ಹೆಚ್ಚಿನವರಿಗೆ ಸೇವಿಂಗ್ಸ್ (Savings) ಮಾಡಬೇಕು, ದೀರ್ಘಾವಧಿಯಲ್ಲಿ ಹೆಚ್ಚು ಲಾಭ ಸಿಗಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಅದೇ ಕಾರಣದಿಂದ ಎಷ್ಟೋ ಮಂದಿ ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿ ಒಳ್ಳೆಯ ಹೂಡಿಕೆ ಯೋಜನೆಗಳನ್ನು ನೋಡಿಕೊಂಡು ಸೇವಿಂಗ್ಸ್ ಮಾಡಲು ಶುರು ಮಾಡುತ್ತಾರೆ. ಹಲವು ಹೂಡಿಕೆ (Invest) ಯೋಜನೆಗಳಲ್ಲಿ, ಸ್ಥಿರ ಠೇವಣಿ ಯೋಜನೆ (Fixed Deposite) ಬಹಳಷ್ಟು ಜನಪ್ರಿಯತೆಯನ್ನು ಹೊಂದಿದೆ.

ಸ್ಥಿರ ಠೇವಣಿ (FD) ಆರಂಭಿಸುವಾಗ ವಿವಿಧ ಹಣಕಾಸು ಸಂಸ್ಥೆಗಳು ಎಷ್ಟು ಬಡ್ಡಿದರಗಳನ್ನು ನೀಡುತ್ತವೆ ಎಂಬುದನ್ನು ಗಮನಿಸಬೇಕು. ಆ ನಂತರ ಬಡ್ಡಿದರಗಳನ್ನು ಹಲವು ಸಂಸ್ಥೆಗಳೊಂದಿಗೆ ಹೋಲಿಕೆ ಮಾಡಿ ನೋಡಬೇಕು. ಕೇವಲ 50 ರಿಂದ 100 ಬೇಸಿಸ್ ಪಾಯಿಂಟ್‌ಗಳ ಸಣ್ಣ ವ್ಯತ್ಯಾಸವೂ ಸಹ ನೀವು ಮಾಡುವ ಹೂಡಿಕೆ ಮೇಲೆ ಭಾರೀ ಪರಿಣಾಮ ಬೀರಬಹುದು. ಉದಾಹರಣೆಗೆ, ಐದು ವರ್ಷಗಳ ಅವಧಿಗೆ ₹10 ಲಕ್ಷ ಹೂಡಿಕೆ ಮಾಡಿ, 100 ಬೇಸಿಸ್ ಪಾಯಿಂಟ್‌ಗಿಂತಲೂ ಹೆಚ್ಚು ಗಳಿಸಿದರೆ, ಅವಧಿಯ ಕೊನೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ₹50,000 ಹೆಚ್ಚುವರಿಯಾಗಿ ಆದಾಯ ಪಡೆಯಬಹುದು. ಒಂದು ವೇಳೆ ನೀವು ₹20 ಲಕ್ಷ ಹೂಡಿಕೆ ಮಾಡಿದ್ದರೆ, ಹೆಚ್ಚುವರಿ ಅಂದರೆ ₹1 ಲಕ್ಷದವರೆಗೆ ತಲುಪಬಹುದು.
ಹಾಗಿದ್ರೆ ಭಾರತದ ಪ್ರಮುಖ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs) ನೀಡುವ ಪ್ರಸ್ತುತ ಬಡ್ಡಿ ದರಗಳು ಎಷ್ಟು ಎಂಬುದರ ಮಾಹಿತಿ ಇಲ್ಲಿದೆ:
ಶ್ರೀರಾಮ್ ಫೈನಾನ್ಸ್:
ಶ್ರೀರಾಮ್ ಫೈನಾನ್ಸ್ 12 ರಿಂದ 60 ತಿಂಗಳ ಅವಧಿಯ ಠೇವಣಿಗಳ ಮೇಲೆ 6.79% ರಿಂದ 7.35% ವರೆಗೆ ಬಡ್ಡಿ ದರ ನೀಡುತ್ತದೆ. 12 ತಿಂಗಳ ಅವಧಿಗೆ ವಾರ್ಷಿಕ 6.79% ಬಡ್ಡಿ ಲಭ್ಯವಿದೆ, ಮತ್ತು 15 ತಿಂಗಳ ಅವಧಿಗೆ 7.02% ಬಡ್ಡಿ ಸಿಗುತ್ತದೆ. ಆದ್ದರಿಂದ ಯಾವುದೇ ಯೋಜನೆಗಳ ಮೇಲೆ ಹೂಡಿಕೆ ಮಾಡುವ ಮುನ್ನ ಸರಿಯಾ ಮಾನದಂಡಗಳನ್ನು ತಿಳಿದುಕೊಳ್ಳುವುದು ಮುಖ್ಯ.
ಪಿಎನ್‌ಬಿ ಹೌಸಿಂಗ್ ಫೈನಾನ್ಸ್:
ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಕೂಡಾ 12 ತಿಂಗಳಿಂದ 60 ತಿಂಗಳ ಅವಧಿಯ ಠೇವಣಿಗಳ ಮೇಲೆ 6.85% ರಿಂದ 7.10% ವರೆಗೆ ಬಡ್ಡಿಯನ್ನು ನೀಡುತ್ತದೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ, ಈ ದರಗಳ ಮೇಲೆ ಹೆಚ್ಚುವರಿ 25 ಬೇಸಿಸ್ ಪಾಯಿಂಟ್‌ಗಳ ಬಡ್ಡಿದರ ನೀಡುತ್ತದೆ ಎನ್ನಲಾಗಿದೆ.
ಎಲ್ಐಸಿ ಹೌಸಿಂಗ್ ಫೈನಾನ್ಸ್:
ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನಲ್ಲಿ ನಿಮಗೆ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ನೀವು ಅಲ್ಲಿ ₹3 ಕೋಟಿವರೆಗಿನ ಠೇವಣಿಗಳ ಮೇಲೆ ವಾರ್ಷಿಕ 6.7% ರಿಂದ 6.9% ಬಡ್ಡಿ ದರಗಳನ್ನು ಪಡೆಯಬಹುದು. ಹಿರಿಯ ನಾಗರಿಕರಿಗೆ ಈ ಠೇವಣಿಗಳ ಮೇಲೆ ಹೆಚ್ಚುವರಿ 25 ಬೇಸಿಸ್ ಪಾಯಿಂಟ್‌ಗಳ ಆದಾಯ ಸಿಗಲಿದೆ.
ಬಜಾಜ್ ಫೈನಾನ್ಸ್:
ಬಜಾಜ್ ಫೈನಾನ್ಸ್ ಒಂದು ವರ್ಷದಿಂದ ಐದು ವರ್ಷಗಳ ಅವಧಿಯ ಠೇವಣಿಗಳ ಮೇಲೆ 6.6% ರಿಂದ 6.95% ವರೆಗೆ ಬಡ್ಡಿ ನೀಡಲಿದೆ. ನಿರ್ದಿಷ್ಟವಾಗಿ, 12 ರಿಂದ 14 ತಿಂಗಳ ಅವಧಿಗೆ 6.6% ಬಡ್ಡಿ, 15 ರಿಂದ 23 ತಿಂಗಳ ಅವಧಿಗೆ 6.75% ಮತ್ತು 24 ರಿಂದ 60 ತಿಂಗಳ ಅವಧಿಗೆ 6.95% ಬಡ್ಡಿ ಲಭ್ಯವಿದೆ. ಹಿರಿಯ ನಾಗರಿಕರಿಗೆ ಈ ಬಡ್ಡಿ ದರಗಳ ಮೇಲೆ 35 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿ ನೀಡುತ್ತದೆ.
ಸುಂದರಂ ಹೋಮ್ ಫೈನಾನ್ಸ್:
ಸುಂದರಂ ಹೋಮ್ ಫೈನಾನ್ಸ್‌ನಲ್ಲೂ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಗೆ ಅವಕಾಶವಿದೆ. ಅಲ್ಲಿ 12 ರಿಂದ 60 ತಿಂಗಳ ಠೇವಣಿಗಳ ಮೇಲೆ 6.7% ರಿಂದ 7.15% ವರೆಗೆ ಬಡ್ಡಿ ಸಿಗುತ್ತದೆ. 12 ತಿಂಗಳ ಠೇವಣಿಗೆ 6.7% ಬಡ್ಡಿ ಸಿಗುತ್ತದೆ. 24 ತಿಂಗಳು ಮತ್ತು 36 ತಿಂಗಳ ಠೇವಣಿಗಳಿಗೆ 7% ಬಡ್ಡಿ ದರ ಅನ್ವಯಿಸುತ್ತದೆ. 48 ತಿಂಗಳು ಮತ್ತು 60 ತಿಂಗಳ ಠೇವಣಿಗಳಿಗೆ 7.15% ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಈ ಬಡ್ಡಿ ದರಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಲಾಭ ಸಿಗುತ್ತದೆ. ಈ ಫೈನಾನ್ಸ್‌ನಲ್ಲಿ ಹೆಚ್ಚು ಬಡ್ಡಿಯನ್ನು ಪಡೆಯಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications