ಈ ವಾರ ಚಿನ್ನದ ಬೆಲೆಯು ಇಳಿಕೆಯಾಗಿದೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ವೆಬ್‌ಸೈಟ್ ಪ್ರಕಾರ, ಬುಲಿಯನ್ ಮಾರುಕಟ್ಟೆಯಲ್ಲಿ, ಈ ವಾರದ ಆರಂಭದಲ್ಲಿ, ಅಂದರೆ, ಸೆಪ್ಟೆಂಬರ್ 18 ರಂದು, ಚಿನ್ನವು 59,320 ರೂಪಾಯಿ ಆಗಿತ್ತು.
ಈ ವಾರದಲ್ಲಿ ಬಹುತೇಕ ಬಂಗಾರ ಬೆಲೆಯು ಇಳಿಕೆ ಕಾಣುತ್ತಾ ಬಂದಿದೆ. ಸೆಪ್ಟೆಂಬರ್ 23 ರಂದು ಕೂಡಾ ಬಂಗಾರ ಬೆಲೆಯು ಕುಸಿತವಾಗಿದೆ. 10 ಗ್ರಾಂಗೆ ಚಿನ್ನದ ಬೆಲೆಯು 59,134 ರೂಪಾಯಿ ಆಗಿದೆ. ಈ ವಾರದಲ್ಲಿ ಬೆಲೆ 186 ರೂಪಾಯಿಗಳಷ್ಟು ಕುಸಿದಿದೆ. ಇಲ್ಲಿದೆ ವಿವರ. ಮುಂದೆ ಓದಿ....

ಬೆಳ್ಳಿ ಬೆಲೆ ಏರಿಕೆ
ಐಬಿಜೆಎ ವೆಬ್‌ಸೈಟ್ ಪ್ರಕಾರ, ಬೆಳ್ಳಿಯ ಬೆಲೆ ಈ ವಾರ ಸಾವಿರ ರೂಪಾಯಿಗಳಿಗಿಂತ ಹೆಚ್ಚು ಏರಿಕೆಯಾಗಿದೆ. ಈ ವಾರದ ಆರಂಭದಲ್ಲಿ 72,115 ರೂಪಾಯಿಗಳಷ್ಟಿದ್ದು, ಇದೀಗ ಪ್ರತಿ ಕೆಜಿಗೆ 73,175 ರೂಪಾಯಿಗೆ ತಲುಪಿದೆ. ಅಂದರೆ ಈ ವಾರ ಅದರ ಬೆಲೆ 1,060 ರೂಪಾಯಿಗಳಷ್ಟು ಹೆಚ್ಚಾಗಿದೆ.
ಮುಂಬರುವ ದಿನಗಳಲ್ಲಿ ಬೆಲೆ ಹೆಚ್ಚಳ
ತಜ್ಞರ ಪ್ರಕಾರ ಹಬ್ಬ ಹರಿದಿನಗಳಲ್ಲಿ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚುತ್ತದೆ. ಇದರಿಂದಾಗಿ ದೀಪಾವಳಿ ವೇಳೆಗೆ ಪ್ರತಿ 10 ಗ್ರಾಂ ಚಿನ್ನ 62,000 ರೂಪಾಯಿಗೆ ಏರಿಕೆಯಾಗಬಹುದು. ಬೆಳ್ಳಿ ಕೆಜಿಗೆ 78-80 ಸಾವಿರ ರೂಪಾಯಿಗೆ ಜಿಗಿತವಾಗಿದೆ. 2023 ರ ಅಂತ್ಯದ ವೇಳೆಗೆ ಚಿನ್ನ 65,000 ರೂಪಾಯಿ ಮತ್ತು ಬೆಳ್ಳಿ 90,000 ರೂಪಾಯಿ ತಲುಪುವ ಸಾಧ್ಯತೆಯಿದೆ.
ಆಗಸ್ಟ್‌ನಲ್ಲಿ ಗೋಲ್ಡ್ ಇಟಿಎಫ್ ಹೂಡಿಕೆ ದಾಖಲೆ
ಗೋಲ್ಡ್ ಇಟಿಎಫ್‌ನಲ್ಲಿ (ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್) ಕಳೆದ ತಿಂಗಳು ಅಂದರೆ ಆಗಸ್ಟ್‌ನಲ್ಲಿ 1,028 ಕೋಟಿ ರೂಪಾಯಿ ಹೂಡಿಕೆಯಾಗಿತ್ತು. ಇದು ಗೋಲ್ಡ್ ಇಟಿಎಫ್‌ನಲ್ಲಿ 16 ತಿಂಗಳ ದಾಖಲೆಯ ಹೂಡಿಕೆಯಾಗಿದೆ. ಇದಕ್ಕೂ ಮುನ್ನ ಏಪ್ರಿಲ್ 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕಾರಣ 1,100 ಕೋಟಿ ರೂಪಾಯಿ ಹೂಡಿಕೆಯಾಗಿತ್ತು. ಈ ವರ್ಷ, ಅಮೆರಿಕದಲ್ಲಿ ಬಡ್ಡಿದರಗಳ ನಿರಂತರ ಹೆಚ್ಚಳದಿಂದಾಗಿ ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಹೆಚ್ಚಾಗಿದೆ.
ಇಂದು ಚಿನ್ನದ ಬೆಲೆ ಎಷ್ಟಿದೆ?
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 54,950 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,950 ರೂಪಾಯಿ (+110 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 54,650 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,950 ರೂಪಾಯಿ (+110 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,100 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,100 ರೂಪಾಯಿ (+160 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 54,950 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,950 ರೂಪಾಯಿ (+110 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 54,950 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,950 ರೂಪಾಯಿ (+110 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 54,950 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,950 ರೂಪಾಯಿ (+110 ರೂಪಾಯಿ)

Click it and Unblock the Notifications