ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಈ ಹಿಂದಿನ ತಿಂಗಳು ತಿಂಗಳ ನಾಲ್ಕನೇ ದಿನಕ್ಕೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೆಚ್ಚಳಗೊಳಿಸಿದ್ದ ತೈಲ ಕಂಪನಿಗಳು ಈಗ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ರಿಲೀಫ್ ನೀಡಿದೆ. ಆಗಸ್ಟ್‌ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 99.75 ರೂಪಾಯಿ ಇಳಿಕೆ ಮಾಡಲಾಗಿದೆ. ಈ ಮೂಲಕ ಹೊಟೇಲ್ ಉದ್ಯಮಿಗಳಿಗೆ ಕೊಂಚ ಹೊರೆ ಕಡಿಮೆಯಾಗಿದೆ.
ಜೂನ್‌ವರೆಗೆ ಸತತ ಮೂರು ತಿಂಗಳುಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ತೈಲ ಕಂಪನಿಗಳು ಸಿಹಿಸುದ್ದಿಯನ್ನು ನೀಡುತ್ತಾ ಬಂದಿದೆ. ಆದರೆ ಆಗಸ್ಟ್‌ನಲ್ಲಿ ಮಾತ್ರ ಶಾಕ್ ನೀಡಿದೆ. ದೇಶದ ವಿವಿಧ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 7 ರೂಪಾಯಿಗಳಷ್ಟು ಹೆಚ್ಚಿಸಿವೆ. ಆದರೆ ಈ ತಿಂಗಳು ಮತ್ತೆ ದರವನ್ನು ಇಳಿಸಲಾಗಿದೆ.

ಗೃಹ ಬಳಕೆಯ ಸಿಲಿಂಡರ್ ದರ ಇಳಿಕೆಯಾಗಿದೆಯಾ?
ಜುಲೈ ತಿಂಗಳಿನಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಈ ತಿಂಗಳಿನಲ್ಲಿಯೂ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ದರದಲ್ಲಿ ಮಾತ್ರ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಪರಿಷ್ಕರಣೆ ಮಾಡಿದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರವು 1,680 ರೂಪಾಯಿಗೆ ಇಳಿಕೆಯಾಗಿದೆ.
ಇನ್ನು ಕೋಲ್ಕತ್ತಾ, ಮುಂಬೈ, ಚೆನ್ನೈಯಲ್ಲಿ ಕ್ರಮವಾಗಿ ವಾಣಿಜ್ಯ ಸಿಲಿಂಡರ್ ದರವು 1,802 ರೂಪಾಯಿ, 1,640 ರೂಪಾಯಿ ಮತ್ತು 1,852.50 ರೂಪಾಯಿ ಆಗಿದೆ. ಇನ್ನು ಏಪ್ರಿಲ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ದರವನ್ನು ಇಳಿಕೆ ಮಾಡಿತ್ತು. ಮೇ ತಿಂಗಳಲ್ಲಿಯೂ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ತೈಲ ಕಂಪನಿಗಳು ಸಿಹಿಸುದ್ದಿಯನ್ನು ನೀಡಿದೆ. ಇದಾದ ಬಳಿಕ ಈಗ ಜೂನ್ ತಿಂಗಳಿನಲ್ಲಿಯೂ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಇಳಿಕೆ ಮಾಡಿದೆ.
ಇನ್ನು 14.2 ಕೆಜಿಯ ಗೃಹ ಬಳಕೆಯ ಎಲ್‌ಪಿಜಿ ದರದಲ್ಲಿ ಯಾವುದೇ ಪರಿಷ್ಕರಣೆಯನ್ನು ಮಾಡಲಾಗಿಲ್ಲ. ಕಳೆದ ಬಾರಿಗೆ ಮಾರ್ಚ್‌ನಲ್ಲಿ ಪ್ರತಿ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದಾ ಬಳಿಕ ಹೆಚ್ಚಳವಾಗಲಿ ಅಥವಾ ಇಳಿಕೆಯಾಗಲಿ ಮಾಡಲಾಗಿಲ್ಲ. ಎಲ್‌ಪಿಜಿಯಲ್ಲಿ ಬೇರೆ ಬೇರೆ ವಿಧಗಳು ಇದೆ. ಸಾಮಾನ್ಯವಾಗಿ ಅಡುಗೆ ಅನಿಲವು 14.2 ಕೆಜಿಯದ್ದಾಗಿದ್ದರೆ, ವಾಣಿಜ್ಯ ಸಿಲಿಂಡರ್ 19 ಕೆಜಿಯದ್ದಾಗಿರುತ್ತದೆ. ಇನ್ನು ಇಂಡಸ್ಟ್ರಿಯಲ್ ಬಳಕೆ ಎಲ್‌ಪಿಜಿ ದರವು 47.5 ಕೆಜಿಯಾಗಿರುತ್ತದೆ. ಸಾಮಾನ್ಯವಾಗಿ ಈ ವಾಣಿಜ್ಯ ಸಿಲಿಂಡರ್ ಅನ್ನು ರೆಸ್ಟೋರೆಂಟ್‌ಗಳಲ್ಲಿ, ಟಿ ಶಾಪ್, ಬೀದಿ ಬದಿ ವ್ಯಾಪಾರಿಗಳು ಬಳಕೆ ಮಾಡುತ್ತಾರೆ.


Click it and Unblock the Notifications