ಇಪಿಎಫ್ (EPF) ಸದಸ್ಯರು ಪ್ರತಿ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಬಡ್ಡಿ ಕ್ರೆಡಿಟ್‌ಗಾಗಿ ಕಾಯುತ್ತಿರುತ್ತಾರೆ. ಆದರೆ, ಇಪಿಎಫ್‌ಒ ಆಗಾಗ್ಗೆ ಬಡ್ಡಿಯನ್ನು ಕ್ರೆಡಿಟ್ ಮಾಡುವುದನ್ನು ನಿಧಾನ ಮಾಡುತ್ತಲೇ ಇರುತ್ತದೆ.ಇದರ ಪರಿಣಾಮವಾಗಿ ಅನೇಕರು ತೆರಿಗೆಯ ಕಡತದ ತೊಂದರೆಯನ್ನು ಎದುರಿಸುವಂತೆ ಮಾಡುತ್ತದೆ. ಹಾಗಿದ್ರೆ ತೆರಿಗೆ ತೊಂದರೆಯಿಂದ ಬಜಾವ್ ಆಗಲು ಏನು ಮಾಡಬೇಕು..? ಈ ಕುರಿತು ತೆರಿಗೆಯ ತಜ್ಞರು ಏನು ಹೇಳುತ್ತಾರೆ ಎಂಬ ಹೆಚ್ಚಿನ ಮಾಹಿತಿಯನ್ನು ನಾವಿಂದು ತಿಳಿಯೋಣ ಬನ್ನಿ..

ಹೌದು,ಉದ್ಯೋಗಿಗಳಿಗೆ ಹಣಕಾಸು ವರ್ಷ ಬಂತು ಅಂದ್ರೆ ಸಾಕು ತೆರಿಗೆ ಕಟ್ಟವುದೇ ಒಂದು ದೊಡ್ಡ ತಲೆನೋವು ಆಗುತ್ತದೆ. ಅದರಲ್ಲೂ ಇಪಿಎಫ್ ಖಾತೆಯಲ್ಲಿ ತೆರಿಗೆಯ ಬಡ್ಡಿಯ ಹಣ ಕಟ್ ಆಗಲಿಲ್ಲ ಅಂದರೆ ದೊಡ್ಡ ಸಮಸ್ಯೆಯನ್ನೇ ಇಪಿಎಫ್ ಸದಸ್ಯರು ಎದುರಿಸಬೇಕುತ್ತದೆ. ನಿಮ್ಮ ಉದ್ಯೋಗದಲ್ಲಿ ಇಪಿಎಫ್ ಕೊಡುಗೆ ವರ್ಷಕ್ಕೆ 2.5 ಲಕ್ಷಕ್ಕಿಂತ ಹೆಚ್ಚಿದ್ದರೆ (ಸರ್ಕಾರಿ ನೌಕರರಿಗೆ 5 ಲಕ್ಷ), ಹೆಚ್ಚುವರಿ ಬಡ್ಡಿಯ ಮೇಲೆ ಗಳಿಸಿದ ಬಡ್ಡಿಗೆ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಅನ್ವಯವಾಗುತ್ತದೆ. ಇದಲ್ಲದೇ ನಿಮ್ಮ ಇಪಿಎಫ್ ಖಾತೆಯ ಯುಎನ್‌ಎ ನಂಬರ್ ಗೆ ಪ್ಯಾನ್ ಲಿಂಕ್ ಮಾಡಿದ್ದರೆ ಟಿಡಿಎಸ್ ದರವು ಶೇ.10ರಷ್ಟು ಇರುತ್ತದೆ ನೀವೇನಾದರೂ ಒಂದು ವೇಳೆ, ಲಿಂಕ್ ಮಾಡದೇ ಇದ್ದರೆ ಶೇ.20 ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಇದು ತೆರಿಗೆ ವಿಧಿಸಬಹುದಾದ ಬಡ್ಡಿ 5,000 ಕ್ಕಿಂತ ಕಡಿಮೆ ಇದ್ದರೆ ಟಿಡಿಎಸ್ ಕಡಿತವನ್ನು ಮಾಡುವುದಿಲ್ಲ.
ತೆರಿಗೆ ಗೊಂದಲ ಏಕೆ?
ಇಪಿಎಫ್ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುವಲ್ಲಿನ ವಿಳಂಬ ಸದಸ್ಯರಿಗೆ ತೆರಿಗೆ ವಿಧಿಸಬಹುದಾದ ಬಡ್ಡಿಯನ್ನು ವರದಿ ಮಾಡಲು ಮತ್ತು ತೆರಿಗೆ ಪಾವತಿಸಲು ಸರಿಯಾದ ಹಣಕಾಸು ವರ್ಷದ ಬಗ್ಗೆ ಗೊಂದಲವನ್ನು ಉಂಟುಮಾಡುತ್ತದೆ. ಇಪಿಎಫ್‌ಒ ಪಾಸ್‌ಬುಕ್‌ನಲ್ಲಿ ಹಣಕಾಸು ವರ್ಷ ಮಾರ್ಚ್ 31 ರವರೆಗೆ ಬಡ್ಡಿ ಸಂಗ್ರಹವಾದ್ದರೆ ಬಡ್ಡಿಯನ್ನು ಮುಂದಿನ ವರ್ಷಕ್ಕೆ ಅದು ಖಾತೆಗೆ ಜಮಾ ಆಗುತ್ತದೆ. ಇದು ಅವರಿಗೆ ಗೊಂದಲವನ್ನು ಸಹ ಉಂಟು ಮಾಡಿದೆ.
ನೀವು ಏನನ್ನು ಮಾಡಬೇಕು..?
ನೀವು ತೆರಿಗೆ ವಿಧಿಸಬಹುದಾದ ಪಿಎಫ್ ಬಡ್ಡಿಯ ಮೇಲೆ ಕ್ರೆಡಿಟ್ ಆಧಾರದ ಮೇಲೆ ತೆರಿಗೆ ಪಾವತಿಸಬೇಕು. ಅಂದರೆ, ಇಪಿಎಫ್‌ಒ ಬಡ್ಡಿಯನ್ನು ಜಮಾ ಮಾಡಿ ಟಿಡಿಎಸ್ ಕಡಿತಗೊಳಿಸಿದ ವರ್ಷದಲ್ಲಿ ತೆರಿಗೆ ಪಾವತಿಸಬೇಕು ಎಂದು ತಜ್ಞರು ಹೇಳಿದ್ದಾರೆ.
ಈ ವರ್ಷ ನಿಮ್ಮ ಐಟಿಆರ್ ಸಲ್ಲಿಸುವಾಗ ನೀವು ಪಡೆದ ವಿಳಂಬಿತ ಬಡ್ಡಿ ಕ್ರೆಡಿಟ್‌ಗೆ ತೆರಿಗೆ ಪಾವತಿಯನ್ನು ಮಾಡುವುದಕ್ಕೆ ಹೋಗಬೇಡಿ ಮುಂದಿನ ವರ್ಷ, ಎಫ್‌ವೈ 26 ರಲ್ಲಿ ಗಳಿಸಿದ ಆದಾಯಕ್ಕೆ ಬಡ್ಡಿಯನ್ನು ಆಯ್ಕೆ ಮಾಡಿ. ಆದಾಯ ತೆರಿಗೆ ಇಲಾಖೆ ಮತ್ತು ಇಪಿಎಫ್‌ಒ ಜೊತೆ ಅನಗತ್ಯವಾಗಿ ವ್ಯವಹರಿಸುವುದನ್ನು ತಪ್ಪಿಸಲು ನಿಮಗೆ ಸಹಕಾರಿಯಾಗುತ್ತದೆ.
ಇಪಿಎಫ್‌ಒ ಆ ವರ್ಷವೇ ನಿರ್ದಿಷ್ಟ ಹಣಕಾಸು ವರ್ಷದ ಬಡ್ಡಿದರವನ್ನು ಘೋಷಿಸಬೇಕು ಮತ್ತು ಕ್ರೆಡಿಟ್ ಮಾಡಬೇಕು ಆದರೆ ಆದನ್ನು ನಂತರದ ದಿನಗಳಲ್ಲಿ ಮಾಡಿ ಟಿಡಿಎಸ್ ಕಡಿತಗೊಳಿಸುವುದು ಇಪಿಎಫ್ ಸದಸ್ಯರಿಗೆ ಹೆಚ್ಚಿನ ಗೊಂದಲದ ಜೊತಗೆ ಸಂಕಷ್ಟವನ್ನು ತಮದು ಹೊಡುತ್ತದೆ.


Click it and Unblock the Notifications