ಪ್ರಸಕ್ತ ಬಹುತೇಕ ಎಲ್ಲ ವಹಿವಾಟಿಗಳನ್ನು ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತದೆ. ಆನ್‌ಲೈನ್‌ನಲ್ಲಿಯೇ ವಸ್ತುಗಳನ್ನು ಖರೀದಿ ಮಾಡಲಾಗುತ್ತದೆ. ಹಾಗೆಯೇ ಹಣಕಾಸಿವ ವರ್ಗಾವಣೆ ಕೂಡಾ ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಜಾಗರೂಕರಾಗಿರುವುದು ಅತೀ ಮುಖ್ಯವಾಗುತ್ತದೆ.
ವಿಶೇಷವಾಗಿ ಆನ್‌ಲೈನ್ ವಹಿವಾಟುಗಳು ಹೆಚ್ಚಾಗುವ ಹಬ್ಬದ ಸೀಸನ್‌ನಲ್ಲಿ ನಾವು ಜಾಗರೂಕರಾಗಿರುವುದು ಅತೀ ಮುಖ್ಯವಾಗುತ್ತದೆ. ಪ್ರಸ್ತುತ ಡಿಜಿಟಲ್ ಸಾಲದ ಹಗರಣಗಳು ಹೆಚ್ಚಾಗಿ ನಡೆಯುತ್ತಿದೆ. ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ..

1. ವಿಶ್ವಾಸಾರ್ಹ ಮೂಲಗಳಿಂದ ಸಾಲವನ್ನು ಪಡೆಯಿರಿ
ಆನ್‌ಲೈನ್ ಮೂಲಕ ಸಾಲ ಪಡೆಯುವಾಗ ವೆಬ್‌ಸೈಟ್‌ಗಳು ಮತ್ತು ರಿಟೇಲ್ ವ್ಯಾಪಾರಿಗಳ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಅತೀ ಮುಖ್ಯವಾಗುತ್ತದೆ. ನಿಮಗೆ ಪರಿಚಯವಿಲ್ಲದ ಆನ್‌ಲೈನ್ ಸ್ಟೋರ್‌ಗಳು ಉತ್ತಮ ಡೀಲ್ ನೀಡಿದೆ ಎಂದಾದರೆ ಅತೀ ಅಧಿಕ ಜಾಗರೂಕರಾಗಿರುವುದು ಮುಖ್ಯ.
ನೀವು ಸಾಲ ಪಡೆಯುವ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ತಿಳಿದಿರುವುದು ಅತೀ ಮುಖ್ಯವಾಗುತ್ತದೆ. ಈ ಆಪ್‌ಗಳು ಅಧಿಕೃತವೇ ಎಂದು ತಿಳಿದಿದ್ದರೆ ಮಾತ್ರ ಈ ಆಪ್‌ನಲ್ಲಿ ಸಾಲವನ್ನು ಪಡೆಯಿರಿ. ಇಲ್ಲವಾದರೆ ಎಂದಿಗೂ ಕೂಡಾ ಇಂತಹ ಆಪ್‌ಗಳನ್ನು ನಂಬಬೇಡಿ. ಯುಎಲ್‌ಆರ್ ಅನ್ನು ಸರಿಯಾಗಿ ಪರಿಶೀಲನೆ ಮಾಡಿ ಎಂದು ಈಜಿಬಸ್‌ನ ಅಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.
2. ಕ್ಯೂಆರ್ ಕೋಡ್ ವಂಚನೆಗಳು
ವಂಚಕರು ನೈಜ ಪಾವತಿ ಕೋಡ್‌ಗಳಂತೆ ಕಾಣುವ ನಕಲಿ ಕ್ಯೂಆರ್ ಕೋಡ್‌ಗಳನ್ನು ಬಳಕೆದಾರರಿಗೆ ಇಮೇಲ್ ಮಾಡುತ್ತಾರೆ. ಜನರು ಈ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಾಗ ಮಾಲ್‌ವೇರ್ ಅನ್ನು ಅವರ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಲಾಗುತ್ತದೆ. ಅದರ ಬಳಿಕವೇ ವಂಚನೆ ನಡೆಯಲಿದೆ. ಆದ್ದರಿಂದ ವಿಶ್ವಾಸಾರ್ಹ ಕ್ಯೂಆರ್ ಕೋಡ್‌ಗಳನ್ನು ಮಾತ್ರ ಸ್ಕ್ಯಾನ್ ಮಾಡಬೇಕು.
3. ಫಿಶಿಂಗ್ ಇಮೇಲ್‌ಗಳ ಬಗ್ಗೆ ಎಚ್ಚರದಿಂದಿರಿ
ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅನುಮಾನಾಸ್ಪದ ಯಾವುದೇ ಇಮೇಲ್‌ಗಳ ಅಟಾಚ್‌ಮೆಂಟ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ವಂಚಕರು ಸಾಮಾನ್ಯವಾಗಿ ವೈಯಕ್ತಿಕ ಮಾಹಿತಿಯನ್ನು ಕದಿಯಲು ಫಿಶಿಂಗ್ ಇಮೇಲ್‌ಗಳನ್ನು ಬಳಸುತ್ತಾರೆ.
4. ಬಲವಾದ ಪಾಸ್‌ವರ್ಡ್‌ಗಳನ್ನು ಬಳಸಿ
ಪ್ರತಿ ಆನ್‌ಲೈನ್ ಖಾತೆಗೆ ಸರಳವಲ್ಲದ, ವಿಶಿಷ್ಟವಾದ ಪಾಸ್‌ವರ್ಡ್‌ಗಳನ್ನು ಹಾಕಿ. "ಅಸುರಕ್ಷಿತ ಚಾನಲ್‌ಗಳ ಮೂಲಕ ನಿಮ್ಮ ಆಧಾರ್, ಪ್ಯಾನ್ ಅಥವಾ ಬ್ಯಾಂಕಿಂಗ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ. ಸುರಕ್ಷಿತ ವೆಬ್‌ಸೈಟ್‌ಗಳು ಮತ್ತು ಅಧಿಕೃತ ಮೊಬೈಲ್ ಅಪ್ಲಿಕೇಶನ್‌ಗಳು ನಿಮ್ಮ ವಹಿವಾಟಿಗೆ ಸುರಕ್ಷಿತವಾಗಿದೆ," ಎಂದು ಬಿಎಲ್‌ಎಸ್ ಇ-ಸೇವೆಗಳ ಅಧ್ಯಕ್ಷ ಶಿಖರ್ ಅಗರ್ವಾಲ್ ಹೇಳಿದ್ದಾರೆ.
5. ನಿಮ್ಮ ಸಾಧನವನ್ನು ಸುರಕ್ಷಿತಗೊಳಿಸಿ
ಸ್ಮಾರ್ಟ್‌ಫೋನ್‌ಗಳು ಮತ್ತು ಕಂಪ್ಯೂಟರ್‌ಗಳು ಸೇರಿದಂತೆ ನಿಮ್ಮ ಸಾಧನಗಳನ್ನು ಇತ್ತೀಚಿನ ಭದ್ರತಾ ಸಾಫ್ಟ್‌ವೇರ್ ಮತ್ತು ಅಪ್‌ಡೇಟ್‌ಗಳೊಂದಿಗೆ ಸುರಕ್ಷಿತಗೊಳಿಸಿ. ವಿಶ್ವಾಸಾರ್ಹ ಆಂಟಿವೈರಸ್ ಸಾಫ್ಟ್‌ವೇರ್‌ಗಳನ್ನು ಮಾತ್ರ ಇನ್‌ಸ್ಟಾಲ್ ಮಾಡಿಕೊಳ್ಳಿ.


Click it and Unblock the Notifications