ಭಾರತದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೂಡಾ ಒಂದು. ಕಳೆದ ವರ್ಷ ಆರ್‌ಬಿಐ ರೆಪೋ ದರ ಕಡಿತ ಮಾಡಿರುವ ಹಿನ್ನೆಲೆ, ಹಲವು ಬ್ಯಾಂಕ್‌ಗಳ ಬಡ್ಡಿದರಗಳು, ಸಾಲದ ಬಡ್ಡಿದರ ಮೇಲೆ ವ್ಯತ್ಯಾಸವಾಗಲಿದೆ. ಇದೀಗ ಸಾರ್ವಜನಿಕರಿಗೆ ಟೈಮ್ ಠೇವಣಿಗಳ (Time Deposit) ಮೇಲೆ 3.05% ರಿಂದ 6.45% ವರೆಗೂ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿ 0.50% ಸೇರಿ 6.95% ವರೆಗೆ ಲಭ್ಯವಿದೆ. ಫಿಕ್ಸೆಡ್ ಡೆಪಾಸಿಟ್ ಮತ್ತು ಆರ್‌ಡಿ ಠೇವಣಿ (Fixed Deposit-Recurring Deposit) ಎರಡೂ ಅವಧಿ ಠೇವಣಿಗಳಲ್ಲಿ ಸೇರಿವೆ.

2025ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಮುಖ ರೆಪೊ ದರವನ್ನು ನಾಲ್ಕು ಬಾರಿ, ಒಟ್ಟು 1.25 ಮೂಲ ಅಂಕಗಳಷ್ಟು (BPS) ಕಡಿತಗೊಳಿಸಿದ್ದರಿಂದ, ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕುಗಳು ತಮ್ಮ ಡೆಪಾಸಿಟ್ ಬಡ್ಡಿ ದರಗಳನ್ನು ಇಳಿಕೆ ಮಾಡಿದ್ದವು.
ರೆಪೋ ದರ ಕಡಿತದ ಬೆನ್ನಲ್ಲೇ ಬಡ್ಡಿ ದರ ಕಡಿತ!
ಬ್ಯಾಂಕುಗಳಿಗೆ ಸಾಲ ಪಡೆಯುವುದನ್ನು ಅಗ್ಗಗೊಳಿಸುವ ಉದ್ದೇಶದಿಂದ ಆರ್‌ಬಿಐ ರೆಪೊ ದರ ಕಡಿತಗಳಿಗೆ ಅನುಗುಣವಾಗಿ, ಬ್ಯಾಂಕುಗಳು ತಮ್ಮ ಸಾಲ ನೀಡುವುದು ಮತ್ತು ಠೇವಣಿ ದರಗಳನ್ನು ಹಣಕಾಸು ನೀತಿಯೊಂದಿಗೆ ಸರಿಹೊಂದಿಸಲು ಇಳಿಕೆ ಮಾಡಿದವು. ಡಿಸೆಂಬರ್‌ನಲ್ಲಿ ಆರ್‌ಬಿಐ 25 ಬಿಪಿಎಸ್ ರೆಪೊ ದರ ಕಡಿತದ ನಂತರ, ಎಸ್‌ಬಿಐ ಡಿಸೆಂಬರ್ 15, 2025 ರಿಂದಲೇ ಪರಿಷ್ಕೃತ ದರಗಳನ್ನು ಜಾರಿಗೆ ತಂದಿತು.
ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ತಿಳಿಸುವಂತೆ, ಸಾಮಾನ್ಯ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ಆರ್‌ಡಿ ಹೂಡಿಕೆಗಳ ಮೇಲಿನ ಬಡ್ಡಿ ದರವು ಟೈಮ್ ಠೇವಣಿಗಳ ಸಾಮಾನ್ಯ ದರಗಳನ್ನೇ ಹೊಂದಿರುತ್ತದೆ.
ಡಿಸೆಂಬರ್ 15, 2025 ರಂತೆ 3 ಕೋಟಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳು:
| ಅವಧಿ | ಸಾಮಾನ್ಯರಿಗೆ | ಹಿರಿಯ ನಾಗರಿಕರಿಗೆ |
| 7 ದಿನಗಳಿಂದ 45 ದಿನಗಳವರೆಗೆ | 3.05% | 3.55% |
| 46 ದಿನಗಳಿಂದ 179 ದಿನಗಳು | 4.90% | 6.15% |
| 180 ದಿನಗಳಿಂದ 210 ದಿನಗಳು | 5.65% | 6.15% |
| 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ | 5.90% | 6.40% |
| 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ | 6.25% | 6.75% |
| 2 ವರ್ಷಗಳಿಂದ 3 ವರ್ಷಗಳಿಗಿಂತ ಕಡಿಮೆ | 6.40% | 6.90% |
| 3 ವರ್ಷಗಳಿಂದ 5 ವರ್ಷಗಳಿಗಿಂತ ಕಡಿಮೆ | 6.30% | 6.80% |
| 5 ವರ್ಷಗಳು ಮತ್ತು 10 ವರ್ಷಗಳವರೆಗೆ | 6.05% | 7.05% |
| ಅಮೃತ ವೃಷ್ಟಿ (444 ದಿನಗಳು) | 6.45% | 6.95% |
ಆರ್‌ಡಿ ಯೋಜನೆ (Recurring Deposits)
ಮೇಲೆ ತಿಳಿಸಿದಂತೆ ಎಸ್‌ಬಿಐ ಸ್ಥಿರ ಮತ್ತು ಆರ್‌ಡಿ ಯೋಜನೆಗಳ ಎರಡರ ಮೇಲೂ ಒಂದೇ ರೀತಿಯ ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ ಆರ್‌ಡಿ ಯೋಜನೆಯ ಕೆಲವು ನಿಯಮಗಳಿವೆ. ಆ ಬಗ್ಗೆ ಕೆಳಗಿನ ಲೇಖನದಲ್ಲಿದೆ ಓದಿ.
- ಠೇವಣಿಯ ಕನಿಷ್ಠ ಅವಧಿ 12 ತಿಂಗಳುಗಳು ಮತ್ತು ಗರಿಷ್ಠ ಅವಧಿ 120 ತಿಂಗಳುಗಳು.
- ಕನಿಷ್ಠ ಠೇವಣಿ ಮೊತ್ತ ತಿಂಗಳಿಗೆ 100 ಮತ್ತು ನಂತರ 10 ರ ಗುಣಕಗಳಲ್ಲಿ ಹೂಡಿಕೆ ಮೊತ್ತ ಇರಬೇಕು.
- ಒಬ್ಬ ಬಳಕೆದಾರರು ಸತತ 6 ಕಂತುಗಳನ್ನು ಪಾವತಿಸದಿದ್ದರೆ, ಅಕೌಂಟ್ ಕ್ಲೋಸ್ ಮಾಡಲಾಗುತ್ತದೆ ಮತ್ತು ಬಾಕಿ ಹಣವನ್ನು ಖಾತೆದಾರರಿಗೆ ರಿಟರ್ನ್ ಮಾಡಲಾಗುತ್ತದೆ.
- ಅಲ್ಲದೇ ಕಂತುಗಳನ್ನು ಪಾವತಿಸಲು ವಿಳಂಬ ಮಾಡಿದ್ರೆ, ದಂಡ ಅನ್ವಯ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications