ತೈಲ ಮಾರುಕಟ್ಟೆ ಕಂಪನಿಗಳು ಜನವರಿ 1 ರಿಂದ ಮೂರು ಮೆಟ್ರೋ ನಗರಗಳಲ್ಲಿ 19-ಕಿಲೋಗ್ರಾಂ ವಾಣಿಜ್ಯ ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಗ್ಯಾಸ್) ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸಿವೆ. ಪ್ರತಿ ತಿಂಗಳ ಮೊದಲ ದಿನ ಸಾಮಾನ್ಯವಾಗಿಯೇ ತೈಲ ಕಂಪನಿಗಳು ಎಲ್‌ಪಿಜಿ ಬೆಲೆಯನ್ನು ಪರಿಷ್ಕರಣೆ ಮಾಡುತ್ತದೆ.
ಕಳೆದ ತಿಂಗಳು ಮೊದಲ ದಿನ ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆಯನ್ನು ಏರಿಸಲಾಗಿದೆ. ನವೆಂಬರ್‌ನಲ್ಲಿಯೂ ಕೂಡಾ ವಾಣಿಜ್ಯ ಎಲ್‌ಪಿಜಿ ಬಳಕೆದಾರರಿಗೆ ತೈಲ ಸಂಸ್ಥೆಗಳು ಶಾಕ್ ನೀಡಿದೆ. ಆದರೆ ಹೊಸ ವರ್ಷದ ಮೊದಲ ದಿನ ವಾಣಿಜ್ಯ ಎಲ್‌ಪಿಜಿ ಬಳಕೆದಾರರಿಗೆ ತೈಲ ಕಂಪನಿಗಳು ರಿಲೀಫ್ ನೀಡಿದೆ. ಅದು ಕೂಡಾ ಈ ಮೂರು ಪ್ರಮುಖ ಮೆಟ್ರೋ ನಗರಗಳಲ್ಲಿ ಬೆಲೆ ಇಳಿಸಲಾಗಿದೆ. ಯಾವ ನಗರ, ಬೆಂಗಳೂರಿನಲ್ಲೆಷ್ಟಿದೆ ಬೆಲೆ? ಎಂಬ ವಿವರ ಇಲ್ಲಿದೆ.

ಯಾವ ನಗರದಲ್ಲೆಷ್ಟು ಇಳಿಕೆ?
ನವದೆಹಲಿಯಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ವಿವಿಧ ಸಂಸ್ಥೆಗಳಲ್ಲಿ ಬಳಸುವ ವಾಣಿಜ್ಯ ಸಿಲಿಂಡರ್‌ನ ಬೆಲೆ ಇಂದಿನಿಂದ 1,755.50 ರೂಪಾಯಿಗೆ ಇಳಿದಿದೆ. ಈ ಹಿಂದೆ ಬೆಲೆ 1,757 ರೂಪಾಯಿ ಆಗಿತ್ತು. ಮುಂಬೈನಲ್ಲಿ 1,710 ರೂಪಾಯಿಯಿಂದ ಬೆಲೆಯು 1,708.50 ರೂಪಾಯಿಗೆ ಇಳಿಕೆಯಾಗಿದೆ.
ಚೆನ್ನೈನಲ್ಲಿ ಐದು ರೂಪಾಯಿ ಇಳಿಸಲಾಗಿದೆ. ಪ್ರಸ್ತುತ ಬೆಲೆ 1,924 ರೂಪಾಯಿ ಆಗಿದ್ದು, 1,929 ರೂಪಾಯಿಗೆ ತಲುಪಿದೆ. ಈ ನಡುವೆ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 50 ಪೈಸೆ ಏರಿಕೆ ಕಂಡು 1,868.50 ರಿಂದ 1,869 ರೂಪಾಯಿಗೆ ತಲುಪಿದೆ. ಬೆಂಗಳೂರು ಸೇರಿ ಉಳಿದ ನಗರಗಳ ಬೆಲೆ ಈ ಕೆಳಗಿದೆ.
ಬೆಂಗಳೂರು ಸೇರಿ ಉಳಿದ ನಗರಗಳ ಬೆಲೆ
ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ದರ 1839.50 ರೂಪಾಯಿ ಆಗಿದೆ. ಅಂದರೆ ನಾಲ್ಕು ರೂಪಾಯಿ ಇಳಿಕೆಯಾಗಿದೆ. ಇನ್ನು ಗುರುಗ್ರಾಮದಲ್ಲಿ 1763 ರೂಪಾಯಿ ಆಗಿದೆ. ನೋಯ್ಡಾದಲ್ಲಿ 1747 ರೂಪಾಯಿ ಆಗಿದೆ. ಭುವನೇಶ್ವರದಲ್ಲಿ 1906 ರೂಪಾಯಿ ಆಗಿದೆ. ಚಂಡೀಗಢದಲ್ಲಿ 1775.50 ರೂಪಾಯಿ ಆಗಿದೆ.
ಹೈದಾರಾಬಾದ್‌ನಲ್ಲಿ 1985 ರೂಪಾಯಿ ಇದೆ. ಜೈಪುರದಲ್ಲಿ 1778.50 ರೂಪಾಯಿ ಬೆಲೆ ಇದ್ದರೆ, ಲಕ್ನೋದಲ್ಲಿ 1869 ರೂಪಾಯಿ ಎಲ್‌ಪಿಜಿ ದರವಿದೆ. ಪಾಟ್ನಾದಲ್ಲಿ 2028.50 ರೂಪಾಯಿ ತಿರುವನಂತಪುರದಲ್ಲಿ 1786.50 ರೂಪಾಯಿ ಎಲ್‌ಪಿಜಿ ಬೆಲೆಯಿದೆ.
ಗೃಹಬಳಕೆಯ ಎಲ್‌ಪಿಜಿ ದರ
ನವದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ದರವು 903 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ 905.50 ರೂಪಾಯಿ ಆಗಿದೆ. ಭುವನೇಶ್ವರದಲ್ಲಿ 929 ರೂಪಾಯಿ ಆಗಿದೆ. ಚಂಡೀಗಢದಲ್ಲಿ 912.50 ರೂಪಾಯಿ ಆಗಿದೆ.
ಹೈದಾರಾಬಾದ್‌ನಲ್ಲಿ 955 ರೂಪಾಯಿ ಇದೆ. ಜೈಪುರದಲ್ಲಿ 906.50 ರೂಪಾಯಿ ಬೆಲೆ ಇದ್ದರೆ, ಲಕ್ನೋದಲ್ಲಿ 940.50 ರೂಪಾಯಿ ಎಲ್‌ಪಿಜಿ ದರವಿದೆ. ಪಾಟ್ನಾದಲ್ಲಿ 1001 ರೂಪಾಯಿ ತಿರುವನಂತಪುರದಲ್ಲಿ 912 ರೂಪಾಯಿ ಎಲ್‌ಪಿಜಿ ಬೆಲೆಯಿದೆ.


Click it and Unblock the Notifications