ನೀವು ವೈಯತ್ತಿಕ ಸಾಲಕ್ಕಾಗಿ ಯಾವುದೋ ಆಪ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ತಗೆದುಕೊಂಡು ಈಗಾಗಲೇ ಸಂಪೂರ್ಣ ಹಣವನ್ನು ಹಿಂತಿರುಗಿಸಿದರೂ ಕೂಡ ಸಾಲ ಇನ್ನೂ ಇದೇ ಎಂದು ತೋರಿಸುತ್ತಿದ್ದೀಯಾ..? ಹಾಗಿದ್ದರೆ ಗಾಬರಿಪಡುವಂತಹ ಅವಶ್ಯಕತೆ ಇಲ್ಲ. ಹಾಗಿದ್ದರೆ ನಿವಿಂದು ವೈಯತ್ತಿಕ ಸಾಲದ ಇನ್ನೂ ಬಾಕಿ ಇದೆ ಎಮದು ತೋರಿಸುತ್ತಿದ್ದರೆ ಏನು ಮಾಡಬೇಕು ಎಂವಿತ್ಯಾದಿ ಮಾಹಿತಿಯನ್ನು ಈ ಲೇಕನದಲ್ಲಿ ತಿಳಿಯೋಣ ಬನ್ನಿ..

ಹೌದು, ನಿಮ್ಮ ಸಾಲದ ಕ್ರೆಡಿಟ್ ವರದಿಯಲ್ಲಿ ಇನ್ನೂ "ಸಕ್ರಿಯ" ಎಂದು ಕಂಡುಬಂದರೆ ಚಿಂತೆಪಡಬೇಡಿ ಮುಂದೆ ಏನು ಮಾಡಬೇಕು ಎಂದು ಯೋಜನೆ ಮಾಡವುದು ಬಹುಮುಖ್ಯ. ನೀವು ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬಹುದು ಎಮಬುವುದನ್ನು ತಿಳಿಯಲು ಮುಂದೆ ಓದಿ..
ಸಾಲ ಮುಕ್ತಾಯವನ್ನು ನವೀಕರಿಸುವಲ್ಲಿ ವಿಳಂಬ ಯಾಕೆ ಆಗುತ್ತದೆ?
ಸಾಲದಾತರು ವೈಯಕ್ತಿಕ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ್ದರೂ ಸಹ, ಅದನ್ನು ಮುಕ್ತಾಯಗೊಳಿಸಲಾಗಿದೆ ಎಂದು ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡಲು 30 ರಿಂದ 60 ದಿನಗಳನ್ನು ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ನಿಮ್ಮಗೆ ಸಾಲದ ಸ್ಥಿತಿಯು "ಆಕ್ಟಿವ್" ಎಂದು ಕಾಣಿಸುತ್ತದೆ.
ಕ್ರೆಡಿಟ್ ವರದಿಯಲ್ಲಿ ಸಾಲ ಮುಕ್ತಾಯವನ್ನು ಸರಿಪಡಿಸಲು ಕ್ರಮಗಳು
1. ನಿಮ್ಮ ಸಾಲದಾತರೊಂದಿಗೆ ಮಾತನಾಡಿ: ನೀವು ನಿಮ್ಮ ಯಾರು ಸಾಲ ಕೊಟ್ಟರು ಅವರ ಬಳಿ ಒಮ್ಮೆ ಈ ವಿಚಾರದ ಕುರಿತು ಮಾತನಾಡಿ. ಅಥವಾ ಫೋನ್ ಅಥವಾ ಇಮೇಲ್ ಮೂಲಕ ಸಂಪರ್ಕಿಸಿ ನಿಮ್ಮ ಸಾಲದ ಮುಕ್ತಾಯದ ದಾಖಲೆಯನ್ನು ಕೇಳಿ.
2. ಸರಿಯಾದ ದಾಖಲೆ ಪಡೆಯಿರಿ: ಯಾವುದೇ ಬಾಕಿ ಪ್ರಮಾಣಪತ್ರ, ನೀವು EMI ಪಾವತಿ ಮಾಡಿದ ಕೊನೆಯ ದಿನಾಂಕದಂತಹ ದಾಖಲೆಯನ್ನು ಪಡೆದುಕೊಳ್ಳಿ ಅವಾಗ ನಿಮ್ಮಗೆ ಹೆಚ್ಚಿನ ಸಹಾಯವಾಗುತ್ತದೆ.
3. ಕ್ರೆಡಿಟ್ ಬ್ಯೂರೋಗೆ ವರದಿ ಮಾಡಿ: ನಿಮ್ಮ ಬಳಿ ಪುರಾವೆ ಸಿಕ್ಕ ತಕ್ಷಣ ಕ್ರೆಡಿಟ್ ಬ್ಯೂರೋ ವಿವಾದ ಪೋರ್ಟಲ್‌ಗೆ ಹೋಗಿ.ವಿವಾದದ ಪ್ರಕಾರವನ್ನು ಆರಿಸಿ ಮತ್ತು ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ.ಪ್ರತಿಕ್ರಿಯೆಗಾಗಿ ಕಾಯಿರಿ.
4. ನಿಮ್ಮ ಕ್ರೆಡಿಟ್ ವರದಿಯನ್ನು ಗಮನದಲ್ಲಿ ಇಟ್ಟುಕೊಳ್ಳಿ: ಸಾಲಕ್ಕೆ ಸಂಬಂಧಿಸಿದಂತೆ ವಿವಾದಳು ಸೃಷ್ಟಿಯಾದ್ದರೆ ಕ್ರೆಡಿಟ್ ವರದಿಯನ್ನು ನೆನಪಿನಲಿಟ್ಟುಕೊಳ್ಳಿ. ಕೆಲವೊಂದು ಬಾರಿ ಕ್ರೆಡಿಟ್ ಬ್ಯೂರೋ ನಿಮ್ಮ ನವೀಕರಿಸಿದ ಸ್ಥಿತಿಯನ್ನು ಬದಲಾಯಿಸುತ್ತದೆ.ನಿಮ್ಮ ಕ್ರೆಡಿಟ್ ಬಳಕೆ ಕಡಿಮೆಯಾದಂತೆ, ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಬಹುದು.
5. ನಿಮ್ಮ ಸಾಲದಾತರ ದೂರು ವಿಭಾಗವನ್ನು ಬಳಸಿ: RBI ನ CRPC ವೆಬ್ ಸೈಟ್‌ಗೆ ಭೇಟಿ ನೀಡಿ ಸಾಲದಾತರ ದೂರು ವಿಭಾಗಕ್ಕೆ ದೂರು ನೀಡಿ. ಆಗ ನಿಮ್ಮ ಸಮಸ್ಯಗೆ ಪರಿಹಾರ ಸಿಗುತ್ತದೆ.
ನಿಮ್ಮ ಕ್ರೆಡಿಟ್ ವರದಿಯಲ್ಲಿ ಪೂರ್ಣವಾಗಿ ಪಾವತಿಸಲಾದ ಸಾಲವು ಬಾಕಿ ಇದೆ ಎಂದು ವರದಿಯಾಗಿದ್ದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಹಾನಿಯನ್ನುಂಟುಮಾಡಬಹುದು. ಆದ್ದರಿಂದ ನೀವು ಈ ಮೇಲಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications