ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡುವ ಗಡುವು ಡಿಸೆಂಬರ್ 14, 2023 ರಂದು ಕೊನೆಗೊಳ್ಳಲಿದೆ. ಇಲ್ಲಿಯವರೆಗೆ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡದೇ ಇರುವವರು ಆದಷ್ಟು ಬೇಗ ಮಾಡಿಕೊಂಡರೆ ಉಚಿತವಾಗಿಯೇ ಮಾಡಿಕೊಳ್ಳಬಹುದಾಗಿದೆ.
ಸೆಪ್ಟೆಂಬರ್ 2023 ರಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಉಚಿತವಾಗಿ ಆಧಾರ್ ಅಪ್‌ಡೇಟ್ ಸೇವೆಯ ಅವಧಿಯನ್ನು ಈ ಹಿಂದೆ ವಿಸ್ತರಣೆ ಮಾಡಿದೆ. ಅಂದರೆ ಸೆಪ್ಟೆಂಬರ್ 14 ರಿಂದ ಡಿಸೆಂಬರ್ 14, 2023 ರವರೆಗೆ ಮೂರು ತಿಂಗಳುಗಳ ಹೆಚ್ಚುವರಿ ಅವಕಾಶವನ್ನು ಯುಐಡಿಎಐ ನೀಡಿದೆ.

ಈ ಉಚಿತ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ. ಅಪ್‌ಡೇಟ್‌ಗಳನ್ನು ಮಾಡಲು ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಿದರೆ, ನೀವು ಸೇವೆಗಾಗಿ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಯುಐಡಿಎಐ ಏನು ಹೇಳುತ್ತದೆ?
"ಜನರ ಪಾಸಿಟಿವ್ ಪ್ರತಿಕ್ರಿಯೆಯ ಆಧಾರದ ಮೇಲೆ, ಸೌಲಭ್ಯವನ್ನು ಇನ್ನೂ ಮೂರು ತಿಂಗಳವರೆಗೆ ಅಂದರೆ 15.09.2023 ರಿಂದ 14.12.2023 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅದರಂತೆ, ಡಾಕ್ಯುಮೆಂಟ್ ನವೀಕರಣದ ಸೌಲಭ್ಯವು 14.12.2023 ರವರೆಗೆ ಮೈಆಧಾರ್ ಪೋರ್ಟಲ್ ಮೂಲಕ ಉಚಿತವಾಗಿ ಮಾಡಿಕೊಳ್ಳಬಹುದು," ಎಂದು ಈ ಹಿಂದೆ ಯುಐಡಿಎಐ ಹೇಳಿದೆ.
ಯುಐಡಿಎಐ ಈಗ ಎಲ್ಲಾ ಬಳಕೆದಾರರಿಗೆ ವಿಶೇಷವಾಗಿ ಆಧಾರ್ ಒಂದು ದಶಕ ಹಳೆಯದಾಗಿದ್ದರೆ ಮತ್ತು ಅಪ್‌ಡೇಟ್ ಮಾಡದೇ ಇರುವವರಿಗೆ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವಂತೆ ತಿಳಿಸಿದೆ. ಹೆಸರು, ಹುಟ್ಟಿದ ದಿನಾಂಕ ಅಥವಾ ವಿಳಾಸದಂತಹ ಜನಸಂಖ್ಯಾ ವಿವರಗಳಲ್ಲಿ ಬದಲಾವಣೆಗಳನ್ನು ಮಾಡಲು ಬಳಕೆದಾರರು ಆನ್‌ಲೈನ್ ಸೇವೆ ಬಳಸಿಕೊಳ್ಳಬಹುದು ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು.
ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡುವುದು ಹೇಗೆ?
ಇದಕ್ಕಾಗಿ, ನೀವು ಮೊದಲು ಅಧಿಕೃತ ವೆಬ್‌ಸೈಟ್ https://myaadhaar.uidai.gov.in/ ಗೆ ಭೇಟಿ ನೀಡಬೇಕು. ಇದರ ನಂತರ, ನೀವು ವಿಳಾಸವನ್ನು ನವೀಕರಿಸಲು ಬಯಸಿದರೆ, ಇದಕ್ಕಾಗಿ ನೀವು ನವೀಕರಣ ವಿಳಾಸದ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರ ನಂತರ, ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಅನ್ನು ನಮೂದಿಸಿ ಮತ್ತು ನಂತರ ಮುಂದುವರಿಯಿರಿ.
ಇದರ ನಂತರ, ನೀವು update document ಅನ್ನು ಕಲ್ಇಕ್ ಮಾಡಬೇಕು. ಇದರ ನಂತರ, ನಿವಾಸಿಗಳ ಪ್ರಸ್ತುತ ಮಾಹಿತಿ ಬಹಿರಂಗಗೊಳ್ಳಲಿದೆ. ನೀವು ಈ ವಿವರಗಳನ್ನು ಪರಿಶೀಲಿಸಬೇಕು. ಇದರ ನಂತರ, ನೀವು ವಿಳಾಸ ಪುರಾವೆಯ ವಿಳಾಸ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕು. ಇದರ ನಂತರ, ಅಂತಿಮವಾಗಿ, ನಿಮ್ಮ ಆಧಾರ್ ಕಾರ್ಡ್‌ನ ಅಪ್‌ಡೇಟ್ ಮಾಡಲಾಗುತ್ತದೆ.
ಆಧಾರ್ ಕಾರ್ಡ್ ಅಪ್‌ಡೇಟ್ ಏಕೆ ಕಡ್ಡಾಯ?
ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ವಿವರಗಳನ್ನು ನವೀಕರಿಸುವುದನ್ನು ಯುಐಡಿಎಐ ಕಡ್ಡಾಯಗೊಳಿಸಿದೆ. ಆಧಾರ್ ವಂಚನೆ ಮತ್ತು ಇತರ ಅಪರಾಧಗಳನ್ನು ಎದುರಿಸಲು ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಕೇಂದ್ರವು ಯಾವಾಗಲೂ ಬಳಕೆದಾರರನ್ನು ಪ್ರೋತ್ಸಾಹಿಸುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications