ಉದ್ಯೋಗಿಗಳಿಗೆ ಸಿಹಿ ಸುದ್ದಿ..ಇನ್ಮುಂದೆ ಪಿಎಫ್ ಮೊತ್ತದ ವರ್ಗಾವಣೆ ಇನ್ನಷ್ಟು ಸರಳವಾಗುತ್ತದೆ. ಹೌದು,ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಖಾತೆ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಇನ್ನಷ್ಟು ಸುಲಭಗೊಳಿಸಲಾಗಿದೆ.
ಉದ್ಯೋಗ ಬದಲಿಸುವಾಗ ಉದ್ಯೋಗಿಯ ಪಿಎಫ್ (ಪ್ರಾವಿಡೆಂಟ್ ಫಂಡ್) ಖಾತೆಯ ವರ್ಗಾವಣೆಗಾಗಿ ಮುಂಚಿನ ಸಂಸ್ಥೆಯ ಅನುಮೋದನೆಯ ಅಗತ್ಯವಿಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ. ಉದ್ಯೋಗಿಗಳಿಗೆ ಸಮಯದ ವಿಳಂಬವಾಗುವುದಿಲ್ಲ.

ಉದ್ಯೋಗಿಯು ಖಾತೆ ವರ್ಗಾವಣೆಗೆ ನಮೂನೆ 13 ಅನ್ನು ಭರ್ತಿ ಮಾಡಿ ಸಲ್ಲಿಸುವುದು ಇನ್ನುಮುಂದೆ ಕಡ್ಡಾಯವಾಗಿದೆ. ಆದರೆ ಈ ಹಿಂದೆ ಪಿಎಫ್ ಮೊತ್ತವನ್ನು ಜಮೆ ಮಾಡಬೇಕಿರುವ ಕಚೇರಿಯು ಇದಕ್ಕೆ ಅನುಮೋದನೆ ನೀಡಬೇಕಿತ್ತು.ಆದರೆ ಇವಾಗ ಅರ್ಜಿ ಸಲ್ಲಿಸಲು ಯಾವುದೇ ಅಮುಮೋದನೆಯ ಅಗತ್ಯವಿಲ್ಲ. ಇದಕ್ಕಾಗಿ ಹೊಸ ತಂತ್ರಾಂಶವನ್ನು ಅಳವಡಿಸಲಾಗಿದೆ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆಯಲ್ಲಿ ವಿರವಣೆಯನ್ನು ನೀಡಲಾಗಿದೆ.
ಮೂಲ ಕಚೇರಿಯಿಂದ ಅನುಮೋದನೆ ಸಿಕ್ಕ ತಕ್ಷಣ, ಮೂಲ ಖಾತೆಯ ಮೊತ್ತವು ಉದ್ಯೋಗಿಯ ಹಾಲಿ ಖಾತೆಗೆ ಜಮೆಯಾಗುತ್ತದೆ. ಈ ಸರಳೀಕರಣವು EPFO (Employees' Provident Fund Organisation) ಸದಸ್ಯರಿಗೆ ಪ್ರಮುಖ ಪ್ರಯೋಜನಗಳನ್ನು ನೀಡುತ್ತದೆ. ಹೆಚ್ಚಿನ ಸಮಯ ಇದಕ್ಕೆ ತಗೆದುಕೊಳ್ಳತ್ತದೆ. ಪ್ರತಿ ವರ್ಷ 1.25 ಕೋಟಿ EPFO ಚಂದಾದಾರರು ಈ ಸುಲಭ ಪ್ರಕ್ರಿಯೆಯಿಂದ ಹೆಚ್ಚಿನ ಅನುಕೂಲ ಸಿಗುತ್ತದೆ. ಇದರಿಂದ ನೌಕರರು ಹೆಚ್ಚು ಸುಲಭವಾಗಿ ತಮ್ಮ ಹಣವನ್ನು ಟ್ರಾನ್ಸ್‌ಫರ್ ಮಾಡಿಕೊಳ್ಳಬಹುದು.
ಉದ್ಯೋಗಿಗಳಿಗೆ ಖಾತೆಗಗೆ ಬಹುಬೇಗನೆ ಜಮಾಮಾಡಲಾಗುತ್ತದೆ. ಸದಸ್ಯರ ಐಡಿ ಮತ್ತು ಲಭ್ಯವಿರುವ ಸದಸ್ಯರ ಇತರ ಮಾಹಿತಿಯ ಆಧಾರದ ಮೇಲೆ ಯುಎಎನ್ ಜನರೇಷನ್‌ಗೂ ಸೌಲಭ್ಯವನ್ನು ಪರಿಚಯವನ್ನು ಮಾಡಲಾಗುತ್ತದೆ.
ಈ ಎಲ್ಲಾ ಕ್ರಮಗಳು ಇಪಿಎಫ್‌ಒ ಸದಸ್ಯರಿಗೆ ಅನುಕೂಲವಾಗಲಿದ್ದು, ಸೇವೆಗಳು ಮತ್ತಷ್ಟು ಸರಳವಾಗುತ್ತದೆ. ಇದಲ್ಲದೇ ಕ್ಲೇಮ್‌ಗಳ ಆಟೋ ಸೆಟಲ್‌ಮೆಂಟ್‌ಗೆ ದೃಢೀಕರಣಗಳನ್ನು ಮತ್ತಷ್ಟು ಸುಲಭವಾಗುತ್ತದೆ. ಇದರಿಂದ ಸದಸ್ಯರಿಗೆ ಸಂಭವಿಸುವ ಸಮಸ್ಯೆಗಳನ್ನು ಕಡಿಮೆಯಾಗುತ್ತವೆ.
ಇತ್ತೀಚೆಗೆ ಇಪಿಎಫ್‌ಒದಲ್ಲಿ ಹಲವು ಬದಲಾವಣೆ
EPFO ಇತ್ತೀಚೆಗೆ ಹೆಚ್ಚು ಸುರಕ್ಷತೆ ಮತ್ತು ಸುಲಭ ಸೇವೆಗಳನ್ನು ಒದಗಿಸಲು ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ.
ಮುಖ ಚಹರೆ ದೃಢೀಕರಣ: ಉದ್ಯೋಗಿಗಳು ತಮ್ಮ ಯುಎಎನ್ (UAN) ಅನ್ನು ಸಕ್ರಿಯಗೊಳಿಸಲು ಆಧಾರ್ ಆಧರಿತ ಮುಖ ಚಹರೆಯ ದೃಢೀಕರಣ ಮಾಡುವ ಆಯ್ಕೆ ಪಡೆದಿದ್ದಾರೆ. ಇದು ಸುರಕ್ಷಿತ ಮತ್ತು ಸ್ಮಾರ್ಟ್ ವಿಧಾನವಾಗಿದೆ, ಏಕೆಂದರೆ ಪ್ರಕ್ರಿಯೆ ಹೆಚ್ಚು ನಿಖರವಾಗಿದ್ದು, ಬೇಡಿಕೆ ಇರುವುದರೊಂದಿಗೆ ಉಪಯೋಗಕ್ಕೆ ಅನುಕೂಲವಾಗುತ್ತದೆ.
ಉಮಾಂಗ್ ಆ್ಯಪ್: ಉಮಾಂಗ್ ಮೊಬೈಲ್ ಆ್ಯಪ್ ಮೂಲಕ ಉದ್ಯೋಗಿಗಳು ನೇರವಾಗಿ ತಮ್ಮ ಯುಎಎನ್ ಮತ್ತು ಸಂಬಂಧಿಸಿದ ಸೇವೆಗಳನ್ನು ಪಡೆಯಬಹುದು. ಇದು EPFO ಸೇವೆಗಳ ಸುಲಭ ಪ್ರವೇಶವನ್ನು ಒಳಗೊಂಡಿದೆ, ಹಾಗೂ ಸೇವೆಗಳು ಹೆಚ್ಚು ದ್ರುತಗತಿಯಲ್ಲಿಯೂ, ಕಾರ್ಯಕ್ಷಮವಾಗಿಯೂ ಸಿಗ
ಆಧಾರ್ ಆಧಾರಿತ ತಂತ್ರಜ್ಞಾನ: EPFO ಇದರೊಂದಿಗೆ ಆಧಾರ್ ಜೊತೆ ಸಂಪರ್ಕ ಹೊಂದಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು, ಸೇವೆಗಳ ಲಭ್ಯತೆ ಮತ್ತು ಭದ್ರತೆ ಹೆಚ್ಚಿಸಲಿದೆ. ಇದರ ಮೂಲಕ, EPFO ಸೇವೆಗಳನ್ನು ಬಳಸುವ ಪ್ರಕ್ರಿಯೆಗಳು ಇನ್ನಷ್ಟು ಸುಗಮವಾಗಲಿದೆ.
ಇದಕ್ಕೂ ಮೊದಲು ಇಪಿಎಫ್‌ಒ ತನ್ನ ಆನ್‌ಲೈನ್ ಹಣ ವಿತ್‌ಡ್ರಾ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿತ್ತು.
ಪಿಎಫ್ ಮೊತ್ತದ ವರ್ಗಾವಣೆಯ ಪ್ರಯೋಜನಗಳು ಯಾವುವು..?
ಉದ್ಯೋಗಿಗಳಿಗೆ ತಮ್ಮ ಪಿಎಫ್ ಮೊತ್ತದ ವರ್ಗಾವಣೆಯನ್ನು ಸುಗಮವಾಗಿ ಇತರ ಉದ್ಯೋಗ ಸಂಸ್ಥೆಗೆ ವರ್ಗಾಯಿಸಬಹುದು. ಇದು EPFO (Employees' Provident Fund Organisation) ಸದಸ್ಯರಿಗೆ ಹಲವು ಪರಿಣಾಮಗಳನ್ನು ತರಲು ಸಹಾಯಕವಾಗಿದೆ.
1. ಹಣವನ್ನು ಸುರಕ್ಷಿತವಾಗಿ ಇಡುವ ಅವಕಾಶ
ಉದ್ಯೋಗಿಯ ಪಿಎಫ್ ಮೊತ್ತವು ಪೂರ್ಣಗೊಂಡ ಸಂಸ್ಥೆಯಲ್ಲಿ ಉಳಿಯದೆ, ಹೊಸ ಸಂಸ್ಥೆಗೆ ವರ್ಗಾಯಿಸುವುದರಿಂದ, ಹಣವನ್ನು ಸುರಕ್ಷಿತವಾಗಿ ಇಡುವ ಅವಕಾಶ ದೊರಕುತ್ತದೆ. ಇದು ದೀರ್ಘಕಾಲದ ಹೂಡಿಕೆಗಾಗಿ ಪಿಎಫ್ ನಿಧಿಯ ನಿರ್ವಹಣೆಯ ಮುಂದುವರಿಕೆಯನ್ನು ನೀಡುತ್ತದೆ.
2. ಆಧಾರಿತ ಕೊಡುಗೆಗಳ ಜಮಾ
ಪಿಎಫ್ ಮೊತ್ತವನ್ನು ಇತರ ಸಂಸ್ಥೆಗೆ ವರ್ಗಾಯಿಸುವುದರಿಂದ, ಪಿಎಫ್ ಕೊಡುಗೆಗಳು ಹಾಗೆಯೇ ಜಮೆಯಾಗುತ್ತವೆ, ಹಾಗಾಗಿ ಅಲ್ಲಿಗೆ ಸಂಬಂಧಿಸಿದ ಬಡ್ಡಿ ದೊರಕುತ್ತದೆ.
3.ಒಟ್ಟಾರೆ ನಿವೃತ್ತಿ ನಿಧಿ
ಪಿಎಫ್ ಮೊತ್ತವನ್ನು ಸರಳವಾಗಿ ವರ್ಗಾಯಿಸುವುದರಿಂದ, ನಿಮ್ಮ ನಿವೃತ್ತಿ ನಿಧಿಯು ಎಷ್ಟೇ ಕಂಪನಿಗಳು ಬದಲಾಗಿದ್ರೂ ಸರಾಗವಾಗಿ ವೃದ್ಧಿಯಾಗುತ್ತದೆ. ಇದರಿಂದ ಪರಿಸ್ಥಿತಿ ಬಗ್ಗೆ ಹೆಸರಾಂತ ಸಮಸ್ಯೆಗಳು ತಲುಪಲು ಸಾಧ್ಯವಿಲ್ಲ.
4. ನೇರ ಸೇವೆ
EPFO ಖಾತೆಗೆ ಮೊತ್ತವನ್ನು ವರ್ಗಾಯಿಸಿದ ನಂತರ, ಉದ್ಯೋಗಿಯು ನೇರವಾಗಿ EPFO ಯೊಂದಿಗೆ ಹೋಲಿಕೆ ಮತ್ತು ಸೇವೆ ಪಡೆಯಲು ಹೆಚ್ಚು ಸುಲಭವಾಗುತ್ತದೆ. ಇದರಿಂದ ಯಾವುದೇ ವಿಳಂಬಗಳು ಕಡಿಮೆಯಾಗುತ್ತವೆ.
5. ಸರಳೀಕರಣ
ಹೊಸ ತಂತ್ರಾಂಶ ಮತ್ತು ಸರಳೀಕೃತ ಪ್ರಕ್ರಿಯೆಗಳನ್ನು ಒಳಗೊಂಡಿರುವುದರಿಂದ, ಪಿಎಫ್ ಮತ್ತು ವರ್ಗಾವಣೆಯ ಪ್ರಕ್ರಿಯೆಗಳು ಹೆಚ್ಚು ಸರಳವಾಗಿವೆ ಇದರಿಂದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications