ಶಿಕ್ಷಣ ಸಾಲ vs ಉಳಿತಾಯ ನಿಧಿ: ನಿಮ್ಮ ಮಕ್ಕಳ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಯಾವುದು ಬೆಸ್ಪ್?

ನೀವು ಉನ್ನತ ಶಿಕ್ಷಣದ ಕನಸು ಕಂಡಿದ್ದೀರಾ? ಆದರೆ, ಆರ್ಥಿಕ ಸಮಸ್ಯೆಯ ಬಾದೆ ಕಾಡುತ್ತಿದ್ದೀಯಾ? ಚಿಂತೆ ಬಿಡಿ..! ಶಿಕ್ಷಣ ಸಾಲವನ್ನು ಪಡೆಯುವುದಕ್ಕೂ ಮುನ್ನ ಹಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.ಅದರಲ್ಲೂ ಶಿಕ್ಷಣ ಸಾಲ ಅಥವಾ ಉಳಿತಾಯ ನಿಧಿ ಯಾವುದು ಶಿಕ್ಷಣ ವೆಚ್ಚಗಳಿಗೆ ಉತ್ತಮ ಆಯ್ಕೆಯಾಗುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೊಡಿ...

ಹೌದು,ಇತ್ತೀಚಿಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವೆಚ್ಚಗಳಿಂದ ಮಕ್ಕಳ ಶಿಕ್ಷಣಕ್ಕೆ ಹಣಕಾಸು ಒದಗಿಸುವುದು ಅನೇಕ ಕುಟುಂಬಗಳಿಗೆ ನಿರ್ಣಾಯಕ ನಿರ್ಧಾರವನ್ನಾಗಿ ಮಾಡಿದೆ.

ಶಿಕ್ಷಣ ಸಾಲ vs ಉಳಿತಾಯ ನಿಧಿ ಯಾವುದು ಬೆಸ್ಪ್?

ಎಡುಫಂಡ್ ಸಂಶೋಧನೆಯ ಪ್ರಕಾರ,ಕೆಲವು ನಿರ್ವಹಣಾ ಕೋರ್ಸ್‌ಗಳ ಬೋಧನಾ ಶುಲ್ಕಗಳು ಶೇ.75 ರಿಂದ ಶೇ.147ರಷ್ಟು ಹೆಚ್ಚಾಗಿದೆ. ಈಗ ವೆಚ್ಚಗಳು ಸರಾಸರಿ 15 ರಿಂದ 25 ಲಕ್ಷ ರೂ.ಗಳು ಹಾಗೂ 2013 ರಲ್ಲಿ ಇದು 8 17 ಲಕ್ಷ ರೂ.ಗಳಷ್ಟಿತ್ತು ಇತ್ತು.

ಮುಂಬೈ ಮತ್ತು ಪುಣೆಯಂತಹ ನಗರದಲ್ಲಿ, ಕಳೆದ ವರ್ಷಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳ ಸರಾಸರಿ ಶುಲ್ಕವು ಶೇ.70 ರಷ್ಟು ಹೆಚ್ಚಾಗಿದೆ ಮತ್ತು ವೈದ್ಯಕೀಯ ಅಧ್ಯಯನದ ಒಟ್ಟು ವೆಚ್ಚವು 1 ಕೋಟಿ ರೂ.ಗಳನ್ನು ತಲುಪಬಹುದು.

ಖಾಸಗೀಕರಣ, ಹೆಚ್ಚಿದ ಬೇಡಿಕೆ, ಕನಿಷ್ಠ ನಿಯಂತ್ರಣ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಸೀಮಿತ ಸೀಟುಗಳಂತಹ ಅಂಶಗಳು ಶಿಕ್ಷಣ ವೆಚ್ಚದಲ್ಲಿ ಏರಿಕೆಯಾಗಲು ಕಾರಣವಾಗಿದೆ.

ಶಿಕ್ಷಣ ಹಣದುಬ್ಬರವು ಶೇ10ರಿಂದ 11ರ ಆಸುಪಾಸಿನಲ್ಲಿ ಇರುವುದರಿಂದ ಮುಂದಿನ 6 8 ವರ್ಷಗಳಲ್ಲಿ ಈ ವೆಚ್ಚಗಳು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಶಿಕ್ಷಣ ನಿಧಿಗೆ ಎಚ್ಚರಿಕೆಯಿಂದ ಯೋಜಿಸುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ.

ನೀವು ಸಾಲದ ಆಯ್ಕೆಯನ್ನು ಆರಿಸಿಕೊಂಡಾಗ ಸಾಲ ಪಡೆಯುವ ಪರಿಣಾಮಕಾರಿ ವೆಚ್ಚವೆಂದರೆ ಪಾವತಿಸಿದ ಬಡ್ಡಿಯಿಂದ ತೆರಿಗೆ ಉಳಿತಾಯವನ್ನು ಕಳೆಯುವುದು. ಹಣಕಾಸಿನ ದೃಷ್ಟಿಕೋನದಿಂದ, ಈ ಅಂಶಗಳು ಶಿಕ್ಷಣ ಸಾಲದ ಬಗ್ಗೆ ಆಲೋಚನೆ ಬಗ್ಗೆ ಯೋಚನೆ ಮಾಡುವುದು ತುಂಬಾ ಮುಖ್ಯವಾಗುತ್ತದೆ.

ಇತ್ತೀಚಿಗೆ ಹೆಚ್ಚಿನ ಜನರು ಮ್ಯೂಚುವಲ್ ಫಂಡ್‌ಗಳಂತಹ ಹಣಕಾಸು ಹೂಡಿಕೆ ಮಾಡುವುದರಿಂದ ಇದು ಬದಲಾಗುತ್ತಿದೆ, ಇದು ಶಿಕ್ಷಣ ಹಣದುಬ್ಬರವನ್ನು ಹೆಚ್ಚಿಗೆ ಮಾಡುತ್ತಿದೆ. ಇದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಮತ್ತೊಂದೆಡೆ, ಶಿಕ್ಷಣ ಸಾಲಗಳ ಬೇಡಿಕೆಗಳು ಸಹ ಹೆಚ್ಚಾಗಿವೆ. ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಸಂಸತ್ತಿನಲ್ಲಿ ಮಾಹಿತಿಯ ಪ್ರಕಾರ ಹೊಸ ಸಾಲ ಅರ್ಜಿಗಳು 2019-20ರ ಸಾಲಿನಲ್ಲಿ 3,22,163 ರಿಂದ 2023-24ರಲ್ಲಿ 5,50,993ಕ್ಕೆ ಶೇ.71 ಕ್ಕಿಂತ ಹೆಚ್ಚು ಹೆಚ್ಚಾಗಿದೆ.

ಶಿಕ್ಷಣ ಶುಲ್ಕಕ್ಕಾಗಿ ಉಳಿತಾಯ vs ಸಾಲ ಯಾವುದು ಬೆಸ್ಟ್?

ಶಿಕ್ಷಣಕ್ಕೆ ಬೇಕಾಗುವ ಬೋಧನಾ ವೆಚ್ಚಗಳ ಜೊತೆಗೆ, ತೆರಿಗೆ ಪ್ರಯೋಜನಗಳು ಶಿಕ್ಷಣ ಸಾಲಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತಿರಬಹುದು. ಆದಾಯ ತೆರಿಗೆ (ಐಟಿ) ಕಾಯ್ದೆ1961 ರ ಸೆಕ್ಷನ್ 80E ಅಡಿಯಲ್ಲಿ, ನಿಮ್ಮ, ನಿಮ್ಮ ಸಂಗಾತಿಯ ಅಥವಾ ನಿಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತೆಗೆದುಕೊಂಡ ಶಿಕ್ಷಣ ಸಾಲಗಳಿಗೆ ಪಾವತಿಸಿದ ಬಡ್ಡಿಯ ಮೇಲೆ ನೀವು ವಿನಾಯಿತಿಯನ್ನು ಸಹ ಪಡೆಯಬಹುದು. ಹಾಗಾದರೆ,ನಿಮ್ಮ ಮಗುವಿನ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಯಾವುದು ಉತ್ತಮ ಆಯ್ಕೆ? ಹೂಡಿಕೆ ಮಾಡುವುದೋ ಅಥವಾ ಶಿಕ್ಷಣ ಸಾಲ ತೆಗೆದುಕೊಳ್ಳುವುದೋ? ಎಂಬ ವಿವರ ಈ ಕೆಳಗಿನಂತೆ ಇದೆ.

ಉದಾಹರಣೆಗೆ ನೀವು 10 ಲಕ್ಷ ರೂ ಬೋಧನಾ ಶುಲ್ಕವನ್ನು ಪಾವತಿಸಬೇಕೆಂದುಕೊಂಡರೆ ನಿಮಗೆ ಎರಡು ಆಯ್ಕೆಗಳಿವೆ:

10 ಲಕ್ಷ ರೂಪಾಯಿಗಳ ಶಿಕ್ಷಣ ಸಾಲವನ್ನು ಶೇ.10 ರಷ್ಟು ಬಡ್ಡಿದರದಲ್ಲಿ ಅಥವಾ ಉಳಿತಾಯವನ್ನು ಬಳಸಿಕೊಂಡು ಬೋಧನಾ ಶುಲ್ಕವನ್ನು ಭರಿಸುವುದು.

ನೀವು ಸಾಲವನ್ನು ಆಯ್ಕೆ ಮಾಡಿಕೊಂಡರೆ,ಹೂಡಿಕೆಯಿಂದ ಬರುವ ಶೇ.10 ರಷ್ಟು ಲಾಭವನ್ನು ನೀವು ಬಿಡಬೇಕಾಗುತ್ತದೆ. ನೀವು ಸಾಲವನ್ನು ಆರಿಸಿಕೊಂಡಾಗ ಸಾಲ ಪಡೆಯುವ ಪರಿಣಾಮಕಾರಿ ವೆಚ್ಚವೆಂದರೆ ಪಾವತಿಸಿದ ಬಡ್ಡಿಯಿಂದ ತೆರಿಗೆ ಉಳಿತಾಯವನ್ನು ಕಳೆಯುವುದು. ಹಣಕಾಸಿನ ದೃಷ್ಟಿಕೋನದಿಂದ, ಈ ಅಂಶಗಳು ಶಿಕ್ಷಣ ಸಾಲವನ್ನು ಆಯ್ಕೆಯನ್ನಾಗಿ ಮಾಡುತ್ತೇವೆ.

ಶಿಕ್ಷಣ ಸಾಲವು ಈ ಕೆಳಗಿನ ಅಂಶಗಳಿಂದ ಮತ್ತಷ್ಟು ಹೆಚ್ಚಾಗಬಹುದು.

  • ದೀರ್ಘಾವಧಿಯವರೆಗೆ ಎರವಲು ಪಡೆದ ನಿಧಿಗಳಿಗೆ ಪ್ರವೇಶ ಸಹ ಸಿಗಬಹದು.
  • ಹೂಡಿಕೆಗಳಿಂದ ಹೆಚ್ಚಿನ ಆದಾಯದ ಸಾಧ್ಯತೆ ಮತ್ತು ಶಿಕ್ಷಣ ಸಾಲಗಳಿಗೆ ಸಂಬಂಧಿಸಿದ ತೆರಿಗೆ ಪ್ರಯೋಜನಗಳು.

ಸಾಲದ ಹೊರೆಯನ್ನು ನಿಭಾಯಿಸುವುದು ಹೇಗೆ?

ಸಾಲ ಪಡೆಯುವುದು ಮತ್ತು ಮರುಪಾವತಿ ಬದ್ಧತೆಯು ಪೋಷಕರ ಮೇಲೆ ಹೊರೆಯಾಗಬಹುದು. ಮತ್ತು ನಿಯಮಿತ ಇಎಂಐ ಪಾವತಿಗಳು ಹಣಕಾಸಿನ ಮಿತಿಗೊಳಿಸಬಹುದು. ಅದಕ್ಕಾಗಿಯೇ ಸಮತೋಲಿತ ವಿಧಾನವು ಹೆಚ್ಚು ಸೂಕ್ತವಾಗಿರುತ್ತದೆ ಎಂದು ಹೇಳಬಹುದು.

ಶಿಕ್ಷಣ ಸಾಲ ಅಥವಾ ಕೇವಲ ಉಳಿತಾಯವನ್ನು ಅವಲಂಬಿಸುವ ಬದಲು, ಎರಡೂ ಆಯ್ಕೆಗಳನ್ನು ಸಂಯೋಜಿಸುವುದು ಸಾಲವನ್ನು ಪಡೆಯಬಹುದು.

ಉದಾಹರಣೆಗೆ, ಮೇಲಿನ ಸನ್ನಿವೇಶದಲ್ಲಿ, ನೀವು ಶಿಕ್ಷಣ ಸಾಲದಿಂದ ಶೇ.50ರಷ್ಟು ಮತ್ತು ಉಳಿತಾಯದಿಂದ ಶೇ.50ರಷ್ಟು ಬಳಸಿದ್ದರೆ ನಿಮ್ಮ ಇಎಂಐ 43,958 ರೂ ಆಗಿರುತ್ತದೆ. ಒಟ್ಟು ಮರುಪಾವತಿ 5,27,495 ರೂ ಆಗಿರುತ್ತದೆ.ಇದರಿಂದಾಗಿ ಒಟ್ಟು ವೆಚ್ಚವು ಶೇ.6.92ರಷ್ಟು ಇರುತ್ತದೆ.

ಶಿಕ್ಷಣ ಸಾಲ ಮತ್ತು ಉಳಿತಾಯದ ನಡುವಿನ ವಿಭಜನೆಯು ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಮತ್ತು ಸೌಕರ್ಯದ ಮಟ್ಟವನ್ನು ಅವಲಂಭಿನೆಯನ್ನು ಮಾಡಿರುತ್ತದೆ.ಇನ್ನೊಂದು ಅಂಶವೆಂದರೆ, ಪಾವತಿಸುವ ಸಮಯ ಬಂದಾಗ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲದ ಲಭ್ಯತೆ ಖಾತರಿಯಿಲ್ಲ. ಆದ್ದರಿಂದ, ಸಾಕಷ್ಟು ಹಣವನ್ನು ಉಳಿಸಲು ಸಾದ್ಯವಾಗುವುದಿಲ್ಲ. ನಿಜವಾದ ಪಾವತಿಯನ್ನು ಮಾಡುವ ಸಮಯ ಬಂದಾಗ, ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯೇ ಎಂದು ನೀವು ನಿರ್ಣಯ ಮಾಡಬೇಕಾಗುತ್ತದೆ.

ಶಿಕ್ಷಣಕ್ಕೆ ಹಣಕಾಸು ಒದಗಿಸುವುದು ಶಿಕ್ಷಣದಷ್ಟೇ ಎಚ್ಚರಿಕೆಯ ಯೋಜನೆಗೆ ಅರ್ಹವಾಗಿದೆ. ಬೆಂಜಮಿನ್ ಫ್ರಾಂಕ್ಲಿನ್ ಜ್ಞಾನದಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಸಿಗುತ್ತದೆ ಎಂದು ಹೇಳಿದ್ದರೂ, ನಾವು ಆ ಹೂಡಿಕೆಗೆ ಹೇಗೆ ಹಣಕಾಸು ಒದಗಿಸುತ್ತೇವೆ ಎಂಬುದರ ಆರ್ಥಿಕ ಪರಿಣಾಮಗಳನ್ನು ಪರಿಗಣಿಸುವುದು ಅತ್ಯಗತ್ಯ.

ನೀವು ಯಾವುದನೇ ಆಯ್ಕೆ ಮಾಡಿಕೊಂಡರೂ ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+