ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ತನ್ನ ನಿಯಮವನ್ನು ಬಿಗಿಗೊಳಿಸಿದೆ. ನಿರ್ದಿಷ್ಟ ಕಾರಣಗಳಿಂದಾಗಿ ಕೆಲವು ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸಿದೆ. ಅಷ್ಟು ಮಾತ್ರವಲ್ಲದೆ ಆ ಪಿಂಚಣಿದಾರರಿಗೆ ಶೋಕಾಸ್ ನೋಟಿಸ್ ಅನ್ನು ಕೂಡಾ ಜಾರಿ ಮಾಡಿದೆ. ಈ ಹಿಂದೆ ಪಾವತಿ ಮಾಡಲಾದ ಪಿಂಚಣಿಯನ್ನು ಮರುಪಾವತಿ ಮಾಡಿ ಎಂದು ಕೂಡಾ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಅನೇಕ ಪಿಂಚಣಿದಾರರು ಯಾವುದೇ ಸೂಚನೆ ನೀಡದೆಯೇ ಜನವರಿ 2023ರಿಂದ ಪಿಂಚಣಿ ಪಡೆಯುತ್ತಿಲ್ಲ. ತಮ್ಮ ಪಿಂಚಣಿಯನ್ನು ಮತ್ತೆ ಪಡೆಯುವುದು ಹೇಗೆ ಎಂಬುವುದನ್ನು ತಿಳಿಯಲು ಕಾನೂನು ಆಯ್ಕೆಗಳನ್ನು ನೋಡುತ್ತಿದ್ದಾರೆ. ಪಿಂಚಣಿದಾರರ ಹಕ್ಕುಗಳ ಕಾರ್ಯಕರ್ತ ಪರ್ವೀನ್ ಕೊಹ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪಿಂಚಣಿದಾರರ ಹಕ್ಕುಗಳ ಕಾರ್ಯಕರ್ತ ಪರ್ವೀನ್ ಕೊಹ್ಲಿ ತಮ್ಮ ಸೇವೆಯ ಅವಧಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಇಪಿಎಫ್ ಯೋಜನೆ, 1952 ರ ಸೆಕ್ಷನ್ 26 (6) ರ ಅಡಿಯಲ್ಲಿ ಜಂಟಿ ಆಯ್ಕೆಯನ್ನು ಬಳಸಿದ್ದಾರೆ. ಇದನ್ನು ನಿವೃತ್ತಿ ನಿಧಿ ವ್ಯವಸ್ಥಾಪಕರು ಅನುಮೋದಿಸಿದ್ದಾರೆ. ನವೆಂಬರ್ 16, 1995 ರಿಂದ ನಿಜವಾದ ಸಂಬಳದ ಮೇಲೆ ಶೇಕಡ 8.33 ರ ದರದಲ್ಲಿ ವ್ಯತ್ಯಾಸದ ಮೊತ್ತವು ಹೆಚ್ಚಿನ ಪಿಂಚಣಿಗಾಗಿ ಅವರ ನಿವೃತ್ತಿಯಾಗಿದೆ.
ಪಿಂಚಣಿದಾರರ ಹಕ್ಕುಗಳ ಕಾರ್ಯಕರ್ತ ಪರ್ವೀನ್ ಕೊಹ್ಲಿ ಹೇಳುವುದೇನು?
"ಇಪಿಎಫ್‌ಒ ಈ ವರ್ಷದ ಜನವರಿಯಲ್ಲಿ 30,592 ರೂಪಾಯಿಗಳ ಮಾಸಿಕ ಪಿಂಚಣಿಗಾಗಿ ನನ್ನ ಪಿಪಿಒ ಅನ್ನು ರದ್ದುಗೊಳಿಸಿದೆ. ಮತ್ತು ಹೊಸ ಪಿಪಿಒ ಅನ್ನು ಬಿಡುಗಡೆ ಮಾಡಿದೆ. ಹಾಗೆಯೇ ಅವರ ಪಿಂಚಣಿಯು ತಿಂಗಳಿಗೆ 2,372 ರೂ ಆಗಿರುತ್ತದೆ. ಇದು ನನ್ನ ಸಾಂವಿಧಾನಿಕ ಹಕ್ಕಿಗೆ ವಿರುದ್ಧವಾಗಿದೆ. ಇದು ನಮ್ಮ ನಂಬಿಕೆಯನ್ನು ಉಲ್ಲಂಘನೆ ಮಾಡಿದಂತಾಗಿದೆ," ಎಂದು ತಿಳಿಸಿದ್ದಾರೆ.
"ಇಪಿಎಫ್‌ಒ ಆಗಲಿ ಅಥವಾ ಉದ್ಯೋಗಿಗಳಲ್ಲಿ ಆಗಲಿ ನಾವು ಎಂದಿಗೂ ಕೂಡಾ ಅಧಿಕ ಪಿಂಚಣಿ ಆಯ್ಕೆ ನಮಗೆ ಬೇಕೆಂದು ಕೇಳಿಲ್ಲ. ಆರ್‌ಸಿ ಗುಪ್ತಾ ಪ್ರಕರಣ 2006ರಲ್ಲಿ ಸುಪ್ರೀಂ ಕೋರ್ಟ್ ಹೆಚ್ಚಿನ ಪಿಂಚಣಿಗಾಗಿ ಕಟ್ ಆಫ್ ಡೇಟ್ ಇರುವಂತಿಲ್ಲ ಎಂದು ತಿಳಿಸಿದೆ. ಅದಾದ ಬಳಿಕ ಇಪಿಎಫ್‌ಒ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಿದೆ. ನಾನು ಅದಕ್ಕೆ ಅರ್ಜಿ ಸಲ್ಲಿಸಿದ್ದೇನೆ. ವ್ಯತ್ಯಾಸವಿರುವ ಮೊತ್ತವನ್ನು ಪಾವತಿಸಿದ್ದೇನೆ," ಎಂದು ನೀಲಮ್ ಗುಪ್ತಾ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ನೀಲಮ್ ಗುಪ್ತಾ ಫೆಬ್ರವರಿ 2013ರಲ್ಲಿ ನಿವೃತ್ತಿ ಹೊಂದಿದ್ದಾರೆ. ಅವರಿಗೂ ಕೂಡಾ ಈ ಹಿಂದೆ ಇಂತಹುದ್ದೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ನೀಲಮ್ ಗುಪ್ತಾರಿಗೆ ಪಿಂಚಣಿ ನೀಡುವುದನ್ನು ಇಪಿಎಫ್‌ಒ ಸ್ಥಗಿತ ಮಾಡಿದೆ. ಜನವರಿ ತಿಂಗಳಿನಿಂದ ಮಾಸಿಕ ಪಿಂಚಣಿ 9,408 ರೂಪಾಯಿಯನ್ನು ಪಾವತಿ ಮಾಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.
"ದಾಖಲೆಯ ಪ್ರಕಾರ, ನೀವು ನಿವೃತ್ತಿಯ ದಿನಾಂಕದ ನಂತರ ನಿಮ್ಮ ಆಯ್ಕೆಯನ್ನು ಸಲ್ಲಿಸಿದ್ದೀರಿ. ಆದ್ದರಿಂದ, ನೀವು ಹೆಚ್ಚಿನ ಪಿಂಚಣಿಗೆ ಅರ್ಹರಲ್ಲ ಮತ್ತು ನಿಮ್ಮ ಪಿಂಚಣಿಯನ್ನು ಕನಿಷ್ಠ ವೇತನದ ಮೇಲೆ ನೀಡಲಾಗುವ ಪಿಂಚಣಿಗೆ ಬದಲಾವಣೆ ಮಾಡಲಾಗುತ್ತದೆ. ಇದಲ್ಲದೆ, ಹೆಚ್ಚುವರಿ ಪಿಂಚಣಿ ಮೊತ್ತದ ವಸೂಲಾತಿಯನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು," ಎಂದು ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ ಸೂಚನೆ ತಿಳಿಸಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications