ದಿನದಿನಕ್ಕೂ ಭಾರತದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಎಲ್ಲ ಲೈಫ್, ಜನರಲ್ ಹಾಗೂ ಹೆಲ್ತ್ ಇನ್ಷೂರೆನ್ಸ್ ಕಂಪೆನಿಗಳು ಜೀವ ವಿಮೆ ಪಾಲಿಸಿಗಳನ್ನು ಮಾರಾಟ ಮಾಡಲು ಆರಂಭಿಸಿವೆ. ಇದೀಗ ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ ಡಿಎಐ) ಎರಡು ಪಾಲಿಸಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಘೋಷಿಸಿದೆ.
ಈ ಎರಡೂ ಪಾಲಿಸಿಗಳು ಜುಲೈ 10ರಿಂದ ಆರಂಭವಾಗಲಿವೆ. ಅವುಗಳಿಗೆ ಕೊರೊನಾ ಕವಚ್ ಮತ್ತು ಕೊರೊನಾ ರಕ್ಷಕ್ ಎಂದು ಹೆಸರಿಡಲಾಗಿದೆ. ಆ ಎರಡು ಪಾಲಿಸಿಗಳ ಬಗ್ಗೆ ಮುಖ್ಯ ಮಾಹಿತಿಗಳು ಇಲ್ಲಿವೆ.
ಕೊರೊನಾ ಕವಚ್
ಇದು ಸ್ಟ್ಯಾಂಡರ್ಡ್ ಪಾಲಿಸಿ. ಇದರಲ್ಲಿ ಕೋವಿಡ್ 19 ಜತೆಗೆ ಹಿಂದಿನ ಆರೋಗ್ಯ ಸ್ಥಿತಿಯ ಖರ್ಚುಗಳು ಸಹ ಕವರ್ ಆಗಲಿದೆ. 18ರಿಂದ 65 ವಯಸ್ಸಿನ ಮಧ್ಯೆ ಇರುವವರು ಇದನ್ನು ಖರೀದಿಸಬಹುದು. ಪೋಷಕರೂ ಇದರಲ್ಲಿ ಕವರ್ ಆಗುತ್ತಾರೆ. ಒಂದೇ ಪ್ರೀಮಿಯಂ ಬರುತ್ತದೆ. ನಿಯಮಿತ ಅವಧಿಯ ಪಾಲಿಸಿ ಇದಾಗಿದ್ದು, ಜೀವನಪೂರ್ತಿ ರಿನೀವಲ್ ಅನುಕೂಲ ಇಲ್ಲ.
ಕೊರೊನಾ ಕವಚ್ ಪಾಲಿಸಿಯಲ್ಲಿ ಕನಿಷ್ಠ ಮೊತ್ತದ ಇನ್ಷೂರ್ಡ್ ಮೊತ್ತ 50 ಸಾವಿರ ರುಪಾಯಿ. ಗರಿಷ್ಠ ಮಟ್ಟದ ಇನ್ಷೂರ್ಡ್ ಮೊತ್ತ 5 ಲಕ್ಷ ರುಪಾಯಿ.

ಕೊರೊನಾ ರಕ್ಷಕ್
ಇದು ಕೂಡ ಒಂದೇ ಪ್ರೀಮಿಯಂ ಪ್ಲಾನ್. ಒಂದು ವೇಳೆ ಪಾಲಿಸಿದಾರರು ಆಸ್ಪತ್ರೆಗೆ ದಾಖಲಾದರೆ ಶೇಕಡಾ 100ರಷ್ಟು ಮೊತ್ತವನ್ನು ಪಾವತಿಸಲಾಗುತ್ತದೆ. ಆದರೆ ಕೋವಿಡ್ 19 ಪಾಸಿಟಿವ್ ದೃಢವಾದ ಮೇಲೆ ಕನಿಷ್ಠ 72 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರಬೇಕು.
ಈ ಪಾಲಿಸಿಯಲ್ಲಿ ಕನಿಷ್ಠ ಇನ್ಷೂರ್ಡ್ ಮೊತ್ತ 50 ಸಾವಿರ ರುಪಾಯಿಯಾದರೆ, ಗರಿಷ್ಠ ಇನ್ಷೂರ್ಡ್ ಮೊತ್ತ 2.5 ಲಕ್ಷ ರುಪಾಯಿ.


Click it and Unblock the Notifications