For Quick Alerts
ALLOW NOTIFICATIONS  
For Daily Alerts

ಇಪಿಎಫ್ ಗೂ ಬೀಳಲಿದೆ ತೆರಿಗೆ; ಯಾರಿಗೆ, ಏನಿದು ಲೆಕ್ಕಾಚಾರ?

|

ಕಾರ್ಮಿಕ ಭವಿಷ್ಯನಿಧಿ (ಇಪಿಎಫ್), ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್ ಪಿಎಸ್) ಹಾಗೂ ನಿವೃತ್ತಿ ನಿಧಿಗೆ ಉದ್ಯೋಗದಾತರು ತುಂಬುವ ಮೊತ್ತಕ್ಕೆ ಹೆಚ್ಚಿನ ವೇತನ ಪಡೆಯುತ್ತಿರುವ ಸಿಬ್ಬಂದಿ ಸದ್ಯದಲ್ಲೇ ತೆರಿಗೆ ಪಾವತಿಸಬೇಕಾಗಬಹುದು. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಒಟ್ಟಾರೆ ತೆರಿಗೆ ವಿನಾಯಿತಿ ಪಡೆಯಲು ಮೂರು ಹೂಡಿಕೆ, ಗರಿಷ್ಠ ಏಳೂವರೆ ಲಕ್ಷ ರುಪಾಯಿ ಮಿತಿಯನ್ನು ಪರಿಚಯಿಸಿದ್ದಾರೆ.

ಕೇಂದ್ರ ಸರ್ಕಾರದ ಆದಾಯ- ಖರ್ಚಿನ ಲೆಕ್ಕಾಚಾರಕೇಂದ್ರ ಸರ್ಕಾರದ ಆದಾಯ- ಖರ್ಚಿನ ಲೆಕ್ಕಾಚಾರ

ಏಪ್ರಿಲ್ 1, 2021ರಿಂದ ಅನ್ವಯ ಆಗುವಂತೆ ಒಂದು ವರ್ಷದಲ್ಲಿ ಎನ್ ಪಿಎಸ್, ನಿವೃತ್ತಿ ನಿಧಿ ಮತ್ತು ಕಾರ್ಮಿಕ ಭವಿಷ್ಯ ನಿಧಿ ಈ ಮೂರೂ ಸೇರಿ ಉದ್ಯೋಗದಾತರು ತುಂಬುವ ಮೊತ್ತ 7.5 ಲಕ್ಷ ದಾಟಿದಲ್ಲಿ, ಆ ಮಿತಿಯ ಮೇಲ್ಪಟ್ಟ ಮೊತ್ತಕ್ಕೆ ತೆರಿಗೆ ಆಗುತ್ತದೆ. ಇನ್ನು ಇದಕ್ಕೆ ಸಂಬಂಧಿಸಿದಂತೆಯೇ ಬರುವ ಬಡ್ಡಿ, ಡಿವಿಡೆಂಡ್ ಅಥವಾ ಅದೇ ರೀತಿಯ ಯಾವುದೇ ವಾರ್ಷಿಕ ಮೊತ್ತವನ್ನು ಉದ್ಯೋಗದಾತರ ಮೂಲಕ ಪಡೆದ ಮೊತ್ತ ಎಂದೇ ಪರಿಗಣಿಸಲಾಗುತ್ತದೆ.

ಇಪಿಎಫ್ ಗೂ ಬೀಳಲಿದೆ ತೆರಿಗೆ; ಯಾರಿಗೆ, ಏನಿದು ಲೆಕ್ಕಾಚಾರ?

ಏಪ್ರಿಲ್ 1, 2021ರಿಂದ ಈ ತಿದ್ದುಪಡಿ ಜಾರಿಗೆ ಬರುತ್ತದೆ. ಈ ತೆರಿಗೆ ಲೆಕ್ಕಾಚಾರ ಅಸೆಸ್ ಮೆಂಟ್ ವರ್ಷ 2021-22ರಿಂದ ಅನ್ವಯ ಆಗುತ್ತದೆ. ಆದರೆ ಕಡಿಮೆ ಆದಾಯ ಇರುವಂಥ ಸಿಬ್ಬಂದಿಗೆ ಇದರಿಂದ ಯಾವುದೇ ತೆರಿಗೆ ಬರುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

English summary

EPF May Be Taxable For High Salary Individuals

EPF and other may be taxable for high salary individuals, how and why here is an explainer.
Story first published: Saturday, February 1, 2020, 17:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X