SIP ನಲ್ಲಿ ಹೂಡಿಕೆ ಮಾಡಿ ಶ್ರೀಮಂತರಾಗಬೇಕೇ? 7-5-3-1 ನಿಯಮದಲ್ಲಿ ಅಡಗಿದೆ ಹಣ ಹೆಚ್ಚಿಸುವ ರಹಸ್ಯ.!

ಬೆಂಗಳೂರು: SIP (Systematic Investment Plan) ಒಂದು ಹೂಡಿಕೆ ಯೋಜನೆಯಾಗಿದ್ದು, ಇದರಲ್ಲಿ ನೀವು ನಿಮ್ಮ ಹಣವನ್ನು ಸಾಮಾನ್ಯವಾಗಿ ಪ್ರತಿ ತಿಂಗಳು, ನಿಯಮಿತವಾಗಿ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತೀರಿ. ಇದು ಹೂಡಿಕೆಯನ್ನು ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ ಮತ್ತು ನಿಮ್ಮ ಹಣವನ್ನು ಸ್ಥಿರವಾಗಿ ಬೆಳೆಸಲು ಸಹಾಯ ಮಾಡುತ್ತದೆ. ಇದು ಹೆಸರೇ ಹೇಳುವಂತೆ ಇದು ವ್ಯವಸ್ಥಿತ ಮ್ಯೂಚುಯಲ್‌ ಫಂಡ್‌ ಹೂಡಿಕೆ ಯೋಜನೆಯಾಗಿದೆ.

ನಾವು ಹಾಕಿಕೊಂಡಿರುವ ದೀರ್ಘಕಾಲೀಕ ಪ್ಲ್ಯಾನ್ , ಗುರಿಗಳನ್ನು ಈಡೇರಿಸಿಕೊಳ್ಳಲು ನಾವು ಕೂಡಿಟ್ಟುವ ಉಳಿತಾಯ ಮತ್ತು ನಮ್ಮೆಲ್ಲಾ ಶತ ಪ್ರಯತ್ನಗಳನ್ನು ಸಹಾಯಕ್ಕೆ ಬರುತ್ತವೆ. ಇದಲ್ಲದೇ ದೀರ್ಘಾವಧಿಗೆ ಸಣ್ಣ ಮೊತ್ತ ಹೂಡಿಕೆ ಮಾಡುವುದರಿಂದ ನಮಗೆ ಗಣನೀಯ ಆದಾಯ ಬರುತ್ತದೆ. ಹಣಕಾಸಿನ ಯಶಸ್ಸಿಗೆ ಮುಖ್ಯವಾಗಿ ನಿಮ್ಮ ಹೂಡಿಕೆ ಪ್ರಯಾಣವನ್ನು ಮೊದಲೇ ಪ್ರಾರಂಭಿಸುವುದು. ಉತ್ತಮ. ಇದಕ್ಕಾಗಿ ಬಹಳಷ್ಟು ಜನ SIP ನಲ್ಲಿ ಹೂಡಿಕೆ ಮಾಡಲು ಪ್ರಮುಖ ಆದ್ಯತೆಯನ್ನು ನೀಡುತ್ತಾರೆ. ನೀವು ಕೂಡಾ ಸಿಪ್ ನಲ್ಲಿ ಹೂಡಿಕೆ ಮಾಡಲು ಬಯಸಿದ್ರೆ 7-5-3-1 ನಿಯಮವನ್ನು ಅನುಸರಿಸಿ. ಈ ನಿಯಮ ಹೂಡಿಕೆಯ ಒಂದು ತಂತ್ರವಾಗಿದ್ದು, ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಲು ಸಹಾಯ ಮಾಡುತ್ತದೆ.

SIP ನಲ್ಲಿ ಹೂಡಿಕೆ ಮಾಡಿ ಶ್ರೀಮಂತರಾಗಬೇಕೇ?

7-5-3-1 ನಿಯಮ ಎಂದರೇನು?

ನಮ್ಮ ದೊಡ್ಡ ಹಣಕಾಸಿನ ಗುರಿಗಳನ್ನು ಸುಲಭವಾಗಿ ಮತ್ತು ಅನುಕೂಲಕರವಾಗಿ ಸಾಧಿಸಲು SIP ಸಹಾಯ ಮಾಡುತ್ತದೆ. ಆದ್ದರಿಂದ ಹೂಡಿಕೆದಾರರು ಈ 7-5-3-1 ನಿಯಮವನ್ನು ಗಮನದಲ್ಲಿಟ್ಟುಕೊಂಡು ತಮ್ಮ SIP ಹೂಡಿಕೆಗಳನ್ನು ಮಾಡಬಹುದು. ಹೂಡಿಕೆಗಳ ಮೂಲಕ ಹಣಕಾಸಿನ ಗುರಿಗಳನ್ನು ಸಾಧಿಸಲು ಮ್ಯೂಚುವಲ್ ಫಂಡ್‌ಗಳಲ್ಲಿನ SIP ಸೂಕ್ತವಾದ ಆಯ್ಕೆಯಾಗಿದೆ.

SIP 7-5-3-1 ನಿಯಮವು ದೀರ್ಘಕಾಲೀನ ಹೂಡಿಕೆಗಳಿಗೆ ಸಂಬಂಧಿಸಿದ ಸಮಗ್ರ ತಂತ್ರವಾಗಿದೆ. ಇದು ಹೂಡಿಕೆದಾರರಿಗೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್‌ಗಳ (SIP) ಮೇಲಿನ ರಿಟರ್ನ್‌ಗಳನ್ನು ಗರಿಷ್ಠಗೊಳಿಸಲು ಸಹಾಯ ಮಾಡುತ್ತದೆ. ಈ ನಿಯಮವು ಏಳು ವರ್ಷಗಳ ಹೂಡಿಕೆ ಅವಧಿ, ಐದು ಆಸ್ತಿ(ನಿಧಿ) ವರ್ಗಗಳಲ್ಲಿ ವೈವಿಧ್ಯೀಕರಣ, ಮೂರು ಸಮಸ್ಯೆ/ಸವಾಲಿನ ಹಂತಗಳಿಗೆ ತಯಾರಿ ಮತ್ತು ವಾರ್ಷಿಕವಾಗಿ SIP ಟಾಪ್ ಅಪ್ ಮೊತ್ತವನ್ನು ಹೆಚ್ಚಿಸುವುದನ್ನು ಒಳಗೊಂಡಿದೆ.

ಏಳು ವರ್ಷಗಳು:

ಈ ನಿಯಮದ ಮೊದಲ ಮೂಲಭೂತ ತತ್ವವೆಂದರೆ ಕನಿಷ್ಠ 7 ವರ್ಷಗಳ ಹೂಡಿಕೆ ಅವಧಿಯನ್ನು ಹಾಕಿಕೊಳ್ಳುವುದು. ಇದಕ್ಕಿಂತ ದೀರ್ಘಾವಾಧಿ ಇದ್ದರೆ ಉತ್ತಮ. ಈ ಹಿಂದಿನ ಡೇಟಾ ವಿಶ್ಲೇಷಣೆಯು ಇಕ್ವಿಟಿಗಳು ಸಾಮಾನ್ಯವಾಗಿ ಏಳು ವರ್ಷಗಳ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ತೋರಿಸುತ್ತದೆ. ಮಾರುಕಟ್ಟೆಯ ಕುಸಿತದ / ಚಂಚಲತೆಯ ಸಮಯದಲ್ಲಿ ಸಂಭವಿಸುವ ನಷ್ಟಗಳನ್ನು ದೀರ್ಘಾವಾಧಿಯ ಹೂಡಿಕೆ ಸರಿದೂಗಿಸುತ್ತದೆ.ಕನಿಷ್ಠ ಏಳು ವರ್ಷಗಳ ಕಾಲ ಇಕ್ವಿಟಿ SIP ಗಳಲ್ಲಿ ಹೂಡಿಕೆ ಮಾಡುವುದರಿಂದ ಸಂಯೋಜನೆಯ ಪ್ರಯೋಜನವನ್ನು ನೀಡುತ್ತದೆ. ಉತ್ತಮ ಆದಾಯವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

5 ಪಂಡ್ ಗಳ ವರ್ಗಗಳು:

ಎರಡನೇ ನಿಯಮದ ಪ್ರಕಾರ ಹೂಡಿಕೆಯನ್ನು ವೈವಿಧ್ಯಗೊಳಿಸುವುದು. ಅಂದರೆ ಕೇವಲ ಒಂದು ಯೋಜನೆ/ಒಂದೇ ಸ್ಕೀಮ್ ಗೆ ಅಂಟಿಕೊಳ್ಳುವುದರ ಬದಲು ಐದು ವಿಭಿನ್ನ ಆಸ್ತಿ ಮೇಲೆ ಹೂಡಿಕೆ ಮಾಡುವುದು ಉತ್ತಮ. ಲಾರ್ಜ್ ಕ್ಯಾಪ್ ಸ್ಟಾಕ್‌ಗಳು, ವ್ಯಾಲ್ಯೂ ಸ್ಟಾಕ್‌ಗಳು, ಗ್ಲೋಬಲ್ ಎಕ್ಸ್ಪೋಷರ್, ಮಿಡ್/ಸ್ಮಾಲ್ ಕ್ಯಾಪ್ ಸ್ಟಾಕ್‌ಗಳು ಬೆಳವಣಿಗೆಯು ಯೋಗ್ಯವಾದ ಬೆಲೆ ಸ್ಟಾಕ್‌ಗಳು (Growth is worth a price (GARP) stocks) ಹೀಗೆ ಹೂಡಿಕೆಯನ್ನು ಬೇರೆ ಬೇರೆ ರೀತಿಯಾಗಿ ಹಂಚಬಹುದು.

3 ಹಂತಗಳು:

SIP ಹೂಡಿಕೆದಾರರು ಸಾಮಾನ್ಯವಾಗಿ ಎದುರಿಸುವ ಮೂರು ಸವಾಲಿನ ಹಂತಗಳಿಗೆ ಸಿದ್ಧರಾಗಿರುವುದು ನಿಯಮದ ಮೂರನೇ ತತ್ವವಾಗಿದೆ. ಈ ಹಂತಗಳಲ್ಲಿ ಹೂಡಿಕೆದಾರರು ತಮ್ಮ ಹೂಡಿಕೆಗಳ ಮೌಲ್ಯವು ಕಡಿಮೆಯಾಗುತ್ತಿರುವುದನ್ನು ನೋಡಿ ಆತಂಕಗೊಳ್ಳಬಹುದು ಮತ್ತು ಹೂಡಿಕೆಯನ್ನು ಮುಂದುವರಿಸುವುದನ್ನು ನಿಲ್ಲಿಸಬಹುದು. ಆದ್ದರಿಂದ, ಈ ನಿಯಮವು ಹೂಡಿಕೆದಾರರನ್ನು ನಿರಾಶೆ, ಪ್ಯಾನಿಕ್ , ಕಿರಿಕಿರಿಯಂತಹ ಹಂತಗಳಿಗೆ ಮಾನಸಿಕ ಸಿದ್ದತೆ ಮತ್ತು ಅವುಗಳನ್ನು ದಾಟಿ ಹೋಗಲು ಸಿದ್ಧರಾಗಲು ಸೂಚಿಸುತ್ತದೆ. ಮಾರುಕಟ್ಟೆಗಳು ಕಾಲಾನಂತರದಲ್ಲಿ ಚೇತರಿಸಿಕೊಳ್ಳುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು SIP ಅನ್ನು ಮುಂದುವರೆಸುವುದು ಅಂತಿಮವಾಗಿ ಲಾಭಕ್ಕೆ ಕಾರಣವಾಗುತ್ತದೆ ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಟಾಪ್-ಅಪ್ ಹೆಚ್ಚಳ

ಈ ನಿಯಮದ ಕೊನೆಯ ಮತ್ತು ನಾಲ್ಕನೇ ತತ್ವವೆಂದರೆ ಹೂಡಿಕೆದಾರರು ಪ್ರತಿ ವರ್ಷ ತಮ್ಮ SIP ಮೊತ್ತವನ್ನು ಹೆಚ್ಚಿಸಲು ಸಲಹೆ ನೀಡುತ್ತದೆ. ಅಂದರೆ ಪೋರ್ಟ್‌ಫೋಲಿಯೊವನ್ನು ಹೆಚ್ಚಿಸಲು ಪ್ರತಿ ವರ್ಷವೂ ನಿಮ್ಮ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೊತ್ತವನ್ನು ಹೆಚ್ಚಿಸುವುದು. ಇದು ನಿಮ್ಮ ಹೂಡಿಕೆಯ ಮೌಲ್ಯವು ದೀರ್ಘಕಾಲದಲ್ಲಿ ಗಮನಾರ್ಹವಾಗಿ ಹೆಚ್ಚಾಗಲು ಸಹಾಯ ಮಾಡುತ್ತದೆ.

ಒಟ್ಟಾರೆಯಾಗಿ, SIP 7-5-3-1 ನಿಯಮವು ಹೂಡಿಕೆದಾರರಿಗೆ ಸ್ಥಿರವಾದ ಹೂಡಿಕೆ ಯೋಜನೆಗಳ ಮೂಲಕ ದೀರ್ಘಕಾಲೀನ ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಒಂದು ತಂತ್ರವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+