ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡಲು ಜನರು ನಾನಾ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಆದರೆ ಎಲ್ಲಿ ಹೊಡಿಕೆ ಮಾಡಬೇಕು ಎಂಬುವುದು ಗೊಂದಲವಂತೂ ಇದ್ದೇ ಇರುತ್ತದೆ. ಅದರಲ್ಲೂ ಎಲ್ಲಿ ಬಡ್ಡಿ ಹೆಚ್ಚು ಸಿಗುತ್ತೆ ? ನಮ್ಮ ಹಣಕ್ಕೆ ಸುರಕ್ಷಿತವಾಗಿ ಇರುತ್ತಾ ಎಂಬ ಅಂಶಗಳನ್ನು ಗಮದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹಾಗಿದ್ರೆ ನಿಮ್ಮ ಹಣ ಹೂಡಿಕೆಗೆ ಇರುವ ಉತ್ತಮ ಮಾರ್ಗ ಯಾವುದು? ಅದರಲ್ಲೂ ನೀವು ಸ್ಥಿರ ಠೇವಣಿ (FD) ಅಥವಾ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಅವುಗಳಲ್ಲಿ ಎಷ್ಟು ಆದಾಯ ಸಿಗುತ್ತೆ? ಪ್ರಯೋಜನಗಳು ಏನು? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ...
ಹೌದು,ಸಾಮಾನ್ಯವಾಗಿ ಸ್ಥಿರ ಠೇವಣಿ (ಎಫ್‌ಡಿ) ಠೇವಣಿದಾರರಿಗೆ ವಾರ್ಷಿಕ ಶೇ.6.7 ರಿಂದ ಶೇ. 7ರವರೆಗೆ ಬಡ್ಡಿ ನೀಡುತ್ತದೆ ಆದರೆ ಇತರ ತೆರಿಗೆ ಉಳಿತಾಯ ಯೋಜನೆಗಳು ಸ್ವಲ್ಪ ಹೆಚ್ಚಿನ ಬಡ್ಡಿಯನ್ನುಯನ್ನು ಹೂಡಿಕೆದಾರರರಿಗೆ ನೀಡುತ್ತದೆ.

ಉದಾಹರಣೆಯನ್ನು ನೋಡುವುದಾದರೆ ಈಗಾಗಲೇ ಚಾಲ್ತಿಯಲ್ಲಿರುವ ಬಡ್ಡಿದರಗಳ ಪ್ರಕಾರ, ಪಿಪಿಎಫ್ ವಾರ್ಷಿಕ ಶೇ.7.1 ರಷ್ಟು ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ , ಠೇವಣಿದಾರರು ವಾರ್ಷಿಕ ಶೇ. 8.2 ರಷ್ಟು ಪಡೆಯಲು ಅರ್ಹರಾಗಿರುತ್ತಾರೆ.
ಸುಕನ್ಯಾ ಸಮೃದ್ಧಿ ಖಾತೆಯಲ್ಲಿ, ಒಬ್ಬರು ವರ್ಷಕ್ಕೆ ಶೇ.8.2 ರವರೆಗೆ ಆದಾಯವನ್ನು ಗಳಿಸಬಹುದು ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲೆ ಶೇ 7.7ರಷ್ಟು ಲಾಭವನ್ನು ಮತ್ತು ಕಿಸಾನ್ ವಿಕಾಸ್ ಪತ್ರದ ಮೇಲೆ ಶೇ.7.5 ರಷ್ಟು ಲಾಭವಿದೆ ಇದರಿಂದ ನೀವು ಹೆಚ್ಚಿನ ಹೆಚ್ಚಿನ ಆದಾಯವನ್ನು ಗಳಿಕೆ ಮಾಡಬಹುದು.
ತೆರಿಗೆ ಉಳಿತಾಯ
ಹೂಡಿಕೆದಾರರು ಮತ್ತೊಂದು ಅಂಶದ ಕಡೆಗೆ ಗಮನವರಿಸಬೇಕಾಗುತ್ತದೆ. ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆದಾರರು ತಮ್ಮ ಹೂಡಿಕೆಯ ಮೇಲೆ ವಿನಾಯಿತಿ ಪಡೆಯಲು ಅರ್ಹರಲ್ಲ. ಇದರರ್ಥ ನೀವು PPF ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ 1.5 ಲಕ್ಷ ಹೂಡಿಕೆ ಮಾಡಿದಾಗ, ಹೂಡಿಕೆ ಮಾಡಿದ ಆದಾಯಕ್ಕೆ ಯಾವುದೇ ವಿಶೇಷ ಸೌಲಭ್ಯ ದೊರೆಯುವುದಿಲ್ಲ ಮತ್ತು ಇದು ಅವಧಿ ಠೇವಣಿಯಲ್ಲಿ ಹೂಡಿಕೆ ಮಾಡಿದಂತೆಯೇ ತೆರಿಗೆಗೆ ಒಳಪಡುತ್ತದೆ.
ಹೂಡಿಕೆ ಬಡ್ಡಿ ದರ
ಸ್ಥಿರ ಠೇವಣಿ 7 (ಸರಾಸರಿ)
ಸಾರ್ವಜನಿಕ ಭವಿಷ್ಯ ನಿಧಿ ಶೇ. 7.1
ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇ. 8.2
ಸುಕನ್ಯಾ ಸಮೃದ್ಧಿ ಯೋಜನೆ ಶೇ. 8.2
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಶೇ. 7.7
ಕಿಸಾನ್ ವಿಕಾಸ್ ಪತ್ರ ಶೇ.7.5
ಈ ಹೂಡಿಕೆಗಳಿಂದ ಗಳಿಸುವ ಆದಾಯವು ಸ್ಥಿರ ಠೇವಣಿಯ ಮೇಲಿನ ಬಡ್ಡಿಗಿಂತ ಭಿನ್ನವಾಗಿ ತೆರಿಗೆ ಮುಕ್ತವಾಗಿರುತ್ತದೆ .
ನೀವು ಕಡಿಮೆ ತೆರಿಗೆ ಶ್ರೇಣಿಯಲ್ಲಿ ಅಥವಾ ಶೂನ್ಯ ತೆರಿಗೆ ಶ್ರೇಣಿಯಲ್ಲಿ ಬಂದರೆ, ಅದು ನಿಮಗೆ ಹೆಚ್ಚಿನ ವ್ಯತ್ಯಾಸಗಳು ಆಗುವುದಿಲ್ಲ. ಆದರೆ ಶೇ.30 ರಷ್ಟು ಆದಾಯ ತೆರಿಗೆ ಶ್ರೇಣಿಯಲ್ಲಿ ಬರುವವರು ಸ್ಥಿರ ಠೇವಣಿಯಲ್ಲಿ ಹಣವನ್ನು ಠೇವಣಿ ಮಾಡಿದಾಗ ತಮ್ಮ ಬಡ್ಡಿ ಆದಾಯದ ಸುಮಾರು ಮೂರನೇ ಒಂದು ಭಾಗದಷ್ಟು ಕಳೆದುಕೊಳ್ಳುತ್ತಾರೆ.
ಶೇ. 20 ರಷ್ಟು ತೆರಿಗೆ ಶ್ರೇಣಿಯಲ್ಲಿರುವವರು ಸ್ಥಿರ ಠೇವಣಿಯ ಸಂದರ್ಭದಲ್ಲಿ ತೆರಿಗೆ ರೂಪದಲ್ಲಿ ತಮ್ಮ ಆದಾಯದ ಐದನೇ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ.
ಪ್ರತಿಯೊಂದು ಹೂಡಿಕೆಗೆಯೂ ತನ್ನದೇ ಆದ ವಿಶಿಷ್ಟ ವೈಶಿಷ್ಟ್ಯಗಳು ಮತ್ತು ಅನುಕೂಲಗಳನ್ನು ಹೊಂದಿದ್ದು, ಅದಕ್ಕೆ ಅನುಗುಣವಾಗಿ ಆಯ್ಕೆ ಮಾಡಬೇಕು ಎಂದು ಅಪ್ನಾ ಧನ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಸ್ಥಾಪಕಿ ಪ್ರೀತಿ ಝೆಂಡೆ ಅವರು ಹೇಳಿದ್ದಾರೆ.
ಪಿಪಿಎಫ್ ದೀರ್ಘಾವಧಿಯ ಆದಾಯ ಇದು ನಿಮ್ಮ ದೀರ್ಘಾವಧಿಯ ಗುರಿಗಾಗಿ ಸಾಲ ಪೋರ್ಟ್‌ಫೋಲಿಯೊ ಆಗಿ ಸಾರ್ವಭೌಮ ಗ್ಯಾರಂಟಿ ಮತ್ತು ತೆರಿಗೆ ಮುಕ್ತ ಲಾಭವನ್ನು ನೀಡುತ್ತದೆ.
ತನ್ನ ಹೂಡಿಕೆದಾರರಿಗೆ ಇದು ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ನೀಡುತ್ತಿದೆ. ಆದರೆ ನೀವು ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಂಡಿದ್ದರೂ ಸಹ, ನೀವು ನಿವೃತ್ತಿ ಗುರಿ ಭಾಗವಾಗಿ ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಬೇಕು.
ಎನ್‌ಎಸ್‌ಸಿ ಸಹ ಹೂಡಿಕೆಗೆ ಉತ್ತಮ ಆಯ್ಕೆ, ಮೂಲ ಮತ್ತು ಬಡ್ಡಿಗೆ ಸಾರ್ವಭೌಮ ಗ್ಯಾರಂಟಿಯನ್ನು ಸಹ ನೀಡುತ್ತದೆ ಇದನ್ನು ಸಣ್ಣ ತೆರಿಗೆ ದರಗಳಲ್ಲಿ ಮಧ್ಯಮಾವಧಿವರೆಗೂ ಬಳಸಿಕೊಳ್ಳಬಹುದು ಎಂದು ಫೈನಾನ್ಷಿಯಲ್ ಸರ್ವೀಸಸ್‌ನ ಸಂಸ್ಥಾಪಕಿ ಪ್ರೀತಿ ಝೆಂಡೆ ಹೇಳುತ್ತಾರೆ.
ಫಿನ್‌ಇನ್ವೆಸ್ಟ್‌ಮೆಂಟ್ ಪ್ರೊ ಸಂಸ್ಥಾಪಕ ಚಾರ್ಟರ್ಡ್ ಅಕೌಂಟೆಂಟ್ ದೀಪಕ್ ಗುಪ್ತಾ ಅವರು ಪ್ರಕಾರ ಪಿಪಿಎಫ್ ದೀರ್ಘಾವಧಿಯ ಸಂಪತ್ತು ಗಳಿಕೆಗೆ ಉತ್ತಮ ಆಯ್ಕೆಯಾಗಿದೆ, ಎಫ್‌ಡಿಗಳು ಅಲ್ಪಾವಧಿಯ ಹೂಡಿಕೆಗೆ ಉತ್ತಮವಾಗಿವೆ ಎಂದು ಹೇಳಿದ್ದಾರೆ.


Click it and Unblock the Notifications