ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಭಾರತದಲ್ಲಿ ಪರಸ್ಪರ ಶುಭಾಶಯ ಕೋರುತ್ತಾ, ಉತ್ಸಾಹದಿಂದ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಈ ನಡುವೆ ಸ್ನೇಹಿತರು, ಸಂಬಂಧಿಕರು ಮತ್ತು ನಾವು ಉದ್ಯೋಗ ಮಾಡುವ ಸಂಸ್ಥೆಯಿಂದ ಉಡುಗೊರೆಗಳನ್ನು ಸ್ವೀಕರಿಸುವ ಅವಧಿ ಕೂಡಾ ಇದಾಗಿದೆ. ಆದರೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಉಡುಗೊರೆಗಳು ತೆರಿಗೆ ಮುಕ್ತವಾಗಿರುತ್ತದೆಯೇ?.
ಉಡುಗೊರೆಗಳು ಅಗತ್ಯವಾಗಿ ತೆರಿಗೆ ಮುಕ್ತವಾಗಿರುವುದಿಲ್ಲ. ಉಡುಗೊರೆಯ ಮೌಲ್ಯ ಮತ್ತು ವ್ಯಕ್ತಿಯೊಂದಿಗಿನ ಸಂಪರ್ಕವನ್ನು ಅವಲಂಬಿಸಿ ತೆರಿಗೆ ಪರಿಣಾಮಗಳನ್ನು ಹೊಂದಿರಬಹುದು. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 56(2) ಉಡುಗೊರೆಗಳ ತೆರಿಗೆಗೆ ಹಲವಾರು ನಿಯಮಗಳನ್ನು ರೂಪಿಸುತ್ತದೆ. ಯಾವ ಸಂದರ್ಭಗಳಲ್ಲಿ ಅವುಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಂಬುವುದನ್ನು ಕೂಡಾ ಇದು ಉಲ್ಲೇಖಿಸುತ್ತದೆ.

ಸ್ನೇಹಿತರ ಉಡುಗೊರೆಗಳಿಗೆ ತೆರಿಗೆ ವಿಧಿಸಬಹುದೇ?
ಸ್ನೇಹಿತರಿಂದ ಸ್ವೀಕರಿಸುವ ಉಡುಗೊರೆಗಳನ್ನು "ಇತರ ಮೂಲಗಳಿಂದ ಆದಾಯ" ಅಡಿಯಲ್ಲಿ ವರ್ಗೀಕರಿಸಲಾಗುತ್ತದೆ. ಪರಿಣಾಮವಾಗಿ, ತೆರಿಗೆಯನ್ನು ಲೆಕ್ಕಾಚಾರ ಮಾಡುವಾಗ ಅದರ ಮೌಲ್ಯವನ್ನು ಆದಾಯಕ್ಕೆ ಸೇರಿಸಬೇಕಾಗುತ್ತದೆ. ಆದರೆ ಸ್ವೀಕರಿಸಿದ ಉಡುಗೊರೆಯು 50,000 ರೂಪಾಯಿಗಿಂತ ಹೆಚ್ಚಿನ ಮೊತ್ತದ್ದಾಗಿದ್ದರೆ, ಮಾತ್ರ ಈ ನಿಯಮವು ಜಾರಿಗೆ ಬರುತ್ತದೆ.
ಉಡುಗೊರೆ ಮೊತ್ತವು 50,000 ರೂಪಾಯಿಗಿಂತ ಕಡಿಮೆಯಿದ್ದರೆ, ಅದು ಯಾವುದೇ ತೆರಿಗೆಗೆ ಒಳಪಡುವುದಿಲ್ಲ. ಹಬ್ಬದ ಅವಧಿಯು ಭಾರತದಲ್ಲಿ ಮದುವೆಯ ಸೀಸನ್‌ಗೂ ಕಾರಣವಾಗುತ್ತದೆ. ಮದುವೆಯ ಸಂದರ್ಭದಲ್ಲಿ ಸ್ನೇಹಿತರಿಂದ ಪಡೆದ ಉಡುಗೊರೆಗಳು ಯಾವುದೇ ತೆರಿಗೆಗೆ ಒಳಪಡುವುದಿಲ್ಲ ಎಂಬುವುದು ಗಮನಿಸಬೇಕಾದ ಸಂಗತಿ.
ಉದ್ಯೋಗ ಮಾಡುವ ಸಂಸ್ಥೆಯಿಂದ ಪಡೆದ ಉಡುಗೊರೆ ತೆರಿಗೆ ಮುಕ್ತವೇ?
ಉದ್ಯೋಗ ಮಾಡುವ ಸಂಸ್ಥೆಯಿಂದ ಪಡೆದ ಉಡುಗೊರೆಗಳು ಹಣಕಾಸಿನ ವರ್ಷದಲ್ಲಿ 5 ಸಾವಿರ ರೂಪಾಯಿಯನ್ನು ದಾಟದಿದ್ದರೆ ಮಾತ್ರ ಅದು ತೆರಿಗೆ ಮುಕ್ತವಾಗಿರುತ್ತದೆ. ಉದಾಹರಣೆಗೆ, ನೀವು ಆರ್ಥಿಕ ವರ್ಷದಲ್ಲಿ ಉದ್ಯೋಗ ಮಾಡುವ ಸಂಸ್ಥೆಯಿಂದ ಮೂರು ಉಡುಗೊರೆಗಳನ್ನು ಸ್ವೀಕರಿಸಿದ್ದರೆ, ಪ್ರತಿಯೊಂದೂ 2000 ರೂಪಾಯಿ ಮೌಲ್ಯದ್ದಾಗಿದ್ದರೆ, ಒಟ್ಟು ಉಡುಗೊರೆ ಮೊತ್ತವು ಆರು ಸಾವಿರ ರೂಪಾಯಿ ಎಂದು ಲೆಕ್ಕ ಹಾಕಲಾಗುತ್ತದೆ.
ಆದ್ದರಿಂದಾಗಿ ಆ ಮೊತ್ತ ತೆರಿಗೆಗೆ ಒಳಪಡುತ್ತದೆ. ತೆರಿಗೆ ದಾಖಲೆಗಳಲ್ಲಿನ ಮೊತ್ತವು "ಪೂರ್ವಾಪೇಕ್ಷಿತ" ಅಡಿಯಲ್ಲಿ ಬರುತ್ತದೆ. ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ. ಉದ್ಯೋಗ ಮಾಡುವ ಸಂಸ್ಥೆಯಿಂದ ಸ್ವೀಕರಿಸಿದ ಉಡುಗೊರೆಗಳು 5,000 ರೂಪಾಯಿಗಿಂತ ಕಡಿಮೆ ಮೌಲ್ಯದ್ದಾಗಿದ್ದರೆ, ಅದರ ಮೇಲೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ.
ಸಂಬಂಧಿಕರಿಂದ ಉಡುಗೊರೆ ಸ್ವೀಕರಿಸಿದರೆ?
ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ಹೇಳಿರುವಂತೆ ವ್ಯಕ್ತಿಯು 'ಸಂಬಂಧಿಕರ' ವ್ಯಾಖ್ಯಾನದ ಅಡಿಯಲ್ಲಿ ಬಂದರೆ ಮಾತ್ರ ಅಂತಹ ಉಡುಗೊರೆಗಳು ತೆರಿಗೆ ಮುಕ್ತವಾಗಿರುತ್ತವೆ. ಕಾನೂನಿನ ಪ್ರಕಾರ, ಸಂಬಂಧಿ ಎಂದರೆ ವ್ಯಕ್ತಿಯ ಸಂಗಾತಿ, ವ್ಯಕ್ತಿಯ ಸಹೋದರ ಅಥವಾ ಸಹೋದರಿ, ವ್ಯಕ್ತಿಯ ಸಂಗಾತಿಯ ಸಹೋದರ ಅಥವಾ ಸಹೋದರಿ, ವ್ಯಕ್ತಿಯ ಪೋಷಕರಲ್ಲಿ ಒಬ್ಬರ ಸಹೋದರ ಅಥವಾ ಸಹೋದರಿ ಆಗಿರುತ್ತಾರೆ. ಆದರೆ ಉಡುಗೊರೆ ಮೊತ್ತ 50,000 ರೂಪಾಯಿ ಮೀರಿದರೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications