ಗುಡ್ ನ್ಯೂಸ್! ನಿಮ್ಮ PF ಅಕೌಂಟ್‌ಗೆ 8.25% ಬಡ್ಡಿದರ ಶೀಘ್ರದಲ್ಲಿ ಜಮಾ ಮಾಡಲಾಗಿದೆ. ಹೌದು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿ ಎಂದು ವಾರ್ಷಿಕ ಪ್ರಕ್ರಿಯೆಯ ಭಾಗವಾಗಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸದಸ್ಯರ ಖಾತೆಗಳನ್ನು ನವೀಕರಿಸುತ್ತಿದೆ. ಈ ಕ್ರಮದಿಂದಾಗಿ ಸರ್ಕಾರವು ಈ ಹಿಂದೆ ಘೋಷಿಸಿದಂತೆ ಪಿಎಫ್ ಮೊತ್ತದ ಮೇಲಿನ ಬಡ್ಡಿಯು ಶೀಘ್ರದಲ್ಲೇ ಅವರ ಖಾತೆಗಳಗೆ ಜಮಾ ಆಗುತ್ತಿದೆ. ಇದರಿಂದ ತೆರಿಗೆಯ ಕಡತದಂತಹ ತೊಂದರೆಗಳು ಕೂಡ ಕಡಿಮೆಯಾಗುತ್ತದೆ.

2024-25ನೇ ಹಣಕಾಸು ವರ್ಷದಲ್ಲಿ ಶೇ. 8.25 ರಷ್ಟು ಪಿಎಫ್ ಬಡ್ಡಿಯನ್ನು ಈಗಾಗಲೇ ಶೇ. 96.51 ಕ್ಕೂ ಹೆಚ್ಚು ಇಪಿಎಫ್‌ಒ ಖಾತೆಗಳಿಗೆ ಜಮಾ ಮಾಡಲಾಗಿದೆ. ಉಳಿದ ಖಾತೆಗಳಿಗೆ ಈ ವಾರದೊಳಗೆ ಬಡ್ಡಿ ಜಮಾ ಆಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಈ ಕುರಿತು ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ 2024-25ನೇ ಸಾಲಿಗೆ ಇಪಿಎಫ್‌ಒ ಈ ವಾರ ಸದಸ್ಯರ ಖಾತೆಗಳಿಗೆ ಶೇ. 8.25 ರಷ್ಟು ಬಡ್ಡಿಯನ್ನು ಜಮಾ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದರು.
ಈ ವರ್ಷ, 33.56 ಕೋಟಿ ಸದಸ್ಯರ ಖಾತೆಗಳನ್ನು ಹೊಂದಿರುವ 13.88 ಲಕ್ಷ ಸಂಸ್ಥೆಗಳಿಗೆ ವಾರ್ಷಿಕ ಖಾತೆ ನವೀಕರಣವನ್ನು ಮಾಡಬೇಕಾಗಿತ್ತು. ಜುಲೈ 8 ರವರೆಗೆ 13.86 ಲಕ್ಷ ಸಂಸ್ಥೆಗಳ 32.39 ಕೋಟಿ ಸದಸ್ಯರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲಾಗಿದೆ. ಉಳಿದ ಖಾತೆಗಳನ್ನು ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನಗಳು
ಕಳೆದ ಕೆಲ ವರ್ಷಗಳ ಅವಧಿಯಲ್ಲಿ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಇಪಿಎಫ್‌ಓ ಹಲವಾರು ಸೇವೆಗಳನ್ನು ಆರಂಭಿಸಿದೆ. ಸದ್ಯ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಐದು ರೀತಿಯ ವಿಧಾನಗಳಿವೆ.
- ಇಪಿಎಫ್‌ಓ ಪೋರ್ಟಲ್ ಮೂಲಕ
- ೨ಎಸ್‌ಎಂಎಸ್ ಮುಖಾಂತರ
- ಮಿಸ್ಡ್ ಕಾಲ್ ಮಾಡುವ ಮೂಲಕ
- ಇಪಿಎಫ್‌ಓ ಮೊಬೈಲ್ ಆಪ್ ಮುಖಾಂತರ
- ಉಮಂಗ್ ಆಪ್ ಮೂಲಕ
ಇಪಿಎಫ್‌ಓ ಪೋರ್ಟಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಇಪಿಎಫ್‌ಓ ಪೋರ್ಟಲ್ ಮೂಲಕ ಇಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿದುಕೊಳ್ಳಬೇಕಾದರೆ ಮೊದಲು ನಿಮ್ಮ ಯುಎಎನ್ ಸಕ್ರಿಯವಾಗಿರುವುದು ಅವಶ್ಯಕ. ಯುಎಎನ್ ಎಂಬುದು ಯುನಿವರ್ಸಲ್ ಅಕೌಂಟ್ ನಂಬರ್ ಆಗಿದ್ದು, ಪ್ರತಿ ಇಪಿಎಫ್ ಚಂದಾದಾರ ಸದಸ್ಯರಿಗೆ ವಿಶಿಷ್ಟ ಯುಎಎನ್ ನೀಡಲಾಗಿರುತ್ತದೆ. ಪೋರ್ಟಲ್ ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಬೇಕಾದರೆ ಈ ನಂಬರ್ ಉಪಯೋಗಿಸಿ ಮೊದಲು ರಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಮೊದಲು ಯುಎಎನ್ ಅನ್ನು ನಿಮ್ಮ ಉದ್ಯೋಗದಾತರಿಂದ ಪಡೆದುಕೊಳ್ಳಬೇಕು. ಒಂದು ಬಾರಿ ಯುಎಎನ್ ಸಿಕ್ಕ ಮೇಲೆ ನೀವು ಪೋರ್ಟಲ್ ನಲ್ಲಿ ರಜಿಸ್ಟರ್ ಮಾಡಿಕೊಂಡು ನಿಮ್ಮ ಪಾಸ್‌ವರ್ಡ್ ಪಡೆದುಕೊಳ್ಳಬಹುದು. ಪೋರ್ಟಲ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬೇಕಾದಾಗ ಯುಎಎನ್ ಹಾಗೂ ಪಾಸ್‌ವರ್ಡ್ ಉಪಯೋಗಿಸಿ ಲಾಗ್ ಇನ್ ಆಗಬೇಕು. ಲಾಗ್ ಇನ್ ಆದಮೇಲೆ ಪೋರ್ಟಲ್ ನಲ್ಲಿ ಕಾಣಿಸುವ ನಿಮ್ಮ ಖಾತೆಯ ಪಾಸ್‌ಬುಕ್‌ನಲ್ಲಿ, ನಿಮ್ಮ ವಂತಿಗೆ ಹಾಗೂ ಈಗ ಖಾತೆಯಲ್ಲಿರುವ ಒಟ್ಟು ಮೊತ್ತವನ್ನು ನೋಡಬಹುದು. ಹಾಗೆಯೇ ಈ ಪಾಸ್‌ಬುಕ್ ಅನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.
ಎಸ್‌ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಕಳೆದ ಬಾರಿಯ ವಂತಿಗೆ ಹಾಗೂ ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಎಸ್‌ಎಂಎಸ್ ಕಳುಹಿಸುವ ಮೂಲಕವೂ ನೋಡಬಹುದು. ಈ ಸೇವೆ ತಮ್ಮ ಯುಎಎನ್ ಸಂಖ್ಯೆ ಆಕ್ಟಿವೇಟ್ ಮಾಡಿಕೊಂಡಿರುವ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ. ನೀವು ಇಪಿಎಫ್‌ಗೆ ರಜಿಸ್ಟರ್ ಮಾಡಿಕೊಂಡ ನಿಮ್ಮ ಮೊಬೈಲ್ ನಂಬರ್ ಮೂಲಕ 7738299899 ಗೆ ಎಸ್‌ಎಂಎಸ್ ಮಾಡಬೇಕು. ಈ ಫಾರ್ಮ್ಯಾಟ್‌ನಲ್ಲಿ ಎಸ್‌ಎಂಎಸ್ ಮಾಡಿ EPFOHO UAN LAN
ಹೀಗೆ ನೀವು ಇಪಿಎಫ್‌ಓ ಬ್ಯಾಲೆನ್ಸ್ ಚೆಕ್ ಮಾಡಬಹುದು.


Click it and Unblock the Notifications