ಹೆಚ್ಚಿನವರು ಹೂಡಿಕೆ ಯೋಜನೆಗಳ (Investment Schemes) ಬಗ್ಗೆ, ಬಡ್ಡಿದರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಬಹಳಷ್ಟು ಕುತೂಹಲ ಹೊಂದಿರುತ್ತಾರೆ. ಆದರೆ ಕೆಲವು ಯೋಜನೆಗಳು ಉತ್ತಮ ಕಡಿಮೆ ಬಡ್ಡಿಯನ್ನು ನೀಡಿದರೆ, ಇನ್ನೂ ಕೆಲವು ಯೋಜನೆಗಳು ಕಡಿಮೆ ಬಡ್ಡಿದರವನ್ನು ನೀಡುತ್ತದೆ. ಇನ್ನು ಫಿಕ್ಸೆಡ್ ಡೆಪಾಸಿಟ್‌ಗಾಗಿ (Fixed Deposit) ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿ ಹೆಚ್ಚಿನ ಬಡ್ಡಿದರಗಳನ್ನು ನೀಡಲಾಗುತ್ತದೆ.

ಇಂದು ನಾವು ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಮೇಲಿನ ಹೂಡಿಕೆಗೆ ಎಷ್ಟು ಬಡ್ಡಿದರ ನೀಡುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ.
ಸ್ಥಿರ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವವರು ಬಡ್ಡಿದರಗಳ ಬಗ್ಗೆ ಮಾಹಿತಿ ತಿಳಿಯೋದು ಬಹಳ ಮುಖ್ಯ. ವಿವಿಧ ಬ್ಯಾಂಕ್‌ಗಳೊಂದಿಗೆ ಹೋಲಿಸಿಕೊಂಡು ನಿರ್ಧರಿಸಿದರೆ ಉತ್ತಮ. 50 ಬೇಸ್ ಪಾಯಿಂಟ್‌ಗಳ ವ್ಯತ್ಯಾಸವೂ ದೀರ್ಘಾವಧಿಯಲ್ಲಿ ಬಹಳಷ್ಟು ಆದಾಯಕ್ಕೆ ಕಾರಣವಾಗಬಹುದು.
ಉದಾಹರಣೆಗೆ ನೀವು 3 ವರ್ಷಗಳ ಅವಧಿಗೆ ₹5 ಲಕ್ಷ ಹಣವನ್ನು ಯಾವುದಾದರೂ ಬ್ಯಾಂಕ್‌ನ FD ಯಲ್ಲಿ ಹೂಡಿಕೆ ಮಾಡಿದರೆ, 50 ಮೂಲ ಅಂಕಗಳ ಹೆಚ್ಚಿನ ಬಡ್ಡಿ ದರವು ₹7,500 ಹೆಚ್ಚುವರಿ ಉಳಿತಾಯಕ್ಕೆ ಕಾರಣವಾಗುತ್ತದೆ. ಇದೇ ಠೇವಣಿ ಮೊತ್ತ ₹10 ಲಕ್ಷಕ್ಕೆ ಹೆಚ್ಚಿದರೆ, ಅದು ಒಟ್ಟು ₹15,000ದವರೆಗೆ ಆದಾಯವನ್ನು ನೀಡಬಹುದು.
ವಿಶೇಷವಾಗಿ ಹಿರಿಯ ನಾಗರಿಕರಿಗೆ ಕೆಲವು ಬ್ಯಾಂಕ್‌ಗಳು ಸಾಮಾನ್ಯವಾಗಿ 50 ಮೂಲ ಅಂಕಗಳ ಹೆಚ್ಚುವರಿ ಬಡ್ಡಿದರವನ್ನು ನೀಡುತ್ತವೆ. ಇದು ಹಿರಿಯ ನಾಗರಿಕರಿಗೆ ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯ ಗಳಿಸಲು ಸಹಾಯವಾಗುತ್ತದೆ. ಅಲ್ಲದೇ ಹಣಕಾಸು ಭದ್ರತೆಯನ್ನು ಇದು ರೂಪಿಸುತ್ತದೆ.
ಕೆಳಗಿನ ಲೇಖನದಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಬ್ಯಾಂಕ್‌ಗಳು ಸ್ಥಿರ ಠೇವಣಿಯಲ್ಲಿ, ಮೂರು ವರ್ಷಗಳಲ್ಲಿ ಎಷ್ಟು ಬಡ್ಡಿದರ ನೀಡುತ್ತದೆ ಎಂಬುದರ ಮಾಹಿತಿ ನೀಡಲಾಗಿದೆ.
ಎಸ್‌ಬಿಐ: ಭಾರತದ ಅತೀ ದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಮೂರು ವರ್ಷಗಳ FD ಹೂಡಿಕೆ ಮೇಲೆ ಹಿರಿಯ ನಾಗರಿಕರಿಗೆ 6.8% ಬಡ್ಡಿ ನೀಡುತ್ತದೆ ಎನ್ನಲಾಗಿದೆ. ಇದು ಸಾಮಾನ್ಯ ನಾಗರಿಕರಿಗೆ ನೀಡುವ ದರಕ್ಕಿಂತ 50 ಮೂಲ ಅಂಕಗಳು ಹೆಚ್ಚು.
ಫೆಡರಲ್ ಬ್ಯಾಂಕ್: ಈ ಬ್ಯಾಂಕ್‌ನಲ್ಲೂ ಹಿರಿಯ ನಾಗರಿಕರು ಮೂರು ವರ್ಷಗಳ FD ಗಳ ಮೇಲೆ 7% ಬಡ್ಡಿ ಪಡೆಯಬಹುದು. ಸಾಮಾನ್ಯ ನಾಗರಿಕರಿಗೆ 6.5% ಬಡ್ಡಿ ಲಭ್ಯವಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಈ ಸಾರ್ವಜನಿಕ ವಲಯದ ಬ್ಯಾಂಕ್ ಕೂಡಾ ತನ್ನ ಮೂರು ವರ್ಷಗಳ ಸ್ಥಿರ ಠೇವಣಿ ಹೂಡಿಕೆ ಮೇಲೆ ಹಿರಿಯ ನಾಗರಿಕರಿಗೆ 7.1% ಬಡ್ಡಿ ನೀಡುತ್ತದೆ. ಇದು ಸಾಮಾನ್ಯ ನಾಗರಿಕರಿಗಿಂತ 50 ಶೇ.ಕ್ಕಿಂತ ಹೆಚ್ಚು.
ಕೋಟಕ್ ಮಹೀಂದ್ರ ಬ್ಯಾಂಕ್: ಹಿರಿಯ ನಾಗರಿಕರಿಗೆ ಮೂರು ವರ್ಷಗಳ FD ಗಳ ಮೇಲೆ 6.90% ಬಡ್ಡಿ ಕೋಟಕ್ ಮಹೀಂದ್ರ ಬ್ಯಾಂಕ್ ನೀಡುತ್ತದೆ. ಸಾಮಾನ್ಯ ನಾಗರಿಕರಿಗೆ ಇದಕ್ಕಿಂತ 50 ಬೇಸ್ ಪಾಯಿಂಟ್ಸ್ ಕಡಿಮೆಯಲ್ಲಿ ಬಡ್ಡಿ ಸಿಗಲಿದೆ.
ICICI ಬ್ಯಾಂಕ್: ಇನ್ನು ಖಾಸಗಿ ವಲಯದ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಐಸಿಐಸಿಐ ಬ್ಯಾಂಕ್‌ನಲ್ಲಿ ಮೂರು ವರ್ಷಗಳ FD ಗಳ ಮೇಲೆ ಹಿರಿಯ ನಾಗರಿಕರಿಗೆ 7.1% ಬಡ್ಡಿ ನೀಡಲಾಗುತ್ತದೆ. ಅದೇ ಸಾಮಾನ್ಯ ನಾಗರಿಕರಿಗೆ 6.6% ಬಡ್ಡಿ ಸಿಗಲಿದೆ.
HDFC ಬ್ಯಾಂಕ್: ಹಿರಿಯ ನಾಗರಿಕರು ಮೂರು ವರ್ಷಗಳ FDಯಲ್ಲಿ ಹೂಡಿಕೆ ಮಾಡಿದ್ರೆ, 6.95% ಬಡ್ಡಿಯನ್ನು ಪಡೆಯಬಹುದು. ಹಿರಿಯ ನಾಗರಿಕರಿಗೆ ಹೋಲಿಸಿದ್ರೆ, ಸಾಮಾನ್ಯ ನಾಗರಿಕರಿಗೆ ಇದಕ್ಕಿಂತ 50 ಮೂಲ ಅಂಕಗಳು ಕಡಿಮೆ, ಅಂದರೆ ವಾರ್ಷಿಕವಾಗಿ 6.45% ಬಡ್ಡಿ ಸಿಗುತ್ತದೆ.
ಕೆನರಾ ಬ್ಯಾಂಕ್: ಸಾರ್ವಜನಿಕ ವಲಯ ಬ್ಯಾಂಕ್‌ಗಳಲ್ಲೊಂದಾದ ಕೆನರಾ ಬ್ಯಾಂಕ್ ಮೂರು ವರ್ಷಗಳ ಅವಧಿಗೆ ಹಿರಿಯ ನಾಗರಿಕರಿಗೆ ಎಫ್‌ಡಿಯಲ್ಲಿ 6.75% ಬಡ್ಡಿ ನೀಡುತ್ತದೆ. ಇದು ಸಾಮಾನ್ಯ ನಾಗರಿಕರಿಗಿಂತ ಅರ್ಧ ಶೇಕಡಾ ಹೆಚ್ಚು.
ವಿವಿಧ ಬ್ಯಾಂಕ್‌ಗಳಲ್ಲಿ 3 ವರ್ಷಗಳ FD ಮೇಲಿನ ಬಡ್ಡಿದರಗಳು (%):
| ಬ್ಯಾಂಕ್ | ಬಡ್ಡಿ ದರ |
| HDFC ಬ್ಯಾಂಕ್ | 6.95% |
| ICICI ಬ್ಯಾಂಕ್ | 7.1% |
| ಕೋಟಕ್ ಮಹೀಂದ್ರ | 6.90% |
| ಫೆಡರಲ್ ಬ್ಯಾಂಕ್ | 7% |
| ಎಸ್‌ಬಿಐ | 6.8% |
| ಕೆನರಾ ಬ್ಯಾಂಕ್ | 6.75% |
| ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | 7.1% |
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications