ನೀವು ನಿಮ್ಮ EPFO ಪ್ರೊಫೈಲ್ ಅನ್ನು ಸುಲಭವಾಗಿ ನವೀಕರಿಸಬಹುದು. ಇದಕ್ಕಾಗಿ ನೀವು ಪರದಾಡುವ ಅಗತ್ಯ ಇಲ್ಲ. ನೀವು ನಿಮ್ಮ ಮನೆಲ್ಲೇ ಕುಳಿತುಕೊಂಡು ನಿಮ್ಮ EPFO ಪ್ರೊಫೈಲ್ ಅಪ್‌ಡೇಟ್ ಮಾಡಬಹುದು. ಹೀಗಾಗಿಯೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ಅಪ್‌ಡೇಟ್ ಪ್ರಕ್ರಿಯೆಯನ್ನ ಸುಲಭಗೊಳಿಸಲು ಕೆಲವು ಬದಲಾವಣೆಗಳನ್ನ ಮಾಡಿದೆ. ಇದರಿಂದಾಗಿ EPFO ಸದಸ್ಯರಿಗೆ ಬಹಳಷ್ಟು ಲಾಭಗಳು ದೊರೆಯಲಿವೆ. ಈ ಹೊಸ ಬದಲಾವಣೆಯಿಂದಾಗಿ EPFO ಸದಸ್ಯರು ತಮ್ಮ ಪ್ರೊಫೈಲ್ ಅನ್ನು ಸುಮಭವಾಗಿ ನವೀಕರಿಸಲು ಮತ್ತು ಮರುಸಲ್ಲಿಸಲು ಸಹಾಯವಾಗುತ್ತದೆ.
ಯಾವುದೇ ದಾಖಲೆ ಸಲ್ಲಿಸದೇ ನಿಮ್ಮ ಪ್ರೊಪೈಲ್ ನವೀಕರಿಸಬಹುದು
ಈ ಹೊಸ ಬದಲಾವಣೆ ಮೂಲಕ ನೀವು ಯಾವುದೇ ದಾಖಲೆಗಳ ಅಗತ್ಯವಿಲ್ಲದೆ ನೀವು ನಿಮ್ಮ ಇಪಿಎಫ್‌ಒ ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡಬಹುದು. ಇದಕ್ಕಾಗಿ ನೀವು ಯಾವುದೇ ದಾಖಲೆಗಳನ್ನ ಸಲ್ಲಿಸುವ ಅಗತ್ಯವಿಲ್ಲ. ಯಾವುದೇ ದಾಖಲೆಗಳನ್ನ ಹಾಖದೆ ನೀವು ನಿಮ್ಮ ಹೆಸರು, ವಿಳಾಸ, ಜನ್ಮದಿನಾಂಕ, ರಾಷ್ಟ್ರೀಯತೆ, ಪೋಷಕರ ಹೆಸರು, ವೈವಾಹಿಕ ಸ್ಥಿತಿ ಸೇರಿದಂತೆ ನಿಮ್ಮ ವಿವರಗಳನ್ನ ನೀವು ನವೀಕರಿಸಬಹುದು. ಅಕ್ಟೋಬರ್ 1, 2017 ರ ನಂತರ ನೀಡಿರುವ UANಗಳಿಗೆ ಮಾತ್ರ ಈ ಅವಕಾಶ ಇರುತ್ತದೆ. ಅವರು ತಮ್ಮ ಉದ್ಯೋಗದಾತರ ಅನುಮತಿ ಇಲ್ಲದೇ ತಮ್ಮ ಪ್ರೊಫೈಲ್ ಅಪ್‌ಡೇಟ್ ಮಾಡಬಹುದು.

ಉದ್ಯೋಗದಾತರ ಪರಿಶೀಲನೆಯ ಅಗತ್ಯವಿಲ್ಲ
ಈ ಮೊದಲು EPFO ಸದಸ್ಯರು ತಮ್ಮ ಖಾತೆಯಲ್ಲಿ ಯಾವುದೇ ಬದಲಾವಣೆಗಳನ್ನ ಮಾಡುವ ಮೊದಲು ಅವರು ತಮ್ಮ ಉದ್ಯೋಗದಾತರ ಅನುಮತಿಯನ್ನ ಪಡೆಯಬೇಕಿತ್ತು. ಆದ್ರೆ ಈಗ ಅದರ ಅಗತ್ಯವಿಲ್ಲ. ಈ ಹೊದ ಬದಲಾವಣೆ ನಂತರ EPFO ಸದಸ್ಯರು ತಮ್ಮ ಪ್ರೊಫೈಲ್‌ಗಳನ್ನ ಅವರೇ ಅಪ್‌ಡೇಟ್ ಮಾಡಿಕೊಳ್ಳಬಹುದು. ಇನ್ನು ನಿಮ್ಮ ಪ್ರೊಫೈಲ್ ಎಡಿಟ್ ಮಾಡಲು ನಿಮ್ಮ ಆಧಾರ್, ಪ್ಯಾನ್ ಅನ್ನು ನಿಮ್ಮ ಪಿಎಫ್ ಖಾತೆಗೆ ಲಿಂಕ್ ಮಾಡುವುದು ಮುಖ್ಯ. ನಿಮ್ಮ ಕಾತೆಯಲ್ಲಿ ಯಾವುದೇ ಬದಲಾವಣೆಗಳಿದ್ದರೂ ಕೂಡ ನೀವು ಸುಲಭವಾಗಿ ಸರಿಪಡಿಸಿಕೊಳ್ಳಬಹುದು.
ಪ್ರೊಪೈಲ್ ಅನ್ನು ನವೀಕರಿಸುವುದು ಹೇಗೆ ತಿಳಿಯಿರಿ
-ನೀವು ನಿಮ್ಮ ಇಪಿಎಫ್‌ಒ ಪ್ರೊಫೈಲ್ ಅನ್ನು ನವೀಕರಿಸಲು ಮೊದಲು ನೀವು https://unifiedportal-mem.epfindia.gov.in/memberinterface/ ಪೋರ್ಟಲ್‌ಗೆ ಭೇಟಿ ನೀಡಿ.
-ನೀವು ನಿಮ್ಮ UAN ಸಂಖ್ಯೆ, ಪಾಸ್‌ವರ್ಡ್ ಕ್ಯಾಪ್ಚಾ ನಮೂದಿಸಿ ಲಾಗಿನ್ ಮಾಡಿ.
-ನಂತರ ನಿರ್ವಹಿಸು ಮೇಲೆ ಕ್ಲಿಕ್ ಮಾಡಿ, ಜೊತೆಗೆ ನೀವು ನವೀಕರಿಸಲು ಬಯಸುವ ವಿಭಾಗವನ್ನ ಆಯ್ಕೆ ಮಾಡಿ.
-ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ಮಾಹಿತಿಯಂತೆ ನೀವು ನಿಮ್ಮ ವಿವರಗಳನ್ನ ಹಾಕಿ
-ಇನ್ನು ಅಗತ್ಯವಿದ್ದರೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಜೊತೆಗೆ ಜನನ ಪ್ರಮಾಣ ಪತ್ರಗಳನ್ನ ಪರಿಶೀಲಿಸಿ ನಿಮ್ಮ ಪ್ರೊಫೈಲ್ ನವೀಕರಿಸಿ.
EPFO ಪ್ರೊಫೈಲ್ ನವೀಕರಿಸುವುದರಿಂದ ಲಾಭವೇನು?
ನಿಖರವಾದ ದಾಖಲಾತಿ ಹೊಂದುವುದು: ಇದು ನಿಮ್ಮ ವೈಯಕ್ತಿಕ ವಿವರಗಳಾದ ಹೆಸರು, ಜನ್ಮ ದಿನಾಂಕ ಮತ್ತು ಸಂಪರ್ಕ ಮಾಹಿತಿಯು ನವೀಕೃತವಾಗಿದೆ ಎಂದು ಖಚಿತಪಡಿಸುತ್ತದೆ, ಇದು ಭವಿಷ್ಯದಲ್ಲಿ ಕ್ಲೈಮ್‌ಗಳು ಮತ್ತು ಹಿಂಪಡೆಯುವಿಕೆಗಳ ಸುಗಮ ಪ್ರಕ್ರಿಯೆಗೆ ನಿರ್ಣಾಯಕವಾಗಿದೆ.
ಸಮಯೋಚಿತ ವರ್ಗಾವಣೆಗಳು ಮತ್ತು ಹಿಂಪಡೆಯುವಿಕೆಗಳು : ನಿಮ್ಮ ಇಪಿಎಫ್‌ಒ ಪ್ರೊಫೈಲ್ ಅನ್ನು ನವೀಕರಿಸಿದರೆ, ಉದ್ಯೋಗಗಳನ್ನು ಬದಲಾಯಿಸುವಾಗ ಅಥವಾ ನಿವೃತ್ತಿ, ರಾಜೀನಾಮೆ ಅಥವಾ ಇತರ ಮಾನ್ಯ ಕಾರಣಗಳ ಸಂದರ್ಭದಲ್ಲಿ ಬಾಕಿ ಹಣವನ್ನು ಹಿಂತೆಗೆದುಕೊಳ್ಳುವಾಗ ಹಣವನ್ನು ಸುಲಭವಾಗಿ ವರ್ಗಾಯಿಸಲು ಸಹಾಯ ಮಾಡುತ್ತದೆ.
ಡೇಟಾ ವ್ಯತ್ಯಾಸಗಳನ್ನ ಸರಿಪಡಿಸುವುದು : ಕೆಲವೊಮ್ಮೆ, ನಿಮ್ಮ EPFO ದಾಖಲೆಗಳು ಮತ್ತು ನಿಮ್ಮ ಅಧಿಕೃತ ದಾಖಲೆಗಳ ನಡುವೆ ವ್ಯತ್ಯಾಸಗಳಿರಬಹುದು. ನಿಮ್ಮ ಪ್ರೊಫೈಲ್ ಅನ್ನು ನವೀಕರಿಸುವುದು ಇವುಗಳನ್ನು ಸರಿಪಡಿಸಲು ಮತ್ತು ಕ್ಲೈಮ್‌ಗಳ ಸಮಯದಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಆಧಾರ್ ಮತ್ತು ಯುಎಎನ್ ಲಿಂಕ್ ಮಾಡುವುದು : ನಿಮ್ಮ ಯುಎಎನ್ ಜೊತೆಗೆ ನಿಮ್ಮ ಆಧಾರ್ ಲಿಂಕ್ ಮಾಡುವುದರಿಂದ ಸೇವೆಗಳ ಸುಗಮ ಪ್ರಕ್ರಿಯೆ ಮತ್ತು ಇಪಿಎಫ್ ಬ್ಯಾಲೆನ್ಸ್ ಚೆಕ್, ಆನ್‌ಲೈನ್ ಕ್ಲೈಮ್‌ಗಳು ಇತ್ಯಾದಿ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ಖಚಿತಪಡಿಸುತ್ತದೆ.
ಪ್ರಯೋಜನಗಳು ಮತ್ತು ಸೇವೆಗಳು : ನಿಮ್ಮ ಪ್ರೊಫೈಲ್ ನವೀಕೃತವಾಗಿದ್ದರೆ, ನೀವು ವಿಳಂಬವಿಲ್ಲದೆ ವಿವಿಧ EPFO ಸೇವೆಗಳನ್ನು ಪ್ರವೇಶಿಸಬಹುದು. ಇದು ಪ್ರಧಾನ ಮಂತ್ರಿ ರೋಜ್‌ಗರ್ ಪ್ರೋತ್ಸಾಹನ್ ಯೋಜನೆಯಂತಹ ಯೋಜನೆಗಳನ್ನು ಪಡೆಯುವುದು ಅಥವಾ ನೌಕರರ ಪಿಂಚಣಿ ಯೋಜನೆಯಡಿ ಪ್ರಯೋಜನಗಳನ್ನು ಪಡೆಯುವುದನ್ನು ಒಳಗೊಂಡಿರುತ್ತದೆ.
ನಿಮ್ಮ ಕೊಡುಗೆಗಳನ್ನ ಟ್ರ್ಯಾಕ್ ಮಾಡುವುದು : ನಿಮ್ಮ ಪ್ರೊಫೈಲ್ ಅನ್ನು ನವೀಕರಿಸುವ ಮೂಲಕ, ನಿಮ್ಮ ಇಪಿಎಫ್ ಖಾತೆಗೆ ನಿಮ್ಮ ಉದ್ಯೋಗದಾತರ ಕೊಡುಗೆಗಳು ಸರಿಯಾಗಿ ಪ್ರತಿಫಲಿಸುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು, ಇದು ನಿಮ್ಮ ಉಳಿತಾಯವನ್ನು ಟ್ರ್ಯಾಕ್ ಮಾಡಲು ಮತ್ತು ಭವಿಷ್ಯಕ್ಕಾಗಿ ಯೋಜಿಸಲು ಸಹಾಯ ಮಾಡುತ್ತದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications