ದೀಪಾವಳಿಯ ಸಂದರ್ಭದಲ್ಲಿ ನವೆಂಬರ್ 4, 2021ರಂದು 'ಮುಹೂರ್ತ' ಟ್ರೇಡಿಂಗ್ ಸೆಷನ್‌ಗಾಗಿ ಸ್ಟಾಕ್ ಎಕ್ಸ್‌ಚೇಂಜ್‌ಗಳು ಒಂದು ಗಂಟೆ ತೆರೆದಿರುತ್ತವೆ. ಈ ಮೂಲಕ ಬಿಎಸ್‌ಇ ಹಾಗೂ ಎನ್‌ಎಸ್‌ಇ ಹೂಡಿಕೆದಾರರು ಸ್ಟಾಕ್ ಅನ್ನು ಖರೀದಿ ಮಾಡಲು ಹಾಗೂ ಮಾರಾಟ ಮಾಡಲು ಅವಕಾಶವನ್ನು ನೀಡಲಾಗುತ್ತದೆ.
ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಒಂದು ಗಂಟೆಗಳ ಕಾಲ 'ಮುಹೂರ್ತ' ಟ್ರೇಡಿಂಗ್ ಸೆಷನ್ ನಡೆಯುತ್ತದೆ. ಈ ಬಾರಿ ನವೆಂಬರ್ 4, 2021ರಂದು 'ಮುಹೂರ್ತ' ಟ್ರೇಡಿಂಗ್ ಸೆಷನ್ ನಡೆಯಲಿದೆ. ಬಿಎಸ್‌ಇ ಹಾಗೂ ಎನ್‌ಎಸ್‌ಇ ಹೂಡಿಕೆದಾರರು ಸಂಜೆ 6:15ರಿಂದ ರಾತ್ರಿ 7:15 ರವರೆಗೆ ಷೇರುಗಳನ್ನು ಖರೀದಿ ಮಾಡಬಹುದು ಹಾಗೂ ಮಾರಾಟ ಮಾಡಬಹುದಾಗಿದೆ.
ಇನ್ನು ಈ ಸಂದರ್ಭದಲ್ಲೇ ಬ್ರೋಕಿಂಗ್ ಸಮುದಾಯವು ಈ ಅವಧಿಯಲ್ಲಿ ಲಕ್ಷ್ಮಿ ಪೂಜೆ ಮತ್ತು ವ್ಯಾಪಾರವನ್ನು ನಡೆಸುತ್ತದೆ. ಈ ದಿನದಂದು ಯಶಸ್ಸು ಹಾಗೂ ಅದೃಷ್ಟ ಲಭಿಸುತ್ತದೆ ಎಂಬ ನಂಬಿಕೆಯನ್ನು ಈ ಬ್ರೋಕಿಂಗ್ ಸಮುದಾಯ ಹೊಂದಿರುವ ಹಿನ್ನೆಲೆಯಲ್ಲಿ ಈ ದಿನದಂದು ಲಕ್ಷ್ಮಿ ಪೂಜೆ ಮತ್ತು ವ್ಯಾಪಾರವನ್ನು ನಡೆಸುತ್ತದೆ.

ಮುಹೂರ್ತದ ವ್ಯಾಪಾರದ ಅವಧಿಯು ಸಾಮಾನ್ಯ ವ್ಯಾಪಾರಕ್ಕೆ ಮುಂಚಿತವಾಗಿ ಒಂದು ಬ್ಲಾಕ್ ಡೀಲ್ ಸೆಷನ್ ಅನ್ನು ಹೊಂದಿದೆ. ಕಳೆದ ವರ್ಷ ಈ ಬ್ಲಾಕ್ ಡೀಲ್ ಸೆಷನ್ ಸಂದರ್ಭದಲ್ಲಿ ಬಿಎಸ್‌ಇ ಸೆನ್ಸೆಕ್ಸ್ 145 ಪಾಯಿಂಟ್‌ಗಳನ್ನು ಗಳಿಸಿತ್ತು. ಆ ಸಮಯದಲ್ಲಿ ಅದರ ಗರಿಷ್ಠ ಮುಕ್ತಾಯದ ಮೊತ್ತಕ್ಕೆ ಕೊನೆಗೊಂಡಿತು ಮತ್ತು ಎನ್‌ಎಸ್‌ಇ ನಿಫ್ಟಿ- 50 ಸೂಚ್ಯಂಕವು 12,800ಕ್ಕಿಂತ ಕಡಿಮೆಗೆ ವ್ಯವಹಾರ ಕೊನೆ ಮಾಡಿತ್ತು.
ಮುಹೂರ್ತ ವಹಿವಾಟು ನಡೆಯುವುದು ಯಾವಾಗ?
ನವೆಂಬರ್ 4ರಂದು ಸಂಜೆ 5:45ಕ್ಕೆ ಬ್ಲಾಕ್ ಡೀಲ್ ಸೆಷನ್ ಆರಂಭವಾಗುತ್ತದೆ ಎಂದು ಎನ್‌ಎಸ್‌ಪಿ ಅಧಿಸೂಚನೆ ಹೇಳಿದೆ. ಸಂಜೆ 5:45ಕ್ಕೆ ಆರಂಭವಾದ ಬ್ಲಾಕ್ ಡೀಲ್ ಸೆಷನ್ 6 ಗಂಟೆಗೆ ಕೊನೆಯಾಗುತ್ತದೆ. ಬಳಿಕ ಸಂಜೆ 6 ಮತ್ತು 6:08ರ ನಡುವೆ ಪ್ರೀ- ಓಪನ್ ಸೆಷನ್ ನಡೆಯಲಿದೆ. ಸಾಮಾನ್ಯ ಮಾರುಕಟ್ಟೆಯು ಸಂಜೆ 6:15ರಿಂದ ರಾತ್ರಿ 7:15ರ ವರೆಗೆ ಇರಲಿದೆ. ಆ ಬಳಿಕ ಕಾಲ್ ಆಕ್ಷನ್ ಇಲಿಕ್ವಿಡ್ ಸೆಷನ್ ಮತ್ತು ಮುಕ್ತಾಯದ ಅವಧಿ ಇರುತ್ತದೆ.
'ಮುಹೂರ್ತ' ಟ್ರೇಡಿಂಗ್ ಸೆಷನ್ ಮಾಡುವುದು ಏಕೆ?
'ಮುಹೂರ್ತ' ಟ್ರೇಡಿಂಗ್ ಸೆಷನ್ ಸಂದರ್ಭವು ಹೊಸ ವರ್ಷ ಅಥವಾ ಸಂವತ್ ಆರಂಭವನ್ನು ಸೂಚಿಸುವ ಹಿನ್ನೆಲೆಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇನ್ನು ಹೂಡಿಕೆದಾರರು ಈ ಸಂದರ್ಭದಲ್ಲೇ ಯಾಕೆ ಹೂಡಿಕೆ ಮಾಡಬೇಕು ಎಂದು ನಿಮಗೆ ಪ್ರಶ್ನೆ ಮೂಡಿರಬಹುದು. ಹೂಡಿಕೆದಾರರು ಈ ಮುಹೂರ್ತ ಸಂದರ್ಭದಲ್ಲೇ ಹೂಡಿಕೆ ಮಾಡುವುದಕ್ಕೆ ಕಾರಣವೂ ಇದೆ. ಹೂಡಿಕೆದಾರರು ಈ ಮುಹೂರ್ತದ ಸಂದರ್ಭದಲ್ಲಿ ಹೂಡಿಕೆಯನ್ನು ಮಾಡಿದರೆ ಆ ವರ್ಷ ಪೂರ್ತಿ ಸಂಪತ್ತು ಹಾಗೂ ಸಮೃದ್ದಿಯನ್ನು ತರುತ್ತದೆ. ಆರ್ಥಿಕ ಅಭಿವೃದ್ಧಿ ಆಗುತ್ತದೆ ಎಂಬುವುದು ಹೂಡಿಕೆದಾರರ ನಂಬಿಕೆ ಆಗಿದೆ.
ಹೂಡಿಕೆಯನ್ನು ಮಾಡಲು ದೀಪಾವಳಿ ಸಂದರ್ಭದಲ್ಲಿ ಶುಭ ಮುಹೂರ್ತ ನೋಡಿಕೊಂಡು 'ಮುಹೂರ್ತ' ಟ್ರೇಡಿಂಗ್ ಸೆಷನ್ ನಡೆಸುವುದನ್ನು ಬಿಎಸ್‌ಪಿ 1957ರಲ್ಲಿ ಆರಂಭ ಮಾಡಿದೆ. ಇನ್ನು ಎನ್‌ಎಸ್‌ಇ ಈ ಕಾರ್ಯವನ್ನು 1992 ರಲ್ಲಿ ಪ್ರಾರಂಭ ಮಾಡಿದೆ. ಕಳೆದ ಹಲವು ವರ್ಷದಲ್ಲಿ ಮುಹೂರ್ತದ ಸಂದರ್ಭದಲ್ಲಿ ಆಗುವ ಮಾರುಕಟ್ಟೆಯ ಚಲನೆಯನ್ನು ನಾವು ಗಮನಿಸಿದಾಗ, ವಿಶೇಷ ವಹಿವಾಟಿನ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾಮಾನ್ಯವಾಗಿ ಏರಿಕೆಗೊಂಡೆ ಕೊನೆಯಾಗುತ್ತದೆ.
ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡು ಬಂದಿರುವುದರ ನಡುವೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡು ಬಂದಿದೆ. ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಭಾರತೀಯ ಷೇರು ಸೂಚ್ಯಂಕ(ಬಿಎಸ್ಇ) ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ಎಸ್ಇ) ಅಂಕಗಳು ಪಾತಾಳಕ್ಕೆ ಕುಸಿದಂತಾಗಿದೆ.


Click it and Unblock the Notifications