ಕೇಂದ್ರ ಸರ್ಕಾರವು ಮತ್ತೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ವಿಸ್ತರಣೆ ಮಾಡಿದೆ. ಪ್ರಸ್ತುತ ಎಲ್ಲ ಪ್ರಮುಖ ದಾಖಲೆಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಸರ್ಕಾರವು ಕಡ್ಡಾಯಗೊಳಿಸುತ್ತಿದೆ. ಆಧಾರ್ ಲಿಂಕ್ ಮಾಡದಿದ್ದರೆ ದಾಖಲೆಗಳು ನಿಷ್ಕ್ರೀಯವಾಗಲಿದೆ ಎಂದು ವರದಿಯು ಆಗಿದೆ. ಇನ್ನು ನಮ್ಮ ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡಾ ಒಂದಾಗಿದೆ.
ಸರ್ಕಾರದಿಂದ ಸಬ್ಸಿಡಿ ಆಧಾರಿತವಾಗಿ ಅಕ್ಕಿ, ಧಾನ್ಯ, ಸೀಮೆ ಎಣ್ಣೆಯನ್ನು ರೇಷನ್ ಕಾರ್ಡ್ ಮೂಲಕ ಪಡೆಯಲು ಸಾಧ್ಯವಾಗುತ್ತದೆ. ಸುಮಾರು ಐದು ದಶಕಗಳ ಹಿಂದೆಯೇ ಈ ರೇಷನ್ ಕಾರ್ಡ್ ಅನ್ನು ಅಂದಿನ ಸರ್ಕಾರವು ಪರಿಚಯಿಸಿದೆ. ಈಗ ರೇಷನ್ ಕಾರ್ಡ್‌ಗೆ ನೀವು ಆಧಾರ್ ಲಿಂಕ್ ಮಾಡಬೇಕಾಗಿದೆ. ಹಲವು ದಶಕಗಳ ಹಿಂದೆ ಪರಿಚಯಿಸಲ್ಪಟ್ಟ ರೇಷನ್ ಕಾರ್ಡ್ ಇಂದಿಗೂ ಕೂಡಾ ಅತೀ ಪ್ರಮುಖವಾದ ದಾಖಲೆಯಾಗಿದೆ.

ರೇಷನ್ ಕಾರ್ಡ್ ಮೂಲಕ ನಾವು ಅಗತ್ಯ ಆಹಾರ ಧಾನ್ಯಗಳನ್ನು ಕಡಿಮೆ ದರದಲ್ಲಿ ಪಡೆಯಲು ಸಾಧ್ಯವಾಗುವುದು ಮಾತ್ರವಲ್ಲದೆ, ಇದು ನಾವು ಭಾರತ ದೇಶದ ಪ್ರಜೆ ಎಂಬುವುದಕ್ಕೆ ಸಾಕ್ಷಿ ಕೂಡಾ ಹೌದು. ಈಗ ಕೇಂದ್ರ ಸರ್ಕಾರವು ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಗಡುವನ್ನು ವಿಸ್ತರಣೆ ಮಾಡಿದೆ. ಈ ಹಿಂದೆ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಜೂನ್ 30, 2023ರವರೆಗೆ ಸಮಯವಿತ್ತು, ಅದನ್ನು ಈಗ ಕೇಂದ್ರ ಸರ್ಕಾರವು ಸೆಪ್ಟೆಂಬರ್ 30, 2023ರವರೆಗೆ ವಿಸ್ತರಣೆ ಮಾಡಿದೆ.
ಈ ಬಗ್ಗೆ ಶುಕ್ರವಾರ ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ. ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದರಿಂದಾಗಿ ನಕಲಿ ರೇಷನ್ ಕಾರ್ಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಮಧ್ಯಸ್ಥರ ಕಾಟವು ಇರುವುದಿಲ್ಲ. ಸರ್ಕಾರ ನೀಡುವ ಪ್ರಯೋಜನವನ್ನು ಸರಿಯಾದ ಫಲದಾಯಕರು ಪಡೆಯಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿಕೊಂಡಿದೆ.
ರೇಷನ್ - ಆಧಾರ್ ಲಿಂಕಿಂಗ್ ಪ್ರಯೋಜನಗಳು
ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಜೊತೆ ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆಯೂ ಸರ್ಕಾರ ಈ ಹಿಂದೆಯೇ ಮಾಹಿತಿ ನೀಡಿದೆ. ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದ ಬಳಿಕ ಯಾವುದೇ ಕುಟುಂಬವು ಒಂದಕ್ಕಿಂತ ಅಧಿಕ ರೇಷನ್ ಕಾರ್ಡ್ ಅನ್ನು ಹೊಂದಲು ಸಾಧ್ಯವಾಗುವುದಿಲ್ಲ. ಹಾಗೆಯೇ ವಂಚನೆಯ ಪ್ರಕರಣಗಳನ್ನು ಕೂಡಾ ತಡೆಯಲು ಸಾಧ್ಯವಾಗುತ್ತದೆ. ಬಯೋಮೆಟ್ರಿಕ್ ಆಧಾರಿತ ವಿತರಣಾ ವ್ಯವಸ್ಥೆಯು ಆ ಮನೆಯವರಿಗೆ ಮಾತ್ರ ರೇಷನ್ ಪಡೆಯಲು ಸಾಧ್ಯವಾಗುವಂತೆ ಮಾಡುತ್ತದೆ. ಇದರಿಂದ ವಂಚನೆ ತಪ್ಪುತ್ತದೆ. ಪಡಿತರ ಅಂಗಡಿಗಳಲ್ಲಿ ನಡೆಯುವ ಭ್ರಷ್ಟಾಚಾರ ನಡೆಯುವುದನ್ನು ತಡೆಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.
ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಬೇಕಾದ ದಾಖಲೆಗಳು: ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಕುಟುಂಬದ ಯಜಮಾನರ ಅಥವಾ ಮುಖ್ಯಸ್ಥರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್‌ನ ಪಾಸ್‌ಬುಕ್, ಪಾಸ್‌ಪೋರ್ಟ್ ಗಾತ್ರದ ಫೋಟೊ ಬೇಕಾಗುತ್ತದೆ
ರೇಷನ್ ಕಾರ್ಡ್‌ಗೆ ಆಧಾರ್ ಆನ್‌ಲೈನ್ ಲಿಂಕ್ ಮಾಡುವುದು ಹೇಗೆ?
ಹಂತ 1: ರಾಜ್ಯದ ಪಿಡಿಎಸ್ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ಹಂತ 3: ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ಹಂತ 4: ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಹಂತ 5: ಎಲ್ಲ ಮಾಹಿತಿ ಹಾಕಿದ ಬಳಿಕ submit ಮೇಲೆ ಕ್ಲಿಕ್ ಮಾಡಿ
ಹಂತ 6: ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ
ಹಂತ 7: ಒಟಿಪಿಯನ್ನು ನಮೂದಿಸಿ, ಇದಾದ ಬಳಿಕ ನಿಮ್ಮ ಪ್ರಕ್ರಿಯೆ ಪೂರ್ಣವಾದ ಬಗ್ಗೆ ಎಸ್‌ಎಂಎಸ್ ಬರಲಿದೆ
ಆಫ್‌ಲೈನ್ ಲಿಂಕ್ ಮಾಡುವುದು ಹೇಗೆ?
ಹಂತ 1: ಎಲ್ಲ ಅಗತ್ಯ ದಾಖಲೆಗಳ ಪ್ರತಿಯನ್ನು ಇಟ್ಟುಕೊಳ್ಳಿ, ಒರಿಜಿನಲ್ ದಾಖಲೆ ಕೂಡಾ ಇರಲಿ
ಹಂತ 2: ಎಲ್ಲ ದಾಖಲೆಯೊಂದಿಗೆ ರೇಷನ್ ಅಂಗಡಿ ಅಥವಾ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಸೆಂಟರ್ (ಪಿಡಿಎಸ್) ಗೆ ಭೇಟಿ ನೀಡಿ
ಹಂತ 3: ಪಿಡಿಎಸ್ ಅಥವಾ ರೇಷನ್ ಅಂಗಡಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ
ಹಂತ 4: ಫಿಂಗರ್‌ಪ್ರಿಟ್ ಅಥೆಂಟಿಫಿಕೇಷನ್ ಮೂಲಕ ಆಧಾರ್ ಪರಿಶೀಲಿಸಲಾಗುತ್ತದೆ.
ಹಂತ 5: ಈ ಪ್ರಕ್ರಿಯೆ ಮುಗಿದ ಬಳಿಕ ದಾಖಲೆ ಸಲ್ಲಿಸಿದ ಬಗ್ಗೆ ನಿಮಗೆ ಎಸ್‌ಎಂಎಸ್ ಲಭ್ಯವಾಗಲಿದೆ.
ಹಂತ 6: ಅದಾದ ಬಳಿಕ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಆದ ಬಗ್ಗೆ ಎಸ್‌ಎಂಎಸ್ ಬರಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications