ಸಿಹಿಸುದ್ದಿ...ನೌಕರರ ಭವಿಷ್ಯ ನಿಧಿ (ಇಪಿಎಫ್) ಉದ್ಯೋಗಿಗಳಿಗೆ (Employees) ಮಹತ್ವದಸುದ್ದಿಯನ್ನು ಕೊಟ್ಟಿದೆ. ಇದರಿಂದ 7 ಕೋಟಿಗೂ ಹೆಚ್ಚು ಇಪಿಎಫ್ ಚಂದಾದಾರರಿಗೆ ಲಾಭ ಸಿಗುತ್ತೆ..ಅದು ಏನು ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಹೌದು, 2024-25ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲೆ ಶೇ. 8.25ರಷ್ಟು ಬಡ್ಡಿದರವನ್ನು ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ.ಇದರಿಂದ ಸುಮಾರು 7 ಕೋಟಿಗೂ ಹೆಚ್ಚು ಇಪಿಎಫ್ ಚಂದಾದಾರರಿಗೆ ಲಾಭವಾಗಲಿದ್ದು, ಅವರ ನಿವೃತ್ತಿ ನಿಧಿಗೆ ಹೆಚ್ಚಿನ ಬಡ್ಡಿ ಹಣ ಜಮೆಯಾಗುತ್ತದೆ.

ಈ ಬಡ್ಡಿದರವನ್ನು ಇಪಿಎಫ್‌ಓ (EPFO - Employees' Provident Fund Organisation) ಶಿಫಾರಸು ಮಾಡಿದ್ದು, ಕೇಂದ್ರ ಸರ್ಕಾರವು ಅದಕ್ಕೆ ಅನುಮೋದನೆಯನ್ನು ನೀಡಿದೆ. ಕಳೆದ ವರ್ಷ (2023-24) ಶೇ. 8.15% ಬಡ್ಡಿದರ ನೀಡಲಾಗಿತ್ತು, ಇದಕ್ಕಿಂತ ಈ ಬಾರಿ ಸ್ವಲ್ಪ ಹೆಚ್ಚಾಗಿದೆ.
ಈ ಕುರಿತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ.ಈ ಬಡ್ಡಿದರವನ್ನು EPFO ತಾವು ನಿರ್ವಹಿಸುತ್ತಿರುವ ಚಂದಾದಾರರ ಖಾತೆಗಳಿಗೆ ವಾರ್ಷಿಕವಾಗಿ ಜಮೆ ಮಾಡುತ್ತದೆ.ಇತ್ತೀಚಿನ ವರ್ಷಗಳಲ್ಲಿ EPF ಬಡ್ಡಿದರದಲ್ಲಿ ಕಂಡುಬರುವ ಸಣ್ಣ ಮಟ್ಟದ ಹೆಚ್ಚಳವಾಗಿದೆ.
2024ರ ಫೆಬ್ರವರಿ 28 ರಂದು ನಡೆದ EPFO (Employees' Provident Fund Organisation)ನ ಕೇಂದ್ರ ಮಂಡಳಿಯ (Central Board of Trustees) ಸಭೆಯಲ್ಲಿ, 2024-25ನೇ ಆರ್ಥಿಕ ಸಾಲಿಗೆ EPF ಠೇವಣಿಗಳ ಮೇಲೆ ಶೇ. 8.25ರಷ್ಟು ಬಡ್ಡಿದರವನ್ನು ಮುಂದುವರೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಹಿಂದಿನ ವರ್ಷದ ಬಡ್ಡಿದರವೇ ಈ ವರ್ಷವೂ ಮುಂದುವರೆಯಲಿದೆ ಎಂದು ತಿಳಿಸಿತ್ತು. ಈ ನಿರ್ಧಾರಕ್ಕೆ ಇದೀಗ ಹಣಕಾಸು ಸಚಿವಾಲಯವು ಸಮ್ಮತಿ ನೀಡಿದೆ.ಇದರಿಂದ ಠೇವಣಿಗಳಿಗೆ ಶೇ. 8.25ರಷ್ಟು ಬಡ್ಡಿ ಪಾವತಿಯಾಗಲಿದೆ.
ಹಣಕಾಸು ಸಚಿವಾಲಯವು ಇಪಿಎಫ್‌ಒ (EPFO) ಠೇವಣಿಗೆ ಶೇ. 8.25ರಷ್ಟು ಬಡ್ಡಿದರ ಪಾವತಿಸಲು ಸಮ್ಮತಿ ನೀಡಿದ್ದು, ಈ ಕುರಿತು ಕಾರ್ಮಿಕ ಸಚಿವಾಲಯವು ಗುರುವಾರ EPFOಗೆ ಅಧಿಕೃತ ಮಾಹಿತಿ ಕಳುಹಿಸಿದೆ ಎಂದು ಕಾರ್ಮಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
EPFO ಮಂಡಳಿಯ ಫೆಬ್ರವರಿ 28ರ ಶಿಫಾರಸಿಗೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ. ಈ ಬಡ್ಡಿದರವನ್ನು ಶೀಘ್ರದಲ್ಲೇ ಚಂದಾದಾರರ ಖಾತೆಗಳಿಗೆ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಸುಮಾರು 7.3 ಕೋಟಿ ಇಪಿಎಫ್ ಚಂದಾದಾರರಿಗೆ ಇದರ ಲಾಭ ದೊರೆಯಲಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಈ ನಿರ್ಧಾರದಿಂದ 2025ನೇ ಆರ್ಥಿಕ ವರ್ಷಕ್ಕೆ ಏಳು ಕೋಟಿಗೂ ಹೆಚ್ಚು EPFO ಚಂದಾದಾರರ ಖಾತೆಗಳಿಗೆ ಬಡ್ಡಿ ಹಣ ಜಮೆಯಾಗಲಿದೆ.ಈ ಬಡ್ಡಿದರದ ನಿರ್ಧಾರವನ್ನು 2024ರ ಫೆಬ್ರವರಿ 28 ರಂದು ನವದೆಹಲಿಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ EPFO ಕೇಂದ್ರ ಮಂಡಳಿ ಟ್ರಸ್ಟಿಗಳ 237ನೇ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಈ ಶಿಫಾರಸಿಗೆ ಈಗ ಕೇಂದ್ರ ಸರ್ಕಾರ ಇದೀಗ ಒಪ್ಪಿಗೆ ಸೂಚಿಸಿದೆ.
ಉದ್ಯೋಗಿಗಳಿಗೆ ನಿವೃತ್ತಿಯ ನಂತರ ಉಳಿತಾಯಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತದೆ.
EPFO ಬಡ್ಡಿದರ ನಿರ್ಧಾರ ಪ್ರಕ್ರಿಯೆ ಹೇಗೆ..?
EPF ಬಡ್ಡಿದರವನ್ನು ಪ್ರತಿ ವರ್ಷ EPFOದ ಕೇಂದ್ರ ಮಂಡಳಿಯ ಟ್ರಸ್ಟಿಗಳು (Central Board of Trustees) ಶಿಫಾರಸು ಮಾಡುತ್ತಾರೆ.ಈ ಶಿಫಾರಸ್ಸಿನ ನಂತರ ಹಣಕಾಸು ಸಚಿವಾಲಯದ ಅನುಮೋದನೆಗೆ ಒಳಪಡುತ್ತದೆ.
EPFO ಗಳಿಸುವ ಹೂಡಿಕೆ ಆದಾಯ
EPFO ತನ್ನ ನಿಧಿಯನ್ನು ಶೇ. 85% ಸ್ಥಿರ ಆದಾಯ ಸಾಧನಗಳಲ್ಲಿ (Government Bonds, Corporate Bonds) ಮತ್ತು ಶೇ. 15ಇಕ್ವಿಟಿ ಇರುತ್ತದೆ.
2023-24ರಲ್ಲಿ EPFO ತನ್ನ 13 ಲಕ್ಷ ಕೋಟಿ ರೂ. ಹೂಡಿಕೆಯಿಂದ ಸಾವರ್ಕಾಲಿಕ ಗರಿಷ್ಠ 1.07 ಲಕ್ಷ ಕೋಟಿ ರೂ. ಆದಾಯ ಗಳಿಸಿದೆ.
ಈ ಹೆಚ್ಚಿದ ಆದಾಯದಿಂದ EPFO ಹೆಚ್ಚು ಬಡ್ಡಿ ನೀಡಲು ಸಾಧ್ಯವಾಯಿತು.
EPF ಚಂದಾದಾರರ ಸಂಖ್ಯೆ
- ಚಂದಾದಾರರ ಸಂಖ್ಯೆ ಹೆಚ್ಚಾದಂತೆ, EPFO ಹೆಚ್ಚು ಹಣ ಸಂಗ್ರಹಿಸಬಹುದು.
- ಇದು ಸಂಸ್ಥೆಗೆ ಹೂಡಿಕೆಯನ್ನು ವಿಭಜನೆ ಮಾಡುವ ಮತ್ತು ಲಾಭವನ್ನು ಸ್ಥಿರಗೊಳಿಸುವ ಅವಕಾಶವನ್ನು ನೀಡುತ್ತದೆ.
- ಈಗ ಸುಮಾರು 7.3 ಕೋಟಿ ಚಂದಾದಾರರು EPFOನಲ್ಲಿ ನೋಂದಾಯಿತರಾಗಿದ್ದಾರೆ.
EPFO ಭದ್ರವಾಗಿ ಹೆಚ್ಚು ಬಡ್ಡಿಯನ್ನು ನೀಡಲಾಗಿದೆ.


Click it and Unblock the Notifications