ಹಲವಾರು ವಾಟ್ಸಾಪ್ ಬಳಕೆದಾರರು ಒಂದಕ್ಕಿಂತ ಅಧಿಕ ಮೊಬೈಲ್ ಫೋನ್‌ಗಳಲ್ಲಿ ಅದೇ ಸಂಖ್ಯೆಯ ವಾಟ್ಸಾಪ್ ಅನ್ನು ಬಳಕೆ ಮಾಡಲು ಬಯಸುತ್ತಾರೆ. ಆದರೆ ಅದಕ್ಕೆ ಈ ಸಾಮಾಜಿಕ ಮಾಧ್ಯಮ ಸಂಸ್ಥೆಯು ಅವಕಾಶ ನೀಡುತ್ತಿಲ್ಲ. ಆದರೆ ಇನ್ನು ಶೀಘ್ರದಲ್ಲಿ ನೀವು ನಾಲ್ಕು ಡಿವೈಸ್‌ಗಳಲ್ಲಿ ಅದೇ ಮೊಬೈಲ್ ಸಂಖ್ಯೆಯ ವಾಟ್ಸಾಪ್ ಅನ್ನು ಬಳಕೆ ಮಾಡಲು ಸಾಧ್ಯವಾಗಲಿದೆ. ಅದಕ್ಕೆ ನೀವು ಈ ಕಂಪೇನಿಯನ್ ಮೋಡ್‌ಗೆ ಧನ್ಯವಾದ ಹೇಳಬೇಕು.
ಪ್ರಸ್ತುತ ನಾವು ಒಂದು ಮೊಬೈಲ್ ಫೋನ್‌ನಲ್ಲಿ ವಾಟ್ಸಾಪ್ ಬಳಕೆ ಮಾಡಿದರೆ, ಆ ಸಂಖ್ಯೆಯಲ್ಲೇ ಬೇರೆ ಮೊಬೈಲ್ ಫೋನ್‌ನಲ್ಲಿ ವಾಟ್ಸಾಪ್ ಒಂದೇ ಸಮಯದಲ್ಲಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚೆಂದರೆ ವಾಟ್ಸಾಪ್ ವೆಬ್‌ನಲ್ಲಿ ನೀವು ವಾಟ್ಸಾಪ್ ಬಳಸಬಹುದು. ಆದರೆ ಶೀಘ್ರದಲ್ಲೇ ನೀವು ಎರಡು ಮೊಬೈಲ್ ಫೋನ್‌ನಲ್ಲಿ ಅದೇ ಸಂಖ್ಯೆಯ ವಾಟ್ಸಾಪ್ ಬಳಕೆ ಮಾಡಲು ಕಂಪೇನಿಯನ್ ಮೋಡ್ ಸಹಾಯ ಮಾಡಲಿದೆ.
ವಾಟ್ಸಾಪ್‌ನ ಹೊಸ ಹೊಸ ಫೀಚರ್‌ಗಳ ಬಗ್ಗೆ ಮಾಹಿತಿ ನೀಡುವ WABetaInfo ವೆಬ್‌ಸೈಟ್ ಪ್ರಕಾರ ವಾಟ್ಸಾಪ್ ಸಂಸ್ಥೆಯು ಕಂಪೇನಿಯನ್ ಮೋಡ್ ಅನ್ನು ಆರಂಭಿಸುವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ವಾಟ್ಸಾಪ್ ಒಂದಕ್ಕಿಂತ ಅಧಿಕ ಮೊಬೈಲ್ ಫೋನ್‌ನಲ್ಲಿ ಅದೇ ವಾಟ್ಸಾಪ್ ಖಾತೆಯನ್ನು ಬಳಕೆ ಮಾಡಲು ಸಾಧ್ಯವಾಗಲಿದೆಯೇ ಎಂಬ ಪ್ರಯೋಗವನ್ನು ನಡೆಸುತ್ತಿದೆ. ಈ ಹೊಸ ಫೀಚರ್ ಹೇಗಿದೆ, ಬಳಕೆ ಹೇಗೆ ಸಾಧ್ಯ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
2 ಮೊಬೈಲ್ ಫೋನ್‌ಗಳಲ್ಲಿ ವಾಟ್ಸಾಪ್ ಬಳಕೆ ಹೇಗೆ?
ಪ್ರಸ್ತುತ ಈ ಪ್ರಯೋಗವನ್ನು ಸಂಸ್ಥೆಯು ನಡೆಸುತ್ತಿದೆ. ಲಿಂಕ್ ಡಿವೈಸ್ (Link Device) ಆಯ್ಕೆಯ ಮೂಲಕ ಒಂದೇ ವಾಟ್ಸಾಪ್ ಖಾತೆಯನ್ನು ಇನ್ನೊಂದು ಮೊಬೈಲ್ ಫೋನ್‌ನಲ್ಲಿ ಬಳಕೆ ಮಾಡಲು ಸಾಧ್ಯವಾಗುವಂತೆ ಮಾಡಲಾಗುತ್ತದೆ. ಸಾಮಾನ್ಯವಾಗಿ ವೆಬ್ ವಾಟ್ಸಾಪ್ ಬಳಕೆ ಮಾಡುವಾಗ ನಾವು ಹೇಗೆ ಸ್ಕ್ಯಾನಿಂಗ್ ಮಾಡಿಕೊಳ್ಳುತ್ತೇವೆಯೋ ಅದೇ ರೀತಿಯಲ್ಲಿ ಒಂದು ಮೊಬೈಲ್ ಫೋನ್‌ನಿಂದ ಇನ್ನೊಂದು ಮೊಬೈಲ್ ಫೋನ್‌ಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಂಡು ಬಳಕೆ ಮಾಡಲು ಸಾಧ್ಯವಾಗುವಂತೆ ಮಾಡಲಾಗುತ್ತದೆ.
ಫೀಚರ್ ಬಗ್ಗೆ ಈ ಮಾಹಿತಿ ತಿಳಿದಿರಲಿ
ನೀವು ಇನ್ನೊಂದು ಸ್ಮಾರ್ಟ್ ಫೋನ್‌ಗೆ ನಿಮ್ಮ ವಾಟ್ಸಾಪ್ ಅನ್ನು ಲಿಂಕ್ ಮಾಡಿದ ಬಳಿಕ ಎಲ್ಲ ಚಾಟ್ ಹಿಸ್ಟರಿಗಳು ಆ ಫೋನ್‌ನಲ್ಲಿಯೂ ಸೇವ್ ಆಗಲಿದೆ. ಚಾಟ್‌ಗಳು ಸಿಂಕ್ ಆಗಲಿದೆ. ನೀವು ವಾಟ್ಸಾಪ್ ಮೆಸೇಜ್‌ಗಳಿಗೆ ರಿಪ್ಲೈ ಮಾಡಲು, ನೀವಾಗಿಯೇ ವಾಟ್ಸಾಪ್ ಮೆಸೇಜ್ ಮಾಡಲು, ವಾಟ್ಸಾಪ್ ಕರೆ ಮಾಡಲು ಸಾಧ್ಯವಾಗಲಿದೆ. ಒಂದೇ ಸಮಯಕ್ಕೆ ಎರಡೂ ಫೋನ್‌ಗಳಲ್ಲಿ ವಾಟ್ಸಾಪ್ ಖಾತೆ ಬಳಕೆ ಮಾಡಬಹುದು. ನೀವು ಒಟ್ಟಾಗಿ ನಾಲ್ಕು ಡಿವೈಸ್‌ಗಳಲ್ಲಿ ಒಂದೇ ಸಮಯಕ್ಕೆ ವಾಟ್ಸಾಪ್ ಬಳಕೆ ಮಾಡಲು ಸಾಧ್ಯವಾಗಲಿದೆ. ಎರಡು ಮೊಬೈಲ್ ಫೋನ್‌ಗಳಲ್ಲಿ ಅದೇ ವಾಟ್ಸಾಪ್ ಅನ್ನು ಬಳಸಬಹುದು. ಒಂದು ಟ್ಯಾಬ್ಲೆಟ್, ಡೆಸ್ಕ್‌ಟಾಪ್‌ನಲ್ಲಿ ಅದೇ ವಾಟ್ಸಾಪ್ ಖಾತೆಯನ್ನು ಬಳಸಬಹುದು.
ಎರಡು ಮೊಬೈಲ್ ಸಂಖ್ಯೆಯ ಅವಶ್ಯಕತೆಯೇ ಇಲ್ಲ
ಭಾರತದಲ್ಲಿ ಒಟ್ಟಾಗಿ ಸುಮಾರು 500 ಮಿಲಿಯನ್ ಜನರು ವಾಟ್ಸಾಪ್ ಬಳಕೆ ಮಾಡುತ್ತಾರೆ. ಈ ಹೊಸ ಫೀಚರ್‌ನ ಪ್ರಯೋಗ ಯಶಸ್ವಿಯಾದ ಬಳಿಕ ಎಲ್ಲ ಫೋನ್‌ಗಳಿಗೆ ಈ ಹೊಸ ಆವೃತ್ತಿ ಪರಿಚಯಿಸಲಾಗುತ್ತದೆ. ಈ ಹೊಸ ಅಪ್‌ಡೇಟೆಡ್ ವರ್ಜನ್ ಅನ್ನು ನೀವು ಬಳಸಬೇಕಾದರೆ, ವಾಟ್ಸಾಪ್ ಅಪ್‌ಡೇಟ್ ನೊಟೀಫಿಕೇಷನ್ ಬಂದಾಗ ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಯಾರು ಎರಡು ಫೋನ್‌ಗಳಲ್ಲಿ ಒಂದೇ ವಾಟ್ಸಾಪ್ ಬಳಕೆ ಮಾಡಲು ಬಯಸುತ್ತಾರೋ ಅವರಿಗೆ ಇದು ಸಹಾಯಕವಾಗಲಿದೆ. ಈ ಹೊಸ ಫೀಚರ್‌ನಿಂದಾಗಿ ಎರಡು ವಾಟ್ಸಾಪ್‌ಗಾಗಿ ಎರಡು ಮೊಬೈಲ್ ಸಂಖ್ಯೆಯನ್ನು ಅಥವಾ ಎರಡು ಸಿಮ್‌ಗಳನ್ನು ನೀವು ಹೊಂದಿರಬೇಕಾದ ಅವಶ್ಯಕತೆ ಬರುವುದಿಲ್ಲ.
ವಾಟ್ಸಾಪ್ ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಳ
ವಾಟ್ಸಾಪ್ ಗ್ರೂಪ್ ಸದಸ್ಯರ ಸಂಖ್ಯೆಯನ್ನು ಕೂಡಾ ಹೆಚ್ಚಳ ಮಾಡಿದೆ. ಪ್ರಸ್ತುತ 1024 ಜನರು ಒಂದು ಗ್ರೂಪ್‌ನಲ್ಲಿ ಇರಬಹುದು. ಗ್ರೂಪ್‌ಗಳ ಗ್ರೂಪ್ ಅನ್ನು ಕೂಡಾ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಅಡ್ಮಿನ್‌ಗಳು ಯಾರದೆ ಮೆಸೇಜ್ ಅನ್ನು ಡಿಲೀಟ್ ಮಾಡುವ ಆಯ್ಕೆ ಇದೆ. ಸುಮಾರು 12 ಗುಂಪುಗಳನ್ನು ಒಂದು ಕಮ್ಯೂನಿಟಿ ಗುಂಪಾಗಿ ಪರಿವರ್ತಿಸಬಹುದು.


Click it and Unblock the Notifications