ಧನತ್ರಯೋದಶಿ ಮತ್ತು ದೀಪಾವಳಿ ಇನ್ನು ಕೆಲವೇ ದಿನಗಳಲ್ಲಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಜನರು ಬೆಳ್ಳಿ ನಾಣ್ಯಗಳು, ಆಭರಣಗಳನ್ನು ಖರೀದಿ ಮಾಡುವುದು ಸಾಮಾನ್ಯವಾಗಿದೆ. ಬೆಳ್ಳಿ ಭಾರತೀಯ ಸಂಸ್ಕೃತಿಯಲ್ಲಿ ಗಮನಾರ್ಹ ಮೌಲ್ಯವನ್ನು ಹೊಂದಿರುವ ಅಮೂಲ್ಯವಾದ ಲೋಹವಾಗಿದೆ.
ಹೂಡಿಕೆ, ಅಲಂಕಾರ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ, ಬೆಳ್ಳಿಯನ್ನು ಖರೀದಿಸುವುದು ದೇಶಾದ್ಯಂತ ವಿಶೇಷವಾಗಿ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿದೆ. ಆದರೆ ನೀವು ಬೆಳ್ಳಿ ಖರೀದಿ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬಾರದು. ಯಾವುದು ಈ ತಪ್ಪು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ......

ಪರಿಶುದ್ಧತೆ ಕಡೆಗಣಿಸುವುದು
ಬೆಳ್ಳಿ ಖರೀದಿ ಮಾಡುವಾಗ ಶುದ್ಧತೆ ಅತಿ ಮುಖ್ಯ. ನೀವು ಖರೀದಿಸುವ ಬೆಳ್ಳಿಯು ಅದರ ನಿಜವಾದ ಬೆಳ್ಳಿಯ ಅಂಶವನ್ನು ಸೂಚಿಸುವ ಹಾಲ್‌ಮಾರ್ಕ್ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಆಭರಣದಲ್ಲಿ 99.9 ಬೆಳ್ಳಿಯಿದ್ದರೆ, 999 ಎಂದು ಆಭರಣದಲ್ಲಿ ಉಲ್ಲೇಖಿಸಲಾಗಿರುತ್ತದೆ. 80 ಆಗಿದ್ದರೆ, 800 ಎಂದು ಉಲ್ಲೇಖಿಸಲಾಗಿರುತ್ತದೆ.
ಹಾಲ್‌ಮಾರ್ಕ್ ಪರಿಶೀಲನೆ
ಬೆಳ್ಳಿಯ ವಸ್ತುವಿನ ಮೇಲೆ ಹಾಲ್‌ಮಾರ್ಕ್ ಇದೆಯೇ ಎಂದು ನೋಡಿಕೊಳ್ಳಿ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಬೆಳ್ಳಿ ವಸ್ತುಗಳನ್ನು ಬಿಐಎಸ್ ಲೋಗೋ, ಶುದ್ಧತೆಯ ಗುರುತನ್ನು ಉಲ್ಲೇಖಿಸಿರುತ್ತದೆ. ಇದು ಬೆಳ್ಳಿಯ ಶುದ್ಧತೆಯ ಪ್ರತೀಕವಾಗಿದೆ.
ಬೆಲೆ ನೋಡದೆಯೇ ಚಿನ್ನ ಖರೀದಿಸುವುದು
ನಿಮ್ಮ ನಗರದಲ್ಲಿನ ಮಾರುಕಟ್ಟೆ ಬೆಲೆಯನ್ನು ನೀವು ತಿಳಿದ ನಂತರ ಬೆಳ್ಳಿಯನ್ನು ಖರೀದಿಸುವುದು ಉತ್ತಮವಾಗಿದೆ. ಇದು ನಿಮ್ಮ ಅಂದಾಜಿನಲ್ಲಿ ಬೆಳ್ಳಿ ಖರೀದಿ ಮಾಡಲು ನಿಮಗೆ ಸಹಾಯವಾಗುತ್ತದೆ. ಬೆಳ್ಳಿಯ ಬೆಲೆಗಳು ನಿರಂತರವಾಗಿ ಏರಿಳಿತಗೊಳ್ಳುತ್ತವೆ. ನಿಖರವಾದ ಏರಿಳಿತ ಅಂದಾಜು ಮಾಡುವುದು ಸವಾಲಾಗಿದೆ.
ಸರಿಯಾಗಿ ಸಂಗ್ರಹ ಮಾಡದಿರುವುದು
ನಿಮ್ಮ ಬೆಳ್ಳಿಯ ಸ್ಥಿತಿ ಮತ್ತು ಮೌಲ್ಯವನ್ನು ಸಂರಕ್ಷಿಸಲು ಸರಿಯಾದ ಸಂಗ್ರಹಣೆ ಅತ್ಯಗತ್ಯ. ಕಳಂಕ, ಹಾನಿ ಅಥವಾ ಕಳ್ಳತನವನ್ನು ತಡೆಗಟ್ಟಲು ಬೆಳ್ಳಿಯನ್ನು ಖರೀದಿ ಮಾಡಿದ ಬಳಿಕ ಅದನ್ನು ಸುರಕ್ಷಿತವಾಗಿ ಸಂಗ್ರಹ ಮಾಡುವುದು ಅತೀ ಮುಖ್ಯವಾಗುತ್ತದೆ.
ಬೆಳ್ಳಿ ಆಭರಣವನ್ನು ಚೆಕ್ ಮಾಡದಿರುವುದು
ನೀವು ಬೆಳ್ಳಿ ಆಭರಣವನ್ನು ಚೆಕ್ ಮಾಡುವುದು ಅತೀ ಮುಖ್ಯವಾಗುತ್ತದೆ. ಬೆಳ್ಳಿ ಮ್ಯಾಗ್ನೇಟಿಕ್ ಅಲ್ಲ. ನೀವು ಬೆಳ್ಳಿಯ ಹತ್ತಿರ ಅಯಸ್ಕಾಂತವನ್ನು ಇಡಬೇಕು. ಬೆಳ್ಳಿಗೆ ಅಯಸ್ಕಾಂತ ಅಂಟಿಕೊಂಡರೆ, ಇದು ಶುದ್ಧ ಬೆಳ್ಳಿಯಲ್ಲ ಎಂದಾಗುತ್ತದೆ. ಬೇರೆ ಲೋಹವನ್ನು ಬೆರೆಸಲಾಗಿದೆ ಎಂದಾಗುತ್ತದೆ.
ವಿಶ್ವಾಸಾರ್ಹವಲ್ಲದ ಮೂಲಗಳಿಂದ ಖರೀದಿಸುವುದು
ನಿಮ್ಮ ಬೆಳ್ಳಿ ಖರೀದಿಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ನೀವು ವಿಶ್ವಾಸಾರ್ಹವಾದ ಮೂಲಗಳಿಂದ ಖರೀದಿ ಮಾಡಬೇಕಾಗುತ್ತದೆ. ನಕಲಿ ಅಥವಾ ಕಡಿಮೆ ಗುಣಮಟ್ಟದ ಬೆಳ್ಳಿಯನ್ನು ನೀಡಬಹುದಾದ ವಿಶ್ವಾಸಾರ್ಹವಲ್ಲದ ಮೂಲಗಳಿಂದ ಖರೀದಿಸುವುದನ್ನು ತಪ್ಪಿಸಿ.
ಹೆಚ್ಚುವರಿ ಶುಲ್ಕಗಳ ನಿರ್ಲಕ್ಷ್ಯ
ಶುಲ್ಕಗಳನ್ನು ಪರಿಶೀಲನೆ ಮಾಡುವುದು ನಿಮ್ಮ ಬೆಳ್ಳಿಯ ಖರೀದಿಯ ಒಟ್ಟಾರೆ ವೆಚ್ಚವನ್ನು ನಿಮಗೆ ಖಚಿತಪಡಿಸುತ್ತದೆ. ಬೆಳ್ಳಿ ಆಭರಣಗಳು ಅಥವಾ ಇತರ ಕಲಾಕೃತಿಗಳನ್ನು ಖರೀದಿಸುವಾಗ ಮೇಕಿಂಗ್ ಚಾರ್ಜ್ ಅನ್ವಯವಾಗುತ್ತದೆ.
ವೈವಿಧ್ಯತೆಯ ಕೊರತೆ
ಬೆಳ್ಳಿ, ಚಿನ್ನ, ಷೇರುಗಳು ಮತ್ತು ಬಾಂಡ್‌ಗಳು ಸೇರಿದಂತೆ ವಿವಿಧ ಆಸ್ತಿ ವರ್ಗಗಳಲ್ಲಿ ನಿಮ್ಮ ಹೂಡಿಕೆಗಳನ್ನು ಮಾಡುವುದು ಅತೀ ಮುಖ್ಯವಾಗುತ್ತದೆ. ಈ ವಿಧಾನವು ಅಪಾಯವನ್ನು ತಗ್ಗಿಸುತ್ತದೆ ಮತ್ತು ಒಟ್ಟಾರೆ ಆದಾಯವನ್ನು ಸಮರ್ಥವಾಗಿ ಹೆಚ್ಚಿಸುತ್ತದೆ.


Click it and Unblock the Notifications