ಬೆಂಗಳೂರು, ಆಗಸ್ಟ್ 2: ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ಒಂದಿಷ್ಟು ತಿಳಿವಳಿಕೆ ಪ್ರತಿಯೊಬ್ಬರಿಗೂ ಇರಬೇಕು. ಸಾಂಪ್ರದಾಯಿಕ ಹೂಡಿಕೆ ಎಫ್ ಡಿ, ಪೋಸ್ಟ್ ಆಫೀಸ್ ಸ್ಕೀಮ್ ಗಿಂತ ಮ್ಯೂಚುವಲ್ ಫಂಡ್ ಸಾಮಾನ್ಯವಾಗಿ ಹೆಚ್ಚಿನ ಲಾಭ ತಂದುಕೊಡುತ್ತವೆ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಸ್ಟಾಕ್ ಮಾರ್ಕೆಟ್ ನಷ್ಟು ರಿಸ್ಕ್ ಇಲ್ಲಿ ಇರುವುದಿಲ್ಲ.
ಶಾರ್ಟ್ ಟರ್ಮ್-ಲಾಂಗ್ ಟರ್ಮ್:
ಮ್ಯೂಚುಯಲ್ ಫಂಡ್‌ಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವುದು ಲಾಭದಾಯಕ ಎಂದು ಹಣಕಾಸು ಪರಿಣಿತರು ಹೇಳುವುದನ್ನು ಕೇಳಿರುತ್ತೇve ಆದರೆ ಜನರಿಗೆ, ಹೂಡಿಕೆದಾರರಿಗೆ ಈ ದೀರ್ಘಾವಧಿ ಮತ್ತು ಅಲ್ಪಾವಧಿ ಎಂದರೇನು ಎನ್ನುವ ಗೊಂದಲ ಇದ್ದೇ ಇರುತ್ತದೆ. ಈಕ್ವಿಟಿ, ಡೆಟ್, ಹಾಗೂ ಹೈಬ್ರಿಡ್ ಫಂಡ್‌ಗಳಂತಹ ಅನೇಕ ವರ್ಗಗಳ ವಿವಿಧ ಮ್ಯೂಚುಯಲ್ ಫಂಡ್ ಸ್ಕೀಮ್‌ಗಳಿವೆ. ಇವುಗಳಲ್ಲಿ ಲಾರ್ಜ್-ಕ್ಯಾಪ್, ಸ್ಮಾಲ್-ಕ್ಯಾಪ್, ಇಂಡೆಕ್ಸ್, ಅಲ್ಪಾವಧಿ, ದೀರ್ಘಾವಧಿ, ಮತ್ತು ಇನ್ನೂ ಅನೇಕ ರೀತಿಯ ಮ್ಯೂಚುಯಲ್ ಫಂಡ್‌ಗಳಿವೆ.

ಅಲ್ಪಾವಧಿ ಮ್ಯೂಚುಯಲ್ ಫಂಡ್‌ಗಳು, ಸಹಜವಾಗಿ, ಡೆಟ್ ಮ್ಯೂಚುಯಲ್ ಫಂಡ್‌ಗಳಾಗಿದ್ದು ಇವು ಅಲ್ಪಾವಧಿ ಮತ್ತು ಮನಿ ಮಾರ್ಕೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡತ್ತವೆ. ಈ ಫಂಡ್‌ಗಳ ಮೆಚ್ಯೂರಿಟಿ ಅವಧಿ, ಪೋರ್ಟ್‌ಫೋಲಿಯೋ ಅವಧಿಯು, ಸಾಮಾನ್ಯವಾಗಿ 1ರಿಂದ 3 ವರ್ಷಗಳವರೆಗೆ ಇರುತ್ತದೆ. ನೀವೀಗ, ಯಾರಿಗಾದರೂ 3 ವರ್ಷಗಳ ಅಲ್ಪಾವಧಿ ಗುರಿ ಏನಾಗಿರಬಹುದು ಅಂತ ಪರಿಗಣಿಸುವುದಾದರೆ ಅದು ಮದುವೆ, ಹೊಸ ವ್ಯವಹಾರದ ಆರಂಭ, ರಜೆಯ ಸಮಯ ಕಳೆಯುವುದು ಅಥವಾ ಮೆಡಿಕಲ್ ಎಮರ್ಜನ್ಸಿ ಯಂತಹ ಸಂದರ್ಭ ಎದುರಿಸುವುದು ಆಗಿರಬಹುದು.
ಡೆಟ್ ಮ್ಯೂಚುವಲ್ ಫಂಡ್:
ಡೆಟ್ ಮ್ಯೂಚುಯಲ್ ಫಂಡ್‌ಗಳ ವಿಷಯಕ್ಕೆ ಬಂದರೆ, ಅವುಗಳಲ್ಲಿ ಲಿಕ್ವಿಡ್ ಫಂಡ್‌ಗಳು ಅಲ್ಪಾವಧಿಯ ಫಂಡ್‌ಗಳು, ದೀರ್ಘಾವಧಿಯ ಫಂಡ್‌ಗಳು, ಮನಿ ಮಾರ್ಕೆಟ್ ಫಂಡ್‌ಗಳು, ಜಿಲ್ಟ್ ಫಂಡ್‌ಗಳು, ಕ್ರೆಡಿಟ್ ರಿಸ್ಕ್ ಫಂಡ್‌ಗಳು ಹಾಗೂ ಇತರೆ 16 ಬಗೆಯ ಫಂಡ್‌ಗಳು ಸೇರಿವೆ. ಸಾಮಾನ್ಯವಾಗಿ, ದೀರ್ಘಾವಧಿ ಮ್ಯೂಚುಯಲ್ ಫಂಡ್‌ಗಳು ಹೆಚ್ಚಾಗಿ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವ ಈಕ್ವಿಟಿ ಮ್ಯೂಚುಯಲ್ ಫಂಡ್ ಗಳಾಗಿರುತ್ತವೆ. ಒಳ್ಳೆಯ ರಿಟರ್ನ್ಸ್ ಬರುತ್ತಿದ್ದರೆ 10 ವರ್ಷದ ಕಾಲಕ್ಕೂ ಇದನ್ನು ವಿಸ್ತರಿಸಬಹುದು.
ಈಕ್ವಿಟಿ ಫಂಡ್:
ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳ ವರ್ಗದಲ್ಲಿ, 11 ವಿಧಗಳ ಈಕ್ವಿಟಿ ಫಂಡ್‌ಗಳಿವೆ. ದೀರ್ಘಾವಧಿ ಮ್ಯೂಚುಯಲ್ ಫಂಡ್‌ಗಳು ನಿಮ್ಮ ದೀರ್ಘಾವಧಿ ಗುರಿಗಳನ್ನು ಸಾಧಿಸಿಕೊಳ್ಳಲು ಸಹಾಯ ಮಾಡುತ್ತವೆ. ಇಂಥ ದೀರ್ಘಾವಧಿ ಗುರಿಗಳಲ್ಲಿ ಶಿಕ್ಷಣ, ಮನೆ ಖರೀದಿ, ವಿದೇಶ ಪ್ರವಾಸ, ಮತ್ತಿತರ ಗುರಿಗಳು ಸೇರಿವೆ. ಕಾಂಪೌಂಡಿಂಗ್ ಲಾಭ ನೀಡುವ ಕಾರಣದಿಂದಾಗಿ, ದೀರ್ಘಾವಧಿ ಮ್ಯೂಚುಯಲ್ ಫಂಡ್‌ಗಳು ಅತಿ ಹೆಚ್ಚು ರಿಟರ್ನ್‌ಗಳನ್ನು ನೀಡಬಹುದು.
ಹೊಸದಾಗಿ ಮ್ಯೂಚುವಲ್ ಫಂಡ್ ಜಗತ್ತಿಗೆ ಎಂಟ್ರಿ ನೀಡುತ್ತಿದ್ದರೆ ಪ್ರಮುಖವಾಗಿ ಎರಡು ಬಗೆಯ ಫಂಡ್ ಗಳತ್ತ ಗಮನ ನೀಡಬಹುದು. ಒಂದು ಅಲ್ಪಾವಧಿ ಮ್ಯೂಚುವಲ್ ಫಂಡ್ ಇನ್ನೊಂದು ದೀರ್ಘಾವಧಿ ಫಂಡ್. ಇದನ್ನು ಇನ್ನೊಂದು ರೀತಿಯೂ ಹೇಳಬಹುದು. ಕಡಿಮೆ ರಿಸ್ಕ್, ಮಧ್ಯಮ ರಿಸ್ಕ್ ಮತ್ತು ಅತಿ ಹೆಚ್ಚಿನ ರಿಸ್ಕ್ ಫಂಡ್ ಗಳು ಎಂದು ವರ್ಗೀಕರಣ ಮಾಡಿಕೊಳ್ಳಬಹುದು.


Click it and Unblock the Notifications