ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಏಪ್ರಿಲ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ದರವನ್ನು ಇಳಿಕೆ ಮಾಡಿತ್ತು. ಮೇ ತಿಂಗಳಲ್ಲಿಯೂ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ತೈಲ ಕಂಪನಿಗಳು ಸಿಹಿಸುದ್ದಿಯನ್ನು ನೀಡಿದೆ.
ಇಂದು ಮೇ 1, 2023 ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ದೇಶಾದ್ಯಂತ ಇಳಿಕೆ ಮಾಡಿದೆ. 19 ಕಿಲೋ ಗ್ರಾಮ್‌ನ ವಾಣಿಜ್ಯ ಸಿಲಿಂಡರ್ (ಹೊಟೇಲ್‌ಗಳಲ್ಲಿ ಬಳಕೆ) ಬೆಲೆಯನ್ನು 171.50 ರೂಪಾಯಿ ಇಳಿಕೆ ಮಾಡಲಾಗಿದ್ದು, ನಿಮ್ಮ ನಗರದಲ್ಲಿ ಈ ಹಿಂದಿನ ಬೆಲೆಗಿಂತ 171.50 ರೂಪಾಯಿ ಕಡಿತವಾಗಲಿದೆ.

ಇನ್ನು ಹಲವಾರು ತಿಂಗಳುಗಳಿಂದ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಸಾಮಾನ್ಯ ನಾಗರಿಕರಿಗೆ ಅಡುಗೆ ಅನಿಲವು ಪ್ರಸ್ತುತ ದುಬಾರಿಯಾಗಿದ್ದು, ದರ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಕೋಲ್ಕತ್ತಾದಲ್ಲಿ ಪ್ರತಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರವು 2132.00 ರೂಪಾಯಿಯಿಂದ 1960.50 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ದರವು 1980 ರೂಪಾಯಿಗೆ ಇಳಿಕೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕಚ್ಚಾ ತೈಲದ ದರವು ಇಳಿಕೆ ಕಾಣುತ್ತಿದೆ.
ಆದ್ದರಿಂದಾಗಿ ಅಡುಗೆ ಅನಿಲ ದರವನ್ನು ಕೂಡಾ ತೈಲ ಕಂಪನಿಗಳು ಕುಗ್ಗಿಸುವ ನಿರೀಕ್ಷೆ ಜನರಲ್ಲಿದೆ. 14.2 ಕೆಜಿಯ ಗೃಹ ಬಳಕೆಯ ಎಲ್‌ಪಿಜಿ ದರವು ಕಳೆದ ತಿಂಗಳವರೆಗೆ ಸ್ಥಿರವಾಗಿತ್ತು. ಆದರೆ ಮಾರ್ಚ್‌ನಲ್ಲಿ ಪ್ರತಿ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹಾಗೆಯೇ ವಾಣಿಜ್ಯ ಎಲ್‌ಪಿಜಿ ದರವನ್ನು ಕೂಡಾ ಹೆಚ್ಚಳ ಮಾಡಲಾಗಿದೆ.
19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 350.50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಏಪ್ರಿಲ್‌ನಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು 92 ರೂಪಾಯಿ ಇಳಿಕೆ ಮಾಡಲಾಗಿದೆ. ಆದರೆ ನಾವು ದಿನನಿತ್ಯ ಮನೆಯಲ್ಲಿ ಅಡುಗೆಗೆ ಬಳಸುವ ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಈ ಹಿಂದೆ ಜನವರಿ 1ರಂದು ವಾಣಿಜ್ಯ ಸಿಲಿಂಡರ್ ದರವನ್ನು ಪ್ರತಿ ಯುನಿಟ್‌ಗೆ 25 ರೂಪಾಯಿ ಏರಿಕೆ ಮಾಡಲಾಗಿದೆ. ಕಳೆ ಬಾರಿ 2022ರ ಸೆಪ್ಟೆಂಬರ್ 1ರಂದು ವಾಣಿಜ್ಯ ಎಲ್‌ಪಿಜಿ ದರವನ್ನು 91.50 ರೂಪಾಯಿ ಇಳಿಕೆ ಮಾಡಲಾಗಿದೆ. ಇನ್ನು 2022ರ ಆಗಸ್ಟ್ 1ರಂದು ಕೂಡಾ ವಾಣಿಜ್ಯ ಎಲ್‌ಪಿಜಿ ದರವನ್ನು 36 ರೂಪಾಯಿ ಇಳಿಕೆ ಮಾಡಲಾಗಿದೆ. ಜುಲೈ 6ರಂದು 19 ಕೆಜಿಯ ವಾಣಿಜ್ಯ ಸಿಲಿಂಡರ್ ದರವನ್ನು 8.5 ರೂಪಾಯಿ ಕಡಿತ ಮಾಡಲಾಗಿದೆ.
ಪ್ರಮುಖ ನಗರಗಳಲ್ಲಿ ದರ ಎಷ್ಟಿದೆ, ಎಷ್ಟಾಗಿದೆ?
ದೆಹಲಿ: ಏಪ್ರಿಲ್ ದರ 2028 ರೂಪಾಯಿ, ಮೇ ದರ 1856.50 ರೂಪಾಯಿ
ಕೋಲ್ಕತ್ತಾ: ಏಪ್ರಿಲ್ ದರ 2132 ರೂಪಾಯಿ, ಮೇ ದರ 1960.50 ರೂಪಾಯಿ
ಮುಂಬೈ: ಏಪ್ರಿಲ್ ದರ 1980 ರೂಪಾಯಿ, ಮೇ ದರ 1980 ರೂಪಾಯಿ
ಚೆನ್ನೈ: ಏಪ್ರಿಲ್ ದರ 2192.50 ರೂಪಾಯಿ, ಮೇ ದರ 2021 ರೂಪಾಯಿ
ಎಲ್‌ಪಿಜಿಯಲ್ಲಿ ಬೇರೆ ಬೇರೆ ವಿಧಗಳು ಇದೆ. ಸಾಮಾನ್ಯವಾಗಿ ಅಡುಗೆ ಅನಿಲವು 14.2 ಕೆಜಿಯದ್ದಾಗಿದ್ದರೆ, ವಾಣಿಜ್ಯ ಸಿಲಿಂಡರ್ 19 ಕೆಜಿಯದ್ದಾಗಿರುತ್ತದೆ. ಇನ್ನು ಇಂಡಸ್ಟ್ರಿಯಲ್ ಬಳಕೆ ಎಲ್‌ಪಿಜಿ ದರವು 47.5 ಕೆಜಿಯಾಗಿರುತ್ತದೆ. ಸಾಮಾನ್ಯವಾಗಿ ಈ ವಾಣಿಜ್ಯ ಸಿಲಿಂಡರ್ ಅನ್ನು ರೆಸ್ಟೋರೆಂಟ್‌ಗಳಲ್ಲಿ, ಟಿ ಶಾಪ್, ಬೀದಿ ಬದಿ ವ್ಯಾಪಾರಿಗಳು ಬಳಕೆ ಮಾಡುತ್ತಾರೆ.


Click it and Unblock the Notifications