ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಉದ್ಯೋಗಿಗಳಿಗೆ ಪಿಎಫ್ ಹಣವನ್ನು ನಿರ್ವಹಣೆ ಮಾಡುತ್ತದೆ. ಎಲ್ಲಾ ನೌಕರರ ವೇತನದ ಒಂದು ನಿರ್ದಿಷ್ಟ ಭಾಗವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ನಿವೃತ್ತಿಯ ನಂತರ ನೀವು ಈ ಎಲ್ಲಾ ಹಣವನ್ನು ಹಿಂಪಡೆಯಬಹುದು.
ನಿಮ್ಮ ವೇತನದ ಒಂದು ಭಾಗದ ಹಣದ ಠೇವಣಿ ಜೊತೆಗೆ ನೀವು ಬಡ್ಡಿಯನ್ನು ಸಹ ಪಡೆಯುತ್ತೀರಿ. ಆದರೆ ಈ ಖಾತೆ ನಿರ್ವಹಣೆ ಕುರಿತಾಗಿ ಕೆಲವು ಪ್ರಮುಖ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಸ್ವಂತ ಪಿಎಫ್ ಹಣವನ್ನು ಖಾತೆಯಿಂದ ಹಿಂಪಡೆಯಲು ನಿಮಗೆ ಕಷ್ಟವಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್‌ಗೆ ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಲಿಂಕ್ ಮಾಡಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಹಾಗೆ ಮಾಡದಿರುವ ಉದ್ಯೋಗಿ ಭವಿಷ್ಯ ನಿಧಿಗೆ (ಇಪಿಎಫ್) ನಿಮ್ಮ ಪ್ರವೇಶವನ್ನು ನಿರ್ಬಂಧಿಸಲು ಕಾರಣವಾಗುತ್ತದೆ. ಉದ್ಯೋಗದಾತರು ಉದ್ಯೋಗಿ-ಕಮ್-ರಿಟರ್ನ್ (ಇಸಿಆರ್) ಚಲನ್ ಗಳನ್ನು ಸಲ್ಲಿಸಲು ಮತ್ತು ಯುಎಎನ್ ಮತ್ತು ಆಧಾರ್ ಲಿಂಕ್ ಆಗಿದ್ದರೆ ಹಣವನ್ನು ಇಪಿಎಫ್ ಖಾತೆಗೆ ಜಮಾ ಮಾಡಲು ಮಾತ್ರ ಸಾಧ್ಯವಾಗುತ್ತದೆ.
ಉದ್ಯೋಗದಾತರು ನಿಮ್ಮ ಯುಎಎನ್ ಅನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಗಡುವಿನೊಳಗೆ ಲಿಂಕ್ ಮಾಡದಿದ್ದರೆ, ಅವರು ಇಪಿಎಫ್ ಖಾತೆಗೆ ಮಾಸಿಕ ಕೊಡುಗೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಹೆಚ್ಚುವರಿಯಾಗಿ, ಉದ್ಯೋಗಿಗಳು ಗಡುವು ಪಾಲಿಸದಿದ್ದರೆ ತಮ್ಮ ಪಿಎಫ್ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
ಸರ್ಕಾರವು ಈ ಆಧಾರ್-ಯುಎಎನ್ ಲಿಂಕ್ ಅನ್ನು ಸಾಮಾಜಿಕ ಭದ್ರತೆ ಕೋಡ್ 2020 ರ ಸೆಕ್ಷನ್ 142 ರ ಪ್ರಕಾರ ಮಾಡಲಾಗುವುದು ಎಂದು ಈ ಹಿಂದೆಯೇ ಘೋಷಿಸಿತು. ಹೀಗಾಗಿ ನೀವು ಆನ್‌ಲೈನ್‌ನಲ್ಲಿ ಹೇಗೆ ಆಧಾರ್-ಇಪಿಎಫ್ ಲಿಂಕ್ ಮಾಡುವುದು ಎಂದು ಈ ಕೆಳಗೆ ತಿಳಿಯಿರಿ.
ಇಪಿಎಫ್- ಆಧಾರ್ ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ?
1. ಇಪಿಎಫ್‌ಒ ಲಿಂಕ್ - iwu.epfindia.gov.in/eKYC/; ಇದಕ್ಕೆ ಲಾಗಿನ್ ಆಗಬೇಕು.
2. ನಿಮ್ಮ UAN ಮತ್ತು ಆಧಾರ್- ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಬೇಕು;
3. 'Generate OTP' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು;
4. OTP ಭರ್ತಿ ಮಾಡಿ ಹಾಗೂ ಲಿಂಗ ಎಂಬುದನ್ನು ಆಯ್ಕೆ ಮಾಡಬೇಕು;
5. ಆಧಾರ್ ಸಂಖ್ಯೆಯನ್ನು ನಮೂದಿಸಿ ಹಾಗೂ 'ಆಧಾರ್ ದೃಢೀಕರಣ' ವಿಧಾನವನ್ನು ಆರಿಸಿ;
6. 'ಮೊಬೈಲ್ ಅಥವಾ E-mail ಆಧಾರಿತ ದೃಢೀಕರಣ' ಆಯ್ಕೆಯಲ್ಲಿ ಯಾವುದು ಎಂಬುದನ್ನು ಆರಿಸಿಕೊಳ್ಳಿ;
7. ಮತ್ತೊಂದು OTP ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ;
8. ಎರಡನೇ OTP ನಮೂದಿಸಿ; ಮತ್ತು
9. ನಿಮ್ಮ EPF, UAN ಆಧಾರ್ ಜೋಡಣೆ ಪೂರ್ತಿಗೊಳಿಸಿ.
ಪ್ಯಾನ್ ಕಾರ್ಡ್ ಕೂಡ ಲಿಂಕ್ ಮಾಡಿ
ನೀವು ಆಧಾರ್ ಕಾರ್ಡ್ ಅಷ್ಟೇ ಅಲ್ಲದೆ ಪ್ಯಾನ್ ಕಾರ್ಡ್ ಕೂಡ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ನಿಮ್ಮ ಪ್ಯಾನ್ ಅನ್ನು ಪಿಎಫ್ ಖಾತೆಗೆ ಈಗಾಗಲೇ ಲಿಂಕ್ ಮಾಡಿದ್ದರೆ ಉತ್ತಮ, ಇಲ್ಲದಿದ್ರೆ ಸಾಧ್ಯವಾದಷ್ಟು ಬೇಗ ಲಿಂಕ್ ಮಾಡಿ.
ಪಿಎಫ್ ಖಾತೆಗೆ ಪ್ಯಾನ್ ಲಿಂಕ್ ಮಾಡದಿದ್ರೆ ಏನಾಗಲಿದೆ?
ನೀವು ಪ್ಯಾನ್ ಅನ್ನು ಪಿಎಫ್ ಖಾತೆಗೆ ಲಿಂಕ್ ಮಾಡದಿದ್ದರೆ ಎರಡು ಪ್ರಮುಖ ನಷ್ಟಗಳನ್ನು ಅನುಭವಿಸಬಹುದು. ಇವುಗಳಲ್ಲಿ ಮೊದಲನೆಯದು, ನೀವು ಪಿಎಫ್ ಹಿಂಪಡೆಯಲು ಅರ್ಜಿ ಸಲ್ಲಿಸಿದಾಗ, ಅದರ ಮೇಲೆ ಗರಿಷ್ಠ ತೆರಿಗೆ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ದರೆ ಇದನ್ನು ತಪ್ಪಿಸಬಹುದು. ಎರಡನೆಯದಾಗಿ, ನೀವು ಹಣವನ್ನು ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಪಿಎಫ್ ಖಾತೆಯು ಐದು ವರ್ಷಕ್ಕಿಂತ ಕಡಿಮೆ ಮತ್ತು ಖಾತೆಯಲ್ಲಿ ಠೇವಣಿ ಇರಿಸಿದ ಜನರು 50,000 ರೂ. ಹೆಚ್ಚಿದ್ದರೆ ಆಗ ಆ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ.
ಆನ್‌ಲೈನ್ ಮೂಲಕ ಲಿಂಕ್ ಮಾಡಿ
*ಇಪಿಎಫ್‌ಒ ಯುಎಎನ್ ಖಾತೆದಾರನು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://unifiedportal-mem.epfindia.gov.in/memberinterface/.
* ಈ ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
* ನಂತರ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು 'ಸೈನ್-ಇನ್' ಬಟನ್ ಕ್ಲಿಕ್ ಮಾಡಿ.
* ಅದರ ನಂತರ ಮುಖ್ಯ ಮೆನುವಿನಿಂದ 'ನಿರ್ವಹಿಸು' ಆಯ್ಕೆಯನ್ನು ಹುಡುಕಿ ಮತ್ತು 'ಕೆವೈಸಿ' ಕ್ಲಿಕ್ ಮಾಡಿ.
* ನಿಮ್ಮನ್ನು 'KYC ಸೇರಿಸಿ' ಎಂಬ ಹೊಸ ಪೇಜ್‌ಗೆ ತೆರೆಯುವುದು, ಅಲ್ಲಿ ನೀವು 'ಡಾಕ್ಯುಮೆಂಟ್ ಪ್ರಕಾರ' ಅಡಿಯಲ್ಲಿ ದಾಖಲೆಗಳ ಪಟ್ಟಿಯನ್ನು ಪಡೆಯುತ್ತೀರಿ. ಇಲ್ಲಿ ನೀವು ಪ್ಯಾನ್ ಆಯ್ಕೆ ಮಾಡಬೇಕು.
* ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಪ್ಯಾನ್‌ನಲ್ಲಿ ಮುದ್ರಿಸಲಾದ ಹೆಸರನ್ನು ನಮೂದಿಸಿ. ಅಂತಿಮವಾಗಿ 'ಸೇವ್' ಬಟನ್ ಕ್ಲಿಕ್ ಮಾಡಿ.
ಆಫ್‌ಲೈನ್ ಮೂಲಕವೂ ಮಾಡಬಹುದು
ಹತ್ತಿರದ ಇಪಿಎಫ್‌ಒ ಶಾಖೆಗೆ ಹೋಗಿ ಇಪಿಎಫ್-ಪ್ಯಾನ್ ಲಿಂಕ್ ಮಾಡುವ ಫಾರ್ಮ್ ಅನ್ನು ಕೇಳಿ. ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಯುಎಎನ್ ಸಂಖ್ಯೆಯನ್ನು ಎಚ್ಚರಿಕೆಯಿಂದ ಫಾರ್ಮ್‌ನಲ್ಲಿ ಭರ್ತಿ ಮಾಡಿ ಮತ್ತು ನಿಮ್ಮ ಹೆಸರಿನಂತಹ ಇತರ ವಿವರಗಳನ್ನು ಸಹ ನಮೂದಿಸಿ.
ನಿಮ್ಮ ಪ್ಯಾನ್ ಕಾರ್ಡ್ ಮತ್ತು ಯುಎಎನ್‌ನ ಸ್ವಯಂ ದೃಢೀಕರಿಸಿದ ಪ್ರತಿ ಜೊತೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕು. ಪರಿಶೀಲಿಸಿದ ನಂತರ, ನಿಮ್ಮ ಪ್ಯಾನ್ ಅನ್ನು ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಲ್ಲಿ ನಿಮ್ಮ ಪ್ಯಾನ್ ಅನ್ನು ಇಪಿಎಫ್ ಖಾತೆಗೆ ಲಿಂಕ್ ಮಾಡುವ ಸ್ಥಿತಿಯ ಬಗ್ಗೆ ನಿಮಗೆ ತಿಳಿಸಲಾಗುವುದು.


Click it and Unblock the Notifications