EPFO: ಇಲ್ಲಿ ಕೇಳಿ.. ನೀವು ಕೆಲಸ ಬದಲಾಯಿಸುತ್ತಿದ್ದೀರಾ? PF ವರ್ಗಾಯಿಸದಿದ್ದರೆ ಏನಾಗುತ್ತೆ? ಬಡ್ಡಿ ಬರುತ್ತಾ? ನೀವೆ ನೋಡಿ

ಖಾಸಗಿ ಕಂಪನಿ ಉದ್ಯೋಗಿಗಳು ಈ ಸುದ್ದಿ ಓದಲೇಬೇಕು! ನೀವು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದೀರಾ..? ಹಳೆಯ ಕಂಪನಿಗೆ ಬಾಯ್ ಹೇಳಿ, ಹೊಸ ಕಂಪನಿಗೆ ಸೇರುತ್ತಿದ್ದೀರಾ? ಹಾಗಿದ್ರೆ, ಈ ವಿಷಯ ನೀವು ತಿಳಿಯುವುದು ಉತ್ತಮ. ಹೌದು, ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ EPFO ​​ಒಂದು ವಿಶ್ವಾಸಾರ್ಹ ಯೋಜನೆಯಾಗಿದೆ. ನೀವು ನಿವೃತ್ತಿಯ ನಂತರ ಈ ಯೋಜನೆ ನಿಮ್ಮಗೆ ತುಂಬಾ ಉಪಯುಕ್ತವಾಗಿದೆ. ನೀವು ಆಗ್ಗಾಗೆ ಕೆಲಸವನ್ನು ಬದಲಾಯಿಸುತ್ತಿದ್ದರೆ, ನಿಮ್ಮ ಹಳೆಯ EPFO ​​ಖಾತೆಯನ್ನು ಹೊಸ ಕಂಪನಿಗೆ ವರ್ಗಾಯಿಸದಿದ್ದರೆ, ತೊಂದರೆ ಉಂಟಾಗುತ್ತದೆ. ಹಳೆಯ EPFO ​​ಖಾತೆಗೆ ಬಡ್ಡಿ ಬರುತ್ತದೆಯೇ ಅಥವಾ ಇಲ್ಲವೇ? ಎಂಬ ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ.

ನೀವು ಉದ್ಯೋಗ ಬದಲಾಯಿಸಿದಾಗ ನಿಮ್ಮ EPFO ​​ಖಾತೆಯು ಹೊಸ ಕಂಪನಿಗೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗುವುದಿಲ್ಲ.ಇದಕ್ಕಾಗಿ ನೀವು EPFO ​​ಸದಸ್ಯ ಸೇವಾ ಪೋರ್ಟ್‌ನಿಂದ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ನೀವು ಹೀಗೆ ಮಾಡುವವರೆಗೆ, ನಿಮ್ಮ ಹಣ ಹಳೆಯ EPFO ​​ಖಾತೆಯಲ್ಲಿಯೇ ಇರುತ್ತದೆ. ನಿಮ್ಮ UAN ಸಂಖ್ಯೆಯೂ ಹಾಗೆಯೇ ಇರುತ್ತದೆ. ಆದರೆ ಖಾತೆ ವರ್ಗಾವಣೆಯಾಗುವುದಿಲ್ಲ.

ಇಲ್ಲಿ ಕೇಳಿ..PF ವರ್ಗಾಯಿಸದಿದ್ದರೆ ಏನಾಗುತ್ತೆ? ನೀವೆ ನೋಡಿ

ಬಡ್ಡಿ ಸಂಗ್ರಹ

ಇಪಿಎಫ್‌ಒ ನಿಯಮಗಳ ಪ್ರಕಾರ ಇಪಿಎಫ್‌ಒ ಖಾತೆ ನಿಷ್ಕ್ರಿಯವಾದ್ದರೆ 36 ತಿಂಗಳು, ಅಂದರೆ 3 ವರ್ಷಗಳವರೆಗೆ ಬಡ್ಡಿಯನ್ನು ಪಾವತಿಸುತ್ತದೆ. ಈ ಬಡ್ಡಿಯನ್ನು ಕೊನೆಯ ಇಪಿಎಫ್‌ಒ ಕೊಡುಗೆಯಿಂದ ಲೆಕ್ಕಹಾಕಲಾಗುತ್ತದೆ. 36 ತಿಂಗಳವರೆಗೆ ಯಾವುದೇ ಕೊಡುಗೆಗಳನ್ನು ಪಾವತಿಸದಿದ್ದರೆ, ಉದ್ಯೋಗಿ ಉದ್ಯೋಗದಲ್ಲಿಲ್ಲದಿದ್ದರೆ ಅಥವಾ ನಿವೃತ್ತರಾದರೆ, ಖಾತೆಯು ನಿಷ್ಕ್ರಿಯವಾಗುತ್ತದೆ. ಅಲ್ಲದೆ, ಬಡ್ಡಿ ಸಂಗ್ರಹವಾಗುವುದು ಸಹ ನಿಲ್ಲುತ್ತದೆ.

ಬಡ್ಡಿ ಮೂರು ವರ್ಷಗಳವರೆಗೆ ಮಾತ್ರ ಲಭ್ಯ

ನೀವು ಉದ್ಯೋಗ ಬದಲಾವಣೆಯ ನಂತರ ನೀವು ನಿಮ್ಮ EPFO ​​ಖಾತೆಯನ್ನು ವರ್ಗಾಯಿಸದಿದ್ದರೆ, ಹಳೆಯ ಖಾತೆಯ ಮೇಲೆ ಮೂರು ವರ್ಷಗಳವರೆಗೆ ಮಾತ್ರ ಬಡ್ಡಿ ಕೂಡ ಸಿಗುತ್ತದೆ. ಇದಾದ ನಂತರ, ಬಡ್ಡಿ ಸಂಗ್ರಹವಾಗುವುದು ಕೂಡ ನಿಲ್ಲುತ್ತದೆ. ಇದು ನಿಮಗೆ ನಷ್ಟವನ್ನುಂಟು ಮಾಡಬಹುದು. 2024-25ನೇ ಹಣಕಾಸು ವರ್ಷಕ್ಕೆ EPFO ​​ಶೇಕಡಾ 8.25 ರಷ್ಟು ಬಡ್ಡಿದರವನ್ನು ಒಳಗೊಂಡಿದೆ.

ಇನ್ಮುಂದೆ ಪಿಎಫ್ ಮೊತ್ತದ ವರ್ಗಾವಣೆ ಇನ್ನಷ್ಟು ಸರಳ

ಇನ್ಮುಂದೆ ಪಿಎಫ್ ಮೊತ್ತದ ವರ್ಗಾವಣೆ ಇನ್ನಷ್ಟು ಸರಳ. ಹೌದು,ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಖಾತೆ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಇನ್ನಷ್ಟು ಸುಲಭಗೊಳಿಸಲಾಗಿದೆ.

ಉದ್ಯೋಗ ಬದಲಿಸುವಾಗ ಉದ್ಯೋಗಿಯ ಪಿಎಫ್ (ಪ್ರಾವಿಡೆಂಟ್ ಫಂಡ್) ಖಾತೆಯ ವರ್ಗಾವಣೆಗಾಗಿ ಮುಂಚಿನ ಸಂಸ್ಥೆಯ ಅನುಮೋದನೆಯ ಅಗತ್ಯವಿಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ. ಉದ್ಯೋಗಿಗಳಿಗೆ ಸಮಯದ ವಿಳಂಬವಾಗುವುದಿಲ್ಲ.

ಇತ್ತೀಚೆಗೆ ಇಪಿಎಫ್‌ಒದಲ್ಲಿ ಹಲವು ಬದಲಾವಣೆ

EPFO ಇತ್ತೀಚೆಗೆ ಹೆಚ್ಚು ಸುರಕ್ಷತೆ ಮತ್ತು ಸುಲಭ ಸೇವೆಗಳನ್ನು ಒದಗಿಸಲು ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ.

ಮುಖ ಚಹರೆ ದೃಢೀಕರಣ: ಉದ್ಯೋಗಿಗಳು ತಮ್ಮ ಯುಎಎನ್ (UAN) ಅನ್ನು ಸಕ್ರಿಯಗೊಳಿಸಲು ಆಧಾರ್ ಆಧರಿತ ಮುಖ ಚಹರೆಯ ದೃಢೀಕರಣ ಮಾಡುವ ಆಯ್ಕೆ ಪಡೆದಿದ್ದಾರೆ. ಇದು ಸುರಕ್ಷಿತ ಮತ್ತು ಸ್ಮಾರ್ಟ್ ವಿಧಾನವಾಗಿದೆ, ಏಕೆಂದರೆ ಪ್ರಕ್ರಿಯೆ ಹೆಚ್ಚು ನಿಖರವಾಗಿದ್ದು, ಬೇಡಿಕೆ ಇರುವುದರೊಂದಿಗೆ ಉಪಯೋಗಕ್ಕೆ ಅನುಕೂಲವಾಗುತ್ತದೆ.

ಉಮಾಂಗ್‌ ಆ್ಯಪ್: ಉಮಾಂಗ್ ಮೊಬೈಲ್ ಆ್ಯಪ್ ಮೂಲಕ ಉದ್ಯೋಗಿಗಳು ನೇರವಾಗಿ ತಮ್ಮ ಯುಎಎನ್ ಮತ್ತು ಸಂಬಂಧಿಸಿದ ಸೇವೆಗಳನ್ನು ಪಡೆಯಬಹುದು. ಇದು EPFO ಸೇವೆಗಳ ಸುಲಭ ಪ್ರವೇಶವನ್ನು ಒಳಗೊಂಡಿದೆ, ಹಾಗೂ ಸೇವೆಗಳು ಹೆಚ್ಚು ದ್ರುತಗತಿಯಲ್ಲಿಯೂ, ಕಾರ್ಯಕ್ಷಮವಾಗಿಯೂ ಸಿಗಬಹುದು.

ಆಧಾರ್ ಆಧಾರಿತ ತಂತ್ರಜ್ಞಾನ: EPFO ಇದರೊಂದಿಗೆ ಆಧಾರ್ ಜೊತೆ ಸಂಪರ್ಕ ಹೊಂದಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು, ಸೇವೆಗಳ ಲಭ್ಯತೆ ಮತ್ತು ಭದ್ರತೆ ಹೆಚ್ಚಿಸಲಿದೆ. ಇದರ ಮೂಲಕ, EPFO ಸೇವೆಗಳನ್ನು ಬಳಸುವ ಪ್ರಕ್ರಿಯೆಗಳು ಇನ್ನಷ್ಟು ಸುಗಮವಾಗಲಿದೆ. ಇದಕ್ಕೂ ಮೊದಲು ಇಪಿಎಫ್‌ಒ ತನ್ನ ಆನ್‌ಲೈನ್ ಹಣ ವಿತ್‌ಡ್ರಾ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+