ಹಾಂಗ್‌ಕಾಂಗ್‌ನಲ್ಲಿ ಭಾನುವಾರ ಹರಾಜು ನಡೆದಿದೆ, ಈ ಹರಾಜಿನಲ್ಲಿ ಕಾರಿನ ನಂಬರ್ ಪ್ಲೇಟ್ ಒಂದು ಬರೋಬ್ಬರಿ 27 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಅಂದರೆ 25.5 ಮಿಲಿಯನ್ ಹಾಂಗ್‌ಕಾಂಗ್ ಡಾಲರ್‌ಗೆ ಮಾರಾಟವಾಗಿದೆ. ವಿಚಿತ್ರವಾದ ಮತ್ತು ಗೊಂದಲಕಾರಿ ವಾಹನದ ನಂಬರ್ ಪ್ಲೇಟ್ ವಿಚಾರದಲ್ಲಿ ಅತೀ ಹೆಚ್ಚು ಕೊಡುಗೆಯನ್ನು ಹಾಂಗ್‌ಕಾಂಗ್‌ನ ಈ ನಗರ ನೀಡಿದೆ.
ಬ್ಲೂಮ್‌ಬರ್ಗ್ ಪ್ರಕಾರ, ಹಾಂಗ್ ಕಾಂಗ್ ಸಾರಿಗೆ ಇಲಾಖೆಯು ಹೊಸ ವರ್ಷದ ಪ್ರಯುಕ್ತ ಈ ಹರಾಜನ್ನು ನಡೆಸಿದೆ. ಈ ಸಂದರ್ಭದಲ್ಲಿ "R" ನಂಬರ್ ಪ್ಲೇಟ್‌ಗೆ ಹರಾಜು ಭರದಿಂದ ಸಾಗಿದ್ದು 27 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇನ್ನು ಸಾರಿಗೆ ಕಾರ್ಯದರ್ಶಿ ಲ್ಯಾಮ್ ಸೈ-ಹಂಗ್ ನೀಡಿದ ಮಾಹಿತಿ ಪ್ರಕಾರ ಈ ಹಿಂದೆ 2021ರಲ್ಲಿ 26 ಮಿಲಿಯನ್ ಹಾಂಗ್‌ಕಾಂಗ್ ಡಾಲರ್‌ಗೆ ಕಾರಿನ ನಂಬರ್ ಪ್ಲೇಟ್ ಮಾರಾಟವಾಗಿದೆ. ಇದಕ್ಕಿಂತ ಕೊಂಚ ಹೆಚ್ಚಳ ದರದಲ್ಲಿ "R" ನಂಬರ್ ಪ್ಲೇಟ್ ಮಾರಾಟವಾಗಿದೆ.
2006ರಲ್ಲಿ ವೈಯಕ್ತಿಕ ಕಾರಿನ ನಂಬರ್ ಪ್ಲೇಟ್ ವ್ಯವಸ್ಥೆಯು ಆರಂಭವಾಗಿದೆ. 160 ಹರಾಜಿನಲ್ಲಿ ಪಟ್ಟಾಗಿ 600 ಮಿಲಿಯನ್ ಹಾಂಗ್‌ಕಾಂಗ್ ಡಾಲರ್ ಸಂಗ್ರಹ ಮಾಡಲಾಗಿದೆ ಎಂದು ಲ್ಯಾಮ್ ಸೈ-ಹಂಗ್ ತಿಳಿಸಿದ್ದಾರೆ. 40,000 ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಆಗಿದೆ. ದುಬಾರಿ ನಂಬರ್ ಪ್ಲೇಟ್, ಭಾರತದಲ್ಲಿನ ನಂಬರ್ ಪ್ಲೇಟ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಸಿಂಗಲ್ ಅಂಕಿ ನಂಬರ್ ಪ್ಲೇಟ್
ಈ ನಂಬರ್ ಪ್ಲೇಟ್‌ಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನಂಬರ್ ಪ್ಲೇಟ್ ಅನ್ನು ಹರಾಜು ಮಾಡುವುದಕ್ಕೂ 18 ತಿಂಗಳ ಮುನ್ನವೇ ಎಲ್ಲ ಪ್ರಕ್ರಿಯೆಗಳು ಆರಂಭವಾಗುತ್ತದೆ. ಡೆಪಾಸಿಟ್ ರೂಪದಲ್ಲಿ ಅರ್ಜಿದಾರರು 5,000 ಹಾಂಗ್‌ಕಾಂಗ್ ಡಾಲರ್ ನೀಡಬೇಕಾಗುತ್ತದೆ. ಯಾವುದೇ ಬೇರೆ ಹರಾಜುದಾರರು ಬಿಡ್ಡಿಂಗ್‌ಗೆ ಮುಂದಾಗದಿದ್ದಾಗ ಈ ನಂಬರ್ ಪ್ಲೇಟ್ ಅನ್ನು ಕೊನೆಯ ಹರಾಜುದಾರರಿಗೆ ನೀಡಲಾಗುತ್ತದೆ. ಈವರೆಗೆ ಸಿಂಗಲ್ ಸ್ಪೇಲಿಂಗ್‌ನ ನಂಬರ್ ಪ್ಲೇಟ್ ಲೆಕ್ಕಾಚಾರದಲ್ಲಿ ನಾವು ನೋಡಿದಾಗ 27 ಕೋಟಿ ರೂಪಾಯಿ ನಂಬರ್ ಪ್ಲೇಟ್ ಅತೀ ದುಬಾರಿ ಬೆಲೆಯ ನಂಬರ್ ಪ್ಲೇಟ್ ಆಗಿದೆ.
ವಿಶ್ವದ ಅತೀ ದುಬಾರಿ ನಂಬರ್‌ಪ್ಲೇಟ್
'MM' - 188 ಕೋಟಿ ರೂಪಾಯಿ
'F1' - 154 ಕೋಟಿ ರೂಪಾಯಿ
'New York' - 154 ಕೋಟಿ ರೂಪಾಯಿ
'D5'- 74 ಕೋಟಿ ರೂಪಾಯಿ
'AA8' - 72 ಕೋಟಿ ರೂಪಾಯಿ
'1' - 73 ಕೋಟಿ ರೂಪಾಯಿ
'09' - 51 ಕೋಟಿ ರೂಪಾಯಿ
'7'- 30 ಕೋಟಿ ರೂಪಾಯಿ
ಭಾರತದಲ್ಲಿ ದುಬಾರಿ ನಂಬರ್ ಪ್ಲೇಟ್
ಚಂಡೀಗಢ ರಿಜಿಸ್ಟ್ರೇಷನ್ ಮತ್ತು ಲೈಸೆಂನ್ಸಿಂಗ್ ಅಥಾರಿಟಿ ಈ ಹರಾಜನ್ನು ನಡೆಸಿದೆ. 378 ರಿಜಿಸ್ಟ್ರೇಷನ್ ನಂಬರ್ ಬರೋಬ್ಬರಿ 1.5 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಜಾಹೀರಾತು ಏಜೆನ್ಸಿ ಮಾಲೀಕ ಬ್ರಿಜ್ ಮೋಹನ್ 15.44 ಲಕ್ಷ ರೂಪಾಯಿ ನೀಡಿ, CH01-CJ-0001 ನಂಬರ್ ಪ್ಲೇಟ್ ಖರೀದಿಸಿದ್ದಾರೆ. ಇದರ ಬಿಡ್ಡಿಂಗ್ 500,000 ರೂಪಾಯಿಗೆ ನಡೆದಿತ್ತು. ಬ್ರಿಜ್ ಮೋಹನ್ ತನ್ನ ಹೊಸ ನಂಬರ್ ಪ್ಲೇಟ್ ಮತ್ತು ಹೊಸ ವಾಹನವನ್ನು 2022ರ ದೀಪಾವಳಿ ಸೀಸನ್‌ನಲ್ಲಿ ಖರೀದಿಸಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications