ಸಾಮಾನ್ಯವಾಗಿ ಪ್ರತಿ ತಿಂಗಳು ಕೂಡಾ ಯಾವುದಾದರೂ ಒಂದು ಹಣಕಾಸು ಕಾರ್ಯವನ್ನು ಮಾಡಲು ಅಂತಿಮ ಗಡುವು ಇರಬಹುದು. ಅದಕ್ಕೂ ಮುಖ್ಯವಾಗಿ ಒಂದು ಹಣಕಾಸು ವರ್ಷದ ಕೊನೆ ಬಂದಾಗ ನಮಗೆ ಹಲವಾರು ಹಣಕಾಸು ಕಾರ್ಯಗಳ ಗಡುವು ಬಂದು ಬಿಡುತ್ತದೆ. ಮಾರ್ಚ್ 31ಕ್ಕೆ ಹಲವಾರು ಹಣಕಾಸು ಕಾರ್ಯಗಳ ಗಡುವು ಮುಗಿದಿದೆ. ಹಾಗೆಯೇ ಈ ಹೊಸ ಹಣಕಾಸು ವರ್ಷಕ್ಕೂ ಮುನ್ನ ನಡೆಸಬೇಕಾದ ಕಾರ್ಯಗಳ ಗಡುವು ಮುಗಿದಿದೆ. ಈ ಗಡುವಿಗೂ ಮುನ್ನ ಹಣಕಾಸು ಕಾರ್ಯವನ್ನು ಮಾಡದಿದ್ದರೆ ದಂಡವನ್ನು ವಿಧಿಸಲಾಗುತ್ತದೆ ಅಥವಾ ನಿಮ್ಮ ದಾಖಲೆಯನ್ನು ನಿಷ್ಕ್ರೀಯಗೊಳಿಸಲಾಗುತ್ತದೆ.
ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡುವುದು, ಡಿಮ್ಯಾಟ್ ಖಾತೆ ಮತ್ತು ಮ್ಯೂಚುವಲ್ ಫಂಡ್‌ಗೆ ನಾಮಿನೇಷನ್ ಅನ್ನು ಸೇರಿಸುವುದು ಸೇರಿದಂತೆ ಹಲವಾರು ಹಣಕಾಸು ಕಾರ್ಯಗಳ ಗಡುವು ಮಾರ್ಚ್ 31, 2023 ಆಗಿತ್ತು. ಆದರೆ ಅದಕ್ಕೆ ಸಂಬಂಧಪಟ್ಟ ಇಲಾಖೆಯು ಈ ಗಡುವನ್ನು ವಿಸ್ತರಣೆ ಮಾಡಿದೆ. ನಿಮಗೆ ಮತ್ತೊಂದು ಅವಕಾಶವನ್ನು ನೀಡಿರುವಾಗ ಅದರ ಸದುಪಯೋಗ ಮಾಡುವುದು ಮುಖ್ಯವಾಗುತ್ತದೆ. ಕೊನೆಯ ಕ್ಷಣದಲ್ಲಿ ಯಾವುದೇ ತೊಂದರೆ ಆಗುವುದನ್ನು ತಡೆಯಲು, ದಂಡವನ್ನು ತಪ್ಪಿಸಲು, ಖಾತೆಯು ನಿಷ್ಕ್ರೀಯವಾಗುವುದನ್ನು ತಪ್ಪಿಸಲು ನೀವು ಈ ಹಣಕಾಸು ಕಾರ್ಯಗಳನ್ನು ಮಾಡಬೇಕಾಗುತ್ತದೆ. ಗಡುವು ವಿಸ್ತರಣೆಯಾದ ಹಣಕಾಸು ಕಾರ್ಯಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಪ್ಯಾನ್ ಆಧಾರ್ ಕಾರ್ಡ್ ಲಿಂಕಿಂಗ್: ಆಧಾರ್ ಕಾರ್ಡ್ ಹಾಗೂ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವ ಕೊನೆಯ ದಿನಾಂಕ ಮಾರ್ಚ್ 31 ಆಗಿತ್ತು, ಆದರೆ ಈ ಗಡುವನ್ನು ಜೂನ್ 30ಕ್ಕೆ ವಿಸ್ತರಣೆ ಮಾಡಲಾಗಿದೆ. ಯಾರು ಈ ಹಿಂದೆ ನೀಡಲಾಗಿದ್ದ ಗಡುವಿನ ಸಂದರ್ಭದಲ್ಲಿ ತಮ್ಮ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಲ್ಲವೋ ಅವರು ಜೂನ್ 30ರವರೆಗೆ ಈ ಎರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ. ನೀವು ಈ ಗಡುವಿಗೂ ಮುನ್ನ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಅದಾದ ಬಳಿಕ ನೀವು ಆಧಾರ್ ಕಾರ್ಡ್, ಇತರೆ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ, 1000 ರೂಪಾಯಿ ದಂಡವನ್ನು ಪಾವತಿಸಿದರೆ ಪ್ಯಾನ್ ಸಕ್ರಿಯವಾಗಲಿದೆ. ಅದು ಕೂಡಾ 30 ದಿನಗಳ ಬಳಿಕ!
ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಗಡುವು ವಿಸ್ತರಣೆ: ಮಾರುಕಟ್ಟೆ ನಿರ್ವಾಹಕ ಸಂಸ್ಥೆಯಾದ ಸೆಬಿ ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಗಡುವನ್ನು ವಿಸ್ತರಣೆ ಮಾಡಿದೆ. ಹಲವಾರು ಹೂಡಿಕೆದಾರರು ಖಾತೆಗೆ ನಾಮಿನಿ ಸೇರ್ಪಡೆ ಮಾಡದ ಕಾರಣ ಹೂಡಿಕೆದಾರರಿಗೆ ಮತ್ತೊಂದು ಅವಕಾಶವನ್ನು ನೀಡಲಾಗಿದೆ. ಪ್ರಸ್ತುತ ನಾಮಿನಿ ಸೇರ್ಪಡೆಗೆ ಸೆಪ್ಟೆಂಬರ್ 30, 2023ರವರೆಗೆ ಅವಕಾಶವಿದೆ.
ನಾಮಿನಿ ಸೇರ್ಪಡೆ ಮಾಡುವುದು ಹೇಗೆ?
ಹಂತ 1: ಡಿಮ್ಯಾಟ್ ಖಾತೆಯನ್ನು ತೆರೆಯಿರಿ
ಹಂತ 2: Profile Segmentಗೆ ಹೋಗಿ
ಹಂತ 3: ಡಿಮ್ಯಾಟ್ ಖಾತೆಗೆ ಲಾಗಿನ್ ಆಗಿ My Nominees ಮೇಲೆ ಕ್ಲಿಕ್ ಮಾಡಿ
ಹಂತ 4: Opt-out ಅಥವಾ Add Nominee ಮೇಲೆ ಕ್ಲಿಕ್ ಮಾಡಿ
ಹಂತ 5: ಎಲ್ಲ ಮಾಹಿತಿಯನ್ನು ನಮೂದಿಸಿ, ನಮೂನಿದಾರರ ಐಡಿ (ಗುರುತಿನ ಪುರಾವೆ) ಸಬ್‌ಮಿಟ್ ಮಾಡಿ
ಹಂತ 6: ನಾಮಿನಿಯ ಷೇರನ್ನು ಶೇಕಡವಾರು ಲೆಕ್ಕಾಚಾರದಲ್ಲಿ ಉಲ್ಲೇಖಿಸಿ
ಹಂತ 7: ಆಧಾರ್ ಒಟಿಪಿಯನ್ನು ಬಳಸಿಕೊಂಡು ಇ-ಸಹಿ ಮಾಡಿಕೊಳ್ಳಿ, ಅದಾದ ಬಳಿಕ ನಾಮಿನಿ ಮಾಹಿತಿ ನಮೂದಿಯಾಗಲಿದೆ.
ಮ್ಯೂಚುವಲ್ ಫಂಡ್ ನಾಮಿನೇಷನ್ ಗಡುವು ವಿಸ್ತರಣೆ: ಮ್ಯೂಚುವಲ್ ಫಂಡ್‌ಗೆ ನಾಮಿನೇಷನ್ ಸಲ್ಲಿಕೆ ಮಾಡಲು ಅಥವಾ ನಾಮಿನೇಷನ್ ಸಲ್ಲಿಸದಿರಲು ನಿರ್ಧಾರ ಮಾಡಲು ನೀಡಿರುವ ಗಡುವನ್ನು ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮಂಗಳವಾರ ವಿಸ್ತರಣೆಡ ಮಾಡಿದೆ. ಈ ಹಿಂದಿನ ಗಡುವುದು ಮಾರ್ಚ್ 31 ಆಗಿತ್ತು ಆದರೆ ನೂತನ ಗಡುವು ಸೆಪ್ಟೆಂಬರ್ 30 ಆಗಿದೆ.
ನಾಮಿನೇಷನ್ ಸಲ್ಲಿಸುವುದು ಹೇಗೆ?: ಡಿಎಸ್‌ಪಿ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಖಾತೆಯನ್ನು ತೆರೆಯಿರಿ. Foliosಗೆ ಹೋಗಿ Add nominee ಮೇಲೆ ಕ್ಲಿಕ್ ಮಾಡಿ ನಾಮಿನಿದಾರರ ಮಾಹಿತಿಯನ್ನು ಉಲ್ಲೇಖ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ. ನೀವು ಫಾರ್ಮ್ ಅನ್ನು ಭರ್ತಿ ಮಾಡಿ ಹತ್ತಿರದ ಬ್ರ್ಯಾಂಚ್‌ಗೆ ಭೇಟಿ ನೀಡಿದರೂ ಆಗುತ್ತದೆ. ಝ ಫಾರ್ಮ್‌ನಲ್ಲಿ ನಾಮಿನಿದಾರರ ಸಹಿ ಮುಖ್ಯವಾಗುತ್ತದೆ.


Click it and Unblock the Notifications