತವೆ.

 

ಟಾಟಾ ನೆಕ್ಸಾನ್ 5 ವರ್ಷದ ಮರುಪಾವತಿ ಅವಧಿಗೆ 5999 ರು. ಇಎಂಐ ಆರಂಭಟಾಟಾ ನೆಕ್ಸಾನ್ 5 ವರ್ಷದ ಮರುಪಾವತಿ ಅವಧಿಗೆ 5999 ರು. ಇಎಂಐ ಆರಂಭ

ಕಾರು ಸಾಲದ ವಿಚಾರದಲ್ಲಿ ಬಡ್ಡಿ ದರದ ಜೊತೆಗೆ ಪ್ರೊಸೆಸಿಂಗ್ ಶುಲ್ಕ ಮತ್ತು ಅವಧಿಗೆ ಪೂರ್ವ ಸಾಲ ತೀರಿಸಿದಲ್ಲಿ ಅದಕ್ಕೆ ಶುಲ್ಕ ಇತ್ಯಾದಿ ಅಂಶಗಳನ್ನು ಗಮನಿಸಬೇಕಾಗುತ್ತದೆ. ಅಂದ ಹಾಗೆ ಯಾವ ಹಣಕಾಸು ಸಂಸ್ಥೆ- ಬ್ಯಾಂಕ್ ನಲ್ಲಿ ಕಾರಿನ ಸಾಲದ ಮೇಲಿನ ಬಡ್ಡಿ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ. ಅಕ್ಟೋಬರ್ 15, 2020ಕ್ಕೆ ಈ ದರ ಅನ್ವಯ ಆಗುತ್ತದೆ.

ಕಾರು ಸಾಲದ ಮೇಲಿನ ಬಡ್ಡಿ ದರ ಯಾವ ಬ್ಯಾಂಕ್ ನಲ್ಲಿ ಎಷ್ಟು?

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 6.85- 7.80%

ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 7.10- 7.45%

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 7.15- 7.50%

ಬ್ಯಾಂಕ್ ಆಫ್ ಬರೋಡಾ 7.25- 10.25%

ಪಂಜಾಬ್ ನ್ಯಾಷನಲ್ ಬ್ಯಾಂಕ್ 7.30- 7.80%

ಕೆನರಾ ಬ್ಯಾಂಕ್ 7.30-9.90%

ಬ್ಯಾಂಕ್ ಆಫ್ ಇಂಡಿಯಾ 7.35- 8.05%

ನೈನಿತಾಲ್ ಬ್ಯಾಂಕ್ 7.40- 8.50%

ಬ್ಯಾಂಕ್ ಆಫ್ ಮಹಾರಾಷ್ಟ್ರ 7.45- 8.95%

ಇಂಡಿಯನ್ ಓವರ್ ಸೀಸ್ ಬ್ಯಾಂಕ್ 7.55%

ಯುಕೋ ಬ್ಯಾಂಕ್ 7.70%

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7.70- 11.20%

ಐಡಿಬಿಐ ಬ್ಯಾಂಕ್ 7.75- 8.35%

ಇಂಡಿಯನ್ ಬ್ಯಾಂಕ್ 7.80- 8.15%

ಐಸಿಐಸಿಐ ಬ್ಯಾಂಕ್ 7.90- 8.80%

English summary

Car Loan: How Much Is The Rate Of Interest In Which Bank?

Here is the rate of interest on car loan in various banks.
Story first published: Sunday, October 18, 2020, 22:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X