ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹಣಕಾಸು ನೀತಿಯಲ್ಲಿ, ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿತ್ತು. ಅದೇನೆಂದರೆ ಆರ್ಥಿಕತೆಯ ಚುರುಕುತನ ಹೆಚ್ಚಿಸುವ ಉದ್ದೇಶದಿಂದ, ರೆಪೋ ದರವನ್ನು 5.75%ರಿಂದ 5.5%ಕ್ಕೆ ಇಳಿಸಿದೆ. ಈ ಕ್ರಮದಿಂದ ವಾಣಿಜ್ಯ ಬ್ಯಾಂಕುಗಳಿಗೆ ಲಾಭದಾಯಕ ಸುದ್ದಿಯಾಗಿದೆ.

ಅಂದರೆ ಈ ಕ್ರಮದ ಅನುಸಾರ, ಆರ್‍ಬಿಐನಿಂದ ಸಾಲ ಪಡೆಯುವ ವಾಣುಜ್ಯ ಬ್ಯಾಂಕುಗಳಿಗೆ ಬಡ್ಡಿದರ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ, ಹಲವಾರು ಪ್ರಮುಖ ಬ್ಯಾಂಕುಗಳು ತಮ್ಮ ಸ್ಥಿರ ಠೇವಣಿ (ಎಫ್‌ಡಿ) ದರಗಳನ್ನು ಮರುಪರಿಶೀಲಿಸಿ ಕಡಿತಗೊಳಿಸಿವೆ.
ಆರ್‌ಬಿಐ ತನ್ನ ರೆಪೊ ದರವನ್ನು 5.75% ರಿಂದ 5.5% ಕ್ಕೆ ಇಳಿಸಿರುವುದು ಈ ಬೆಳವಣಿಗೆಯ ಹಿನ್ನೆಲೆಯಾಗಿದೆ. ರೆಪೊ ದರ ಇಳಿಕೆಯಿಂದಾಗಿ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ಲಭ್ಯತೆಯು ಸುಲಭವಾಗಿದ್ದು, ಬಡ್ಡಿದರ ಕಡಿತಗೊಳಿಸಲು ಪ್ರೇರಣೆ ನೀಡಿದೆ. 2025ರ ಜುಲೈ ತಿಂಗಳು ಆರಂಭವಾಗುತ್ತಿದ್ದಂತೆಯೇ, ಬ್ಯಾಂಕುಗಳ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳಲ್ಲಿ ಕಂಡುಬರುತ್ತಿರುವ ಬದಲಾವಣೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಹಾಗಾದ್ರೆ ಜುಲೈನಲ್ಲಿ ಕಾಣಬಹುದಾದಂತಹ ಬದಲಾವಣೆಗಳೇನು ಎಂದು ಇಲ್ಲಿ ತಿಳಿಯಿರಿ.
FD ಬಡ್ಡಿದರವು ಇಳಿಕೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಬಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಸೇರಿದಂತೆ ಪ್ರಮುಖ ಬ್ಯಾಂಕುಗಳು ಈಗಾಗಲೇ ತಮ್ಮ ಎಫ್‌ಡಿ ದರಗಳನ್ನು ಇಳಿಸಿರುವುದಾಗಿ ಅಧಿಕೃತವಾಗಿ ಪ್ರಕಟಿಸಿವೆ.
ಎಸ್‌ಬಿಐ ಒಂದುರಿಂದ ಎರಡು ವರ್ಷಗಳ ಅವಧಿಯ ಠೇವಣಿಗಳಿಗೆ ನೀಡುವ ಬಡ್ಡಿದರವನ್ನು ವರ್ಷಕ್ಕೆ 6.50%ರಿಂದ 6.25%ಕ್ಕೆ ಇಳಿಸಿದೆ. ಈ ಬದಲಾವಣೆ ರೂ. 3 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಜೂನ್ 15 ರಿಂದ ಜಾರಿಗೆ ಬಂದಿದೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಸಹ ಜೂನ್ 25ರಿಂದ ಹೊಸ ದರವನ್ನು ಜಾರಿಗೆ ತಂದಿದ್ದು, 3 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳಿಗೆ 6.25% ವಾರ್ಷಿಕ ಬಡ್ಡಿದರವನ್ನು ನೀಡುತ್ತಿದೆ. ಈ ದರವು ವಿಶೇಷವಾಗಿ 12 ತಿಂಗಳುಗಳಲ್ಲದೆ 15 ತಿಂಗಳೊಳಗಿನ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಇತರ ಅವಧಿಗಳ ಠೇವಣಿಗಳಿಗೆ ಬಡ್ಡಿದರಗಳಲ್ಲಿ ವ್ಯತ್ಯಾಸವಿರಬಹುದು.
ಖಾಸಗಿ ಬ್ಯಾಂಕುಗಳ ಹೊಸ ಎಫ್‌ಡಿ ದರಗಳು:
ಆಕ್ಸಿಸ್ ಬ್ಯಾಂಕ್ ಕೂಡ ಜೂನ್ 12ರಿಂದ ಹೊಸ ಎಫ್‌ಡಿ ಬಡ್ಡಿದರವನ್ನು ಜಾರಿಗೆ ತಂದಿದೆ. ಒಂದು ವರ್ಷದಿಂದ ಒಂದು ವರ್ಷ ಮತ್ತು 10 ದಿನಗಳ ಅವಧಿಗೆ ನೀಡುವ ಎಫ್‌ಡಿಗಳಿಗೆ ಆಕ್ಸಿಸ್ ಬ್ಯಾಂಕ್ ವಾರ್ಷಿಕ 6.25% ಬಡ್ಡಿದರವನ್ನು ನಿಗದಿ ಪಡಿಸಿದೆ.
ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮುಂತಾದ ಇತರೆ ಬ್ಯಾಂಕುಗಳೂ ಬಡ್ಡಿದರಗಳನ್ನು ಇಳಿಸುತ್ತಾ ತಮ್ಮ ಗ್ರಾಹಕರಿಗೆ ನವೀಕರಿಸಿದ ದರಗಳ ಮಾಹಿತಿಯನ್ನು ಪ್ರಕಟಿಸುತ್ತಿವೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ 3 ಕೋಟಿ ರೂ.ವರೆಗಿನ ಠೇವಣಿಗಳಿಗೆ, 366 ದಿನಗಳ ಅವಧಿಗೆ 6.70% ಬಡ್ಡಿದರವನ್ನು ನೀಡುತ್ತಿದೆ. ಈ ದರವು ಮಧ್ಯಮ ಅವಧಿಯ ಠೇವಣಿಗಳನ್ನು ಗಮನದಲ್ಲಿಟ್ಟುಕೊಂಡಿರುವ ಗ್ರಾಹಕರಿಗೆ ಸ್ಪರ್ಧಾತ್ಮಕ ಆಯ್ಕೆಯಾಗಿದೆ.
ಮುಖ್ಯ ಬ್ಯಾಂಕುಗಳ ಬಡ್ಡಿದರ ಕಡಿತದ ನಡುವೆಯೂ, ಸಣ್ಣ ಹಣಕಾಸು ಸಂಸ್ಥೆಗಳು ಹೆಚ್ಚು ಬಡ್ಡಿದರವನ್ನು ನೀಡುತ್ತಿವೆ. ಉದಾಹರಣೆಗೆ, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಒಂದು ವರ್ಷದ ಎಫ್‌ಡಿಗಳಿಗೆ ವರ್ಷಕ್ಕೆ 7.90% ಬಡ್ಡಿದರ ನೀಡುತ್ತಿದೆ, ಇದು ಪ್ರಮುಖ ಬ್ಯಾಂಕುಗಳಿಗಿಂತ ಗಮನಾರ್ಹವಾಗಿ ಅಧಿಕವಾಗಿದೆ.
ಯೆಸ್ ಬ್ಯಾಂಕ್ ಕೂಡ ಸ್ಪರ್ಧಾತ್ಮಕ ದರ ನೀಡುತ್ತಿರುವಂತಿದ್ದು, 3 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳಿಗೆ 12 ತಿಂಗಳ ಅವಧಿಗೆ 6.75% ಬಡ್ಡಿದರ ನೀಡುತ್ತಿದೆ.
ಆರ್‌ಬಿಐ ರೆಪೊ ದರ ಇಳಿಕೆಯಿಂದಾಗಿ, ಬ್ಯಾಂಕುಗಳ ಸಾಲದ ಬಡ್ಡಿದರದ ಜೊತೆಗೆ ಠೇವಣಿಗಳ ಬಡ್ಡಿದರವೂ ಇಳಿದಿದೆ. ಇದು ನಿವೃತ್ತರಂತೆ ಎಫ್‌ಡಿಯಿಂದ ನಿಗದಿತ ಆದಾಯ ನಿರೀಕ್ಷಿಸುವ ಗ್ರಾಹಕರಿಗೆ ನಷ್ಟವಾಯಿತು ಎನ್ನಬಹುದಾದರೂ, ಸಣ್ಣ ಹಣಕಾಸು ಬ್ಯಾಂಕುಗಳು ಹೆಚ್ಚು ಬಡ್ಡಿದರ ನೀಡುತ್ತಿರುವುದರಿಂದ ಅವರು ಅಲ್ಟರ್ನೇಟಿವ್ ಆಯ್ಕೆಗಳನ್ನು ಪರಿಗಣಿಸಬಹುದು. ಆದರೆ, ಹೆಚ್ಚುವರಿ ಬಡ್ಡಿದರದ ಆಮಿಷದಿಂದ ಮುಂಜಾನೆ ಡಿಪಾಜಿಟ್ ಮಾಡುವ ಮೊದಲು ಬ್ಯಾಂಕಿನ ರೇಟಿಂಗ್, ಭದ್ರತೆ ಮತ್ತು ಸೇವಾ ಷರತ್ತುಗಳನ್ನು ಪೂರಕವಾಗಿ ಪರಿಶೀಲಿಸುವುದು ಉತ್ತಮ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications