ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಹಾಗೆಯೇ ಕಳೆದ ಮೂರು ತಿಂಗಳುಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ತೈಲ ಕಂಪನಿಗಳು ಸಿಹಿಸುದ್ದಿಯನ್ನು ನೀಡುತ್ತಾ ಬಂದಿದೆ.
ಏಪ್ರಿಲ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ದರವನ್ನು ಇಳಿಕೆ ಮಾಡಿತ್ತು. ಮೇ ತಿಂಗಳಲ್ಲಿಯೂ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ತೈಲ ಕಂಪನಿಗಳು ಸಿಹಿಸುದ್ದಿಯನ್ನು ನೀಡಿದೆ. ಇದಾದ ಬಳಿಕ ಈಗ ಜೂನ್ ತಿಂಗಳಿನಲ್ಲಿಯೂ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಇಳಿಕೆ ಮಾಡಿದೆ.

ಬೆಲೆ ಇಳಿಕೆಯ ಬಳಿಕ ಮೆಟ್ರೋ ನಗರಗಳಲ್ಲಿ ದರ ಎಷ್ಟಿದೆ?
ತೈಲ ಸಂಸ್ಥೆಗಳು 19 ಕೆಜಿಯ ವಾಣಿಜ್ಯ ಸಿಲಿಂಡರ್ ದರವನ್ನು 83.5 ರೂಪಾಯಿ ಇಳಿಕೆ ಮಾಡಿದೆ. ಈ ನೂತನ ಪರಿಷ್ಕೃತ ದರವು ಜೂನ್ 1, 2023ರಿಂದ ಜಾರಿಗೆ ಬರಲಿದೆ. ದರ ಪರಿಷ್ಕರಣೆ ಮಾಡಿದ ಬಳಿಕ ಎಲ್‌ಪಿಜಿ ದರವು ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರವು 1,856 ರೂಪಾಯಿಯಿಂದ 1,773 ರೂಪಾಯಿಗೆ ಇಳಿಕೆಯಾಗಿದೆ.
ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ದರವು 1,808 ರೂಪಾಯಿಯಿಂದ 1,725 ರೂಪಾಯಿಗೆ ಕುಸಿದಿದೆ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯು 1,960.50 ರೂಪಾಯಿಯಿಂದ 1,875.50 ರೂಪಾಯಿಗೆ ತಲುಪಿದೆ. ಇನ್ನು ಚೆನ್ನೈನಲ್ಲಿ 19 ಕೆಜಿಯ ಸಿಲಿಂಡರ್ ಬೆಲೆಯು 2,021.50 ರೂಪಾಯಿಯಿಂದ 1,937 ರೂಪಾಯಿಗೆ ಇಳಿಕೆ ಕಂಡಿದೆ.
ಈ ಹಿಂದೆ ಜನವರಿ 1ರಂದು ವಾಣಿಜ್ಯ ಸಿಲಿಂಡರ್ ದರವನ್ನು ಪ್ರತಿ ಯುನಿಟ್‌ಗೆ 25 ರೂಪಾಯಿ ಏರಿಕೆ ಮಾಡಲಾಗಿದೆ. ಕಳೆದ ಬಾರಿ 2022ರ ಸೆಪ್ಟೆಂಬರ್ 1ರಂದು ವಾಣಿಜ್ಯ ಎಲ್‌ಪಿಜಿ ದರವನ್ನು 91.50 ರೂಪಾಯಿ ಇಳಿಕೆ ಮಾಡಲಾಗಿದೆ. ಇನ್ನು 2022ರ ಆಗಸ್ಟ್ 1ರಂದು ಕೂಡಾ ವಾಣಿಜ್ಯ ಎಲ್‌ಪಿಜಿ ದರವನ್ನು 36 ರೂಪಾಯಿ ಇಳಿಕೆ ಮಾಡಲಾಗಿದೆ. ಜುಲೈ 6ರಂದು 19 ಕೆಜಿಯ ವಾಣಿಜ್ಯ ಸಿಲಿಂಡರ್ ದರವನ್ನು 8.5 ರೂಪಾಯಿ ಕಡಿತ ಮಾಡಲಾಗಿದೆ.
ಎಟಿಎಫ್ ದರ ಇಂದಿನಿಂದ ಪರಿಷ್ಕರಣೆ
ಈ ನಡುವೆ ದೇಶದಲ್ಲಿ ಅವಿಯೇಷನ್ ಟರ್ಬೈನ್ ಫ್ಯೂಲ್ (ಎಟಿಎಫ್) ದರವನ್ನು ಕೂಡಾ ಇಂದಿನಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗಿದೆ. ಸ್ಥಳೀಯ ವಿಮಾನಗಳಿಗೆ ಬೇಕಾಗುವ ಜೆಟ್ ಫ್ಯೂಲ್ ದರವು ದೆಹಲಿಯಲ್ಲಿ 89,303.09/kl ರೂಪಾಯಿ ಆಗಿದೆ. ಮುಂಬೈನಲ್ಲಿ 83,413.96/kl ರೂಪಾಯಿ, ಕೋಲ್ಕತ್ತಾದಲ್ಲಿ 95,963.95/kl ರೂಪಾಯಿ ಮತ್ತು ಚೆನ್ನೈನಲ್ಲಿ 93,041.33/kl ರೂಪಾಯಿ ಆಗಿದೆ.
ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಿಲ್ಲ
ಇನ್ನು 14.2 ಕೆಜಿಯ ಗೃಹ ಬಳಕೆಯ ಎಲ್‌ಪಿಜಿ ದರದಲ್ಲಿ ಯಾವುದೇ ಪರಿಷ್ಕರಣೆಯನ್ನು ಮಾಡಲಾಗಿಲ್ಲ. ಕಳೆದ ಬಾರಿಗೆ ಮಾರ್ಚ್‌ನಲ್ಲಿ ಪ್ರತಿ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದಾ ಬಳಿಕ ಹೆಚ್ಚಳವಾಗಲಿ ಅಥವಾ ಇಳಿಕೆಯಾಗಲಿ ಮಾಡಲಾಗಿಲ್ಲ. ಆದರೆ ಈಗಾಗಲೇ ಎಲ್‌ಪಿಜಿ ದರವು ಅತೀ ಅಧಿಕವಾಗಿದೆ. ಜನರಿಗೆ ಪ್ರಸ್ತುತ ಅಡುಗೆ ಅನಿಲವು ದುಬಾರಿಯಾಗಿದೆ.
ಎಲ್‌ಪಿಜಿಯಲ್ಲಿ ಬೇರೆ ಬೇರೆ ವಿಧಗಳು ಇದೆ. ಸಾಮಾನ್ಯವಾಗಿ ಅಡುಗೆ ಅನಿಲವು 14.2 ಕೆಜಿಯದ್ದಾಗಿದ್ದರೆ, ವಾಣಿಜ್ಯ ಸಿಲಿಂಡರ್ 19 ಕೆಜಿಯದ್ದಾಗಿರುತ್ತದೆ. ಇನ್ನು ಇಂಡಸ್ಟ್ರಿಯಲ್ ಬಳಕೆ ಎಲ್‌ಪಿಜಿ ದರವು 47.5 ಕೆಜಿಯಾಗಿರುತ್ತದೆ. ಸಾಮಾನ್ಯವಾಗಿ ಈ ವಾಣಿಜ್ಯ ಸಿಲಿಂಡರ್ ಅನ್ನು ರೆಸ್ಟೋರೆಂಟ್‌ಗಳಲ್ಲಿ, ಟಿ ಶಾಪ್, ಬೀದಿ ಬದಿ ವ್ಯಾಪಾರಿಗಳು ಬಳಕೆ ಮಾಡುತ್ತಾರೆ.


Click it and Unblock the Notifications