ಎಟಿಎಂಗಳ ಬಳಕೆಯು ನಮ್ಮ ದೈನಂದಿನ ಜೀವನದ ವ್ಯವಹಾರಗಳನ್ನು ಬಹಳ ಸುಲಭಗೊಳಿಸಿವೆ. ಎಟಿಎಂ ಕಾರ್ಡ್ ಇದ್ದರೆ ಬ್ಯಾಂಕ್‌ನಲ್ಲಿ ಹಣ ವಿತ್‌ಡ್ರಾ ಮಾಡುವುದಕ್ಕೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಆನ್‌ಲೈನ್ ಖರೀದಿಗಳನ್ನು ಕೂಡ ಎಟಿಎಂ ಕಾರ್ಡ್‌ನಿಂದ ಮಾಡಬಹುದು.
ಅಷ್ಟೇಅಲ್ಲ ಹೆಚ್ಚಿನ ಕಂಪೆನಿಗಳು ಹಾಗೂ ಶಾಪಿಂಗ್ ಆಪ್‌ಗಳು ಆನ್‌ಲೈನ್ ಮೂಲಕ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ ಅನೇಕ ರೀತಿಯ ಡಿಸ್ಕೌಂಟ್ ಆಫರ್ ನೀಡುತ್ತವೆ. ಹೀಗಿರುವಾಗ, ಎಟಿಎಂ ಕಾರ್ಡ್ ಬಳಕೆಯಿಂದ ಹಣ ಹಿಂಪಡೆಯುವುದು ಹೊರತಾಗಿ ಬೇರೆ ಹಲವು ರೀತಿಯ ಅನುಕೂಲತೆಗಳಿವೆ ಎಂಬುದರ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಆದರೆ, ಎಟಿಎಂ ಕಾರ್ಡ್‌ದಾರರಿಗೆ ವಿಮೆ ಕವರ್ ಆಗುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ?
ಸರ್ಕಾರಿ ಅಥವಾ ಖಾಸಗಿ ಸೇರಿದಂತೆ ಬಹುತೇಕ ಎಲ್ಲ ಬ್ಯಾಂಕ್‌ಗಳು ಖಾತೆ ಹೊಂದಿರುವ ತನ್ನ ಗ್ರಾಹಕರು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಅಥವಾ ಸಾವನ್ನಪ್ಪಿದರೆ ಅಂಥವರಿಗೆ ಈ ವಿಮಾ ಆಫರ್ ಅನ್ನು ಒದಗಿಸುತ್ತದೆ. ಗ್ರಾಹಕರಿಂದ ಗ್ರಾಹಕರಿಗೆ ಖಾತೆಯಲ್ಲಿನ ವ್ಯವಹಾರ ಆಧರಿಸಿ 50000ರೂ. ನಿಂದ 10ಲಕ್ಷ ರೂ.ವರೆಗಿನ ವಿಮಾ ಕವರೇಜ್ ನೀಡುತ್ತದೆ.

ಆದರೆ, ಬ್ಯಾಂಕ್‌ಗಳು ಎಟಿಎಂಗೆ ನೀಡುವ ವಿಮಾ ಕವರೇಜ್ ಬಗ್ಗೆ ತಿಳಿದುಕೊಳ್ಳುವುದಕ್ಕೆ ಹೆಚ್ಚಾಗಿ ಗ್ರಾಹಕರಿಗೆ ಆಸಕ್ತಿ ಇರುವುದಿಲ್ಲ. ಇನ್ನೊಂದೆಡೆ ಬ್ಯಾಂಕ್ ಕೂಡ ಗ್ರಾಹಕರಿಗೆ ನೇರವಾಗಿ ಈ ಬಗ್ಗೆ ಮಾಹಿತಿಯನ್ನು ಒದಗಿಸುವುದಿಲ್ಲ. ಆದರೂ ಈಗ ಹೆಚ್ಚಿನ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ವಿಮಾ ಕವರೇಜ್ ಬಗ್ಗೆ ಮಾಹಿತಿ ನೀಡುತ್ತವೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯು ಚಾಲ್ತಿಯಲ್ಲಿ ಇಲ್ಲದಿದ್ದರೆ ಈ ವಿಮೆಯನ್ನು ಬ್ಯಾಂಕ್‌ಗಳು ಹಿಂದಕ್ಕೆ ಪಡೆದುಕೊಳ್ಳಬಹುದು.
ಮರಣ ಹೊಂದಿದ ವ್ಯಕ್ತಿಗೆ ವಿಮಾ ಕವರೇಜ್ ಕ್ಲೈಮ್ ಮಾಡುವುದು ಹೇಗೆ?
ಈ ಮಾಹಿತಿ ಬಗ್ಗೆ ಸಾಮಾನ್ಯವಾಗಿ ಜನರು ಬಹಳ ವಿರಳವಾಗಿ ತಿಳಿದಿರುವ ಕಾರಣ ವಿಮಾ ಕ್ಲೈಮುಗೆ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಾರೆ. ಸಂಬಂಧಪಟ್ಟ ವ್ಯಕ್ತಿಯು ಅಪಘಾತಕ್ಕೆ ಒಳಗಾಗಿದ್ದರೆ ಕೂಡಲೇ ನೀವು ವಿಮಾ ಕ್ಲೈಮ್ ಅನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಬೇಕು. ಅಪಘಾತಕ್ಕೆ ಒಳಗಾದವರಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವುದಕ್ಕೆ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು.
ಒಂದುವೇಳೆ ಆ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗಿದ್ದರೆ ಎಲ್ಲ ರೀತಿಯ ವೈದ್ಯಕೀಯ ದಾಖಲೆಗಳನ್ನು ನೀವು ಕೈಯಲ್ಲಿ ಇಟ್ಟುಕೊಂಡಿರಬೇಕು. ಒಂದೊಮ್ಮೆ ಆ ವ್ಯಕ್ತಿಯು ಸಾವನ್ನಪ್ಪಿದ್ದರೆ ಆಗ ಅವರ ಸಂಬಂಧಿಕರು ಫೊಸ್ಟ್‌ಮಾರ್ಟಂ ರಿಪೋರ್ಟ್, ಪೊಲೀಸ್ ರಿಪೋರ್ಟ್, ವೈದ್ಯಕೀಯ ಪ್ರಮಾಣಪತ್ರ ಹಾಗೂ ಡ್ರೈವಿಂಗ್ ಲೈಸೆನ್ಸ್‌ನ್ನು ಪಡೆದುಕೊಂಡಿರಬೇಕು. ಅಲ್ಲದೆ, ಆ ಕಾರ್ಡ್‌ದಾರರು ಕಳೆದ 60 ದಿನಗಳಲ್ಲಿ ಮಾಡಿರುವ ಪ್ರಮುಖ ಎಟಿಎಂ ವ್ಯವಹಾರಗಳ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಸೆಬಿಯಲ್ಲಿ ನೊಂದಾಯಿತ ತೆರಿಗೆ ಹಾಗೂ ಹೂಡಿಕೆ ತಜ್ಞರು ಹೇಳುವ ಪ್ರಕಾರ, ಅಪಘಾತ ಮರಣ ವಿಮೆಯು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳು, ವ್ಯಕ್ತಿಗಳು ಹೊಂದಿರುವ ವಿವಿಧ ರೀತಿಯ ಕಾರ್ಡ್‌ಗೆ ಅನುಗುಣವಾಗಿ 30000 ರೂ.ನಿಂದ 10 ಲಕ್ಷ ರೂ. ವರೆಗೆ ಉಚಿತ ಅಪಘಾತ ಮರಣ ವಿಮಾ ಸುರಕ್ಷತೆಯನ್ನು ನೀಡುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications