ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡನೆ ಮಾಡಲು ಆರಂಭ ಮಾಡಿದ್ದಾರೆ. ಈ ನಡುವೆ ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಕಡಿತಗೊಳಿಸಿವೆ. ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ವಾಣಿಜ್ಯಿಕ 19-ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 91.50 ರೂಪಾಯಿಗಳಷ್ಟು ಇಳಿಕೆ ಮಾಡಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2022 ಅನ್ನು ಮಂಡಿಸುವ ಕೆಲವೇ ಸಮಯದ ಮುನ್ನಾ ಈ ಬೆಳವಣಿಗೆ ಕಂಡು ಬಂದಿದೆ. ಗ್ರಾಹಕರಿಗೆ ಕೊಂಚ ಸಮಾಧಾನಕರವಾಗಿ, ಇಂದಿನಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1907 ರೂಪಾಯಿ ಆಗಲಿದೆ. ದೆಹಲಿಯಲ್ಲಿ ಸಬ್ಸಿಡಿ ರಹಿತ (14.2 ಕೆಜಿ) ಇಂಡೇನ್ ದೇಶೀಯ ಸಿಲಿಂಡರ್ ರೂಪಾಯಿ 899.50ಕ್ಕೆ ಲಭ್ಯವಿರುತ್ತದೆ.
ಅದೇ ಸಮಯದಲ್ಲಿ, ಕೋಲ್ಕತ್ತಾದ ಜನರು 14.2 ಕೆಜಿಯ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಅನ್ನು 926 ಗೆ ಪಡೆಯಬಹುದಾಗಿದೆ. ಮುಂಬೈನಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಂತೆಯೇ ಇದ್ದರೆ, ಚೆನ್ನೈನಲ್ಲಿ ಇದರ ಬೆಲೆ ರೂಪಾಯಿ 915.50 ಆಗಿದೆ.

ಇದರಿಂದ ಯಾರಿಗೆ ಪ್ರಯೋಜನ?
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಇಳಿಕೆ ಮಾಡಿರುವುದು, 19 ಕೆಜಿ ಸಿಲಿಂಡರ್‌ನ ಅತಿದೊಡ್ಡ ಬಳಕೆದಾರರ ವಿಭಾಗವಾಗಿರುವ ರೆಸ್ಟೋರೆಂಟ್‌ಗಳು, ತಿನಿಸುಗಳು ಮತ್ತು ಟೀ ಸ್ಟಾಲ್‌ಗಳಿಗೆ ಸ್ವಲ್ಪ ಪರಿಹಾರವನ್ನು ನೀಡುತ್ತದೆ.
ಅಕ್ಟೋಬರ್‌ನಿಂದ ಸಬ್ಸಿಡಿ ರಹಿತ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನವೆಂಬರ್‌ನಿಂದ ಪೆಟ್ರೋಲ್ ಮತ್ತು ಡೀಸೆಲ್ ದರವೂ ಸ್ಥಿರವಾಗಿದೆ. ಕಳೆದ ತಿಂಗಳು ಜನವರಿ 1 ರಂದು ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 102.50 ರೂಪಾಯಿ ಕಡಿತ ಮಾಡಲಾಗಿತ್ತು. ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಸಿಕ ಪರಿಷ್ಕರಿಸಲಾಗುತ್ತದೆ.
ಕಳೆದ ಬಾರಿ ಪರಿಷ್ಕರಣೆ ಆಗಿ ಬೆಲೆ ಇಳಿಕೆ ಆದ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1998.50 ರೂಪಾಯಿ ಆಗಿದೆ.19 ಕೆಜಿ ಸಿಲಿಂಡರ್‌ನ ಅತಿದೊಡ್ಡ ಬಳಕೆದಾರರ ವಿಭಾಗವಾಗಿರುವ ರೆಸ್ಟೋರೆಂಟ್‌ಗಳು, ಹೋಟೆಲ್ ಮತ್ತು ಟೀ ಸ್ಟಾಲ್‌ಗಳು ಬೆಲೆ ಕಡಿತಗೊಂಡ ಕೊಂಚ ನಿರಾಳರಾಗಿದ್ದಾರೆ.
ಕಳೆದ ತಿಂಗಳು ಡಿಸೆಂಬರ್ 1ರಂದು, 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 100 ರೂ.ಗಳಷ್ಟು ಹೆಚ್ಚಿಸಲಾಯಿತು. ಇದರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯು 2,101 ರೂಪಾಯಿ ಆಗಿತ್ತು. 2012-13ರ ನಂತರ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಎರಡನೇ ಅತ್ಯಂತ ಗರಿಷ್ಠ ಬೆಲೆಯಾಗಿತ್ತು. ಇದಕ್ಕೂ ಮೊದಲು 2,200 ರೂಪಾಯಿ ಗರಿಷ್ಠ ಬೆಲೆಯಾಗಿದೆ.
ಭಾರತದಲ್ಲಿ ಯಾವುದೇ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗಿಲ್ಲ. ಗೃಹ ಬಳಕೆಯ 14.2 ಕೆಜಿ, 5 ಕೆಜಿ, 10 ಕೆಜಿ ಕಾಂಪೋಸಿಟ್ ಅಥವಾ 5 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಇಳಿಕೆ ಇಲ್ಲ, ಅವುಗಳ ಬೆಲೆಗಳು ಒಂದೇ ಆಗಿರುತ್ತವೆ. ಈ ಹಿಂದೆ ಅಕ್ಟೋಬರ್ 1ರಂದು 19 ಕೆಜಿ ಸಿಲಿಂಡರ್‌ಗಳ ಬೆಲೆಯನ್ನು 43 ರೂ ಮತ್ತು ಅಕ್ಟೋಬರ್ 6 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 2.50 ರೂ ಇಳಿಕೆ ಮಾಡಲಾಗಿತ್ತು. ಸೆಪ್ಟೆಂಬರ್ 1 ರಂದು 19 ಕೆಜಿ ಸಿಲಿಂಡರ್ ಬೆಲೆ 75 ರೂಪಾಯಿ ಇಳಿಸಲಾಗಿತ್ತು.


Click it and Unblock the Notifications