ಇಪಿಎಫ್‌ಒ ಸದಸ್ಯರಿಗೆ ಸಿಹಿಸುದ್ದಿ...ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನೌಕರರ ಠೇವಣಿಗೆ ಸಂಬಂಧಿತ ವಿಮಾ (ತಿದ್ದುಪಡಿ) ಯೋಜನೆ, 2025 (EDLI ಯೋಜನೆ) ಕುರಿತು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಈ ಯೋಜನೆಯು ಪಿಎಫ್ ಖಾತೆ ಹೊಂದಿರುವ ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಿಗುವ 50,000 ಪಾವತಿಯನ್ನು ಪಡೆಯುವ ಅರ್ಹತಾ ಮಾನದಂಡವನ್ನು ಸುಲಭಗೊಳಿಸಿದೆ.
ಹೌದು, ಈ ಹಿಂದೆ, ಉದ್ಯೋಗಿಯೊಬ್ಬರು ಪಿಎಫ್ ನಿಧಿಯ ಸದಸ್ಯರಾಗಿದ್ದಾಗ ಮರಣಹೊಂದಿದರೆ, ಕನಿಷ್ಠ 12 ತಿಂಗಳ ಸರಾಸರಿ ಭವಿಷ್ಯ ನಿಧಿ ಬಾಕಿ 50,000ಕ್ಕಿಂತ ಕಡಿಮೆಯಿದ್ದರು ಮತ್ತು ಅವರ ಕುಟುಂಬಕ್ಕೆ ಕನಿಷ್ಠ 50,000 ರೂ ಭರವಸೆಯ ಪ್ರಯೋಜನವನ್ನು ನೀಡಲಾಗುತ್ತಿತ್ತು.ಆದರೆ ಇದೀಗ ಈ ನಿಯಮವನ್ನು ಇಪಿಎಫ್‌ಒ ಮತ್ತಷ್ಟು ಇದೀಗ ಸಡಿಲಗೊಡಿದೆ.

ಇಪಿಎಫ್‌ಒ ಅಧಿಸೂಚನೆ ನೀಡಿರುವ ಮಾಹಿತಿಯ ಪ್ರಕಾರ ಯೋಜನೆಯಡಿ ಕನಿಷ್ಠ ಭರವಸೆಯ ಪ್ರಯೋಜನ ಪಡೆಯಲು ಕೆಲವೊಂದು ಷರತ್ತುಗಳು ಇದ್ದು,12 ತಿಂಗಳ ಅವಧಿಯಲ್ಲಿ, ಉದ್ಯೋಗದ ಎರಡು ಅವಧಿಗಳ ನಡುವಿನ 60 ದಿನಗಳವರೆಗಿನ ಅಂತರವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅಂತಹ ಸೇವೆಗಳನ್ನು ನಿರಂತರ ಸೇವೆಯೆಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟವಾಗಿ ಮಾಹಿತಿಯನ್ನು ತಿಳಿಸಲಾಗಿದೆ.
ಆರ್ಹತೆಗಳು ಏನಿರಬೇಕು?
ಇಪಿಎಫ್‌ಒ ನಿಯಮಗಳು ಮಾರ್ಗಸೂಚಿಗಳ ಪ್ರಕಾರ, ಉದ್ಯೋಗದಾತರ ಪಟ್ಟಿಯಲ್ಲಿರುವಾಗ ಕೊನೆಯ ಕೊಡುಗೆಯನ್ನು ಸ್ವೀಕರಿಸಿದ ಆರು ತಿಂಗಳ ಒಳಗಾಗಿ ಉದ್ಯೋಗಿ ಮರಣ ಹೊಂದಿದರೆ, ಆ ಉದ್ಯೋಗಿಯು ಈ ಯೋಜನೆಯಡಿ ಭರವಸೆಯ ಪ್ರಯೋಜನ ಪಡೆಯಲು ಆತ ಅರ್ಹನಾಗಿರುತ್ತೇನೆ.
ಉದ್ಯೋಗಿ ಠೇವಣಿ ಲಿಂಕ್ಡ್ ಇನ್ಶುರೆನ್ಸ್ (EDLI) ಯೋಜನೆಯು ಉದ್ಯೋಗದ ಅವಧಿಯಲ್ಲಿ ಮರಣ ಹೊಂದಿದ ಇಪಿಎಫ್ ಸದಸ್ಯರಿಗೆ ವಿಮಾ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಈ ಯೋಜನೆಯುಕಷ್ಟದ ಸಮಯದಲ್ಲಿ ಅವರ ಕುಟುಂಬಗಳಿಗೆ ಆರ್ಥಿಕ ನೆರವುವನ್ನು ನೀಡುತ್ತದೆ.ನಿಯಮಗಳ ಪರಿಷ್ಕರಣೆಯ ನಂತರ, ಇದು ಈಗ 50,000 ರೂ ಪಾವತಿಯನ್ನು ಖಾತರಿಪಡಿಸುತ್ತದೆ, ಇದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕವಾಗಿ ಹೆಚ್ಚಿನ ಸಹಾಯವಾಗುತ್ತದೆ.
ಇಪಿಎಫ್‌ಒದ ಇತರ ಹೊಸ ಬದಲಾವಣೆಗಳು
UPI ಮತ್ತು ATM ಮೂಲಕ ತಕ್ಷಣ ಪಿಎಫ್ ಹಣ ಹಿಂಪಡೆಯುವಿಕೆ: ಯುಪಿಐ ಅಥವಾ ಎಟಿಎಂ ಮೂಲಕ 1 ಲಕ್ಷ ರೂಪಾಯಿಗಳವರೆಗೆ ತಕ್ಷಣವೇ ಹಿಂಪಡೆಯಬಹುದು. ಇದು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಹಣವನ್ನು ಹಿಂಪಡೆಯಲು ಸುಲಭವಾಗುತ್ತದೆ.
ಆಟೋ ಸೆಟಲ್ಮೆಂಟ್ ಮಿತಿಯಲ್ಲಿ ಹೆಚ್ಚಳ: ಈ ಹಿಂದೆ, 1 ಲಕ್ಷ ರೂ.ವರೆಗಿನ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಇತ್ಯರ್ಥಪಡಿಸಲಾಗುತ್ತಿತ್ತು. ಈಗ ಈ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದು ಕ್ಲೈಮ್ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಕ್ಲೈಮ್ ಪ್ರಕ್ರಿಯೆಯು ಈಗ ಸುಲಭ: ಈ ಹಿಂದೆ ಪಿಎಫ್ ಕ್ಲೈಮ್‌ಗಳಲ್ಲಿ ದಾಖಲೆ ಪರಿಶೀಲನೆಗೆ 27 ಅಂಕಗಳಿದ್ದವು, ಈಗ ಇವುಗಳನ್ನು 18ಕ್ಕೆ ಇಳಿಸಲಾಗಿದೆ. ಈ ಕಾರಣದಿಂದಾಗಿ, ಹೆಚ್ಚಿನ ಕ್ಲೈಮ್‌ಗಳನ್ನು ಈಗ 3-4 ದಿನಗಳಲ್ಲಿ ಇತ್ಯರ್ಥಪಡಿಸಲಾಗುತ್ತಿದೆ.
ಮದುವೆ, ಅಧ್ಯಯನ ಮತ್ತು ಚಿಕಿತ್ಸೆಗಾಗಿ ಹಣ ಹಿಂಪಡೆಯುವಿಕೆ: ವೈದ್ಯಕೀಯ, ಶಿಕ್ಷಣ ಮತ್ತು ವಿವಾಹದಂತಹ ಪ್ರಮುಖ ಕಾರಣಗಳಿಗಾಗಿ ಇಪಿಎಫ್‌ಒ ಪಿಎಫ್ ಹಿಂಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಇದು ಜನರ ವೈಯಕ್ತಿಕ ಅಗತ್ಯಗಳನ್ನು ತ್ವರಿತವಾಗಿ ಪೂರೈಸಲು ಸಹಾಯ ಮಾಡುತ್ತದೆ.


Click it and Unblock the Notifications