For Quick Alerts
ALLOW NOTIFICATIONS  
For Daily Alerts

ಕೊರೊನಾ ಕಷ್ಟ ಕಾಲಕ್ಕೆ ಎಲ್ಲಿ ಲೋನ್ ಸಿಗುತ್ತೆ? ಯಾವ ಬಡ್ಡಿ ಕಡಿಮೆ?

|

ಕೊರೊನಾದಿಂದ ಎದುರಾಗಿರುವ ಆರ್ಥಿಕ ಸಮಸ್ಯೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಹಲವು ಬ್ಯಾಂಕ್ ಗಳು ಈಗಾಗಲೇ ಸಾಲ ಪಡೆದಂಥವರಿಗೆ, ಪೆನ್ಷನ್ ದಾರರಿಗೆ ಹಾಗೂ ವೇತನದಾರರಿಗೆ ಪರ್ಸನಲ್ ಲೋನ್ ಒದಗಿಸುತ್ತಿವೆ. ಕೊರೊನಾ ಲಾಕ್ ಡೌನ್ ನಿಂದ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅದರಿಂದ ಹೊರಬರಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ಸಾಲ ಯೋಜನೆ ರೂಪಿಸಿದೆ.

ಉಳಿದ ಅವಧಿಯಲ್ಲಿ, ಅಂದರೆ ಸಾಮಾನ್ಯ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿದ್ದ ಪರ್ಸನಲ್ ಲೋನ್ ಗೂ ಮತ್ತು ಕೊರೊನಾ ಸಂಕಷ್ಟ ಸಮಯದಲ್ಲಿ ತೆಗೆದುಕೊಳ್ಳುವ ಪರ್ಸನಲ್ ಲೋನ್ ಗೂ ಏನಾದರೂ ವ್ಯತ್ಯಾಸ ಇದೆಯಾ ಎಂಬುದು ಬಹುತೇಕರ ಪ್ರಶ್ನೆಯಾಗಿರುತ್ತದೆ. ಅದನ್ನೇ ಈ ಲೇಖನದಲ್ಲಿ ವಿವರಿಸಲಾಗುವುದು.

ಸಾಲ ಪಡೆಯುವುದಕ್ಕೆ ಅರ್ಹತೆ ಏನು?

ಸಾಲ ಪಡೆಯುವುದಕ್ಕೆ ಅರ್ಹತೆ ಏನು?

ಪರ್ಸನಲ್ ಲೋನ್ ಪಡೆಯುವುದಕ್ಕೆ ಸಾಲ ಪಡೆಯುವ ವ್ಯಕ್ತಿಯ ಉದ್ಯೋಗ ಅಥವಾ ವೃತ್ತಿ, ತಿಂಗಳ ಆದಾಯ, ಉದ್ಯೋಗ ಮಾಡುತ್ತಿರುವ ಕಂಪೆನಿ ಯಾವುದು, ಕ್ರೆಡಿಟ್ ಸ್ಕೋರ್ ಮುಂತಾದವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಲವು ಬ್ಯಾಂಕ್ ಗಳು ಮತ್ತು ಎನ್ ಬಿಎಫ್ ಸಿ (ನಾನ್ ಫೈನಾನ್ಷಿಯಲ್ ಬ್ಯಾಂಕಿಂಗ್ ಕಂಪೆನಿ)ಗಳಿಗೆ ಸಾಲ ಪಡೆಯುವವರು ಈಗಾಗಲೇ ಖಾತೆ ಹೊಂದಿರಲೇ ಬೇಕು ಎಂಬ ಕಡ್ಡಾಯ ಇಲ್ಲ. ಜತೆಗೆ ಅಲ್ಲೇ ಸ್ಯಾಲರಿ ಅಕೌಂಟ್ ಇರಬೇಕು ಅಂತಲೂ ಇಲ್ಲ. ಆದರೆ Covid- 19 ಪರ್ಸನಲ್ ಲೋನ್ ಮಾತ್ರ ಸ್ಯಾಲರಿ ಅಕೌಂಟ್ ಅಥವಾ ಪೆನ್ಷನ್ ಖಾತೆ ಇರುವವರಿಗೆ ನೀಡಲಾಗುತ್ತದೆ. ಇದರ ಜತೆಗೆ ಲಾಕ್ ಡೌನ್ ಗೂ ಮುನ್ನ ಖಾತೆದಾರರು ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡಿದ ಇತಿಹಾಸ ಹೊಂದಿರಬೇಕು.

ಎಷ್ಟು ಸಾಲ ಸಿಗುತ್ತದೆ?

ಎಷ್ಟು ಸಾಲ ಸಿಗುತ್ತದೆ?

ಪರ್ಸನಲ್ ಲೋನ್ ಮೊತ್ತವು ಸಾಮಾನ್ಯವಾಗಿ 50 ಸಾವಿರ ರುಪಾಯಿಯಿಂದ 20 ಲಕ್ಷದ ತನಕ ಸಿಗುತ್ತದೆ. ಕೋವಿಡ್- 19 ಸಾಲವನ್ನು ನೀಡುತ್ತಿರುವುದು ಲಾಕ್ ಡೌನ್ ಅವಧಿಯಲ್ಲಿ ಉದ್ಭವಿಸಿರುವ ತಾತ್ಕಾಲಿಕವಾದ ನಗದು ಅಗತ್ಯಗಳು ಪೂರೈಸಿಕೊಳ್ಳಲು ಮಾತ್ರ. ಆ ಕಾರಣಕ್ಕೆ ಸಾಲದ ಮೊತ್ತವು 25,000 ರುಪಾಯಿಯಿಂದ 5 ಲಕ್ಷ ರುಪಾಯಿಯಷ್ಟೇ ಇರುತ್ತದೆ.

ಬಡ್ಡಿ ದರ ಮತ್ತು ಪ್ರೊಸೆಸಿಂಗ್ ಶುಲ್ಕ ಎಷ್ಟಿರುತ್ತದೆ?

ಬಡ್ಡಿ ದರ ಮತ್ತು ಪ್ರೊಸೆಸಿಂಗ್ ಶುಲ್ಕ ಎಷ್ಟಿರುತ್ತದೆ?

ಸಾಮಾನ್ಯವಾಗಿ ಪರ್ಸನಲ್ ಲೋನ್ ಬಡ್ಡಿ ದರವು ವರ್ಷಕ್ಕೆ 9ರಿಂದ 24 ಪರ್ಸೆಂಟ್ ತನಕ ಇರುತ್ತದೆ. ಅದು ನಿರ್ಧಾರ ಆಗುವುದು ಸಾಲ ಪಡೆಯುವವರ ಪ್ರೊಫೈಲ್ ಮೇಲೆ ಆಧಾರಪಟ್ಟಿರುತ್ತದೆ. ಸಾಲದ ಮೊತ್ತದ ಮೇಲೆ 3% ತನಕ ಪ್ರೊಸೆಸಿಂಗ್ ಶುಲ್ಕ ಇರುತ್ತದೆ. ಕೋವಿಡ್- 19 ಪರ್ಸನಲ್ ಲೋನ್ ಅನ್ನು ಈಗಾಗಲೇ ಇರುವ ಗ್ರಾಹಕರಿಗೆ ನೀಡುವುದರಿಂದ ಬಡ್ಡಿ ದರ ಕಡಿಮೆ ಇರುತ್ತದೆ. ವರ್ಷಕ್ಕೆ 7.2 ಪರ್ಸೆಂಟ್ ನಿಂದ 10.5 ಪರ್ಸೆಂಟ್ ತನಕ ಇರುತ್ತದೆ. ಇನ್ನು ಈ ಸಾಲಕ್ಕೆ ಬಹುತೇಕ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಯಾವುದೇ ಪ್ರೊಸೆಸಿಂಗ್ ಶುಲ್ಕ ವಿಧಿಸುತ್ತಿಲ್ಲ.

ಸಾಲ ಮರುಪಾವತಿ ಅವಧಿ ಎಷ್ಟಿರುತ್ತದೆ?

ಸಾಲ ಮರುಪಾವತಿ ಅವಧಿ ಎಷ್ಟಿರುತ್ತದೆ?

ಪರ್ಸನಲ್ ಲೋನ್ ಅವಧಿ ಸಾಮಾನ್ಯವಾಗಿ ಒಂದರಿಂದ ಐದು ವರ್ಷಗಳ ಕಾಲ ಇರುತ್ತದೆ. ಕೆಲವು ಸಂಸ್ಥೆಗಳು ಏಳು ವರ್ಷದ ತನಕ ಅವಕಾಶ ನೀಡುತ್ತವೆ. ಕೋವಿಡ್ -19 ಪರ್ಸನಲ್ ಲೋನ್ ಮರುಪಾವತಿಗೆ 3 ವರ್ಷದ ತನಕ ಸಮಯ ಸಿಗುತ್ತದೆ. ಇನ್ನು ತೀರಾ ಕಡಿಮೆ ಸಂಖ್ಯೆಯ ಸಂಸ್ಥೆಗಳು ಐದು ವರ್ಷದ ತನಕ ಸಮಯ ನೀಡುತ್ತಿವೆ. ನಿರ್ದಿಷ್ಟವಾಗಿ ಕೋವಿಡ್- 19 ಪರ್ಸನಲ್ ಲೋನ್ ಗೆ 3ರಿಂದ 6 ತಿಂಗಳ ವಿನಾಯಿತಿಯನ್ನು ನೀಡಲಾಗುತ್ತಿದೆ. ಈ ವಿನಾಯಿತಿ ಅವಧಿಯಲ್ಲಿ ಸಾಲ ಪಡೆದವರು ಬಡ್ಡಿಯನ್ನಷ್ಟೇ ಪಾವತಿಸಿದರೆ ಸಾಕು.

ಖಾತೆ ಇಲ್ಲದವರು ಏನು ಮಾಡಬೇಕು?

ಖಾತೆ ಇಲ್ಲದವರು ಏನು ಮಾಡಬೇಕು?

ಕೋವಿಡ್- 19 ನಿರ್ದಿಷ್ಟ ಸಾಲ ಯೋಜನೆ ಬ್ಯಾಂಕ್ ಗಳಲ್ಲಿ ಈಗಾಗಲೇ ಖಾತೆ ಇರುವವರು ಹಾಗೂ ಆಯ್ದ ಠೇವಣಿದಾರರಿಗೆ ಅಂತಲೇ ಇದೆ. ಯಾರಿಗೆ ಬ್ಯಾಂಕ್ ನಲ್ಲಿ ಖಾತೆ ಇಲ್ಲವೋ ಅಂಥವರು ಬೇರೆ ಬ್ಯಾಂಕ್ ಗಳು ನೀಡುತ್ತಿರುವ ಇನ್ ಸ್ಟಂಟ್ ಡಿಜಿಟಲ್ ಪರ್ಸನಲ್ ಲೋನ್ ಗೆ ಪ್ರಯತ್ನಿಸಬಹುದು. ಹಲವು ಬ್ಯಾಂಕ್ ಗಳು ಈಗಾಗಲೇ ಖಾತೆ ಹೊಂದಿರುವ ಗ್ರಾಹಕರ ಗುಂಪಿಗೆ ಡಿಜಿಟಲ್ ಪರ್ಸನಲ್ ಲೋನ್ ಒದಗಿಸುತ್ತಿವೆ. ಇನ್ನು ಕ್ರೆಡಿಟ್ ಕಾರ್ಡ್ ದಾರರು ಪ್ರೀ ಅಪ್ರೂವ್ಡ್ ಲೋನ್ ಇದ್ದಲ್ಲಿ ಅದನ್ನು ಪ್ರಯತ್ನಿಸಬಹುದು. ಸಾಮಾನ್ಯವಾಗಿ ಈ ಸಾಲವು ಅರ್ಜಿ ಹಾಕಿಕೊಂಡ ದಿನವೇ ಮಂಜೂರಾಗುತ್ತದೆ. ಆದರೆ ಬಡ್ಡಿ ದರವು ಪರ್ಸನಲ್ ಲೋನ್ ಗಿಂತ ಹೆಚ್ಚಿರುತ್ತದೆ.

ಈಗಾಗಲೇ ಗೃಹ ಸಲ ಪಡೆದವರು ಟಾಪ್ ಅಪ್ ಹೋಮ್ ಲೋನ್ ಗೆ ಅವಕಾಶ ಹೊಂದಿದ್ದಾರೆ. ಆದರೆ ಪ್ರೊಸೆಸಿಂಗ್ ಅವಧಿ ಜಾಸ್ತಿ ಇರುತ್ತದೆ. ಏಕೆಂದರೆ ಹಲವು ಬ್ಯಾಂಕ್ ಗಳಲ್ಲಿ ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಸಂಖ್ಯೆ ಹಾಗೂ ಕೆಲಸ ಮಾಡುವ ಆವಧಿ ಕಡಿಮೆ ಇರುವುದರಿಂದ ಈ ಸಾಲದ ಆಯ್ಕೆ ಪಡೆಯುವುದು ಬಹಳ ಕಷ್ಟ ಇದೆ. ಆದರೆ ಕೆಲವು ಬ್ಯಾಂಕ್ ಗಳು ಬೇಗ ಪ್ರೊಸೆಸ್ ಮಾಡುತ್ತಿಬೆ. ಪರ್ಸನಲ್ ಲೋನ್ ಗಿಂತ ಈ ಟಾಪ್ ಅಪ್ ಲೋನ್ ಗೆ ಬಡ್ಡಿ ಕಡಿಮೆ.

English summary

Covid 19 Personal Loan Availability And Interest Rate Other Details

Here is the details of Covid- 19 loan available in banks and NBFC's. Interest rate, tenure, eligibility and other details.
Story first published: Friday, May 1, 2020, 15:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X